ಅಪ್ಪನ 2ನೇ ಮದ್ವೆ ನಂತರ ದುಬೈನಲ್ಲಿ ಓರಿ ಜೊತೆ ಪಾರ್ಟಿ ಮಾಡಿದ ಅಮ್ಮ ಮಗ

First Published | Feb 12, 2024, 4:25 PM IST

ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಪುತ್ರ ಅರ್ಹಾನ್ ಖಾನ್ ದುಬೈನಲ್ಲಿ ಓರಿ ಅವತ್ರಮನಿ ಜೊತೆ ಪಾರ್ಟಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.


ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಪುತ್ರ ಅರ್ಹಾನ್ ಖಾನ್ ದುಬೈನಲ್ಲಿ ಓರಿ ಅವತ್ರಮನಿ ಜೊತೆ ಪಾರ್ಟಿ ಮಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದು, ನೆಟ್ಟಿಗರು ತರಹೇವಾರಿ ಕಾಮೆಂಟ್ ಮಾಡುತ್ತಿದ್ದಾರೆ.

ಬಾಲಿವುಡ್ ಅಪ್‌ಡೇಟ್‌ಗಳನ್ನು ಸದಾ ನೋಡುತ್ತಿರುವವರಿಗೆ ಓರಿ ಬಗ್ಗೆ ಹೆಚ್ಚಿಗೇನು ಹೇಳಬೇಕಿಲ್ಲ, ಕಳೆದೊಂದು ವರ್ಷದಿಂದ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸುತ್ತಿರುವ ಓರಿ ಬಾಲಿವುಡ್ ಮಂದಿಯ ಬಹುತೇಕ ಪಾರ್ಟಿಗಳಲ್ಲಿ ಹಾಜರಿರುತ್ತಾನೆ.

Tap to resize

 ಬಾಲಿವುಡ್ ಸ್ಟಾರ್ ಕಿಡ್‌ಗಳಾದ ಸಾರಾ ಅಲಿ ಖಾನ್, ಇಬ್ರಾಹಿಂ ಅಲಿಖಾನ್‌ ಅನನ್ಯಾ ಪಾಂಡೆ ಸ್ನೇಹಿತನಾಗಿರುವ ಓರಿ ಜೊತೆ ಬಾಲಿವುಡ್‌ನ ಎಲ್ಲ ತಾರೆಯರು ಮೈಗೆ ಮೈ ಅಂಟಿಸಿ ನಿಂತುಕೊಂಡು ಪೋಸ್ ನೀಡ್ತಿರ್ತಾರೆ.

ಇಂತಹ ಓರಿ ಜೊತೆ ಈಗ ಬಾಲಿವುಡ್ ನಟಿ ಮಲೈಕಾ ಆರೋರಾ ಹಾಗೂ ಪುತ್ರ ಅರ್ಹಾನ್ ಖಾನ್ ದುಬೈನಲ್ಲಿ ಪಾರ್ಟಿ ಮಾಡಿದ್ದು, ಫೋಟೋಗಳು ವೈರಲ್ ಆಗಿವೆ.  ವೀಡಿಯೋದಲ್ಲಿ ಮಲೈಕಾ ಹರೆಯದ ಯುವತಿಯಂತೆ ಓರಿ ಜೊತೆ ಫೋಸ್ ನೀಡಿದ್ದಾರೆ. 

ಮೊದಲ ಫೋಟೋದಲ್ಲಿ  ಓರಿ ಮಲೈಕಾ ಆರೋರಾ ಜೊತೆ ಕಾಣಿಸಿಕೊಂಡಿದ್ದರೆ, ಮತ್ತೆ ಉಳಿದ ಫೋಟೋಗಳಲ್ಲಿ ಮಲೈಕಾ ಅರ್ಬಾಜ್ ಖಾನ್ ಪುತ್ರ ಅರ್ಹಾನ್ ಖಾನ್‌ನನ್ನು ಕೂಡ ಕಾಣಬಹುದಾಗಿದೆ. 


ಕೆಲವು ಫೋಟೋಗಳಲ್ಲಿ ಕಪ್ಪು ಬಿಳಿ ಗೆರೆಗಳ ಸಂಯೋಜನೆಯ ಲೂಸ್ ಪ್ಯಾಂಟ್ ಶರ್ಟ್ ಧರಿಸಿ ಶರ್ಟ್ ಬಟನ್ ತೆರೆದು ಓರಿ ಫೋಸ್ ಕೊಟ್ಟಿದ್ದು, ಮಲೈಕಾ ಕ್ರಾಪ್ ಟಾಪ್‌ನಲ್ಲಿ ನವ ತರುಣಿಯಂತೆ ಕಂಗೊಳಿಸುತ್ತಿದ್ದಾರೆ. 

ಬಾಲಿವುಡ್‌ನ ಬಹುತೇಕ ಪಾರ್ಟಿಗಳಲ್ಲಿ ಕಾಣಿಸಿಕೊಳ್ಳುವ ಈ ಓರಿ ಕೆಲ ದಿನಗಳ ಹಿಂದೆ ಪ್ರಿಯಾಂಕಾ ಚೋಪ್ರಾ ಪತಿ ನಿಕ್ ಜೋನಸ್ ಜೊತೆಯೂ ಕಾಣಿಸಿಕೊಂಡಿದ್ದರು, ನತಾಶಾ ಫೂನಾವಾಲ ಈ ಪಾರ್ಟಿಯನ್ನು ಆಯೋಜಿಸಿದ್ದರು. 

ಇದರಲ್ಲಿ ಓರಿ ನಿಕ್ ಜೋನಾಸ್, ಹಾಗೂ ಆತನ ಸೋದರ ಕೆವಿನ್, ಉದ್ಯಮಿ ಅದರ್ ಫೂನಾವಾಲಾ,  ಸುಸ್ಸಾನೇ ಖಾನ್  ಮಲೈಕಾ ಆರೋರಾ, ಅಮೃತಾ ಆರೋರಾ, ಅದಿತಿ ರಾವ್ ಹೈದರಿ ಭಾಗಿಯಾಗಿದ್ದರು.

ಮಲೈಕಾ ಮಾಜಿ ಪತಿ ಅರ್ಬಾಜ್ ಖಾನ್ ಅವರು ಇತ್ತೀಚೇಗಷ್ಟೇ ಸೆಲೆಬ್ರಿಟಿ ಮೇಕಪ್ ಆರ್ಟಿಸ್ಟ್ ಶುರಾ ಖಾನ್ ಅವರನ್ನು ಮದುವೆಯಾಗಿದ್ದರು. ಇತ್ತ ಮಲೈಕಾ ಆರೋರಾ ನಟ ಅರ್ಜುನ್ ಕಫೂರ್ ಜೊತೆ ಡೇಟಿಂಗ್‌ನಲ್ಲಿದ್ದರು. ಕಳೆದ ವರ್ಷ ಇವರಿಬ್ಬರು ಪರಸ್ಪರ ದೂರಾಗಿದ್ದಾರೆ ಎಂಬ ಗಾಸಿಪ್ ಹರಡಿತ್ತು.

ಮಲೈಕಾಗೆ ಕೈ ಕೊಟ್ಟು ಅರ್ಜುನ್ ಕಪೂರ್ ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಖುಷಾ ಕಪಿಲ್ ಜೊತೆ ಓಡಾಡ್ತಿದ್ದಾರೆ ಎಂದು ಸುದ್ದಿ ಹಬ್ಬಿತ್ತು. ಆದರೆ ಈ ರೂಮರ್ಸ್‌ಗಳನ್ನು ಇಬ್ಬರೂ ನಿರಾಕರಿಸಿದ್ದರು. ಇದಾದ ನಂತರ ಮಲೈಕಾ ಹಾಗೂ ಅರ್ಜುನ್ ತಾವು ಜೊತೆಯಾಗಿರುವುದಾಗಿ ಖಚಿತಪಡಿಸಿದ್ದರು. 

Latest Videos

click me!