ಮೂಢನಂಬಿಕೆಯಲ್ಲ, ವಿಜ್ಞಾನ! ನದಿಗೆ ನಾಣ್ಯ ಎಸೆಯುವ ಅಭ್ಯಾಸ ನಿಮಗಿದ್ರೆ ಇಂದೇ ಬದಲಾಯಿಸಿಕೊಳ್ಳಿ!

Published : Sep 16, 2026, 02:45 PM IST

Why throw coins in river: ಪ್ರಯಾಣ ಮಾಡುವಾಗ ನದಿ ಕಂಡ ತಕ್ಷಣ ಜೇಬಿನಿಂದ ನಾಣ್ಯ ತೆಗೆದು ನೀರಿಗೆ ಎಸೆಯುವುದು ಹಲವರ ಅಭ್ಯಾಸ. ಇದು ಕೇವಲ ಲಕ್‌ಗಾಗಿ ಅಥವಾ ದೇವರ ಮೇಲಿನ ನಂಬಿಕೆಯಿಂದ ಮಾಡುವ ಕೆಲಸ ಎಂದು ಭಾವಿಸಿದ್ದರೆ ನಿಮ್ಮ ಅನಿಸಿಕೆ ತಪ್ಪು!

PREV
16
ಹಿರಿಯರು ಪಾಲಿಸುತ್ತಿದ್ದ ಪದ್ಧತಿಗಳು

ಹಿರಿಯರು ಪಾಲಿಸುತ್ತಿದ್ದ ಪದ್ಧತಿಗಳು
ನಮ್ಮ ದೇಶದಲ್ಲಿ ನದಿಗಳನ್ನು ಕೇವಲ ನೀರಿನ ಮೂಲಗಳಾಗಿ ಮಾತ್ರವಲ್ಲದೆ, ದೇವತೆಗಳೆಂದು ಪೂಜಿಸಲಾಗುತ್ತದೆ. ಗಂಗಾ, ಕೃಷ್ಣಾ, ಗೋದಾವರಿಯಂತಹ ನದಿಗಳು ನಮ್ಮ ನಾಗರಿಕತೆಯ ಅಡಿಪಾಯಗಳು. ಪ್ರಾಚೀನ ಕಾಲದಲ್ಲಿ ಈ ನದಿಗಳೇ ಎಲ್ಲರಿಗೂ ಕುಡಿಯುವ ನೀರಿನ ಪ್ರಮುಖ ಮೂಲವಾಗಿದ್ದವು. ಆದ್ದರಿಂದಲೇ ಇವುಗಳನ್ನು ಶುದ್ಧವಾಗಿಟ್ಟುಕೊಳ್ಳಲು ನಮ್ಮ ಹಿರಿಯರು ಅನೇಕ ಪದ್ಧತಿಗಳನ್ನು ಪಾಲಿಸುತ್ತಿದ್ದರು.

26
ಅದ್ಭುತವಾದ ವೈಜ್ಞಾನಿಕ ಕಾರಣ

ಅದ್ಭುತವಾದ ವೈಜ್ಞಾನಿಕ ಕಾರಣ
ನಾವು ಪ್ರಯಾಣಿಸುವಾಗ ಎಲ್ಲಾದರೂ ನದಿ ಅಥವಾ ಕಾಲುವೆ ಕಂಡರೆ, ತಕ್ಷಣ ಜೇಬಿನಿಂದ ಒಂದು ರೂಪಾಯಿ ನಾಣ್ಯ ತೆಗೆದು ನೀರಿಗೆ ಎಸೆಯುವುದುಂಟು. ಬಾಲ್ಯದಿಂದಲೂ ಹಿರಿಯರು ಮಾಡುವುದನ್ನು ನೋಡಿ ನಾವೂ ಇದನ್ನು ರೂಢಿಸಿಕೊಂಡು ಬಂದಿದ್ದೇವೆ. ಬಹುತೇಕರು ಇದು ಕೇವಲ ಅದೃಷ್ಟಕ್ಕಾಗಿ ಅಥವಾ ದೇವರಿಗೆ ಹರಕೆಯ ರೂಪದಲ್ಲಿ ಮಾಡುವ ಕೆಲಸ ಎಂದು ಭಾವಿಸುತ್ತಾರೆ. ಆದರೆ, ನಮ್ಮ ಪೂರ್ವಜರು ಜಾರಿಗೆ ತಂದ ಪ್ರತಿಯೊಂದು ಸಂಪ್ರದಾಯದ ಹಿಂದೆಯೂ ಒಂದು ಅದ್ಭುತವಾದ ವೈಜ್ಞಾನಿಕ ಕಾರಣ ಅಡಗಿದೆ. ನದಿಗಳಲ್ಲಿ ನಾಣ್ಯ ಎಸೆಯುವುದರ ಹಿಂದಿರುವ ಆ ರಹಸ್ಯವೇನು ಎಂದು ತಿಳಿಯೋಣ.

36
ಈ ಸಂಪ್ರದಾಯವನ್ನು ಆರಂಭಿಸಿದ್ದೇಕೆ?

ಈ ಸಂಪ್ರದಾಯವನ್ನು ಆರಂಭಿಸಿದ್ದೇಕೆ?
ಹಿಂದಿನ ಕಾಲದಲ್ಲಿ ನಾಣ್ಯಗಳು ಸಂಪೂರ್ಣವಾಗಿ ‘ತಾಮ್ರ’ದಿಂದ (Copper) ತಯಾರಾಗುತ್ತಿದ್ದವು. ಅಂದಿನ ದಿನಗಳಲ್ಲಿ ಈಗಿನಂತೆ ವಾಟರ್ ಫಿಲ್ಟರ್‌ಗಳು ಅಥವಾ ಪ್ಯೂರಿಫೈಯರ್‌ಗಳು ಇರಲಿಲ್ಲ. ಹಳ್ಳಿ ಮತ್ತು ಪಟ್ಟಣಗಳ ಜನರು ನೇರವಾಗಿ ನದಿಗಳು ಮತ್ತು ಸರೋವರಗಳ ನೀರನ್ನೇ ಕುಡಿಯಲು ಬಳಸುತ್ತಿದ್ದರು. ತಾಮ್ರಕ್ಕೆ ನೀರನ್ನು ಶುದ್ಧೀಕರಿಸುವ ಅದ್ಭುತ ಶಕ್ತಿಯಿದೆ ಎಂದು ವಿಜ್ಞಾನವೇ ಸಾಬೀತುಪಡಿಸಿದೆ. ನೀರಿನಲ್ಲಿರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ಕೊಲ್ಲುವ ಶಕ್ತಿ ತಾಮ್ರಕ್ಕಿದೆ. ಹೀಗಾಗಿ ಜನರು ನದಿಗಳಿಗೆ ತಾಮ್ರದ ನಾಣ್ಯಗಳನ್ನು ಎಸೆಯುವುದರಿಂದ ನೀರು ಶುದ್ಧವಾಗಿ, ಜನರ ಆರೋಗ್ಯ ಸುಧಾರಿಸಲಿ ಎಂಬ ಸದುದ್ದೇಶದಿಂದ ನಮ್ಮ ಹಿರಿಯರು ಈ ಸಂಪ್ರದಾಯವನ್ನು ಆರಂಭಿಸಿದ್ದರು.

46
ಆರೋಗ್ಯಕ್ಕೆ ತಾಮ್ರದ ಕೊಡುಗೆ

ಆರೋಗ್ಯಕ್ಕೆ ತಾಮ್ರದ ಕೊಡುಗೆ
ನಮ್ಮ ದೇಹಕ್ಕೆ ಅತ್ಯಗತ್ಯವಾಗಿ ಬೇಕಾಗುವ ಪ್ರಮುಖ ಖನಿಜಗಳಲ್ಲಿ ತಾಮ್ರವೂ ಒಂದು. ತಾಮ್ರದ ನಾಣ್ಯಗಳು ನೀರಿನಲ್ಲಿದ್ದಾಗ, ಆ ಧಾತುವಿನ ಅಂಶ ನೀರಿನಲ್ಲಿ ಬೆರೆತು ಕುಡಿಯುವ ಮೂಲಕ ನಮ್ಮ ದೇಹವನ್ನು ಸೇರುತ್ತಿತ್ತು. ಇದು ಜೀರ್ಣಕ್ರಿಯೆಯನ್ನು ಉತ್ತಮಗೊಳಿಸುವುದು ಮಾತ್ರವಲ್ಲದೆ, ರೋಗನಿರೋಧಕ ಶಕ್ತಿಯನ್ನು (Immunity) ಹೆಚ್ಚಿಸಲು ಸಹಕಾರಿಯಾಗಿತ್ತು. ಆದ್ದರಿಂದಲೇ ನದಿ ದಾಟುವಾಗ ಪ್ರತಿಯೊಬ್ಬರೂ ಒಂದು ನಾಣ್ಯ ಹಾಕುವುದು ಅಂದು ಒಂದು ಸಾಮಾಜಿಕ ಜವಾಬ್ದಾರಿಯಾಗಿತ್ತು. ಇದರಿಂದ ನದಿಯ ನೀರು ಸದಾ ಶುದ್ಧವಾಗಿರುತ್ತಿತ್ತು.

56
ಇಂದು ನಡೆಯುತ್ತಿರುವುದೇನು?

ಇಂದು ನಡೆಯುತ್ತಿರುವುದೇನು?
ಕಾಲಕ್ರಮೇಣ ಪರಿಸ್ಥಿತಿ ಬದಲಾಗಿದೆ. ಪ್ರಸ್ತುತ ನಾವು ಬಳಸುತ್ತಿರುವ ನಾಣ್ಯಗಳು ತಾಮ್ರದ್ದಲ್ಲ; ಬದಲಾಗಿ ಸ್ಟೇನ್‌ಲೆಸ್ ಸ್ಟೀಲ್ ಅಥವಾ ಅಲ್ಯೂಮಿನಿಯಂನಿಂದ ತಯಾರಾಗುತ್ತಿವೆ. ಇವುಗಳನ್ನು ನೀರಿಗೆ ಎಸೆಯುವುದರಿಂದ ಯಾವುದೇ ಆರೋಗ್ಯ ಪ್ರಯೋಜನಗಳಿಲ್ಲ, ಬದಲಾಗಿ ನೀರು ಕಲುಷಿತಗೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ.

66
ಕುರುಡು ಆಚರಣೆಯಾಗಿ ಮುಂದುವರಿಸದಿರಿ

ಕುರುಡು ಆಚರಣೆಯಾಗಿ ಮುಂದುವರಿಸದಿರಿ
ತಾಮ್ರದ ನಾಣ್ಯ ಹಾಕುವುದರ ಹಿಂದಿದ್ದ ವೈಜ್ಞಾನಿಕ ಕಾರಣವನ್ನು ಮರೆತು, ಇಂದು ನಾವು ಇದನ್ನು ಕೇವಲ ಒಂದು ಕುರುಡು ಆಚರಣೆಯಾಗಿ ಮುಂದುವರಿಸುತ್ತಿದ್ದೇವೆ. ನಮ್ಮ ಯಾವುದೇ ಸಂಪ್ರದಾಯಗಳು ಅರ್ಥಹೀನವಲ್ಲ, ಆದರೆ ಅವುಗಳ ಹಿಂದಿನ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಇಂದಿನ ಸ್ಟೀಲ್ ನಾಣ್ಯಗಳನ್ನು ನದಿಗಳಿಗೆ ಎಸೆಯುವ ಬದಲು, ನದಿಯ ನೀರನ್ನು ಮಲಿನಗೊಳಿಸದೆ ಸ್ವಚ್ಛವಾಗಿಟ್ಟುಕೊಳ್ಳುವುದೇ ನಮ್ಮ ಸಂಸ್ಕೃತಿಗೆ ನಾವು ನೀಡುವ ನಿಜವಾದ ಗೌರವ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories