ತಂದೆ ತನ್ನ ಮಕ್ಕಳ ಮುಂದೆ ಈ 4 ತಪ್ಪು ಎಂದಿಗೂ ಮಾಡ್ಬಾರ್ದು!

Published : Oct 12, 2025, 11:43 AM IST

Parenting Tips: ತಂದೆ ತಮ್ಮ ಮಕ್ಕಳ ಮುಂದೆ ಮಾಡಬಾರದ ಆ ನಾಲ್ಕು ತಪ್ಪು ಯಾವುವು ನೋಡೋಣ. ಏಕೆಂದರೆ ಅವು ಅವರ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೆ, ತಂದೆಯಾದವರು ಈ ನಡವಳಿಕೆಗಳನ್ನು ಸುಧಾರಿಸದಿದ್ದರೆ, ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಿ, ಅವರು ನಿಮ್ಮನ್ನೇ ಖಂಡಿಸಬಹುದು.  

PREV
16
ಈ ತಪ್ಪುಗಳು ತುಂಬಾ ಗಂಭೀರ

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ತುಂಬಾ ಪ್ರೀತಿಸುತ್ತಾರೆ. ಮಕ್ಕಳು ನೋವಲ್ಲಿ ಇದ್ದರೆ ಅವರಿಗೂ ನೋವಾಗುತ್ತದೆ. ಆದರೆ ಕೆಲವೊಮ್ಮೆ ಅರಿವಿಲ್ಲದೆಯೇ ತಮ್ಮ ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುವ ತಪ್ಪುಗಳನ್ನು ಮಾಡುತ್ತಾರೆ. ಈ ತಪ್ಪುಗಳು ತುಂಬಾ ಗಂಭೀರವಾಗಿದ್ದು, ಅವು ತಮ್ಮ ಮಗುವಿನ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ.

ಆದ್ದರಿಂದ ಈ ಲೇಖನದಲ್ಲಿ ತಂದೆ ತಮ್ಮ ಮಕ್ಕಳ ಮುಂದೆ ಮಾಡಬಾರದ ಆ ನಾಲ್ಕು ತಪ್ಪು ಯಾವುವು ನೋಡೋಣ. ಏಕೆಂದರೆ ಅವು ಅವರ ಒಟ್ಟಾರೆ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತವೆ. ಇದಲ್ಲದೆ, ತಂದೆಯಾದವರು ಈ ನಡವಳಿಕೆಗಳನ್ನು ಸುಧಾರಿಸದಿದ್ದರೆ, ಮಕ್ಕಳ ಭವಿಷ್ಯದ ಮೇಲೆ ಪರಿಣಾಮ ಬೀರಿ, ಅವರು ನಿಮ್ಮನ್ನೇ ಖಂಡಿಸಬಹುದು. ಆದ್ದರಿಂದ ಇದನ್ನು ತಪ್ಪಿಸಿ.

26
ಶ್ವೇತಾ ಗಾಂಧಿ ಪ್ರಕಾರ

ಹ್ಯಾಪಿ ಮೈಂಡ್ಸ್‌ನ ಸಂಸ್ಥಾಪಕಿ ಶ್ವೇತಾ ಗಾಂಧಿ, ತಮ್ಮ ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ವಿಡಿಯೋ ಶೇರ್ ಮಾಡಿದ್ದು, ತಂದೆ ತಮ್ಮ ಮಕ್ಕಳ ಮುಂದೆ ಮಾಡುವ ನಾಲ್ಕು ತಪ್ಪುಗಳು ಮತ್ತು ಅವುಗಳು ಹೇಗೆ ನಕಾರಾತ್ಮಕ ಪರಿಣಾಮ ಬೀರುತ್ತವೆ ಎಂದು ವಿವರಿಸಿದ್ದಾರೆ. ಅವು ಯಾವುವು ಎಂಬುದನ್ನು ನೋಡೋಣ..

36
ಕೂಗಾಡುವುದು

ಮೊದಲನೆಯದು..ತಂದೆ ಮಕ್ಕಳ ಮುಂದೆ ಕೂಗಾಡುವುದು. ಕೆಲವೊಮ್ಮೆ ಮಕ್ಕಳ ಮೇಲೆ ಅಥವಾ ಹೆಂಡತಿ ಮೇಲೆ. ಆದರೆ ಈಗ ಯೋಚಿಸಿ: ನಿಮ್ಮ ಭಾವನೆಗಳನ್ನು ನಿಯಂತ್ರಿಸಲು ನಿಮಗೇ ಸಾಧ್ಯವಾಗದಿದ್ದರೆ ನಿಮ್ಮ ಮಗು ಇದನ್ನು ಹೇಗೆ ಕಲಿಯುತ್ತದೆ?.

46
ಅದಷ್ಟೇ ನಿಮ್ಮ ಜವಬ್ದಾರಿಯಲ್ಲ

ಶ್ವೇತಾ ವಿವರಿಸಿರುವ ಪ್ರಕಾರ, ಅನೇಕ ತಂದೆಯಂದಿರು ತಮ್ಮ ಫೋನ್‌ಗಳ ಮೇಲೆ ಮಾತ್ರ ಗಮನಹರಿಸುತ್ತಾರೆ. ಕುಟುಂಬವನ್ನ ನೋಡಿಕೊಳ್ಳುವುದಷ್ಟೇ ಏಕೈಕ ಜವಾಬ್ದಾರಿ ಅಂದುಕೊಳ್ಳುತ್ತಾರೆ. ಅಂದರೆ "ಕಚೇರಿ ಕೆಲಸ ಮುಗಿದರೆ ತನ್ನ ಕೆಲಸ ಮುಗಿದಿದೆ" ಎಂದು. ಆದರೆ ಹಾಗಲ್ಲ. ಮಕ್ಕಳಿಗೆ ನಿಮ್ಮ ಸಂಪೂರ್ಣ ಉಪಸ್ಥಿತಿ ಬೇಕು. ತಂದೆ-ತಾಯಿ ಇಬ್ಬರ ಪ್ರೀತಿಯನ್ನೂ ಪಡೆದಾಗ ಮಗುವಿನ ಮೆದುಳು ಉತ್ತಮವಾಗಿ ಬೆಳೆಯುತ್ತದೆ.

56
ಪದೇ ಪದೇ ಟೀಕಿಸುವುದು

ಹಾಗೆಯೇ ತಜ್ಞರು ಹೇಳುವಂತೆ, ನೀವು ನಿಮ್ಮ ಮಗುವನ್ನು ಪದೇ ಪದೇ ಟೀಕಿಸುತ್ತಾ ಬಂದರೆ 'ನೀನು ಇದನ್ನು ಏಕೆ ಮಾಡಲಿಲ್ಲ?' ಅಥವಾ 'ನೀನು ಇದನ್ನು ಏಕೆ ಸರಿಯಾಗಿ ಮಾಡಲಿಲ್ಲ?' ಎಂದು ಕೇಳಿದಾಗ, ಅವರ ಆತ್ಮವಿಶ್ವಾಸ, ಸ್ವಾಭಿಮಾನ ಮತ್ತು ಸಾಮಾಜಿಕ ಕೌಶಲ್ಯಗಳು ಸರಿಯಾಗಿ ಬೆಳೆಯುವುದಿಲ್ಲ.

66
ಭಾವನಾತ್ಮಕ ಬುದ್ಧಿವಂತಿಕೆ

ನೀವು ನಿಮ್ಮ ಭಾವನೆಗಳನ್ನು ಮರೆಮಾಡಿ, ಮಕ್ಕಳು ಭಾವನೆಗಳನ್ನು ವ್ಯಕ್ತಪಡಿಸಬಾರದು ಎಂದು ಭಾವಿಸಿದಾಗ ನಿಮ್ಮ ಮಗುವಿಗೆ ಉತ್ತಮ ಪಾಠವನ್ನು ಕಲಿಸುತ್ತಿಲ್ಲ ಎಂದು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ಶ್ವೇತಾ ಕೊನೆಯದಾಗಿ ಹೇಳುತ್ತಾರೆ. ನೀವು ದುರ್ಬರಾಗಿದಿದ್ದರೆ ನಿಮ್ಮ ಮಗು ಭಾವನಾತ್ಮಕ ಬುದ್ಧಿವಂತಿಕೆಯನ್ನು ಹೇಗೆ ಕಲಿಯುತ್ತದೆ?.

Read more Photos on
click me!

Recommended Stories