Love Marriage: ಲವ್ ಮ್ಯಾರೇಜ್‌ಗೆ ಮನೆಯವರು ಒಪ್ಪುತ್ತಿಲ್ಲವೇ? ಪೋಷಕರ ಮನ ಗೆಲ್ಲಲು ಏನು ಮಾಡಬೇಕು, ಯಾವ ತಪ್ಪುಗಳನ್ನು ತಪ್ಪಿಸಬೇಕು ಮತ್ತು ಪ್ರೇಮ ವಿವಾಹಕ್ಕೆ ಕುಟುಂಬದ ಒಪ್ಪಿಗೆ ಪಡೆಯುವ ಸರಳ ಹಾಗೂ ಪರಿಣಾಮಕಾರಿ ಸಲಹೆಗಳನ್ನು ಇಲ್ಲಿ ತಿಳಿಯಿರಿ. ಖಂಡಿತಾ ಮನೆಯವರು ಒಪ್ಪುತ್ತಾರೆ.
ಲವ್ ಮ್ಯಾರೇಜ್‌ಗೆ ಮನೆಯವರನ್ನು ಒಪ್ಪಿಸಲು ಈ ಸುಲಭ ಮಾರ್ಗಗಳು
ಪ್ರೀತಿ ಮಾಡಿ ಮದುವೆ ಆಗೋದೇನೋ ಚೆಂದ. ಆದರೆ ಹೆಚ್ಚಿನ ಸಂದರ್ಭಗಳಲ್ಲಿ ಲವ್ ಮ್ಯಾರೇಜ್‌ಗೆ ಮನೆಯವರನ್ನು ಒಪ್ಪಿಸುವುದೇ ಕಷ್ಟವಾಗಿರುತ್ತದೆ. ಜಾತಿ, ಧರ್ಮ, ಕುಟುಂಬದ ಪ್ರತಿಷ್ಠೆ, ಆರ್ಥಿಕ ಸ್ಥಿತಿ ಅಥವಾ ಸಾಮಾಜಿಕ ಹಿನ್ನೆಲೆ ಮುಂತಾದ ಕಾರಣಗಳಿಂದ ಕೆಲವೊಮ್ಮೆ ಪೋಷಕರು ಲವ್ ಮ್ಯಾರೇಜ್‌ಗೆ ಒಪ್ಪಿಕೊಳ್ಳುವುದಿಲ್ಲ. ಇಂತಹ ಸಂದರ್ಭಗಳಲ್ಲಿ ಕೋಪಗೊಳ್ಳುವುದು, ಪ್ರತಿದಿನ ಜಗಳವಾಡುವುದು ಅಥವಾ ಆತುರದ ನಿರ್ಧಾರ ತೆಗೆದುಕೊಳ್ಳುವುದಕ್ಕಿಂತ ತಾಳ್ಮೆಯಿಂದ ಮಾತನಾಡಿ, ವಿಶ್ವಾಸ ಗಳಿಸುವುದು ಮುಖ್ಯ. ಅದಕ್ಕಾಗಿ ಏನು ಮಾಡಬೇಕು ನೋಡೋಣ.
27
ಮೊದಲು ನಿಮ್ಮನ್ನು ಅರ್ಥಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಮಾತನಾಡಿ
ಕುಟುಂಬದ ಎಲ್ಲರ ಮುಂದೆ ಒಮ್ಮೆಲೇ ವಿಷಯ ಹೇಳುವುದಕ್ಕಿಂತ ಮೊದಲು ನಿಮ್ಮ ಮಾತನ್ನು ನಿಮ್ಮ ಚೆನ್ನಾಗಿ ಅರ್ಥಮಾಡಿಕೊಳ್ಳುವ ವ್ಯಕ್ತಿಯೊಂದಿಗೆ ಹೇಳಿ. ಅವರು ತಾಯಿ, ತಂದೆ, ಅಣ್ಣ, ಅಕ್ಕ ಅಥವಾ ಕುಟುಂಬದ ಮತ್ತೊಬ್ಬ ಸದಸ್ಯರಾಗಿರಬಹುದು. ನೀವು ಸಂಗಾತಿಯನ್ನು ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಮತ್ತು ಮದುವೆಯಾಗಲು ಕಾರಣವೇನು ಎಂಬುದನ್ನು ಶಾಂತವಾಗಿ ವಿವರಿಸಿ. ಅವರು ನಿಮ್ಮ ಪರವಾಗಿ ಉಳಿದವರನ್ನು ಮನವೊಲಿಸಲು ಸಹಾಯ ಮಾಡಬಹುದು.
37
ಸಡನ್ ಆಗಿ ಮದುವೆ ನಿರ್ಧಾರವನ್ನು ಘೋಷಿಸಬೇಡಿ
ಮದುವೆ ತೀರ್ಮಾನವನ್ನು ಏಕಾಏಕಿ ಮನೆಯವರಿಗೆ ತಿಳಿಸುವುದರಿಂದ ಅವರನ್ನು ನೀವು ಕಡೆಗಣಿಸಿದಂತಾಗುತ್ತದೆ. ಹಾಗಾಗಿ ಸಾಧ್ಯವಾದರೆ ಮೊದಲು ನಿಮ್ಮ ಸಂಗಾತಿಯ ಗುಣಗಳು, ಶಿಕ್ಷಣ, ಉದ್ಯೋಗ, ಕುಟುಂಬ ಮತ್ತು ವ್ಯಕ್ತಿತ್ವದ ಬಗ್ಗೆ ನಿಧಾನವಾಗಿ ಮನೆಯವರಿಗೆ ಪರಿಚಯಿಸಿ. ನಂತರ ಸೂಕ್ತ ಸಮಯದಲ್ಲಿ ಭೇಟಿಯಾಗುವ ಅವಕಾಶ ಕಲ್ಪಿಸಿ. ಬಳಿಕ ಮದುವೆ ಬಗ್ಗೆ ಮಾತುಕತೆ ನಡೆಸಿ.
ಮನೆಯವರು ಯಾಕೆ ವಿರೋಧಿಸುತ್ತಿದ್ದಾರೆ, ಮದುವೆಗೆ ಯಾಕೆ ಒಪ್ಪಿಕೊಳ್ಳುತ್ತಿಲ್ಲ ಎಂಬುದನ್ನು ಮೊದಲು ಅರ್ಥಮಾಡಿಕೊಳ್ಳಿ. ಜಾತಿ, ಧರ್ಮ, ಉದ್ಯೋಗ, ಆರ್ಥಿಕ ಸ್ಥಿತಿ, ವಯಸ್ಸಿನ ಅಂತರ ಅಥವಾ ಕುಟುಂಬದ ಹಿನ್ನೆಲೆ ಅವರ ಚಿಂತೆಯ ವಿಷಯವಾಗಿರಬಹುದು. ಕಾರಣ ತಿಳಿದ ನಂತರವೇ ಸರಿಯಾದ ರೀತಿಯಲ್ಲಿ ಉತ್ತರಿಸಬಹುದು.
57
ನೀವೆಷ್ಟು ಜವಾಬ್ಧಾರಿಯುತರಾಗಿದ್ದೀರಿ ಎಂಬುದನ್ನು ತಿಳಿಸಿ
'ನಾವು ಒಬ್ಬರನ್ನೊಬ್ಬರು ತುಂಬಾ ಪ್ರೀತಿಸುತ್ತೇವೆ' ಎಂದು ಹೇಳುವುದಷ್ಟೇ ಸಾಕಾಗುವುದಿಲ್ಲ. ಮದುವೆಯ ನಂತರದ ಜೀವನ, ಉದ್ಯೋಗ, ಆರ್ಥಿಕ ಜವಾಬ್ದಾರಿ, ವಾಸಸ್ಥಳ ಮತ್ತು ಕುಟುಂಬದ ಬಗ್ಗೆ ನೀವು ಮಾಡಿಕೊಂಡಿರುವ ಯೋಜನೆಗಳನ್ನು ವಿವರಿಸಿ. ನಿಮ್ಮ ಜವಾಬ್ದಾರಿಯುತ ವರ್ತನೆಯೂ ಮನೆಯವರಲ್ಲಿ ವಿಶ್ವಾಸ ಮೂಡಿಸುತ್ತದೆ.
67
ನಂಬಿಕೆಯಿರುವ ಸಂಬಂಧಿಕರ ಸಹಾಯ ಪಡೆಯಿರಿ*
ಕೆಲವೊಮ್ಮೆ ಮಕ್ಕಳ ಮಾತಿಗಿಂತ ಕುಟುಂಬದ ವಿಶ್ವಾಸಾರ್ಹ ಸಂಬಂಧಿಕ ಅಥವಾ ಆಪ್ತ ಸ್ನೇಹಿತರ ಮಾತನ್ನು ಪೋಷಕರು ಹೆಚ್ಚು ಪರಿಗಣಿಸುತ್ತಾರೆ. ನಿಮ್ಮ ಸಂಬಂಧವನ್ನು ಅರ್ಥಮಾಡಿಕೊಳ್ಳುವ ಹಾಗೂ ಮನೆಯವರು ಗೌರವಿಸುವ ವ್ಯಕ್ತಿಯೊಬ್ಬರ ಸಹಾಯ ಪಡೆದು ನಿಮ್ಮ ಅಭಿಪ್ರಾಯವನ್ನು ತಿಳಿಸುವುದು ಉತ್ತಮ. ಆದರೆ ಒಂದೇ ಸಮಯದಲ್ಲಿ ಹಲವರಿಂದ ಒತ್ತಡ ತರಿಸುವ ಪ್ರಯತ್ನ ಮಾಡಬೇಡಿ.
77
ಎಲ್ಲೂ ಸಂಯಮ ಕಳೆದುಕೊಳ್ಳಬೇಡಿ
ಒಂದು ವೇಳೆ ಕೋಪದಿಂದ ಮಾತನಾಡಿದರೆ ಅಥವಾ ಅವರನ್ನೇ ಮದುವೆಯಾಗುತ್ತೇನೆ ಎಂದು ಹಠ ಮಾಡಿದರೆ, ಮನೆಯವರು ಒಪ್ಪಿಕೊಳ್ಳದೇ ಇರಬಹುದು. ಆದರೆ ನೀವು ನಿಧಾನವಾಗಿ, ಶಾಂತಿಯುತವಾಗಿ, ಎಲ್ಲರ ಭರವಸೆಯನ್ನು ಗೆಲ್ಲುವಂತೆ ಮಾತನಾಡಿದರೆ, ನೀವೆಷ್ಟು ಜವಾಬ್ಧಾರಿಯುತರಾಗಿದ್ದೀರಿ ಎಂಬುದನ್ನು ಅವರಿಗೆ ತಿಳಿಸಿದರೆ ಖಂಡಿತವಾಗಿಯೂ ನಿಮ್ಮ ಮನೆಯವರಿಗೆ ನಿಮ್ಮ ಮೇಲೆ ನಂಬಿಕೆ ಬರುತ್ತದೆ. ಬಳಿಕ ಅವರೇ ಮುಂದೆ ನಿಂತು ನಿಮ್ಮ ಮದುವೆ ಮಾಡಿಸುತ್ತಾರೆ ನೋಡಿ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.