ಬಾಲಿವುಡ್‌ನ ಟಾಪ್‌ ಹೀರೋಸ್ ಜೊತೆ ರೋಮ್ಯಾನ್ಸ್ ಮಾಡಿದ್ದ ನಟಿ, ಅಪ್ಸರೆಯಂತಿದ್ದ ಚೆಲುವೆ ಈಗ ಏಕಾಂಗಿ!

First Published | Feb 13, 2024, 11:32 AM IST

ಬಾಲಿವುಡ್‌ನಲ್ಲಿ ಸಕ್ಸಸ್ ಆಗುವುದು ಅಷ್ಟು ಸುಲಭವಲ್ಲ. ಚಿತ್ರರಂಗದಲ್ಲಿ ಯಶಸ್ವೀಯಾದವರೂ ವೈಯುಕ್ತಿಕ ಜೀವನ ಚೆನ್ನಾಗಿರಬೇಕೆಂದಿಲ್ಲ. ಹೀಗೆ ಬಣ್ಣದ ಲೋಕದಲ್ಲಿ ಮಿಂಚಿ ಕೌಟುಂಬಿಕ ಜೀವನ ಹಾಳು ಮಾಡಿಕೊಂಡವರಲ್ಲಿ ಈ ನಟಿ ಸಹ ಒಬ್ಬರು. ಬಾಲಿವುಡ್‌ನ ಟಾಪ್‌ ಹೀರೋಗಳ ಜೊತೆ ರೋಮ್ಯಾನ್ಸ್ ಮಾಡಿದ್ದಾಕೆ ಈಗ ಏಕಾಂಗಿ.

ಬಾಲಿವುಡ್‌ನಲ್ಲಿ ಸಕ್ಸಸ್ ಆಗುವುದು ಅಷ್ಟು ಸುಲಭವಲ್ಲ. ಚಿತ್ರರಂಗದಲ್ಲಿ ಯಶಸ್ವೀಯಾದವರೂ ವೈಯುಕ್ತಿಕ ಜೀವನ ಚೆನ್ನಾಗಿರಬೇಕೆಂದಿಲ್ಲ. ಹೀಗೆ ಬಣ್ಣದ ಲೋಕದಲ್ಲಿ ಮಿಂಚಿ ಕೌಟುಂಬಿಕ ಜೀವನ ಹಾಳು ಮಾಡಿಕೊಂಡವರಲ್ಲಿ ನಟಿ ಜಯಪ್ರದಾ ಸಹ ಒಬ್ಬರು. ಸಕ್ಸಸ್‌ಫುಲ್ ನಟಿಯಾದ್ರೂ ಜೀವನಪೂರ್ತಿ ಒಂಟಿಯಾಗಿಯೇ ಬದುಕುತ್ತಿದ್ದಾರೆ.

ಸೌಂದರ್ಯಕ್ಕೆ ಇನ್ನೊಂದು ಹೆಸರು ಎಂಬಂತಿದ್ದ ಜಯಪ್ರದಾ, ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರಾಗಿದ್ದರು. 70 ಮತ್ತು 80ರ ದಶಕದಲ್ಲಿ ಅನೇಕ ಹಿಟ್ ಚಿತ್ರಗಳನ್ನು ನೀಡಿದರು. ಸೌತ್ ಫಿಲ್ಮ್ ಇಂಡಸ್ಟ್ರಿಗೆ ಕಾಲಿಟ್ಟ ನಂತರ ಬಾಲಿವುಡ್‌ಗೂ ಕಾಲಿಟ್ಟರು. ರಾಜಕೀಯಕ್ಕೂ ಪ್ರವೇಶಿಸಿ ಸ್ವಲ್ಪ ಮಟ್ಟಿಗೆ ಯಶಸ್ವಿಯಾದರು. 

Latest Videos


ಜಯಪ್ರದಾ ಅಥವಾ ಲಲಿತಾ ರಾಣಿ ರಾವ್ ಅವರು ಆಂಧ್ರಪ್ರದೇಶದ ರಾಜಮಂಡ್ರಿಯಲ್ಲಿ ತೆಲುಗು ಮಾತನಾಡುವ ಕುಟುಂಬದಲ್ಲಿ ಜನಿಸಿದರು. ಆಕೆಯ ತಂದೆ ಕೃಷ್ಣ ರಾವ್ ಅವರು ತೆಲುಗು ಚಲನಚಿತ್ರದ ಹಣಕಾಸುದಾರರಾಗಿದ್ದರು. ತಾಯಿ ನೀಲವಾಣಿ ಗೃಹಿಣಿಯಾಗಿದ್ದರು.

ಜಯಪ್ರದಾ  ಕೇವಲ 13ನೇ ವಯಸ್ಸಿನಲ್ಲಿ ನಟನೆಗೆ ಪಾದಾರ್ಪಣೆ ಮಾಡಿದರು. ಮೊದಲ ಚಿತ್ರಕ್ಕೆ ಕೇವಲ 10 ರೂ.  ಸಂಭಾವನೆ ಪಡೆದರು. ತೆಲುಗು ಚಿತ್ರವೊಂದರಲ್ಲಿ ಪಾದಾರ್ಪಣೆ ಮಾಡಿದ ನಂತರ, ಜಯಪ್ರದಾ ಬಾಲಿವುಡ್‌ಗೆ ಪ್ರವೇಶಿಸಿದರು. ನಂತರದ ದಿನಗಳಲ್ಲಿ ಅವರ ಕಾಲದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯೆಂದು ಗುರುತಿಸಿಕೊಂಡರು.

ವೃತ್ತಿಜೀವನದ ಅವಧಿಯಲ್ಲಿ, ಜಯಪ್ರದಾ, ಅಮಿತಾಭ್ ಬಚ್ಚನ್, ಧರ್ಮೇಂದ್ರ, ರಾಕೇಶ್ ರೋಷನ್, ರಿಷಿ ಕಪೂರ್ ಮತ್ತು ಜೀತೇಂದ್ರರಂತಹ ಟಾಪ್ ನಟರೊಂದಿಗೆ ಅನೇಕ ಚಲನಚಿತ್ರಗಳನ್ನು ಮಾಡಿದರು. ಜಿತೇಂದ್ರ ಜೊತೆಗಿನ ಅವರ ಜೋಡಿಯು ಪ್ರೇಕ್ಷಕರಿಗೆ ತುಂಬಾ ಇಷ್ಟವಾಯಿತು.

ಆದರೆ ಸಾಲು ಸಾಲು ಸಿನ್ಮಾ ಹಿಟ್ ಆದರೂ ಜಯಪ್ರದಾ ಲಕ್ ವೈಯುಕ್ತಿಕ ಜೀವನದಲ್ಲಿ ಚೆನ್ನಾಗಿರಲ್ಲಿಲ್ಲ. ಫೆಬ್ರವರಿ 1986 ರಲ್ಲಿ ಜಯಪ್ರದಾ ನಿರ್ಮಾಪಕ ಶ್ರೀಕಾಂತ್ ನಹತಾ ಅವರನ್ನು ವಿವಾಹವಾದರು, ಆದರೆ ಶ್ರೀಕಾಂತ್‌ ಈಗಾಗಲೇ ಮದ್ವೆಯಾಗಿ 2 ಮಕ್ಕಳನ್ನು ಹೊಂದಿದ್ದರು. 

ನಹತಾ ತನ್ನ ಮೊದಲನೇ ಹೆಂಡತಿಗೆ ವಿಚ್ಛೇದನ ನೀಡಲಿಲ್ಲ. ಜಯಪ್ರದಾ ಅವರನ್ನು ಮದುವೆಯಾದ ನಂತರವೂ ಮೊದಲ ಪತ್ನಿಯೊದಿಗೆ ಮೂರನೇ ಮಗುವನ್ನು ಹೊಂದಿದ್ದರಿಂದ, ನಹತಾ ತನ್ನ ಮೊದಲ ಹೆಂಡತಿಗೆ ವಿಚ್ಛೇದನ ನೀಡಲು ನಿರಾಕರಿಸಿದರು. ಇದು ಜಯಪ್ರದಾ ಸಂಬಂಧವನ್ನು ಕೊನೆಗೊಳಿಸಲು ಕಾರಣವಾಯಿತು.

ಜಯಪ್ರದಾ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿ ಚಿತ್ರರಂಗವನ್ನು ತೊರೆದರು.1994 ರಲ್ಲಿ ತೆಲುಗು ದೇಶಂ ಪಕ್ಷಕ್ಕೆ (TDP) ಸೇರಿದರು. ಅವರು ಉತ್ತರ ಪ್ರದೇಶd ರಾಂಪುರದಿಂದ  2004ರಿಂದ 2014ರ ವರೆಗೆ ಸಂಸತ್ತಿನ (MP) ಸದಸ್ಯರಾಗಿದ್ದರು. ,

click me!