Foot pain causes: ಕಾಲು ನೋವು ಎಂಬುದು ನಮ್ಮ ಪಾದದ ಸ್ನಾಯುಗಳು ಅಥವಾ ಮೂಳೆಗಳ ಮೇಲೆ ಅತಿಯಾದ ಒತ್ತಡ ಬಿದ್ದಾಗ ಉಂಟಾಗುವ ಒಂದು ಸಂಕೇತವಾಗಿದೆ. ಇದನ್ನು ನಿರ್ಲಕ್ಷಿಸಿದರೆ ಮುಂದೆ ಮೊಣಕಾಲು ಮತ್ತು ಸೊಂಟದ ನೋವಿಗೂ ಕಾರಣವಾಗಬಹುದು.
ನಾವು ಮನೆಯಲ್ಲಿ ಮಾಡುವ ಒಂದು ಸಣ್ಣ ತಪ್ಪಿದು ಇತ್ತೀಚಿನ ದಿನಗಳಲ್ಲಿ ಸಣ್ಣ ಮಕ್ಕಳಿಂದ ಹಿಡಿದು 40 ದಾಟಿದ ಮಹಿಳೆಯರವರೆಗೆ ಕಾಲು ನೋವು (Foot Pain) ಒಂದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ಹೆಚ್ಚು ಹೊತ್ತು ನಿಂತು ಕೆಲಸ ಮಾಡಲು ಅಥವಾ ನಡೆಯಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಪ್ರಮುಖ ಕಾರಣ ನಮ್ಮ ಬದಲಾದ ಜೀವನಶೈಲಿ ಮತ್ತು ನಾವು ಮನೆಯಲ್ಲಿ ಮಾಡುವ ಒಂದು ಸಣ್ಣ ತಪ್ಪು ಎಂದು ವೈದ್ಯರು ಹೇಳುತ್ತಾರೆ.
25
ರಕ್ತ ಸಂಚಾರ ಸರಾಗವಾಗಿ ನಡೆಯುತ್ತಿತ್ತು
ರಕ್ತ ಸಂಚಾರ ಸರಾಗವಾಗಿ ನಡೆಯುತ್ತಿತ್ತು ನಮ್ಮ ಜೀವನಶೈಲಿ ಆಧುನಿಕವಾದಂತೆ ನಮಗೆ ಅರಿವಿಲ್ಲದೆಯೇ ಕೆಲವು ಆರೋಗ್ಯ ಸಮಸ್ಯೆಗಳನ್ನು ನಾವೇ ಆಹ್ವಾನಿಸುತ್ತಿದ್ದೇವೆ. ಹಿಂದಿನ ಕಾಲದಲ್ಲಿ ಮನೆಗಳಲ್ಲಿ ಮಣ್ಣಿನ ನೆಲ ಅಥವಾ ಗಡುಸಾದ ಕಲ್ಲುಗಳನ್ನು (Rough stones) ಹಾಕಲಾಗುತ್ತಿತ್ತು. ಅಂತಹ ನೆಲದ ಮೇಲೆ ಬರಿಗಾಲಿನಲ್ಲಿ ನಡೆಯುವಾಗ ಪಾದದ ನರಗಳು ಪ್ರಚೋದನೆಗೊಂಡು, ಪಾದದಿಂದ ದೇಹದ ಮೇಲ್ಭಾಗದವರೆಗೆ ರಕ್ತ ಸಂಚಾರ ಸರಾಗವಾಗಿ ನಡೆಯುತ್ತಿತ್ತು. ಅಷ್ಟೇ ಅಲ್ಲದೆ, ದೇಹದ ಭಾರವು ಪಾದದ ಮೇಲೆ ಸಮನಾಗಿ ಹಂಚಿಕೆಯಾಗುತ್ತಿತ್ತು.
35
ಮೊಣಕಾಲು ನೋವು ಬರುತ್ತೆ
ಮೊಣಕಾಲು ನೋವು ಬರುತ್ತೆ ಆದರೆ ಇಂದು ಮನೆಗಳ ಸೌಂದರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಮನೆಯ ಗೇಟಿನಿಂದ ಹಿಡಿದು ಒಳಗಿನವರೆಗೂ ನುಣುಪಾದ ಮಾರ್ಬಲ್, ಗ್ರಾನೈಟ್ ಅಥವಾ ಟೈಲ್ಸ್‌ಗಳನ್ನು ಹಾಕಲಾಗುತ್ತದೆ. ಇವು ನೋಡಲು ಸುಂದರವಾಗಿದ್ದರೂ, ಪಾದಗಳಿಗೆ ತುಂಬಾ ಕಠಿಣವಾಗಿರುತ್ತವೆ. ಈ ಅತ್ಯಂತ ನುಣುಪಾದ ಮತ್ತು ಗಟ್ಟಿಯಾದ ನೆಲದ ಮೇಲೆ ನಾವು ಬರಿಗಾಲಿನಲ್ಲಿ ನಡೆದಾಗ, ದೇಹದ ಸಂಪೂರ್ಣ ಭಾರವು ನೇರವಾಗಿ ಪಾದಗಳ ಮೇಲೆ ಬೀಳುತ್ತದೆ. ಇದರಿಂದ ಕಾಲಿನಲ್ಲಿ ಉರಿ ಮತ್ತು ನೋವು ಕಾಣಿಸಿಕೊಳ್ಳುತ್ತದೆ. ಇದು ದೀರ್ಘಕಾಲ ಮುಂದುವರಿದರೆ ಮೊಣಕಾಲು ನೋವಿಗೂ ದಾರಿಯಾಗುತ್ತದೆ.
ಮೆತ್ತನೆಯ ಪಾದರಕ್ಷೆ ಧರಿಸಿ ಈ ಸಮಸ್ಯೆಗೆ ಸರಳ ಪರಿಹಾರವೆಂದರೆ ಮನೆಯೊಳಗೆ ನಡೆಯುವಾಗ ಕಡ್ಡಾಯವಾಗಿ ಮೆತ್ತನೆಯ ಪಾದರಕ್ಷೆ ಅಥವಾ ಸ್ಲಿಪ್ಪರ್‌ಗಳನ್ನು (Indoor Slippers) ಧರಿಸುವುದು. ಮನೆಯೊಳಗೆ ಧರಿಸಲೆಂದೇ ಪ್ರತ್ಯೇಕವಾದ ಮತ್ತು ಆರಾಮದಾಯಕವಾದ ಚಪ್ಪಲಿಗಳನ್ನು ಇಟ್ಟುಕೊಳ್ಳಿ. ಇದು ಪಾದಗಳ ಮೇಲೆ ಬೀಳುವ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತ ಸಂಚಾರವನ್ನು ಉತ್ತಮಗೊಳಿಸುತ್ತದೆ.
55
ಈ ಸಮಯದಲ್ಲಿ ನಿಮ್ಮಿಷ್ಟ
ಈ ಸಮಯದಲ್ಲಿ ನಿಮ್ಮಿಷ್ಟ ಪೂಜಾ ಕೋಣೆಗೆ ಹೋಗುವಾಗ ಅಥವಾ ಮಡಿಯಿಂದ ಇರುವಾಗ ಚಪ್ಪಲಿ ಧರಿಸಲು ಸಂಕೋಚವಿರುವವರು, ಕೇವಲ ಆ ಸಮಯದಲ್ಲಿ ಮಾತ್ರ ಚಪ್ಪಲಿ ಬಿಟ್ಟು, ಉಳಿದ ಇಡೀ ಮನೆ ಕೆಲಸದ ಸಮಯದಲ್ಲಿ ಸ್ಲಿಪ್ಪರ್ ಬಳಸುವುದನ್ನು ರೂಢಿಸಿಕೊಳ್ಳಬೇಕು. ಭವಿಷ್ಯದಲ್ಲಿ ಮೊಣಕಾಲು ಮತ್ತು ಪಾದದ ಸಮಸ್ಯೆಗಳಿಂದ ದೂರವಿರಲು ಈ ಸಣ್ಣ ಬದಲಾವಣೆ ಅತ್ಯಂತ ಅಗತ್ಯವಾಗಿದೆ.
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಅರಿವಿಗಾಗಿ ಮಾತ್ರ. ನೋವು ತೀವ್ರವಾಗಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸಲಹೆ ಪಡೆಯುವುದು ಉತ್ತಮ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.