'ಸೀತಾರಾಮ' ಖ್ಯಾತಿಯ ನಟಿ ವೈಷ್ಣವಿ ಗೌಡ ಮತ್ತು ಅವರ ಪತಿ, ಆರ್ಮಿ ಅಧಿಕಾರಿ ಅನುಕೂಲ್ ಮಿಶ್ರಾ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ ಇವರಿಬ್ಬರೂ ಮಾಡಿದ ಫನ್ನಿ ರೀಲ್ಸ್ ಒಂದರಲ್ಲಿ ಅನುಕೂಲ್, ವೈಷ್ಣವಿಯವರ ಕೆನ್ನೆಗೆ ಹೊಡೆಯುವಂತೆ ನಟಿಸಿದ್ದು, ಈ ವಿಡಿಯೋ ವೈರಲ್ ಆಗಿದೆ.
ಅಗ್ನಿಸಾಕ್ಷಿಯ ಸನ್ನಿಧಿಯಾಗಿ, ಸೀತಾರಾಮದ ಸೀತೆಯಾಗಿ ಮಿಂಚಿರೋ ನಟಿ ವೈಷ್ಣವಿ ಗೌಡ ಅವರು, ಉತ್ತರಾಖಂಡ ಮೂಲದ ಅನುಕೂಲ್ ಮಿಶ್ರಾ ಜೊತೆ ಮದುವೆಯಾಗಿ ಜಾಲಿ ಮೂಡ್ನಲ್ಲಿದ್ದಾರೆ. ಕಳೆದ ಜೂನ್ ತಿಂಗಳಿನಲ್ಲಿ ಇವರ ಮದುವೆ ನಡೆದಿದೆ. ಮೆಟ್ರಿಮೋನಿಯಲ್ಲಿ ವೈಷ್ಣವಿ ಗೌಡ ಹಾಗೂ ಅನುಕೂಲ್ ಮಿಶ್ರಾ ಪರಿಚಯ ಆಗಿದೆ. ಒಂದು ವರ್ಷದ ಹಿಂದೆಯೇ ಇವರ ಮದುವೆ ಫಿಕ್ಸ್ ಆಗಿತ್ತು. ಆದ್ರೆ ಸೀಕ್ರೇಟ್ ಆಗಿ ಇಟ್ಟಿದ್ದರು. ಕೊನೆಗೆ ರಿವೀಲ್ ಮಾಡಿ ಎಲ್ಲರನ್ನೂ ಅಚ್ಚರಿಗೊಳಿಸಿದ್ದರು.
26
ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿ
ಅನುಕೂಲ್ ಮಿಶ್ರಾ ಅವರು ಇಂಡಿಯನ್ ಆರ್ಮಿಯಲ್ಲಿ ಲೆಫ್ಟಿನೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ವೈಷ್ಣವಿ ಗೌಡ ನಟಿಯಾದರೆ, ಅನುಕೂಲ್ ಅವರು ಆರ್ಮಿಯಲ್ಲಿದ್ದಾರೆ. ಅನುಕೂಲ್ ಮಿಶ್ರಾ ಅವರು ಬೆಂಗಳೂರಿನಲ್ಲಿಯೇ ಕೆಲಸ ಮಾಡುತ್ತಿದ್ದಾರೆ. ಹೀಗಾಗಿ ವೈಷ್ಣವಿ ಗೌಡ ಕೂಡ ಇಲ್ಲಿಯೇ ಇರಲಿದ್ದಾರೆ. ಅಂದಹಾಗೆ ಮದುವೆ ಬಳಿಕವೂ ವೈಷ್ಣವಿ ಗೌಡ ಅವರು ನಟಿಸಲಿದ್ದು, ಒಳ್ಳೆಯ ಪಾತ್ರದ ನಿರೀಕ್ಷೆಯಲ್ಲಿದ್ದಾರೆ.
36
ಗಂಡನ ಜೊತೆ ರೀಲ್ಸ್
ಆದರೆ, ಇದರ ನಡುವೆಯೇ ಸೋಷಿಯಲ್ ಮೀಡಿಯಾದಲ್ಲಿಯೂ ವೈಷ್ಣವಿ ಸಕತ್ ಫೇಮಸ್ ಆಗಿದ್ದಾರೆ. ಮೊದಲು ಒಂಟಿಯಾಗಿ ರೀಲ್ಸ್ ಮಾಡುತ್ತಿದ್ದ ನಟಿ, ಈಗ ಗಂಡನ ಜೊತೆ ಸಕತ್ ಸ್ಟೆಪ್ ಹಾಕುತ್ತಾರೆ. ಕುಣಿಯೋದು ಬಿಟ್ಟು ಮಗು ಮಾಡ್ಕೋಮ್ಮಾ ಎಂದು ಕೆಲವರು ಹೇಳಿದ್ರೆ, ಅಯ್ಯೋ ಪಾಪ ಹಿಂದಿವಾಲಾನ್ನ ನೆನೆಸಿಕೊಂಡ್ರೆ ಬೇಜಾರು ಆಗ್ತಿದೆ ಎಂದು ಕೆಲವರು ತಮಾಷೆ ಮಾಡುವುದು ಇದೆ. ಮತ್ತೆ ಕೆಲವರು ಏರ್ಫೋರ್ಸ್ ಕೆಲ್ಸ ಬಿಟ್ಟುಬಿಟ್ಟರಾ ಪತಿ ಎಂದು ಪ್ರಶ್ನಿಸುತ್ತಿದ್ದಾರೆ.
ಇಂತಿಪ್ಪ ಜೋಡಿಯ ವಿಡಿಯೋ ಒಂದು ಈಗ ಸಕತ್ ವೈರಲ್ ಆಗ್ತಿದೆ.. ಅದರಲ್ಲಿ ಅನುಕೂಲ್ ಅವರು, ತಮ್ಮ ಪತ್ನಿ, ನಟಿ ವೈಷ್ಣವಿ ಗೌಡ ಅವರಿಗೆ ಎಲ್ಲರ ಎದುರೇ ಕೆನ್ನೆಗೆ ಹೊಡೆದಿದ್ದಾರೆ. ಅಷ್ಟಕ್ಕೂ ಆಗಿದ್ದೇನೆಂದರೆ, ಇದು ರಿಯಲ್ ಆಗಿ ಕೆನ್ನೆಗೆ ಹೊಡೆದದ್ದಲ್ಲ, ಬದಲಿಗೆ ಇಬ್ಬರೂ ಸೇರಿ ಫನ್ನಿ ರೀಲ್ಸ್ ಮಾಡಿದ್ದಾರೆ.
56
ಕೆನ್ನೆಗೆ ಹೊಡೆದ ಪತಿ
ಇದರಲ್ಲಿ ಅನುಕೂಲ್ ಅವರು ಏನೋ ಕೆಲಸ ಮಾಡುತ್ತಿರುವಾಗಿ ವೈಷ್ಣವಿ ಅಲ್ಲಿ ಬಂದು ಶೇಕ್ಹ್ಯಾಂಡ್ ಕೊಟ್ಟಿದ್ದಾರೆ. ಕೊನೆಗೆ ಇಬ್ಬರೂ ತಬ್ಬಿಕೊಂಡಿದ್ದಾರೆ. ಆದರೆ ತಮ್ಮ ಕೆಲಸ ಕೆಡಿಸಿರುವ ಕಾರಣಕ್ಕೆ ವೈಷ್ಣವಿ ಅವರಿಗೆ ಅನುಕೂಲ್ ಹೊಡೆದಿದ್ದಾರೆ.
66
ಫನ್ನಿ ಕಮೆಂಟ್ಸ್
ಈ ಫನ್ನಿ ವಿಡಿಯೋಗೆ ಸಿಕ್ಕಾಪಟ್ಟೆ ರಿಸ್ಪಾನ್ಸ್ ಬಂದಿದೆ. ಹೀಗೆ ನಟಿಗೆ ಹೊಡೆದರೆ ನಿಮ್ಮ ಕಥೆ ಅಷ್ಟೇ ಎಂದು ವೈಷ್ಣವಿ ಗೌಡ ಫ್ಯಾನ್ಸ್ ಹೇಳುತ್ತಿದ್ದಾರೆ. ಆರ್ಮಿ ಆಫೀಸರ್ ಹೀಗೆಲ್ಲಾ ಮಾಡಿದ್ರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮತ್ತೆ ಕೆಲವರು ತಮಾಷೆ ಮಾಡುತ್ತಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.