ಹುಡುಗಿ ಮದ್ವೆಯಾದ ಹುಡುಗಿ.. ಮಾಡೆಲ್ ಜೊತೆ ಹಸೆಮಣೆ ಏರಿದ WWE Star ಡೇರಿಯಾ ಬೆರೆನಾಟೊ

First Published | Feb 12, 2024, 3:06 PM IST

ಭಾರತದಲ್ಲಿ ಸಲಿಂಗಿ ವಿವಾಹಕ್ಕೆ ಮಾನ್ಯತೆ ಇಲ್ಲ, ಮಾನ್ಯತೆ ಇಲ್ಲದಿದ್ದರೂ ಇತ್ತೀಚೆಗೆ ಕೆಲ ಸಲಿಂಗಿ ಜೋಡಿಗಳು ವಿವಾಹವಾಗಿದ್ದಾರೆ. ಇನ್ನು ವಿದೇಶಗಳಲ್ಲಿ ಇದೆಲ್ಲಾ ಮಾಮೂಲಿ ಎನಿಸಿದ್ದು, ಸಲಿಂಗಿ ಜೋಡಿಯೊಂದು ಹಸೆಮಣೆಗೆ ಕಾಲಿರಿಸಿದೆ. 

ಮಹಿಳಾ ರೆಸ್ಲರ್ ಒಬ್ಬರು ತಮ್ಮ ಬಹುಕಾಲದ ಗೆಳತಿ ಜೊತೆ ಹಸೆಮಣೆ ಏರಿದ್ದಾರೆ. WWE ಸ್ಟಾರ್ ಡೇರಿಯಾ ಬೆರೆನಾಟೊ ಅವರು ಫಿಟ್‌ನೆಸ್ ಮಾಡೆಲ್ ಟೋನಿ ಕಸ್ಸನೋ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.

ತಮ್ಮ ಜೀವನದ ಈ ವಿಶೇಷ ಕ್ಷಣಗಳ ಫೋಟೋಗಳನ್ನು ಈ ಜೋಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು, ಅಭಿಮಾನಿಗಳು ಈ ನವಜೋಡಿಗೆ ಶುಭ ಹಾರೈಸಿದ್ದಾರೆ.

Tap to resize

ಫೆಬ್ರವರಿ 10 ರಂದು ರೆಸ್ಲರ್‌ ಡೇರಿಯಾ ಬೆರೆನಾಟೊ ಹಾಗೂ ಫಿಟ್‌ನೆಸ್ ಮಾಡೆಲ್ ಟೋನಿ ಕಸ್ಸನೋ ಅವರು ಹಸೆಮಣೆ ಏರಿದ್ದಾರೆ ಎಂದು ಪೀಪಲ್ ಮ್ಯಾಗಜೀನ್ ವರದಿ ಮಾಡಿದೆ. 

ಕೇವಲ 140 ಜನರಷ್ಟೇ ಇದ್ದ ತಮ್ಮ ಕುಟುಂಬ ಹಾಗೂ ಬಂಧುಗಳ ಸಮ್ಮುಖದಲ್ಲಿ ಈ ಸಲಿಂಗಿ ಜೋಡಿ ಡೇರಿಯಾ ಬೆರೆನಾಟೊ   ಮಾಡೆಲ್ ಟೋನಿ ಕಸ್ಸನೋ ನವ ಜೀವನಕ್ಕೆ ಕಾಲಿರಿಸಿದ್ದಾರೆ. 

ನಮ್ಮ WWE ಜನರಿಗಾಗಿ ಎರಡೂವರೆ ಅಥವಾ ಮೂರು ಟೇಬಲ್ ಗಳನ್ನು ಮೀಸಲಿರಿಸಿದ್ದೇವೆ.  ಹಾಗೆಯೇ ನಮ್ಮ ನರೆಹೊರೆಯಲ್ಲಿ ವಾಸ ಮಾಡುವವರು ಹಾಗೂ ನಮ್ಮ ಕುಟುಂಬದವರು ಕುಟುಂಬ ಸ್ನೇಹಿತರು  ಭಾಗವಹಿಸುತ್ತಾರೆ ಎಂದು ಮದುವೆಗೂ ಮೊದಲು ಪೀಪಲ್ ಮ್ಯಾಗಜೀನ್‌ಗೆ ಮಾಹಿತಿ ನೀಡಿದ್ದರು. 

ರೆಸ್ಲರ್‌ಗಳಾದ ಷಾರ್ಲೆಟ್ ಫ್ಲೇರ್ ಮತ್ತು ಆಂಡ್ರೇಡ್, ಬೇಲಿ, ಮಾಂಟೆಜ್ ಫೋರ್ಡ್ ಮತ್ತು ಬಿಯಾಂಕಾ ಬೆಲೈರ್, ಲಿವ್ ಮೋರ್ಗಾನ್, ಮೆಕೆಂಜಿ ಮಿಚೆಲ್, ಮ್ಯಾಟ್ ಕಾರ್ಡೋನಾ ಮತ್ತು ಚೆಲ್ಸಿಯಾ ಗ್ರೀನ್, ಮ್ಯಾಂಡಿ ರೋಸ್ ಮತ್ತು WWE ನಿರೂಪಕ ವಿಕ್ ಜೋಸೆಫ್ ಸೇರಿದಂತೆ ರೆಸ್ಲರ್ ಲೋಕದ ಅನೇಕರು ಈ ವಿವಾಹ ಸಮಾರಂಭದಲ್ಲಿ ಹಾಜರಿದ್ದರು.

Latest Videos

click me!