ಮಳೆಗಾಲದಲ್ಲಿ ಕಿಟಕಿ ಬಳಿ ಸ್ಪೂನ್ ಇಡೋದ್ರಿಂದ ಏನಾಗುತ್ತೇ? 90% ಜನರಿಗೆ ಈ ಸೀಕ್ರೆಟ್ ಟ್ರಿಕ್ ಗೊತ್ತೇ ಇಲ್ಲ

Published : Aug 08, 2026, 05:40 PM IST

ಮಳೆಗಾಲದಲ್ಲಿ, ಕಿಟಕಿ ಗಾಜುಗಳ ಮೇಲೆ ನೀರಿನ ಹನಿಗಳು ಸಂಗ್ರಹವಾಗಿ ಕೋಣೆಯಲ್ಲಿ ತೇವ ಉಂಟಾಗುವುದು ದೊಡ್ಡ ಸಮಸ್ಯೆಯಾಗಿದೆ. ಇದನ್ನು ತೊಡೆದುಹಾಕಲು, ಕಿಟಕಿಯ ಮೇಲೆ ಚಮಚವನ್ನು ಇಡುವ ಟ್ರಿಕ್ಸ್ ವ್ಯಾಪಕವಾಗಿ ಚರ್ಚಿಸಲಾಗುತ್ತದೆ. ಇದು ವಿಚಿತ್ರವೆನಿಸಬಹುದು, ಆದರೆ ಇದರ ಹಿಂದೆ ಒಂದು ವೈಜ್ಞಾನಿಕ ಕಾರಣವಿದೆ.

PREV
17
ಕಿಟಕಿಯ ಬಳಿ ಚಮಚ ಇಡುವ ಈ ಟ್ರಿಕ್ ಗೊತ್ತೇ?

ನಿಮ್ಮ ಮನೆಯ ಕಿಟಕಿಗಳ ಮೇಲೂ ಚಳಿ ಅಥವಾ ಮಳೆಗಾಲದಲ್ಲಿ ನೀರಿನ ಹನಿಗಳು ಜಮೆಯಾಗುತ್ತವೆಯೇ? ಕಿಟಕಿಯ ಗಾಜಿನಿಂದ ಕೆಳಗೆ ಹರಿಯುವ ಈ ನೀರು ಗೋಡೆಗಳನ್ನು ಹಾಳುಮಾಡುವುದರ ಜೊತೆಗೆ ಮನೆಯಲ್ಲಿ ತೇವಾಂಶ, ಫಂಗಸ್ ಮತ್ತು ವಿಚಿತ್ರ ವಾಸನೆ ಉಂಟಾಗಲು ಕಾರಣವಾಗಬಹುದು. ಈ ಸಮಸ್ಯೆಯಿಂದ ತಪ್ಪಿಸಿಕೊಳ್ಳಲು ಇತ್ತೀಚೆಗೆ ಒಂದು ಸಿಂಪಲ್ ಟ್ರಿಕ್ ಜನಪ್ರಿಯವಾಗುತ್ತಿದೆ. ಅದೇನೆಂದರೆ, ಕಿಟಕಿಯ ಬಳಿ ಸ್ಟೀಲ್ ಚಮಚವನ್ನು ಇಡುವುದು. 100ರಲ್ಲಿ 90 ಮಂದಿಗೆ ಈ ಸಿಂಪಲ್ ಟ್ರಿಕ್ ನಿಜವಾಗಿಯೂ ಹೇಗೆ ಕೆಲಸ ಮಾಡುತ್ತದೆ ಎಂಬುದು ತಿಳಿದಿರಲಿಕ್ಕಿಲ್ಲ. ಇದನ್ನ ಹೇಗೆ ಮಾಡೋದು ನೋಡೋಣ.

27
ಮನೆಯೊಳಗಿನ ತೇವಾಂಶದಿಂದ ಸಮಸ್ಯೆ

ಮನೆಯ ಒಳಗಿನ ತಾಪಮಾನವು ಹೊರಗಿನ ತಾಪಮಾನಕ್ಕಿಂತ ಹೆಚ್ಚಾಗಿದ್ದು, ಗಾಳಿಯಲ್ಲಿ ತೇವಾಂಶ ಹೆಚ್ಚಿರುವಾಗ ಈ ಸಮಸ್ಯೆ ಹೆಚ್ಚಾಗುತ್ತದೆ. ಬೆಚ್ಚಗಿನ ಗಾಳಿ ಕಿಟಕಿಯ ತಂಪಾದ ಗಾಜಿಗೆ ತಾಗಿದಾಗ, ಗಾಳಿಯಲ್ಲಿರುವ ನೀರಿನ ಆವಿ ನೀರಿನ ಹನಿಗಳಾಗಿ ಪರಿವರ್ತನೆಯಾಗುತ್ತದೆ. ಈ ಪ್ರಕ್ರಿಯೆಯನ್ನು ವಿಜ್ಞಾನದಲ್ಲಿ ಕಂಡೆನ್ಸೇಶನ್ ಎಂದು ಕರೆಯಲಾಗುತ್ತದೆ. ಕಿಟಕಿಯ ಮೇಲೆ ನಿರಂತರವಾಗಿ ನೀರು ಜಮೆಯಾಗುತ್ತಿದ್ದರೆ, ಅದರ ಚೌಕಟ್ಟು ಹಾಳಾಗಬಹುದು. ಅಲ್ಲದೆ, ಕಿಟಕಿಯ ಸುತ್ತಲಿನ ಗೋಡೆಗಳಲ್ಲಿ ತೇವಾಂಶ ಉಂಟಾಗಿ ಕ್ರಮೇಣ ಫಂಗಸ್ ಬೆಳೆಯುವ ಸಾಧ್ಯತೆಯೂ ಇರುತ್ತದೆ.

37
ಏನಿದು ಚಮಚ ಟ್ರಿಕ್ಸ್

ಈ ಉಪಾಯವನ್ನು ಪ್ರಯತ್ನಿಸಲು ಯಾವುದೇ ದುಬಾರಿ ಸಾಧನದ ಅಗತ್ಯವಿಲ್ಲ. ನಿಮಗೆ ಸ್ಟೇನ್‌ಲೆಸ್ ಸ್ಟೀಲ್ ಅಥವಾ ಬೇರೆ ಯಾವುದೇ ಸ್ಟೀಲ್ ಚಮಚ ಸಾಕು. ಚಮಚವನ್ನು ಕಿಟಕಿಯ ಫ್ರೇಮ್ ಅಥವಾ ಕಿಟಕಿಯ ಸೈಡಲ್ಲಿ ಇಡಬಹುದು. ಚಮಚವನ್ನು ಕಿಟಕಿಯ ಗಾಜಿನ ಸಮೀಪ ಇರಿಸುವಂತೆ ನೋಡಿಕೊಳ್ಳಿ. ಚಮಚದ ಹ್ಯಾಂಡಲ್ ಮನೆಯ ಒಳಭಾಗದ ಕಡೆಗೆ ಮತ್ತು ಚಮಚದ ಬಟ್ಟಲಿನ ಭಾಗ ಕಿಟಕಿಯ ಗಾಜಿನ ಕಡೆಗೆ ಇರುವಂತೆ ಇಡಬೇಕು.

47
ಇದು ಹೇಗೆ ಕೆಲಸ ಮಾಡುತ್ತೆ?

ಈ ವಿಧಾನವು ಲೋಹದ ಉಷ್ಣ ವಾಹಕತೆಯ ಗುಣವನ್ನು ಆಧರಿಸಿದೆ. ಕಬ್ಬಿಣ, ಸ್ಟೀಲ್ ಅಥವಾ ಅಲ್ಯೂಮಿನಿಯಂನಂತಹ ಲೋಹಗಳು ತಾಪಮಾನವನ್ನು ಗಾಜಿಗಿಂತ ವೇಗವಾಗಿ ಸ್ವೀಕರಿಸಿ ಕಳೆದುಕೊಳ್ಳುತ್ತವೆ. ಕೋಣೆಯ ಬೆಚ್ಚಗಿನ ಮತ್ತು ತೇವಾಂಶಭರಿತ ಗಾಳಿಯಿಂದಾಗಿ ಕಿಟಕಿಯ ಮೇಲೆ ಆವಿ ನೀರು ಹರಿಯಬಹುದು. ಆದರೆ ಚಮಚವನ್ನು ಕಿಟಕಿ ಬಳಿ ಇಡುವುದರಿಂದ, ಗಾಜಿನ ಮೇಲೆ ಜಮೆಯಾಗುವ ತೇವಾಂಶವನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡುತ್ತದೆ. ಆದರೆ ಇದು ಹೆಚ್ಚಿನ ಮಟ್ಟದಲ್ಲಿ ಎಫೆಕ್ಟಿವ್ ಆಗಿರುವುದಿಲ್ಲ

57
ಈ ಸರಳ ಉಪಾಯದ ಮುಖ್ಯ ಪ್ರಯೋಜನಗಳು
  • ತೇವಾಂಶದ ಒಂದು ಭಾಗ ಚಮಚದ ತಂಪಾದ ಮೇಲ್ಮೈಯಲ್ಲಿ ನೀರಿನ ಹನಿಗಳಾಗಿ ರೂಪುಗೊಳ್ಳಬಹುದು. ಇದರಿಂದ ಗ್ಲಾಸ್ ಮೇಲೆ ಜಮೆಯಾಗುವ ನೀರಿನ ಪ್ರಮಾಣ ಸ್ವಲ್ಪ ಕಡಿಮೆಯಾಗಬಹುದು.
  • ಗಾಜಿನ ಮೇಲೆ ಜಮೆಯಾದ ನೀರು ಕೆಳಗೆ ಹರಿದು ಮರದ ಚೌಕಟ್ಟು ಅಥವಾ ಪೇಂಟ್‌ಗೆ ಹಾನಿ ಮಾಡಬಹುದು. ಆದರೆ ಚಮಚ ಇಟ್ಟರೆ, ಈ ಸಮಸ್ಯೆ ಕಡಿಮೆಯಾಗುತ್ತದೆ.
  • ಕಿಟಕಿಯ ಸುತ್ತಲಿನ ಪ್ರದೇಶದಲ್ಲಿ ನಿರಂತರ ತೇವಾಂಶ ಇರುವುದರಿಂದ ಫಂಗಸ್ ಬೆಳೆಯುವ ಸಾಧ್ಯತೆ ಹೆಚ್ಚಾಗುತ್ತದೆ. ಚಮಚ ಇಡುವುದರಿಂದ ಅದು ಕಡಿಮೆಯಾಗುತ್ತದೆ.
67
ತೇವಾಂಶ ಮತ್ತು ದುರ್ವಾಸನೆಯಿಂದ ಪರಿಹಾರ ಸಿಗುತ್ತದೆಯೇ?

ಮನೆಯಲ್ಲಿ ಅತಿಯಾದ ತೇವಾಂಶ ಇದ್ದರೆ ಫಂಗಸ್ ಮತ್ತು ಇತರ ಸೂಕ್ಷ್ಮಜೀವಿಗಳ ಬೆಳವಣಿಗೆಗೆ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ಇದರಿಂದ ಮನೆಯ ಕೆಲವು ಭಾಗಗಳಲ್ಲಿ ಮುಚ್ಚಿದ ಅಥವಾ ಕೊಳೆತಂತಹ ವಾಸನೆ ಉಂಟಾಗಬಹುದು. ಕಿಟಕಿಯ ಬಳಿ ಚಮಚವನ್ನು ಇಡುವುದರಿಂದ ಸಣ್ಣಮಟ್ಟಿಗೆ ತೇವಾಂಶ ಮತ್ತು ವಾಸನೆ ತಡೆಯಲು ಸಹಾಯ ಮಾಡುತ್ತದೆ.

77
ಚಮಚದ ಉಪಾಯ ನಿಜವಾಗಿಯೂ ಎಷ್ಟು ಪರಿಣಾಮಕಾರಿ?

ನಿಮ್ಮ ಮನೆಯ ಕಿಟಕಿಯ ಬದಿಯಿಂದ ನೀರು ಲೀಕ್ ಆಗುತ್ತಿದ್ದರೆ ಇದು ಖಂಡಿತವಾಗಿಯೂ ಉಪಯೋಗಕ್ಕೆ ಬರುವುದಿಲ್ಲ. ಅಷ್ಟೇ ಅಲ್ಲ, ಈ ಚಮಚದ ಉಪಾಯ ಹೆಚ್ಚಿನ ಪ್ರಮಾಣದ ತೇವಾಂಶವನ್ನು ಸಹ ನಿಯಂತ್ರಿಸುವುದಿಲ್ಲ. ಸಣ್ಣಮಟ್ಟಿಗೆ ಇದು ಸಹಾಯ ಮಾಡುತ್ತೆ ಅಷ್ಟೇ.

ವಿ.ಸೂ: ಇದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ಒಂದು ಟ್ರಿಕ್. ಇದನ್ನ ಮಾಡುವುದರಿಂದ ಸಮಸ್ಯೆ ಇಲ್ಲ, ಆದರೆ ಸಂಪೂರ್ಣ ಪರಿಹಾರ ಸಿಗುವ ಸಾಧ್ಯತೆ ಕಡಿಮೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories