ವಿಶ್ವದ ಅತ್ಯಂತ ಹಿರಿಯ ಜೀವಂತ ಭೂ ಪ್ರಾಣಿ ಎನಿಸಿರುವ ಜೊನಾಥನ್ ಆಮೆಗೆ ಸುಮಾರು 195 ವರ್ಷ. ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಸೀಶೆಲ್ಸ್ ಪ್ರವಾಸದ ವೇಳೆ ಇಂತಹದ್ದೇ ಆಮೆಯೊಂದನ್ನು ಭೇಟಿಯಾಗಿ ಆಹಾರ ನೀಡಿದ್ದರು. ಈ ಮೂಲಕ ವಿಶ್ವದ ಹಿರಿಯ ಆಮೆ ಮತ್ತು ಭಾರತದ ಪ್ರಧಾನಿ ನಡುವೆ ವಿಶೇಷ ನಂಟು ಬೆಸೆದುಕೊಂಡಿದೆ.
ಸಾಮಾನ್ಯವಾಗಿ ಆಮೆಗಳು 80 ರಿಂದ ಅಬ್ಬಬ್ಬಾ ಎಂದರೆ 150 ವರ್ಷಗಳು ಬದುಕುತ್ತವೆ. ಆದರೆ ವಿಶ್ವದ ಅತ್ಯಂತ ಹಿರಿಯ ಆಮೆಗೆ ಈಗ 195 ವರ್ಷ ವಯಸ್ಸಾಗಿದ್ದು, ಇದಿನ್ನೂ ಜೀವಂತವಾಗಿದೆ. ಕುತೂಹಲದ ವಿಷಯ ಏನೆಂದರೆ, ಈ ಆಮೆಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಒಂದು ಲಿಂಕ್ ಇದೆ.
26
ವಿಶ್ವದ ಅತ್ಯಂತ ಹಿರಿಯ ಆಮೆ
ಹೌದು. ಈ ಆಮೆಯ ಹೆಸರು. ಜೊನಾಥನ್ (Jonathan). ಇದನ್ನು ವಿಶ್ವದ ಅತ್ಯಂತ ಹಳೆಯ ಜೀವಂತ ಭೂಪ್ರಾಣಿ ಎಂದು ಪರಿಗಣಿಸಲ್ಪಟ್ಟಿರುವ ದೈತ್ಯ ಆಮೆಯಾಗಿದೆ. 1832ರಲ್ಲಿ ಜನಿಸಿದೆ ಎಂದು ಅಂದಾಜಿಸಲಾಗಿದ್ದು, ಪ್ರಸ್ತುತ ಇದರ ವಯಸ್ಸು ಸುಮಾರು 195 ವರ್ಷಗಳು. ಇದು ದಕ್ಷಿಣ ಅಟ್ಲಾಂಟಿಕ್ ಮಹಾಸಾಗರದಲ್ಲಿರುವ ಸೇಂಟ್ ಹೆಲೆನಾ ದ್ವೀಪದ ಗವರ್ನರ್ ಅಧಿಕೃತ ನಿವಾಸದಲ್ಲಿ ವಾಸಿಸುತ್ತಿದೆ.
36
ಪ್ರಧಾನಿ ನರೇಂದ್ರ ಮೋದಿ ಭೇಟಿ
ಇದನ್ನು ಕೆಲ ತಿಂಗಳ ಹಿಂದೆ ಸೀಶೆಲ್ಸ್ ಪ್ರವಾಸದಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರು ವೀಕ್ಷಿಸಿದ್ದರು. ಅಲ್ಲಿನ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನಿ ಜತೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದರು. ಆಮೆಗೆ ಆಹಾರ ನೀಡಿದ್ದರು. ಇದೇ ವೇಳೆ ಭೇಟಿಯ ನೆನಪಿಗಾಗಿ ಸಸಿಯೊಂದನ್ನು ನೆಟ್ಟಿದ್ದರು.
ಭಾರತ ಮತ್ತು ಸೀಶೆಲ್ಸ್ ನಡುವಿನ ರಾಜತಾಂತ್ರಿಕ ಸಂಬಂಧಗಳ ಸ್ಥಾಪನೆಯ 50ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಶೆಲ್ಸ್ ಪ್ರಧಾನಿ ಮೋದಿ ಅವರನ್ನು ಆಹ್ವಾನಿಸಿದ್ದರು. ಈ ವೇಳೆ ರಾಷ್ಟ್ರೀಯ ಸಸ್ಯೋದ್ಯಾನಕ್ಕೆ ಭೇಟಿ ನೀಡಿದ ಪ್ರಧಾನಿ ಮೋದಿ, ಜೋನಾಥನ್ ಆಮೆ ಭೇಟಿ ಮಾಡಿ ಗಮನ ಸೆಳೆದಿದ್ದರು.
56
ಆಮೆಯ ವಿಶೇಷತೆ
ಈ ಆಮೆಯ ವಿಶೇಷತೆ ಎಂದರೆ ಇದನ್ನು 1882ರಲ್ಲಿ ಸೀಶೆಲ್ಸ್‌ನಿಂದ ಸೇಂಟ್ ಹೆಲೆನಾ ದ್ವೀಪಕ್ಕೆ ತರಲಾಯಿತು. ಆ ಹೊತ್ತಿಗೆ ಅದಕ್ಕೆ ಸುಮಾರು 50 ವರ್ಷ ವಯಸ್ಸಾಗಿತ್ತು. ಇದು ಬ್ರಿಟಿಷ್ ಸಾಮ್ರಾಜ್ಯದ ಅನೇಕ ರಾಜಮನೆತನದವರನ್ನು ಮತ್ತು ಪ್ರಮುಖ ವ್ಯಕ್ತಿಗಳನ್ನು ಕಂಡಿದೆ. ವಯಸ್ಸಾಗಿದ್ದರೂ ಇದು ಈಗಲೂ ಆರೋಗ್ಯವಾಗಿದ್ದು, ಹುಲ್ಲು ತಿನ್ನುವುದು ಮತ್ತು ಬಿಸಿಲಿನಲ್ಲಿ ಓಡಾಡುವುದನ್ನು ಆನಂದಿಸುತ್ತದೆ.
66
ಈ ಹಿಂದೆ ಸುಳ್ಳು ಸುದ್ದಿ
ಈ ಹಿಂದೆ ಜೊನಾಥನ್ ಆಮೆಯನ್ನು ಪಶುವೈದ್ಯ ಜೋ ಹಾಲಿನ್ಸ್ ಅವರು ನೋಡಿಕೊಳ್ಳುತ್ತಿದ್ದರು. ಅವರ ಖಾತೆಯಿಂದ ಕಳೆದ ವರ್ಷ ಈ ಆಮೆ ಸಾವನ್ನಪ್ಪಿದೆ ಎನ್ನುವ ಸುದ್ದಿ ಸದ್ದು ಮಾಡಿದ್ದು, ಭಾರಿ ಕೋಲಾಹಲಕ್ಕೂ ಕಾರಣವಾಗಿತ್ತು. ಈ ವರದಿಯನ್ನು BBC, USA Today ಮತ್ತು Daily Mail ಸೇರಿದಂತೆ ಮಾಧ್ಯಮಗಳಲ್ಲಿ ಪ್ರಸಾರ ಕೂಡ ಆಗಿಬಿಟ್ಟಿತ್ತು. ಕೊನೆಗೆ ಹಾಲಿನ್ಸ್ ಅವರು, ಇದು ಸುಳ್ಳು ಸುದ್ದಿ. ಆಮೆ ಜೀವಂತವಾಗಿದೆ, ಯಾರೋ ಕಿಡಿಗೇಡಿಗಳು ಈ ಸುಳ್ಳು ಸುದ್ದಿ ಹರಡಿಸಿದ್ದಾರೆ ಎಂದಿದ್ದರು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.