ವಿಮಾನ ಪ್ರಯಾಣಕ್ಕಿಂತಲೂ ವಿಭಿನ್ನ ಅನುಭವ: ಭಾರತದಲ್ಲಿ ನೀವು ಮಿಸ್ ಮಾಡಿಕೊಳ್ಳಬಾರದ 5 ಸುಂದರ ರೈಲು ಪ್ರಯಾಣಗಳು!

Published : Nov 02, 2026, 07:23 PM IST

ಭಾರತದ 5 ಅತ್ಯಂತ ಸುಂದರ ರೈಲು ಪ್ರಯಾಣಗಳ ಮಾಹಿತಿ ಇಲ್ಲಿದೆ. ಐತಿಹಾಸಿಕ ಡಾರ್ಜಿಲಿಂಗ್ ಟಾಯ್ ಟ್ರೈನ್, ಕಾಲ್ಕಾ-ಶಿಮ್ಲಾ ರೈಲ್ವೆಯಿಂದ ಹಿಡಿದು ಕೊಂಕಣ ಮಾರ್ಗದವರೆಗೆ, ಬೆಟ್ಟ-ಗುಡ್ಡಗಳು ಹಾಗೂ ಕರಾವಳಿಯ ಅದ್ಭುತ ಸೌಂದರ್ಯವನ್ನು ಈ ಪ್ರಯಾಣದಲ್ಲಿ ನೀವು ಸವಿಯಬಹುದು.

PREV
15
ಭಾರತದ 5 ಅತ್ಯಂತ ಸುಂದರ ರೈಲು ಪ್ರಯಾಣಗಳು

ರೈಲು ಪ್ರಯಾಣವು ನಾವು ತಲುಪುವ ಜಾಗದಷ್ಟೇ ಸುಂದರವಾದ ನೆನಪುಗಳನ್ನು ನೀಡುತ್ತದೆ. ಮಂಜು ಮುಸುಕಿದ ಬೆಟ್ಟಗಳು, ಚಹಾ ತೋಟಗಳು, ಕಣಿವೆಗಳು ಹಾಗೂ ಕರಾವಳಿಯ ಸೌಂದರ್ಯವನ್ನು ಸವಿಯಲು ಭಾರತದಲ್ಲಿ ಹಲವು ಸುಂದರ ರೈಲು ಮಾರ್ಗಗಳಿವೆ. ನೀವು ಒಮ್ಮೆಯಾದರೂ ಮಾಡಲೇಬೇಕಾದ ಭಾರತದ 5 ಸುಂದರ ರೈಲು ಪ್ರಯಾಣಗಳ ಪಟ್ಟಿ ಇಲ್ಲಿದೆ.

1. ಕಾಲ್ಕಾ-ಶಿಮ್ಲಾ ಟಾಯ್ ಟ್ರೈನ್, ಹಿಮಾಚಲ ಪ್ರದೇಶ

ಪ್ರಕೃತಿ ಪ್ರಿಯರಿಗೆ ಈ ರೈಲು ಪ್ರಯಾಣ ಹೇಳಿ ಮಾಡಿಸಿದ್ದು. ಯುನೆಸ್ಕೋ (UNESCO) ವಿಶ್ವ ಪರಂಪರೆಯ ತಾಣವಾಗಿರುವ ಈ ಮಾರ್ಗದಲ್ಲಿ ಪೈನ್ ಕಾಡುಗಳು, ಬೆಟ್ಟಗಳು, ಸುರಂಗಗಳು ಮತ್ತು ಸೇತುವೆಗಳ ಸೌಂದರ್ಯವನ್ನು ಪ್ರಯಾಣಿಕರು ಆನಂದಿಸಬಹುದು. ಹಿಮಾಚಲ ಪ್ರದೇಶದ ನೈಸರ್ಗಿಕ ಸೌಂದರ್ಯವನ್ನು ಸವಿಯಲು ಈ ಐತಿಹಾಸಿಕ ನ್ಯಾರೋ ಗೇಜ್ ರೈಲು ಪ್ರಯಾಣ ಬೆಸ್ಟ್.

