ಗಂಟೆಗಟ್ಟಲೆ ಕೂರಬೇಕಿಲ್ಲ, ಬೆಳ್ಳುಳ್ಳಿಗೆ ಸ್ವಲ್ಪ ಎಣ್ಣೆ ಸವರಿ ಹೀಗೆ ಮಾಡಿ.. ಒಂದೇ ಒಂದು ಸಿಪ್ಪೆಯೂ ಉಳಿಯಲ್ಲ!

Published : Sep 08, 2026, 04:46 PM IST

How to peel garlic easily: ಬೆರಳು ನೋವಿಲ್ಲದೆ ಕೇವಲ 2 ನಿಮಿಷದಲ್ಲಿ ರಾಶಿಗಟ್ಟಲೆ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಸರಳ ಲಟ್ಟಣಿಗೆ ಟ್ರಿಕ್ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ.

PREV
14
ಬೆರಳು ನೋವಿಲ್ಲದೆ ಸುಲಿಯಿರಿ

ಬೆರಳು ನೋವಿಲ್ಲದೆ ಸುಲಿಯಿರಿ
ಅಡುಗೆಗೆ ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ಬಹುತೇಕರಿಗೆ ಅತ್ಯಂತ ಬೇಸರದ ಮತ್ತು ಸಮಯ ವ್ಯಯವಾಗುವ ಕೆಲಸ. ಆದರೆ, ಬೆರಳು ನೋವಿಲ್ಲದೆ ಕೇವಲ 2 ನಿಮಿಷದಲ್ಲಿ ರಾಶಿಗಟ್ಟಲೆ ಬೆಳ್ಳುಳ್ಳಿ ಸಿಪ್ಪೆ ಸುಲಿಯುವ ಸರಳ 'ಲಟ್ಟಣಿಗೆ ಟ್ರಿಕ್' ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

24
ಕಿಚನ್ ಟವೆಲ್ ಮತ್ತು ಚಪಾತಿ ಲಟ್ಟಣಿಗೆ

ಕಿಚನ್ ಟವೆಲ್ ಮತ್ತು ಚಪಾತಿ ಲಟ್ಟಣಿಗೆ
ಸಾಂಬಾರ್, ಪಲ್ಯ ಅಥವಾ ಯಾವುದೇ ಅಡುಗೆ ಮಾಡುವಾಗ ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದು ದೊಡ್ಡ ಸವಾಲು. ಉಗುರುಗಳಿಂದ ಒಂದೊಂದೇ ಸಿಪ್ಪೆ ಬಿಡಿಸುವಾಗ ಬೆರಳು ನೋವು ಬರುವುದಷ್ಟೇ ಅಲ್ಲದೆ, ಕೈಯಲ್ಲೂ ಬೆಳ್ಳುಳ್ಳಿಯ ಘಾಟು ವಾಸನೆ ಉಳಿದುಬಿಡುತ್ತದೆ. ಹೆಚ್ಚು ಪ್ರಮಾಣದಲ್ಲಿ ಬೆಳ್ಳುಳ್ಳಿ ಬೇಕಾದಾಗಲಂತೂ ಅರ್ಧ ಗಂಟೆ ಅದಕ್ಕೇ ಮೀಸಲಿಡಬೇಕಾಗುತ್ತದೆ. ಆದರೆ, ಕಿಚನ್ ಟವೆಲ್ ಮತ್ತು ಚಪಾತಿ ಲಟ್ಟಣಿಗೆ ಬಳಸಿ ಕ್ಷಣಾರ್ಧದಲ್ಲಿ ಬೆಳ್ಳುಳ್ಳಿ ಸುಲಿಯುವ ಸೂಪರ್ ಐಡಿಯಾವೊಂದು ನೆಟ್ಟಿಗರ ಗಮನ ಸೆಳೆಯುತ್ತಿದೆ.

34
ಹೀಗಿದೆ ಬೆಳ್ಳುಳ್ಳಿ ಸುಲಿಯುವ ವಿಧಾನ

ಹೀಗಿದೆ ಬೆಳ್ಳುಳ್ಳಿ ಸುಲಿಯುವ ವಿಧಾನ
ಸ್ವಲ್ಪ ಎಣ್ಣೆ ಸವರಿ: ಮೊದಲು ಇಡೀ ಬೆಳ್ಳುಳ್ಳಿಯಿಂದ ಎಸಳುಗಳನ್ನು ಬಿಡಿಸಿಕೊಂಡು, ಅದಕ್ಕೆ ಕೆಲವು ಹನಿ ಅಡುಗೆ ಎಣ್ಣೆಯನ್ನು ಹಾಕಿ ಚೆನ್ನಾಗಿ ಕಲಸಿಕೊಳ್ಳಿ.

ಟವೆಲ್‌ನಲ್ಲಿ ಸುತ್ತಿ: ಎಣ್ಣೆ ಸವರಿದ ಬೆಳ್ಳುಳ್ಳಿಯನ್ನು ಒಂದು ಸ್ವಚ್ಛವಾದ ಕಿಚನ್ ಟವೆಲ್ (Kitchen towel) ಅಥವಾ ದಪ್ಪನೆಯ ಕಾಟನ್ ಬಟ್ಟೆಯ ಮಧ್ಯದಲ್ಲಿ ಹಾಕಿ ಸುತ್ತಿ.

ಹಗುರವಾಗಿ ಬಡಿಯಿರಿ: ಬಟ್ಟೆಯನ್ನು ಗಂಟಿನಂತೆ ಹಿಡಿದು, ಬಟ್ಟೆ ಒಗೆಯುವಾಗ ನೆಲಕ್ಕೆ ಬಡಿಯುವಂತೆ ಅಥವಾ ಹಗುರವಾಗಿ ನೆಲಕ್ಕೆ/ಕಟ್ಟೆಗೆ ಒಂದೆರಡು ಬಾರಿ ಬಡಿಯಿರಿ.

ಲಟ್ಟಣಿಗೆಯಿಂದ ಲಟ್ಟಿಸಿ: ನಂತರ ಆ ಬಟ್ಟೆಯನ್ನು ಹಾಗೆಯೇ ನೆಲದ ಮೇಲೆ ಹರಡಿ, ಚಪಾತಿ ಲಟ್ಟಣಿಗೆಯಿಂದ (Rolling Pin) ಅದರ ಮೇಲೆ ಹಗುರವಾಗಿ ಒಂದೆರಡು ಬಾರಿ ಲಟ್ಟಿಸಿ.

44
ಫಲಿತಾಂಶ

ಫಲಿತಾಂಶ
ಕಿಚನ್ ಟವೆಲ್ ಬಿಚ್ಚಿ ನೋಡಿದಾಗ ಬೆಳ್ಳುಳ್ಳಿಯ ಎಲ್ಲಾ ಸಿಪ್ಪೆಗಳು ಸಂಪೂರ್ಣವಾಗಿ ಕಳಚಿರುತ್ತವೆ. ಒಂದೇ ಒಂದು ಸಿಪ್ಪೆಯೂ ಇಲ್ಲದ ಸ್ವಚ್ಛವಾದ ಬೆಳ್ಳುಳ್ಳಿ ಎಸಳುಗಳನ್ನು ಸುಲಭವಾಗಿ ಆರಿಸಿ, ಬಟ್ಟಲಿಗೆ ಹಾಕಿ ಅಡುಗೆಗೆ ಬಳಸಬಹುದು. ಉಗುರು ನೋವಿಲ್ಲದೆ, ಬೆರಳುಗಳಿಗೆ ವಾಸನೆ ತಗುಲದಂತೆ ಕ್ಷಣಮಾತ್ರದಲ್ಲಿ ಕೆಲಸ ಮುಗಿಸುವ ಈ ಸರಳ ಐಡಿಯಾ ಗೃಹಿಣಿಯರಿಗೆ ಸಖತ್ ಇಷ್ಟವಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಮೆಚ್ಚುಗೆ ಪಡೆಯುತ್ತಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories