ಮನಿಪ್ಲಾಂಟ್ ಬಳ್ಳಿ ಬೆಳೆಯುತ್ತಿಲ್ಲವೇ? ನೀರಿನ ಜೊತೆ ಈ ಮಸಾಲೆ 1 ತುಂಡು ಸೇರಿಸಿಕೊಳ್ಳಿ

Published : Nov 02, 2026, 12:30 PM IST

ವಾಸ್ತುಶಾಸ್ತ್ರದ ಪ್ರಕಾರ ಮನಿಪ್ಲಾಂಟ್ ಬೆಳೆಸುವುದು ಶುಭಕರ, ಆದರೆ ಅದು ಒಣಗಿದರೆ ದುರಾದೃಷ್ಟ. ನೀರಿನಲ್ಲಿ ಅಥವಾ ಕುಂಡದಲ್ಲಿ ಬೆಳೆಸುವ ಮನಿಪ್ಲಾಂಟ್ ಒಣಗದಂತೆ ತಡೆಯಲು ಅಡುಗೆಮನೆಯಲ್ಲಿರುವ ಮಸಾಲೆಯ ತುಂಡನನ್ನು ಬಳಸಬಹುದು. ಈ ಮಸಾಲೆ ತುಂಡು ಮನಿಪ್ಲಾಂಟ್ ಬೆಳವಣಿಗೆಗೆ ಸಹಾಯ ಮಾಡುತ್ತದೆ.

PREV
15
ಮನಿಪ್ಲಾಂಟ್ ಬೆಳಸುವಿಕೆ

ಮನಿಪ್ಲಾಂಟ್‌ನ್ನು ಮನೆಯಲ್ಲಿ ಬೆಳೆಸೋದನ್ನು ಶುಭಕರ ಎಂದು ಪರಿಗಣಿಸಲಾಗುತ್ತದೆ. ಈ ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದ್ದು, ಜನರು ಮನಿಪ್ಲಾಂಟ್‌ ಬೆಳೆಸಲು ಹೆಚ್ಚು ಆಸಕ್ತಿ ಹೊಂದಿರುತ್ತಾರೆ. ಕೆಲವರು ಮನೆಯಲ್ಲಿ ಗಾಜಿನ ಪಾತ್ರೆಯೊಂದರಲ್ಲಿ ನೀರು ಹಾಕಿ, ಅದರೊಳಗೆ ಮನಿಪ್ಲಾಂಟ್ ಇಡುತ್ತಾರೆ.

25
ಮನಿಪ್ಲಾಂಟ್ ಬೆಳವಣಿಗೆ

ಕೆಲವೊಮ್ಮೆ ಶುದ್ಧನೀರು ಮತ್ತು ಚೆನ್ನಾಗಿ ಆರೈಕೆ ಮಾಡಿದ್ರೂ ಮನಿಪ್ಲಾಂಟ್ ಒಣಗಿ ನಾಶವಾಗುತ್ತಿರುತ್ತದೆ. ಮನಿಪ್ಲಾಂಟ್ ಎಷ್ಟು ಶುಭಕರವೋ, ಅಷ್ಟೇ ಅದು ಒಣಗಿದ್ರೆ ದುರಾದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಈ ಲೇಖನದಲ್ಲಿ ಒಣಗುತ್ತಿರುವ ಮನಿಪ್ಲಾಂಟ್‌ ಬೆಳವಣಿಗೆಗೆ ಏನು ಮಾಡಬೇಕು ಎಂದು ನೋಡೋಣ ಬನ್ನಿ.

35
ಚಕ್ರಮೊಗ್ಗ

ನೀವು ಮನಿಪ್ಲಾಂಟ್‌ನ್ನು ನೀರಿನಲ್ಲಿ ಬೆಳೆಸುತ್ತಿದ್ರೆ ಆ ಪಾತ್ರೆಗೆ ಒಂದು ಚಕ್ರಮೊಗ್ಗ (ನಕ್ಷತ್ರದ ಹೂವು/ಸ್ಟಾರ್ ಅನಾನಸ್) ಸೇರಿಸಿಕೊಳ್ಳಿ. ಈ ಚಕ್ರಮೊಗ್ಗಿನಲ್ಲಿರುವ ಅಂಶಗಳು ಮನಿಪ್ಲಾಂಟ್‌ಗೆ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಹಾಗೆಯೇ ವಾರಕ್ಕೊಮ್ಮೆ ನೀರನ್ನು ಬದಲಾವಣೆ ಮಾಡುತ್ತಿರಬೇಕು. ನೀರು ಬದಲಾವಣೆ ಜೊತೆ ಚಕ್ರಮೊಗ್ಗನ್ನು ಸಹ ಬದಲಿಸೋದನ್ನು ಮರೆಯಬೇಡಿ

45
ಕುಂಡದಲ್ಲಿರುವ ಮನಿಪ್ಲಾಂಟ್

ನೀವು ಮನಿಪ್ಲಾಂಟ್‌ನ್ನು ಕುಂಡದಲ್ಲಿ ಬೆಳೆಸುತ್ತಿದ್ರೆ ಚಕ್ರಮೊಗ್ಗನ್ನು ತರಿತರಿಯಾಗಿ ಜಜ್ಜಿಕೊಂಡು ಕಾಂಡದ ಬುಡಭಾಗದಲ್ಲಿ ಹಾಕಿ. ನಂತರ ಮೇಲೆ ಸುತ್ತಲೂ ಮಣ್ಣು ಹರಡಿ ನೀರು ಚುಮುಕಿಸಿ. ಚಕ್ರಮೊಗ್ಗಿನಲ್ಲಿರುವ ಅಂಶಗಳೆಲ್ಲವೂ ಮಣ್ಣಿನೊಂದಿಗೆ ಸೇರಿಕೊಂಡು ಮನಿಪ್ಲಾಂಟ್ ಬೆಳವಣಿಗೆಗೆ ಸಹಾಯ ಮಾಡುತ್ತದೆ. ಮಣ್ಣಿನ ಜೊತೆ ಸ್ವಲ್ಪ ಮರಳು ಮತ್ತು ತೆಂಗಿನ ನಾರಿನ ಹುಡಿ (Coco peat) ಬೆರೆಸಿದರೆ ಒಳ್ಳೆಯದು.

55
ಸೂರ್ಯನ ಬಿಸಿಲು

ಮನಿ ಪ್ಲಾಂಟ್‌ಗೆ ನೇರವಾದ ಸೂರ್ಯನ ಬೆಳಕು ಬೀಳಬಾರದು. ಮನೆಯ ಒಳಗಡೆ ಕಿಟಕಿಯ ಹತ್ತಿರ ಅಥವಾ ಪರೋಕ್ಷವಾಗಿ (Indirect sunlight) ಬೆಳಕು ಬೀಳುವ ಜಾಗದಲ್ಲಿ ಇಡಿ. ನೇರ ಬಿಸಿಲು ಬಿದ್ದರೆ ಎಲೆಗಳು ಹಳದಿಯಾಗಿ ಒಣಗುತ್ತವೆ. ಪಾಟ್‌ನಲ್ಲಿದ್ದರೂ ಅದು ನೆರಳಿನಲ್ಲಿರುವಂತೆ ನೋಡಿಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories