ಈ ಗಿಡದ ಅಂಶವನ್ನೇ ಸೊಳ್ಳೆ ಸ್ಪ್ರೇಗಳಲ್ಲೂ ಬಳಸೋದು! ಮತ್ಯಾಕೆ ತಡ? ಬಾಲ್ಕನಿಯಲ್ಲಿ ನೀವೂ ಬೆಳೆಸಿ

Published : May 08, 2026, 07:48 PM IST

Mosquito repellent plants: ಮನೆಯ ಅಂದವನ್ನು ಹೆಚ್ಚಿಸುವುದಷ್ಟೇ ಅಲ್ಲದೆ, ಸೊಳ್ಳೆಗಳನ್ನು ಹತ್ತಿರವೂ ಸುಳಿಯದಂತೆ ಮಾಡುವ ಅದ್ಭುತ ಶಕ್ತಿ ಈ ಗಿಡಕ್ಕಿದೆ. ಅಷ್ಟಕ್ಕೂ ಆ ಗಿಡಗಳು ಯಾವುವು? ಅವು ಕೆಲಸ ಮಾಡುವುದು ಹೇಗೆ? ಈ ನೈಸರ್ಗಿಕ ಸೀಕ್ರೆಟ್ ಇಲ್ಲಿದೆ ನೋಡಿ.

PREV
15
ನೈಸರ್ಗಿಕವಾಗಿ ಓಡಿಸಿ

ಮಳೆಗಾಲವಿರಲಿ ಅಥವಾ ಬೇಸಿಗೆಯಿರಲಿ, ಸೊಳ್ಳೆಗಳ ಸಮಸ್ಯೆ ಪ್ರತಿಯೊಬ್ಬರ ಮನೆಯಲ್ಲೂ ಇರುತ್ತದೆ. ಮಾರುಕಟ್ಟೆಯಲ್ಲಿ ಸಿಗುವ ಕಾಯಿಲ್‌ಗಳು ಅಥವಾ ಕೆಮಿಕಲ್ ಸ್ಪ್ರೇಗಳನ್ನು ಬಳಸುವುದರಿಂದ ಆರೋಗ್ಯಕ್ಕೆ ಹಾನಿಯಾಗುವ ಸಾಧ್ಯತೆಯಿದೆ. ವಿಶೇಷವಾಗಿ ಉಸಿರಾಟದ ತೊಂದರೆ ಇರುವವರಿಗೆ ಇವು ಹೆಚ್ಚು ತೊಂದರೆ ನೀಡುತ್ತವೆ. ಆದರೆ, ನಮ್ಮ ಪ್ರಕೃತಿಯಲ್ಲಿ ಕೆಲವು ಗಿಡಗಳಿವೆ, ಅವುಗಳ ವಾಸನೆ ಎಂದರೆ ಸೊಳ್ಳೆಗಳಿಗೆ ಆಗಿಬರುವುದಿಲ್ಲ. ನಿಮ್ಮ ಮನೆಯ ಅಂಗಳದಲ್ಲಿ ಅಥವಾ ಬಾಲ್ಕನಿಯಲ್ಲಿ ಈ ಕೆಳಗಿನ 3 ಗಿಡ ಬೆಳೆಸುವ ಮೂಲಕ ಸೊಳ್ಳೆಗಳನ್ನು ನೈಸರ್ಗಿಕವಾಗಿ ಓಡಿಸಬಹುದು.

25
ಚೆಂಡು ಹೂವಿನ ಗಿಡ (Marigold)

ಚೆಂಡು ಹೂವುಗಳು ಕೇವಲ ಮನೆಯ ಅಂದವನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಸೊಳ್ಳೆಗಳನ್ನು ತಡೆಯುವಲ್ಲಿ ಅದ್ಭುತವಾಗಿ ಕೆಲಸ ಮಾಡುತ್ತವೆ. ಈ ಗಿಡದಿಂದ ಬರುವ ಒಂದು ರೀತಿಯ ಘಾಟು ವಾಸನೆ ಸೊಳ್ಳೆಗಳಿಗೆ ಇಷ್ಟವಾಗುವುದಿಲ್ಲ. ಇದರಲ್ಲಿರುವ ‘ಪೈರೆತ್ರಮ್’ (Pyrethrum) ಎಂಬ ಅಂಶವನ್ನು ಅನೇಕ ಸೊಳ್ಳೆ ನಿವಾರಕ ಮದ್ದುಗಳಲ್ಲಿ ಬಳಸಲಾಗುತ್ತದೆ. ಈ ಗಿಡವನ್ನು ಮನೆಯ ಪ್ರವೇಶ ದ್ವಾರ ಅಥವಾ ಕಿಟಕಿಗಳ ಹತ್ತಿರ ಇಡುವುದರಿಂದ ಸೊಳ್ಳೆಗಳು ಒಳಗೆ ಬರದಂತೆ ತಡೆಯಬಹುದು.

35
ಲೆಮನ್ ಗ್ರಾಸ್ (Lemon Grass)

ಸೊಳ್ಳೆಗಳನ್ನು ಓಡಿಸುವ ಗಿಡಗಳ ಪಟ್ಟಿಯಲ್ಲಿ ಲೆಮನ್ ಗ್ರಾಸ್ ಅತ್ಯಂತ ಶಕ್ತಿಶಾಲಿಯಾದದ್ದು. ಲೆಮನ್ ಗ್ರಾಸ್‌ನಿಂದ ‘ಸಿಟ್ರೋನೆಲ್ಲಾ ಆಯಿಲ್’ (Citronella Oil) ಲಭ್ಯವಾಗುತ್ತದೆ. ಇದರಲ್ಲಿರುವ ನಿಂಬೆ ಹಣ್ಣಿನ ವಾಸನೆಯು ಸೊಳ್ಳೆಗಳನ್ನು ಗೊಂದಲಕ್ಕೀಡು ಮಾಡುತ್ತದೆ ಮತ್ತು ಅವು ನಮ್ಮ ಹತ್ತಿರ ಬರದಂತೆ ತಡೆಯುತ್ತದೆ. ಅನೇಕ ಸೊಳ್ಳೆ ನಿವಾರಕ ಕ್ರೀಮ್‌ಗಳ ತಯಾರಿಕೆಯಲ್ಲಿ ಈ ಎಣ್ಣೆಯನ್ನು ಬಳಸುತ್ತಾರೆ. ಇದನ್ನು ಬೆಳೆಸುವುದು ಸುಲಭ ಮತ್ತು ಇದರ ಎಲೆಗಳನ್ನು ಟೀ ತಯಾರಿಕೆಯಲ್ಲೂ ಬಳಸಬಹುದು.

45
ತುಳಸಿ ಗಿಡ (Tulsi)

ಭಾರತೀಯ ಮನೆಗಳಲ್ಲಿ ತುಳಸಿ ಗಿಡಕ್ಕೆ ಇರುವ ಪ್ರಾಮುಖ್ಯತೆ ಅಪಾರ. ಔಷಧೀಯ ಗುಣಗಳ ಜೊತೆಗೆ ಸೊಳ್ಳೆಗಳನ್ನು ಓಡಿಸುವ ಶಕ್ತಿಯೂ ಇದಕ್ಕಿದೆ. ತುಳಸಿ ಎಲೆಗಳಿಂದ ಬರುವ ನೈಸರ್ಗಿಕ ಸುಗಂಧವು ಕೀಟಗಳನ್ನು, ವಿಶೇಷವಾಗಿ ಸೊಳ್ಳೆಗಳನ್ನು ದೂರವಿಡುತ್ತದೆ. ತುಳಸಿ ಎಲೆಗಳ ರಸವನ್ನು ಚರ್ಮಕ್ಕೆ ಹಚ್ಚಿಕೊಂಡರೂ ಸೊಳ್ಳೆಗಳು ಕಚ್ಚುವುದಿಲ್ಲ. ಇದು ಗಾಳಿಯನ್ನು ಶುದ್ಧೀಕರಿಸುವುದು ಮಾತ್ರವಲ್ಲದೆ, ಮನೆಯೊಳಗೆ ಬರುವ ಕ್ರಿಮಿಕೀಟಗಳನ್ನು ಅಡ್ಡಿಪಡಿಸುತ್ತದೆ.

55
ನೀರು ನಿಲ್ಲದಂತೆ ನೋಡಿಕೊಳ್ಳುವುದು ಮುಖ್ಯ

ರಾಸಾಯನಿಕಗಳ ಬಳಕೆ ಕಡಿಮೆ ಮಾಡಿ ಇಂತಹ ಗಿಡಗಳನ್ನು ಬೆಳೆಸುವುದರಿಂದ ಆರೋಗ್ಯ ಮತ್ತು ಪರಿಸರ ಎರಡಕ್ಕೂ ಒಳ್ಳೆಯದು. ಆದರೆ ಒಂದು ಮುಖ್ಯ ವಿಷಯವೆಂದರೆ, ಗಿಡಗಳು ಕೇವಲ ಸೊಳ್ಳೆಗಳನ್ನು ನಿವಾರಿಸಲು ಸಹಾಯ ಮಾಡುತ್ತವೆ. ಇದರ ಜೊತೆಗೆ ಮನೆಯ ಸುತ್ತಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳುವುದು ಕೂಡ ಅಷ್ಟೇ ಮುಖ್ಯವಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories