ನಿಮ್ಮ ಸಂಗಾತಿ ಹೀಗ್ ಮಾಡ್ತಿದ್ದಾರಾ? ಅಂದ್ರೆ ಲವ್ವಲ್ಲಿ ಬಿದ್ದಿದ್ದಾರೆಂದರ್ಥ!

Published : Oct 05, 2022, 12:53 PM IST

ಇಂದಿನ ಕಾಲದಲ್ಲಿ, ನಿಜವಾದ ಪ್ರೀತಿ ಸಿಗೋದೆ ಕಷ್ಟ. ಕೆಲವೇ ಕೆಲವು ಗಂಡ-ಹೆಂಡತಿ, ಪ್ರೇಮಿಗಳು ಮಾತ್ರ ನಿಜವಾಗಿಯೂ ಪ್ರೀತಿಸುತ್ತಾರೆ. ಕೆಲವರನ್ನು ಹೊರತುಪಡಿಸಿ, ಹೆಚ್ಚಿನ ಜನರು ತಮ್ಮ ಸಂಗಾತಿಗೆ ಮೋಸ ಮಾಡ್ತಾರೆ ಮತ್ತು ಭಾವನಾತ್ಮಕವಾಗಿ ಅಥವಾ ದೈಹಿಕವಾಗಿ ಇನ್ನೊಬ್ಬರೊಂದಿಗೆ ಸಂಪರ್ಕ ಹೊಂದುತ್ತಾರೆ. ಹಾಗಾದರೆ ತಮ್ಮ ಸಂಗಾತಿ ಬೇರೊಬ್ಬರನ್ನು ಲವ್ ಮಾಡ್ತಿದ್ದಾರಾ? ಅನ್ನೋದನ್ನು ನೋಡೋದು ಹೇಗೆ ಎಂದು ಯೋಚನೆ ಮಾಡ್ತಾ ಇದ್ರೆ, ಇದನ್ನು ಓದಿ… ಇಲ್ಲಿದೆ ನಿಮಗೆ ಸೂಕ್ತ ಸಲಹೆ.

PREV
19
ನಿಮ್ಮ ಸಂಗಾತಿ ಹೀಗ್ ಮಾಡ್ತಿದ್ದಾರಾ? ಅಂದ್ರೆ ಲವ್ವಲ್ಲಿ ಬಿದ್ದಿದ್ದಾರೆಂದರ್ಥ!

ಇತ್ತೀಚಿನ ದಿನಗಳಲ್ಲಿ ಪ್ರೀತಿ ಅನ್ನೋದೆ ಕಡಿಮೆಯಾಗಿದೆ, ಮೋಸ(Cheat) ಮಾಡೋರೆ ಜಾಸ್ತಿಯಾಗಿದ್ದಾರೆ. ಮದುವೆಯಾದ ಬಳಿಕ ಕೆಲ ಸಮಯ ತುಂಬಾ ಪ್ರೀತಿಯಿಂದ ಇದ್ದರೂ, ನಂತರ ಅಲ್ಲೂ ಮೋಸ ಆಗುತ್ತೆ. ಆದರೆ ತಮ್ಮ ಸಂಗಾತಿ ಮೋಸ ಮಾಡ್ತಾ ಇದ್ದಾರೆ ಎಂದು ತಿಳಿಯೋದೆ ಇಲ್ಲ. ಕೆಲವರು ತಮ್ಮ ಸಂಬಂಧವನ್ನು ದೀರ್ಘಕಾಲದವರೆಗೆ ಮರೆಮಾಚುವಷ್ಟು ಬುದ್ದಿವಂತರಾಗಿರ್ತಾರೆ. ಅದರಿಂದಾಗಿಯೇ ಅವರು ಮೋಸ ಮಾಡೋದು ಸುಲಭವಾಗಿ ಆಚೆ ಬರೋದಿಲ್ಲ. ಆದ್ದರಿಂದ ನಿಮ್ಮ ಸಂಗಾತಿ ನಿಮಗೆ ದ್ರೋಹ ಮಾಡುತ್ತಿದ್ದಾರಾ ಎಂದು ತಿಳಿದುಕೊಳ್ಳಬಹುದಾದ ಕೆಲವು ಟ್ರಿಕ್ಸ್ ಇಲ್ಲಿ ತಿಳಿಯೋಣ. 

29

ನಿಮ್ಮ ಸಂಗಾತಿ ಬೇರೊಬ್ಬರೊಂದಿಗೆ ರಿಲೇಷನ್‌ಶಿಪ್‌ನಲ್ಲಿ ಇದ್ದಾರೆಯೇ ಎಂದು ತೋರಿಸುವ ಚಿಹ್ನೆಗಳು ಹೀಗಿವೆ 
1. ಬದಲಾಗುತ್ತಿರುವ ಹ್ಯಾಬಿಟ್ಸ್ (Habits) ಅಂದರೆ ಅವರು ಸಡನ್ ಆಗಿ ಬದಲಾಗುತ್ತಾರೆ. ಒಳ್ಳೆಯ ಗುಣಗಳು ಡ್ರೆಸ್ಸಿಂಗ್ ಸೆನ್ಸ್ ಎಲ್ಲವೂ ಒಮ್ಮಿಂದೊಮ್ಮೆಲೆ ಬದಲಾದರೆ, ಅದಕ್ಕೆ ಕಾರಣವನ್ನು ನೀವು ತಿಳಿದುಕೊಳ್ಳಬೇಕು. 
2. ಬೇಗ ಮನೆಯಿಂದ ಹೊರಡೋದು ಮತ್ತು ತಡವಾಗಿ ಹಿಂದಿರುಗೋದು ಸಹ ಅವರು ಮೋಸ ಮಾಡುತ್ತಿರುವ ಲಕ್ಷಣ ಆಗಿರಬಹುದು.

39

3. ಬಿಸಿನೆಸ್ ಟ್ರಿಪ್(Business trip) ಎಂದು ಹೇಳಿ ಸಂಗಾತಿ ಪದೇ ಪದೇ ಹೋಗುತ್ತಿದ್ದರೆ, ಅದರ ಬಗ್ಗೆ ಅನ್ವೇಷಣೆ ನಡೆಸದೇ ಬಿಡಬೇಡಿ. ಅವರು ಸುಳ್ಳು ಹೇಳುತ್ತಿರುವ ಸಾಧ್ಯತೆ ಕೂಡ ಹೆಚ್ಚಾಗಿರುತ್ತೆ.
4. ಹಾಲಿಡೇ ಅಥವಾ ಫ್ಯಾಮಿಲಿ ಫಂಕ್ಷನ್‌ನಲ್ಲಿ ನಿಮ್ಮೊಂದಿಗೆ ಭಾಗಿಯಾಗದೇ ಇರೋದು, ಅದರ ಬದಲಾಗಿ ಬೇರೊಂದು ಕಾರ್ಯಕ್ರಮ ಇದೆ ಎಂದು ತಪ್ಪಿಸೋದು. 
5. ಮೊದಲೆಲ್ಲಾ ಸರಿಯಾದ ಸಮಯಕ್ಕೆ ಕೆಲಸ ಮುಗಿಸಿ ಬರೋರು, ಇದೀಗ ಹೆಚ್ಚು ಓವರ್ ಟೈಮ್ ಕೆಲಸ ಮಾಡುತ್ತಿದ್ದರೆ, ಅದೊಂದು ನೆಪ ಅನ್ನೋದನ್ನು ತಿಳಿಯಿರಿ.

49

6. ಮನೆಯ ಖರ್ಚು ವೆಚ್ಚಗಳ ಬಗ್ಗೆ ನೀವೂ ಸಹ ತಲೆಗೆಡಿಸುವವರು ನೀವಾಗಿದ್ದರೆ, ಲೆಕ್ಕಕ್ಕೆ ಸಿಗದ ವೆಚ್ಚಗಳು ನಿಮಗೆ ಕಂಡು ಬಂದರೆ ಸರಿಯಾಗಿ ಪರೀಕ್ಷಿಸಿ ನೋಡಿ. 
7. ಸೋಶಿಯಲ್ ಮೀಡಿಯಾದಲ್ಲಿ(Social media)  ಸೀಕ್ರೆಟ್ ಅಕೌಂಟ್ (ಇನ್ಸ್ಟಾಗ್ರಾಮ್-ಇಮೇಲ್) ಹೊಂದಿರೋರು ಸಹ ಮೋಸ ಮಾಡುವವರೇ ಆಗಿರುತ್ತಾರೆ, ಅವುಗಳ ಬಗ್ಗೆ ಎಚ್ಚರವಾಗಿರಿ.
 

59

8. ಮೊದಲೆಲ್ಲಾ ಕ್ರೆಡಿಟ್ ಕಾರ್ಡ್ ಬಿಲ್ ಬಗ್ಗೆ ಮಾಹಿತಿ ನೀಡ್ತಾ ಇದ್ದೋರು, ಇದೀಗ ಹಠಾತ್ ಆಗಿ ಕ್ರೆಡಿಟ್ ಕಾರ್ಡ್ ಬಿಲ್‌ಗಳನ್ನು ನಿಮ್ಮ ಮುಂದೆ ತಾರದೇ ಇದ್ದರೆ, ಅದನ್ನು ಅವಾಯ್ಡ್ ಮಾಡುತ್ತಿದ್ದರೆ ಅರ್ಥ ಮಾಡ್ಕೊಳಿ.
9. ಮೊಬೈಲ್ ನೋಡುತ್ತಿದ್ದರೆ, ಪ್ರತಿ ಬಾರಿಯೂ ಅತಿಯಾಗಿ ಸ್ಟೈಲ್ ಮಾಡುತ್ತಿದ್ದರೆ, ಬೇರೆಯವರನ್ನು ಲವ್ ಮಾಡ್ತಿದ್ದಾರೆ ಅನ್ನೋದನ್ನು ಅರ್ಥ ಮಾಡಿಕೊಳ್ಳಬೇಕು.
10. ನಿಮ್ಮವರ ಡ್ರೆಸ್‌ನಿಂದ ಬೇರೊಬ್ಬರ ಪರ್ಫ್ಯೂಮ್ ಸ್ಮೆಲ್ ಬರುತ್ತಿದ್ದರೆ, ಅಥವಾ ಕಾಲರ್ ಮೇಲೆ ಲಿಪ್ ಸ್ಟಿಕ್(Lipstick) ಕಲೆ ಇದ್ದರೆ ನಿಮ್ಮ ಪ್ರೀತಿ ಕೈಜಾರಿ ಹೋಗಿದೆ ಅನ್ನೋದನ್ನು ತಿಳಿಯಿರಿ.
 

69

11. ನೀವು ನೋಡಿರದ ಗಿಫ್ಟ್ಸ್ ಖರೀದಿಸೋದು ಅಥವಾ ಅವರ ಬಳಿ ಹೊಸ ಉಡುಗೊರೆಗಳನ್ನು ನೀವು ನೋಡಿದರೆ, ಅದು ಯಾರಿಂದ ಬಂದಿದೆ ಅನ್ನೋದನ್ನು ತಿಳಿಯಿರಿ.
12. ಮನೆಯಲ್ಲಿ ಕಾಂಡೋಮ್(Condom) ಇರೋದೇನೋ ಓಕೆ, ಆದರೆ ಕಾರಿನಲ್ಲಿ ಕಾಂಡೋಮ್ ಇರೋದು ಕಂಡು ಬಂದರೆ ಎಚ್ಚರವಾಗಿರಿ.
13. ಜಿಮ್ ಕಡೆ ಹೋಗದೇ ಇರೋರು, ಸಡನ್ ಆಗಿ ಜಿಮ್ ಗೆ ಸೇರಿದ್ರೆ ಏನಾಗ್ತಿದೆ ಅನ್ನೋದನ್ನು ತಿಳಿಯಿರಿ.

79

14. ನಿಮ್ಮವರ ಮೊಬೈಲ್ ಗೆ ಪದೇ ಪದೇ ಅನ್ನೋನ್ ನಂಬರಿಂದ ಮಿಸ್ಡ್ ಕಾಲ್ ಬರುತ್ತಿದ್ದರೆ, ಅಥವಾ ಅನ್ನೋನ್ ನಂಬರ್ ನಿಂದ ಕಾಲ್ ಬಂದಾಗ, ಸಂಗಾತಿ ಎದ್ದು ಹೋಗಿ ದೂರದಲ್ಲಿ ಮಾತನಾಡಿದರೆ ಅರ್ಥ ಮಾಡ್ಕೊಳಿ.
15. ಮೊಬೈಲ್ ನಲ್ಲಿ ಸೀಕ್ರೆಟ್ ಮೆಸೇಜ್(Secret message) ಮಾಡಿರೋದು ಕಂಡು ಬರೋದು
16. ನಿಮ್ಮ ಜೊತೆ ಸರಿಯಾಗಿ ಮಾತನಾಡೋದು ಇಲ್ಲ, ಸರಿಯಾಗಿ ಸಮಯ ಕೊಡೋದು ಇಲ್ಲ, ಜೊತೆಗೆ ಕಡಿಮೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರೋದು ಬೇರೇನೆ ಅರ್ಥ ನೀಡುತ್ತೆ.
 

89

17. ನೀವು ಅವರ ಬಳಿ ಏನೇ ಮಾತನಾಡಿದರೂ ಅದಕ್ಕೆ ತಿರುಗು ಉತ್ತರ ಅವರ ಬಳಿ ರೆಡಿಯಾಗಿದ್ದರೆ ಅವರ ಮನಸ್ಸಲ್ಲೇನಿದೆ ತಿಳಿಯಿರಿ.
18. ನೀವು ಏನೇ ಕೇಳಿದರೂ ಅದಕ್ಕೆ ಅವರು ಸ್ಪಷ್ಟ ಸುಳ್ಳುಗಳನ್ನೇ (Lie) ಹೇಳುತ್ತಿದ್ದರೆ, ಅದನ್ನು ಅರ್ಥೈಸೋದು ಒಳ್ಳೇದು.
19. ಕಡಿಮೆ ಕೋಪ ಮಾಡೋದು ಅಂದರೆ ನಿಮ್ಮ ಮೇಲೆ ಯಾವುದೇ ಆಸಕ್ತಿ ಇಲ್ಲ ಅನ್ನೋದನ್ನು ತೋರಿಸುತ್ತೆ.

99

ಇವುಗಳಲ್ಲಿ ನೀವು ಮೂರು ಅಥವಾ ನಾಲ್ಕು ಚಿಹ್ನೆಗಳನ್ನು ನಿಮ್ಮ ಸಂಗಾತಿಯಲ್ಲಿ ನೋಡಿದರೆ, ನೀವು ತೊಂದರೆಯಲ್ಲಿದ್ದೀರಿ ಎಂದು ಅರ್ಥಮಾಡಿಕೊಳ್ಳಿ! ಮೇಲೆ ಹೇಳಿದ ವಿಷಯಗಳಲ್ಲಿ ಒಂದು ಅಥವಾ ಎರಡು ಚಿಹ್ನೆಗಳಿದ್ದರೆ, ಸಂಗಾತಿಯು ಮೋಸಗಾರ(Cheater) ಎಂದು ಅರ್ಥವಲ್ಲ. ಅದು ಕಾಕತಾಳೀಯವಾಗಿರಬಹುದು. ಆದರೆ ಮೂರು-ನಾಲ್ಕು ಚಿಹ್ನೆಗಳು ಸಂಗಾತಿಯಲ್ಲಿ ಕಾಣಿಸಿಕೊಂಡರೆ, ನಿಮಗೆ ಸಮಸ್ಯೆಯಾಗಬಹುದು, ಹುಷಾರ್!  

Read more Photos on
click me!

Recommended Stories