ಅನಸ್ತೇಶಿಯ ಇಲ್ಲದ ಕಾಲದಲ್ಲಿ ಆಪರೇಷನ್ ಹೇಗೆ ಮಾಡುತ್ತಿದ್ದರು ಗೊತ್ತಾ? ಕೇಳಿದರೇನೇ ಮೈ ನಡುಗುತ್ತೆ!

Published : May 24, 2026, 06:50 PM IST

History of Anesthesia: ಇಂದು ಅನಸ್ತೇಶಿಯ ಇರುವುದರಿಂದ ಸರ್ಜರಿ ಮಾಡುವಾಗ ನೋವೇ ತಿಳಿಯುವುದಿಲ್ಲ. ಆದರೆ ಮತ್ತು ಮದ್ದು ಕಂಡುಹಿಡಿಯುವ ಮೊದಲು ಆಪರೇಷನ್ ಮಾಡುವುದೆಂದರೆ ಅಕ್ಷರಶಃ ನರಕವಾಗಿತ್ತು! ಆ ಕರಾಳ ದಿನಗಳ ಭಯಾನಕ ಕಥೆ ಮತ್ತು ವೈದ್ಯಕೀಯ ಲೋಕದಲ್ಲಾದ ಮಹತ್ತರ ಬದಲಾವಣೆ ಕುರಿತಾದ ಮಾಹಿತಿ ಇಲ್ಲಿದೆ. 

PREV
15
ಆ ಕರಾಳ ದಿನಗಳ ಬಗ್ಗೆ ನಿಮಗೆ ಗೊತ್ತೇ?

ಪ್ರಸ್ತುತ ದಿನಗಳಲ್ಲಿ ಸಣ್ಣ ಆಪರೇಷನ್ ಇರಲಿ ಅಥವಾ ದೊಡ್ಡ ಸರ್ಜರಿ ಇರಲಿ, ವೈದ್ಯರು ಮೊದಲು ರೋಗಿಗೆ ಅನಸ್ತೇಶಿಯ (Anesthesia) ನೀಡುತ್ತಾರೆ. ಇದರಿಂದ ರೋಗಿಗೆ ಯಾವುದೇ ನೋವು ತಿಳಿಯದಂತೆ ಸರ್ಜರಿ ಸುಲಭವಾಗಿ ಮುಗಿದುಹೋಗುತ್ತದೆ. ಆದರೆ, ವೈದ್ಯಕೀಯ ಇತಿಹಾಸದಲ್ಲಿ ಅನಸ್ತೇಶಿಯ ಇಲ್ಲದ ಕರಾಳ ದಿನಗಳಿದ್ದವು ಎಂಬುದು ನಿಮಗೆ ಗೊತ್ತೇ? ಆ ಕಾಲದಲ್ಲಿ ಶಸ್ತ್ರಚಿಕಿತ್ಸೆ ಎಂದರೆ ರೋಗಿಗಳು ಪ್ರಾಣಭಯದಿಂದ ನಡುಗುತ್ತಿದ್ದರು. ಮತ್ತು ಮದ್ದು ಕಂಡುಹಿಡಿಯುವ ಮೊದಲು ಸರ್ಜರಿಗಳು ಎಷ್ಟು ಭಯಾನಕವಾಗಿ ನಡೆಯುತ್ತಿದ್ದವು ಎಂಬ ಮಾಹಿತಿ ಇಲ್ಲಿದೆ.

25
ಹೃದಯಾಘಾತದಿಂದ ಸಾವು

ಮಾಹಿತಿಯ ಪ್ರಕಾರ, ಆಧುನಿಕ ವೈದ್ಯಕೀಯ ಶಾಸ್ತ್ರದಲ್ಲಿ ಅನಸ್ತೇಶಿಯಾದ ಆವಿಷ್ಕಾರ ಒಂದು ದೊಡ್ಡ ಮೈಲಿಗಲ್ಲು. ಅನಸ್ತೇಶಿಯ ಕಂಡುಹಿಡಿಯುವ ಮೊದಲು ಸರ್ಜರಿಗಳು ರೋಗಿಗಳಿಗೆ ನರಕಪ್ರಾಯವಾಗಿದ್ದವು. ಆ ಕಾಲದಲ್ಲಿ ಸರ್ಜರಿ ಸಮಯದಲ್ಲಿಯೇ ಬಹಳಷ್ಟು ರೋಗಿಗಳು ಸಾವನ್ನಪ್ಪುತ್ತಿದ್ದರು. ಪೂರ್ವ ಕಾಲದಲ್ಲಿ ಸರ್ಜರಿ ಮಾಡುವ ಸಮಯದಲ್ಲಿ ರೋಗಿ ನೋವು ತಡೆಯಲಾರದೆ ಅಲುಗಾಡದಂತೆ ಇರಲು ಅವರ ಕೈಕಾಲುಗಳನ್ನು ಮಂಚಕ್ಕೆ ಗಟ್ಟಿಯಾಗಿ ಕಟ್ಟುತ್ತಿದ್ದರು. ಅಥವಾ ನಾಲ್ಕೈದು ಮಂದಿ ಬಲಶಾಲಿಗಳು ರೋಗಿಯನ್ನು ಗಟ್ಟಿಯಾಗಿ ಹಿಡಿದುಕೊಳ್ಳುತ್ತಿದ್ದರು. ರೋಗಿ ಎಷ್ಟೇ ಜೋರಾಗಿ ಕಿರಿಚಿದರೂ, ಅತ್ತರೂ ವೈದ್ಯರು ಸರ್ಜರಿಯನ್ನು ನಿಲ್ಲಿಸುತ್ತಿರಲಿಲ್ಲ. ಕೆಲವು ಬಾರಿ ನೋವಿನ ತೀವ್ರತೆಯನ್ನು ತಡೆಯಲಾರದೆ ರೋಗಿಗಳು ಆಪರೇಷನ್ ಥಿಯೇಟರ್‌ನಲ್ಲೇ ಹೃದಯಾಘಾತದಿಂದ ಸಾವನ್ನಪ್ಪುತ್ತಿದ್ದರು.

35
ವಿಚಿತ್ರ ಮತ್ತು ಅಪಾಯಕಾರಿ ಮಾರ್ಗ

ನೋವಿನ ತೀವ್ರತೆಯನ್ನು ಸ್ವಲ್ಪ ಮಟ್ಟಿಗೆ ಕಡಿಮೆ ಮಾಡಲು ಆ ದಿನಗಳಲ್ಲಿ ವೈದ್ಯರು ಕೆಲವು ವಿಚಿತ್ರ ಮತ್ತು ಅಪಾಯಕಾರಿ ಮಾರ್ಗಗಳನ್ನು ಅನುಸರಿಸುತ್ತಿದ್ದರು. ರೋಗಿಗೆ ವಿಪರೀತವಾಗಿ ಮದ್ಯ (ಆಲ್ಕೋಹಾಲ್) ಕುಡಿಸಿ ಅಮಲೇರಿಸುತ್ತಿದ್ದರು. ಇನ್ನು ಕೆಲವು ಸಂದರ್ಭಗಳಲ್ಲಿ ರೋಗಿ ಪ್ರಜ್ಞೆ ತಪ್ಪಿ ಬೀಳುವಂತೆ ಮಾಡಲು ತಲೆಯ ಮೇಲೆ ಬಲವಾಗಿ ಹೊಡೆಯುತ್ತಿದ್ದರು. ಹಾಗೆಯೇ ಅಫೀಮು ಅಥವಾ ಕೆಲವು ರೀತಿಯ ಮೂಲಿಕೆಗಳ ರಸವನ್ನು ನೀಡುತ್ತಿದ್ದರು. ಆದರೂ ಸರ್ಜರಿ ಮಾಡುವಾಗ ಉಂಟಾಗುವ ತೀವ್ರವಾದ ನೋವಿನಿಂದ ಅವರಿಗೆ ಉಪಶಮನ ಸಿಗುತ್ತಿರಲಿಲ್ಲ.

45
1846ರಲ್ಲಿ ಬಿತ್ತು ತೆರೆ

ಈ ಭಯಾನಕ ಪರಿಸ್ಥಿತಿಗೆ 1846ರಲ್ಲಿ ತೆರೆ ಬಿದ್ದಿತು. ಅಮೆರಿಕಾದ ವಿಲಿಯಂ ಟಿ.ಜಿ. ಮೋರ್ಟನ್ (William T.G. Morton) ಎಂಬ ದಂತವೈದ್ಯರು, 'ಈಥರ್' (Ether) ಎಂಬ ರಾಸಾಯನಿಕವನ್ನು ಶ್ವಾಸದ ಮೂಲಕ ಸೇವಿಸುವುದರಿಂದ ಮನುಷ್ಯರು ತಾತ್ಕಾಲಿಕವಾಗಿ ಪ್ರಜ್ಞೆ ಕಳೆದುಕೊಳ್ಳುತ್ತಾರೆ ಎಂದು ನಿರೂಪಿಸಿದರು. 1846ರ ಅಕ್ಟೋಬರ್ 16 ರಂದು ಬೋಸ್ಟನ್‌ನ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯಲ್ಲಿ ರೋಗಿಯೊಬ್ಬರ ಕುತ್ತಿಗೆಯ ಮೇಲಿದ್ದ ಗಡ್ಡೆಯನ್ನು ತೆಗೆಯಲು ಈಥರ್ ಅನ್ನು ಮತ್ತು ಮದ್ದಾಗಿ ನೀಡಿ ಮೊದಲ ಯಶಸ್ವಿ ಸರ್ಜರಿ ಮಾಡಲಾಯಿತು.

55
ನರಕದಿಂದ ವಿಮೋಚನೆ ನೀಡಿದ ದಿನವದು

ಈ ಐತಿಹಾಸಿಕ ದಿನದ ನೆನಪಿಗಾಗಿ ಪ್ರತಿ ವರ್ಷ ಅಕ್ಟೋಬರ್ 16ನ್ನು 'ವಿಶ್ವ ಅನಸ್ತೇಶಿಯ ದಿನ' (World Anesthesia Day) ಎಂದು ಆಚರಿಸಲಾಗುತ್ತದೆ. ಈ ಒಂದು ಆವಿಷ್ಕಾರವು ಕೋಟ್ಯಂತರ ರೋಗಿಗಳಿಗೆ ಶಸ್ತ್ರಚಿಕಿತ್ಸೆಯ ನರಕದಿಂದ ವಿಮೋಚನೆ ನೀಡಿತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories