ಬಿಗ್‌ಬಿ ಅಮಿತಾಬ್ ಬಚ್ಚನ್‌ಗೆ ಸ್ವಲ್ಪವೂ ಹಿಡಿಸಲ್ವಂತೆ ತಮ್ಮ ಕುಟುಂಬದ ಹೆಣ್ಣು ಮಕ್ಕಳ ಈ ಅಭ್ಯಾಸ

First Published | Feb 16, 2024, 2:55 PM IST

ಪ್ರತಿ ಮನೆಯಲ್ಲೂ ಕೂಡ ಹೆಣ್ಣು ಮಕ್ಕಳ ಕೆಲವು ಗುಣಗಳು, ಕೆಲ ಚಟುವಟಿಕೆಗಳು ಗಂಡು ಮಕ್ಕಳಿಗೆ ಹಿಡಿಸುವುದಿಲ್ಲ, ಅದೇ ರೀತಿ ಗಂಡು ಮಕ್ಕಳ ಕೆಲ ವರ್ತನೆಯನ್ನು ಹೆಣ್ಣು ಮಕ್ಕಳು ಸಹಿಸುವುದಿಲ್ಲ, ಈ ರೀತಿಯ ಕೌಟುಂಬಿಕ ವೈಪರೀತ್ಯಗಳು ವೈವಿಧ್ಯತೆಗಳು ಎಲ್ಲಾ ಕುಟುಂಬದಲ್ಲಿಯೂ ಸಾಮಾನ್ಯ. ಅದಕ್ಕೆ ಸೆಲೆಬ್ರಿಟಿಗಳು ಸಾಮಾನ್ಯರೂ ಎಂಬ ಬೇಧವಿಲ್ಲ, ಅದೇ ರೀತಿ ಬಾಲಿವುಡ್‌ ಹಿರಿಯ ನಟ ಅಮಿತಾಭ್ ಬಚ್ಚನ್‌ ಅವರಿಗೂ ತಮ್ಮ ಮನೆಯ ಹೆಣ್ಣು ಮಕ್ಕಳ ಕೆಲ ವಿಚಾರಗಳು ಸ್ವಲ್ಪವೂ ಹಿಡಿಸುವುದಿಲ್ಲವಂತೆ ಅದು ಯಾವುದು ಎಂಬುದನ್ನು ಪುತ್ರಿ ಶ್ವೇತಾ ಬಚ್ಚನ್ ಹೇಳಿಕೊಂಡಿದ್ದಾರೆ.

ಅಮಿತಾಭ್ ಬಚ್ಚನ್ ಅವರ ಮೊಮ್ಮಗಳು ಹಾಗೂ ಶ್ವೇತಾ ಬಚ್ಚನ್ ಹಾಗೂ ಉದ್ಯಮಿ ನಿಖಿಲ್ ನಂದಾ ಅವರ ಪುತ್ರಿಯಾಗಿರುವ ನವ್ಯಾ ನವೇಲಿ ಅವರು ಸಿನಿಮಾಗೆ ಬಾರದೇ ಹೋದರೂ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಕ್ರಿಯವಾಗಿರುವುದರ ಜೊತೆ ಉದ್ಯಮವೊಂದನ್ನು ಮುನ್ನಡೆಸುತ್ತಿದ್ದಾರೆ. 

ಅವರು  'ವಾಟ್ ದ ಹೆಲ್ ನವ್ಯಾ' ಎಂಬ ಟಾಕ್ ಶೋವನ್ನು ಪಾಡ್ಕಾಸ್ಟ್‌ನಲ್ಲಿ ನಡೆಸಿಕೊಡುತ್ತಿರುತ್ತಾರೆ. ಈ ಟಾಕ್ ಶೋದ ಈ ಬಾರಿಯ ಎಪಿಸೋಡ್‌ನಲ್ಲಿ ಸ್ವತ ತನ್ನ ಅಮ್ಮ ಶ್ವೇತಾ ಬಚ್ಚನ್ ಹಾಗೂ ಅಜ್ಜಿ ಜಯಾ ಬಚ್ಚನ್ ಜೊತೆ ನವ್ಯಾ ಸಂವಹನ ನಡೆಸಿದ್ದು, ತಮ್ಮ ಕುಟುಂಬದ ಹಲವು ಕುತೂಹಲಕಾರಿ ಅಂಶಗಳನ್ನು ಹಂಚಿಕೊಂಡಿದ್ದಾರೆ. 

Tap to resize

ಇದೇ ಶೋದಲ್ಲಿ ಬಾಲಿವುಡ್ ಹಿರಿಯ ನಟ ಅಮಿತಾಬ್ ಬಚ್ಚನ್ ತುಂಬಾ ಹೇಟ್ ಮಾಡುವ ವಿಚಾರ ಯಾವುದು ಎಂಬುದನ್ನು ಶ್ವೇತಾ ಬಚ್ಚನ್ ಬಯಲು ಮಾಡಿದ್ದಾರೆ. ಅದೇನೆಂದರೆ ತಲೆ ಕೂದಲು ಕತ್ತರಿಸುವುದು.

 ಬಚ್ಚನ್ ಕುಟುಂಬದ ಹೆಣ್ಣು ಮಕ್ಕಳು ಕೂದಲು ಕತ್ತರಿಸುವುದು ಎಂದರೆ ಅಮಿತಾಭ್ ಬಚ್ಚನ್ ಅವರಿಗೆ ಸ್ವಲ್ಪವೂ ಇಷ್ಟವಿಲ್ಲವಂತೆ. ತಾನು ಕೂದಲನ್ನು ಸಣ್ಣದಾಗಿ ಕತ್ತರಿಸಿಕೊಂಡರೆ ಅದು ಅಪ್ಪನಿಗೆ ಸ್ವಲ್ಪವೂ ಇಷ್ಟವಾಗುತ್ತಿರಲಿಲ್ಲ, ಮನೆ ಹೆಣ್ಣು ಮಕ್ಕಳು ಕೂದಲು ಕತ್ತರಿಸುವುದನ್ನು ಅವರು ತುಂಬಾ ದ್ವೇಷಿಸುತ್ತಿದ್ದರು ಎಂದು ಹೇಳಿಕೊಂಡಿದ್ದಾರೆ ಶ್ವೇತಾ ಬಚ್ಚನ್.  

ನಾವು ಯಾವಾಗ ಕೂದಲು ಕತ್ತರಿಸಿದರು ಅವರದನ್ನು ಇಷ್ಟಪಡುತ್ತಿರಲ್ಲಿ, ನೀನೇಕೆ ಈ ಕೆಲಸ ಮಾಡಿದೆ ಎಂದು ಅವರು ಕೇಳುತ್ತಿದ್ದರು. ಉದ್ದ ಕೂದಲನ್ನು ಇಷ್ಟಪಡುತ್ತಿದ್ದ ಅಮಿತಾಭ್ ನಮ್ಮ ಮನೆಯ ಹೆಣ್ಣು ಮಕ್ಕಳು ಯಾರೇ ಆದರೂ ಕೂದಲು ಕತ್ತರಿಸಿದರೆ ಬೇಸರಗೊಳ್ಳುತ್ತಿದ್ದರು ಅದನ್ನವರು ಇಷ್ಟಪಡುತ್ತಿರಲಿಲ್ಲ ಎಂದು ಶ್ವೇತಾ ಬಚ್ಚನ್ ಹೇಳಿದ್ದಾರೆ. 

ಒಟ್ಟಿನಲ್ಲಿ ಅಮಿತಾಭ್ ಬಚ್ಚನ್ ಬಾಲಿವುಡ್‌ನ ಸ್ಟಾರ್ ನಟನಾದರೂ ಮನೆಯಲ್ಲಿ ಎಲ್ಲರ  ಮನೆಯ  ಅಣ್ಣ ತಮ್ಮ, ಅಪ್ಪನಂತೆ ಟೀಪಿಕಲ್ ಅಪ್ಪ ಎಂಬುದು ಮಾತ್ರ ಎಂಬುದನ್ನು ಶ್ವೇತಾ ಬಹಿರಂಗಪಡಿಸಿದ್ದಾರೆ.

Amitabh Bachchan Family

ಇದೇ ಶೋದಲ್ಲಿ ಅಮ್ಮ ಶ್ವೇತಾ ಬಚ್ಚನ್ ಕೂದಲಿನ ಆರೈಕೆಗಾಗಿ ಅಜ್ಜಿ ಜಯಾ ಬಚ್ಚನ್ ಏನು ಮಾಡುತ್ತಿದ್ದರು ಎಂಬುದನ್ನು ಕೂಡ ನವ್ಯಾ ನವೇಲಿ ಪ್ರಶ್ನಿಸಿದ್ದಾರೆ. ಈ ವೇಳೆ ತಾನು ಶ್ವೇತಾ ತಲೆಗೆ ಈರುಳ್ಳಿ ಜ್ಯೂಸ್‌ ಹಚ್ಚುತ್ತಿದ್ದೆ ಅದನ್ನವಳು ತುಂಬಾ ದ್ವೇಷ ಮಾಡುತ್ತಿದ್ದಳು ಎಂದು  ಜಯಾ ಬಚ್ಚನ್ ಹೇಳಿದ್ದು, ಇದಕ್ಕೆ ಶ್ವೇತಾ ಬಚ್ಚನ್ ಕೂಡ ಹೌದು ಎಂದು ತಲೆಯಲ್ಲಾಡಿಸಿದ್ದಾರೆ. 

ಕಿತ್ತಾಡಿಕೊಂಡು ಅಕ್ಕನ ಕೂದಲಿಗೆ ಕತ್ತರಿ ಹಾಕಿದ್ದ ಅಭಿಷೇಕ್: ಇದೇ ಶೋದಲ್ಲಿ ಶ್ವೇತಾ ಬಚ್ಚನ್ ಅವರು ಸೋದರ ಅಭಿಷೇಕ್ ಬಚ್ಚನ್ ತನ್ನ ಕೂದಲಿಗೆ ಕತ್ತರಿ ಹಾಕಿದ್ದನ್ನು ನೆನೆದಿದ್ದಾರೆ. ಅಪ್ಪ ಅಮ್ಮ ಇಲ್ಲದ ವೇಳೆ ಮನೆಯಲ್ಲಿದ್ದ ಈ ಅಕ್ಕ ತಮ್ಮ ಜುಟ್ಟು ಜುಟ್ಟು ಹಿಡಿದು ಕಿತ್ತಾಡಿದ್ದು, ಅಕ್ಕನಿಗೆ ಬುದ್ಧಿ ಕಲಿಸಲು ಈ ತಮ್ಮ ಅಭಿಷೇಕ್, ಶ್ವೇತಾ ಬಚ್ಚನ್ ಕೂದಲಿಗೆ ಕತ್ತರಿ ಹಾಕಿದ್ದರಂತೆ, 

 ಆದರೆ ಶಾಲೆಗೆ ಹೋಗುವ ವೇಳೆ ಈ ತುಂಡಾದ ಕೂದಲು ಪ್ರತ್ಯೇಕವಾಗಿ ನಿಲ್ಲುತ್ತಿದ್ದು, ಇದಕ್ಕೆ ಅಮ್ಮ ಜಯಾ ಬಚ್ಚನ್ ಹೇರ್ ಕ್ಲಿಪ್ ಹಾಕಿ ಕಳುಹಿಸಿದ್ದರು ಎಂದು ಬಾಲ್ಯದ ದಿನಗಳನ್ನು ಸೋದರನ ತುಂಟಾಗಳನ್ನು ನೆನಪು ಮಾಡಿಕೊಂಡಿದ್ದಾರೆ ಶ್ವೇತಾ. ಅಲ್ಲದೇ ಶಾಲೆಗೆ ಹೋಗುವ ವೇಳೆ ಅಮ್ಮ ಜುಟ್ಟು ಹಾಕಿ ಕಳುಹಿಸುತ್ತಿದ್ದಳು, ಈ ಜುಟ್ಟು ಕಟ್ಟುವ ವೇಳೆ ಅಮ್ಮ ನೆಟ್ಟಗೆ ಕುಳಿತುಕೋ ನೆಟ್ಟಗೆ ಕುಳಿತುಕೋ ಎಂದು ರೇಗುತ್ತಲೇ ಇರುತ್ತಿದ್ದರು ಎಂದು ಶ್ವೇತಾ ನೆನಪು ಮಾಡಿಕೊಂಡಿದ್ದಾರೆ.

ಈ ಹಿಂದೆ ಕಾಫಿ ವಿತ್ ಕರನ್ ಸೀಸನ್ 6ರಲ್ಲಿ ಭಾಗವಹಿಸಿದ ಈ ಅಕ್ಕ ತಮ್ಮ ಜೋಡಿ ಕುಟುಂಬದ ಹಲವು ವಿಚಾರಗಳ ಬಗ್ಗೆ ಮಾತನಾಡಿದ್ದರು. ತಂದೆ ಅಮಿತಾಭ್ ಬಚ್ಚನ್‌ಗೆ ನನಗಿಂತ ಶ್ವೇತಾ ಮೇಲೆಯೇ ಹೆಚ್ಚು ಪ್ರೀತಿ ಎಂದು ಅಭಿಷೇಕ್ ಹೇಳಿದ್ದಾರೆ. ಅಮ್ಮ ಜಯಾ ಬಚ್ಚನ್‌ಗೆ ಮಗ ಅಭಿಷೇಕ್‌ ಎಂದರೆ ನನಗಿಂತ ಒಂದು ಷೇರು ಹೆಚ್ಚು ಪ್ರೀತಿ ಎಂದು ಶ್ವೇತಾ ಹೇಳಿದ್ದರು.

Latest Videos

click me!