25
2. ಡಾರ್ಜಿಲಿಂಗ್ ಹಿಮಾಲಯನ್ ರೈಲ್ವೆ, ಪಶ್ಚಿಮ ಬಂಗಾಳ

ಟಾಯ್ ಟ್ರೈನ್ ಎಂದೇ ಫೇಮಸ್ ಆಗಿರುವ ಈ ಐತಿಹಾಸಿಕ ರೈಲು ನ್ಯೂ ಜಲ್ಪೈಗುರಿಯಿಂದ ಡಾರ್ಜಿಲಿಂಗ್‌ವರೆಗೆ ಸಾಗುತ್ತದೆ. ಚಹಾ ತೋಟಗಳು, ಪರ್ವತದ ಇಳಿಜಾರುಗಳು ಮತ್ತು ಸುಂದರವಾದ ಹಳ್ಳಿಗಳ ಅದ್ಭುತ ನೋಟವನ್ನು ಪ್ರಯಾಣಿಕರು ಇಲ್ಲಿ ಸವಿಯಬಹುದು. ಈ ಮಾರ್ಗವು ಹಲವು ಸುಂದರ ತಿರುವುಗಳು ಹಾಗೂ ಜಿಗ್-ಜಾಗ್ ಟ್ರ್ಯಾಕ್‌ಗಳನ್ನು ಹೊಂದಿದೆ.

35
3. ನೀಲಗಿರಿ ಮೌಂಟೇನ್ ರೈಲ್ವೆ, ತಮಿಳುನಾಡು

ಯುನೆಸ್ಕೋ (UNESCO) ಮಾನ್ಯತೆ ಪಡೆದ ಈ ರೈಲು ಮೆಟ್ಟುಪಾಳ್ಯಂನಿಂದ ಊಟಿಯವರೆಗೆ ಪ್ರಯಾಣಿಕರನ್ನು ಕರೆದೊಯ್ಯುತ್ತದೆ. ದಟ್ಟವಾದ ಕಾಡುಗಳು, ಸುರಂಗಗಳು, ಕಣಿವೆಗಳು ಮತ್ತು ವಿಶಾಲವಾದ ಚಹಾ ತೋಟಗಳ ಮೂಲಕ ಈ ರೈಲು ಸಾಗುತ್ತದೆ.

45
4. ಕೊಂಕಣ ರೈಲ್ವೆ, ಮಹಾರಾಷ್ಟ್ರ-ಗೋವಾ-ಕರ್ನಾಟಕ

ಹಸಿರಿನಿಂದ ಕಂಗೊಳಿಸುವ ಹಳ್ಳಿಗಳು, ನದಿಗಳು, ಸುರಂಗಗಳು, ಸೇತುವೆಗಳು ಹಾಗೂ ಪಶ್ಚಿಮ ಘಟ್ಟಗಳ ಮೂಲಕ ಈ ರೈಲು ಸಾಗುತ್ತದೆ. ಮಳೆಗಾಲದಲ್ಲಿ ಮತ್ತು ಮಳೆಗಾಲದ ನಂತರ ಈ ಮಾರ್ಗವು ಸ್ವರ್ಗದಂತೆ ಕಂಗೊಳಿಸುತ್ತದೆ.

55
5. ಕಾಂಗ್ರಾ ವ್ಯಾಲಿ ರೈಲ್ವೆ, ಹಿಮಾಚಲ ಪ್ರದೇಶ

ಪಠಾಣ್‌ಕೋಟ್‌ನಿಂದ ಜೋಗಿಂದರ್ ನಗರದವರೆಗೆ ಸಾಗುವ ಈ ನ್ಯಾರೋ ಗೇಜ್ ಮಾರ್ಗವು ಪರ್ವತಗಳ ನಡುವೆ ಪ್ರಶಾಂತವಾದ ಪ್ರಯಾಣದ ಅನುಭವ ನೀಡುತ್ತದೆ. ಧೌಲಾಧರ್ ಶ್ರೇಣಿಯ ತಪ್ಪಲು, ಸುಂದರ ಹಳ್ಳಿಗಳು ಹಾಗೂ ಹಸಿರು ಬಯಲುಗಳ ಅದ್ಭುತ ನೋಟವನ್ನು ಪ್ರಯಾಣಿಕರು ಕಣ್ತುಂಬಿಕೊಳ್ಳಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories