ಡೇಟಿಂಗ್​ ಆ್ಯಪ್​ನಲ್ಲಿ ಸುಂದರಿಯ ನೋಡುತ್ತಲೇ 1.66 ಕೋಟಿ ರೂ. ಕಳಕೊಂಡ ಬೆಂಗಳೂರು ಟೆಕ್ಕಿ

Published : May 29, 2026, 06:50 PM IST

ಬೆಂಗಳೂರು ಮೂಲದ ಸಾಫ್ಟ್‌ವೇರ್ ಎಂಜಿನಿಯರ್ ಒಬ್ಬರು 'ಟಂಟನ್' ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವತಿಯ ನಕಲಿ ಪ್ರಣಯದ ಬಲೆಗೆ ಬಿದ್ದಿದ್ದಾರೆ. ಮದುವೆಯಾಗುವುದಾಗಿ ನಂಬಿಸಿ, ಆನ್‌ಲೈನ್ ಹೂಡಿಕೆ ಯೋಜನೆಯಲ್ಲಿ ಹಣ ತೊಡಗಿಸುವಂತೆ ಪ್ರೇರೇಪಿಸಿದ ಆಕೆ, ಯುವಕನಿಂದ 1.66 ಕೋಟಿ ರೂಪಾಯಿ ಜೊತೆ ಪರಾರಿಯಾಗಿದ್ದಾಳೆ.

PREV
16
ಎಜುಕೇಟೆಡ್​ ಫೂಲ್ಸ್​

ಸೈಬರ್​ ಕ್ರೈಂ ಬಗ್ಗೆ ಎಷ್ಟೇ ಪೊಲೀಸರು, ಮಾಧ್ಯಮಗಳು ಬಾಯಿ ಬಾಯಿ ಬಡಿದುಕೊಂಡರೂ ಎಜುಕೇಟೆಡ್​ ಎನ್ನಿಸಿಕೊಂಡಿರುವವರ ತಲೆಗೆ ಅದು ಹೋಗುವುದೇ ಇಲ್ಲ. ಹಣ ದುಪ್ಪಟ್ಟು ಮಾಡುವುದಾಗಿ ಹೇಳಿಯೋ, ಇಲ್ಲವೇ ಸುಂದರಿಯ ವೇಷದಲ್ಲಿ ಬಂದೋ ಸುಶಿಕ್ಷಿತ, ಶ್ರೀಮಂತರನ್ನೂ, ಯುವಕರನ್ನೂ ಮೂರ್ಖರನ್ನಾಗಿ ಮಾಡುವುದು ಹೆಚ್ಚುತ್ತಲೇ ಸಾಗಿದೆ. ಅದರಲ್ಲಿಯೂ ಸುಂದರಿ ಎದುರಿಗೆ ಬಂದಳು ಎಂದರೆ, ಬೇರೆ ಹುಡುಗಿಯೇ ಸಿಗುವುದಿಲ್ಲವೇನೋ ಎನ್ನುವಂತೆ ಈ ಕೋಟ್ಯಧಿಪತಿ ಯುವಕರು ಆಕೆಯ ಹಿಂದೆ ಬೀಳುವುದು ಮಾತ್ರ ಅತ್ಯಂಥ ಅಚ್ಚರಿಯ ವಿಷಯವೂ ಆಗಿದೆ. ಅದೇ ರೀತಿ ಇದೀಗ ಬೆಂಗಳೂರು ಮೂಲದ ಸಾಫ್ಟ್​ವೇರ್​ ಎಂಜಿನಿಯರ್​ ಒಬ್ಬಾತ, ಡೇಟಿಂಗ್ ಆ್ಯಪ್ ಮೂಲಕ ನಕಲಿ ಪ್ರಣಯ ಸಂಬಂಧದಲ್ಲಿ ಸಿಲುಕಿಕೊಂಡು 1.66 ಕೋಟಿ ಕಳೆದುಕೊಂಡಿದ್ದಾನೆ! ಭಾವನೆಗಳು ಮತ್ತು ನಂಬಿಕೆಯನ್ನು ಬಳಸಿಕೊಂಡು ಶ್ರೀಮಂತ ಯುವಕರನ್ನು ಟಾರ್ಗೆಟ್​ ಮಾಡುವ, ಅವರ ಹಣ ಲಪಟಾಯಿಸಿಕೊಂಡು ಹೋಗುವ ಹಲವಾರು ಘಟನೆಗಳ ನಡುವೆ ಇದೂ ಒಂದು ಘಟನೆ ನಡೆದಿದೆ.

26
ಸುಂದರಿ ಮೇಲೆ ಬಿದ್ದ ಟೆಕ್ಕಿ

ಆನ್‌ಲೈನ್ ಡೇಟಿಂಗ್ ಮತ್ತು ಹೂಡಿಕೆ ವಂಚನೆಗಳ ಬಗ್ಗೆ ಸೈಬರ್ ಅಪರಾಧ ಅಧಿಕಾರಿಗಳಿಂದ ಪದೇ ಪದೇ ಎಚ್ಚರಿಕೆ ನೀಡಿದ್ದರೂ, ಹಲವಾರು ಯುವ ವೃತ್ತಿಪರರು ಇಂತಹ ವಂಚನೆಗಳಿಗೆ ಬಲಿಯಾಗುತ್ತಲೇ ಇದ್ದಾರೆ. ಈ ಸಂದರ್ಭದಲ್ಲಿ, ಡೇಟಿಂಗ್ ಪ್ಲಾಟ್‌ಫಾರ್ಮ್‌ನಲ್ಲಿ ಸಾಂದರ್ಭಿಕ ಸಂವಹನವಾಗಿ ಪ್ರಾರಂಭವಾದದ್ದು ಅಂತಿಮವಾಗಿ ಬಹುಕೋಟಿ ಹಣಕಾಸು ಹಗರಣವಾಗಿ ಮಾರ್ಪಟ್ಟಿದೆ.

36
ಮದುವೆಯ ಮಾತುಕತೆ

ದೂರಿನ ಪ್ರಕಾರ, ಫೆಬ್ರವರಿ 15 ರಂದು ಸೌರವ್ ದುಬೆಗೆ ಟಂಟನ್ ಡೇಟಿಂಗ್ ಆ್ಯಪ್‌ನಲ್ಲಿ 'ರಿಯಾ ಅಗರ್ವಾಲ್' ಎಂದು ಗುರುತಿಸಿಕೊಂಡ ಯುವತಿಯ ಪರಿಚಯವಾಗಿದೆ. ಆಕೆಯ ಸೌಂದರ್ಯ ನೋಡಿ ಮಾರು ಹೋಗಿರುವ ಸೌರವ್​, ಪರಿಚಯ ಮಾಡಿಕೊಂಡಿದ್ದಾರೆ. ಕೊನೆಗೆ ಇಬ್ಬರೂ ಪರಸ್ಪರ ಮಾತುಕತೆ ನಡೆಸಿ, ಡೇಟಿಂಗ್​ ಹೋಗುವವರೆಗೂ ಮುಂದುವರೆದಿದ್ದಾರೆ.

46
ಹೂಡಿಕೆಗೆ ಮನವಿ

ಅದಾದ ಬಳಿಕ ಆಡಿಯೋ, ವಿಡಿಯೋ ಸಂದೇಶಗಳ ರವಾನೆಯಾಗಿದೆ. ರಿಯಾ ಆಗಾಗ್ಗೆ ತನಗೆ ನಿನ್ನ ಮೇಲೆ ಲವ್​ ಆಗಿದೆ ಎಂದು ಹೇಳಿದ್ದಾಳೆ. ಆಕೆಯ ಪ್ರೀತಿಯಲ್ಲಿ ತೇಲಿ ಹೋದ ಸೌರವ್​ಗೆ ಇದು ತನ್ನನ್ನು ಟ್ರ್ಯಾಪ್​ ಮಾಡುತ್ತಿರುವುದು ಎಂದು ತಿಳಿಯಲೇ ಇಲ್ಲ. ಮದುವೆಯ ಬಗ್ಗೆಯೂ ಆಕೆ ಚರ್ಚಿಸಿದ ತಕ್ಷಣ, ಆಕೆಯ ಮೇಲೆ ಯಾವ ಡೌಟೂ ಬರಲೇ ಇಲ್ಲ. ಕೊನೆಗೆ ಆಕೆಯ ಜೊತೆಗಿನ ವ್ಯವಹಾರ ಹೆಚ್ಚಾಯಿತು.

56
ಕೋಟಿ ಹಾಕಿದ ಯುವಕ

ತನ್ನ ವಿಶ್ವಾಸವನ್ನು ಗಳಿಸಿದ ನಂತರ, ರಿಯಾ ಸೌರವ್‌ಗೆ ಆನ್‌ಲೈನ್ ವ್ಯಾಪಾರ ಹೂಡಿಕೆ ಯೋಜನೆಗೆ ಪರಿಚಯಿಸಿದಳು, ಭಾರಿ ಲಾಭದ ಭರವಸೆ ನೀಡಿದಳು. ಆಕೆಯ ಹೇಳಿಕೆಗಳನ್ನು ನಂಬಿದ ಅವನು ಬಹು ಹಂತಗಳಲ್ಲಿ ಹಣವನ್ನು ಹೂಡಿಕೆ ಮಾಡಲು ಪ್ರಾರಂಭಿಸಿದ. ಸುಮಾರು ಮೂರು ತಿಂಗಳ ಕಾಲ, ಸೌರವ್ ಈ ಯೋಜನೆಯಲ್ಲಿ ₹1.66 ಕೋಟಿ ಹೂಡಿಕೆ ಮಾಡಿದ್ದಾನೆ. ಆದಾಗ್ಯೂ, ದೊಡ್ಡ ಹೂಡಿಕೆಯ ಹೊರತಾಗಿಯೂ, ಅವನಿಗೆ ₹4,250 ಮಾತ್ರ ಪ್ರತಿಫಲ ಸಿಕ್ಕಿತು. ಆಮೇಲೆ ಡೌಟ್​ ಶುರುವಾಗಿದೆ ಈ ಯುವಕನಿಗೆ. ತಾನು ಮೋಸ ಹೋಗಿದ್ದೇನೆ ಎಂದು ಅವನು ಅನುಮಾನಿಸಲು ಪ್ರಾರಂಭಿಸಿದ.

66
ಎಲ್ಲಾ ಮುಗಿದ ಮೇಲೆ ಹಳ್ಳಕ್ಕೆ ಬಿದ್ದದ್ದು ಗೊತ್ತಾಯ್ತು!

ಅನುಮಾನ ಪ್ರಾರಂಭವಾಗಿದ್ದು ಯುವತಿಗೆ ಗೊತ್ತಾಗುತ್ತಿದ್ದಂತೆಯೇ ಫೋನ್ ಸ್ವಿಚ್ ಆಫ್ ಮಾಡಲಾಗಿದೆ. ಇಷ್ಟಾದ ಮೇಲೆ ತಾನು ಹಳ್ಳಕ್ಕೆ ಬಿದ್ದಿರುವುದು ಸೌರವ್​ಗೆ ಗೊತ್ತಾಗಿದೆ. ದೂರಿನ ಪ್ರಕಾರ, ಸೌರವ್ ರಿಯಾಗೆ ತನ್ನ ಹಣವನ್ನು ಹಿಂದಿರುಗಿಸುವಂತೆ ಕೇಳಿದಾಗ ಪರಿಸ್ಥಿತಿ ಆಘಾತಕಾರಿ ತಿರುವು ಪಡೆದುಕೊಂಡಿತು. ಶೀಘ್ರದಲ್ಲೇ, ಆಕೆಯ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು ಮತ್ತು ಅವಳೊಂದಿಗಿನ ಎಲ್ಲಾ ಸಂವಹನಗಳು ನಿಂತುಹೋದವು ಎಂದು ವರದಿಯಾಗಿದೆ. ತಾನು ದೊಡ್ಡ ಸೈಬರ್ ವಂಚನೆಗೆ ಬಲಿಯಾಗಿದ್ದೇನೆ ಎಂದು ಅರಿತುಕೊಂಡ ಸೌರವ್, ಆಗ್ನೇಯ ವಿಭಾಗದ ಸಿಇಎನ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಘಟನೆಯ ವಿವರಗಳೊಂದಿಗೆ ದೂರು ದಾಖಲಿಸಿದ್ದಾರೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories