ಫ್ರಿಡ್ಜ್‌ನಲ್ಲಿ ಒಂದು ಬಟ್ಟಲು ಉಪ್ಪನ್ನ ಏಕಿಡಬೇಕು? ಹಿರಿಯರು ಹೇಳಿದ ಈ ಟ್ರಿಕ್ ಸಾವಿರಾರು ರೂಪಾಯಿ ಉಳಿಸುತ್ತೆ!

Published : May 08, 2026, 05:01 PM IST

Viral fridge hack: ನಮ್ಮ ಮನೆಯ ಫ್ರಿಡ್ಜ್‌ನಲ್ಲಿ ದಿನವೂ ಹಾಲು, ತರಕಾರಿ, ಹಣ್ಣುಗಳನ್ನು ಇಡುತ್ತೇವೆ. ಆದರೆ ಎಂದಾದರೂ ಒಂದು ಬಟ್ಟಲು 'ಉಪ್ಪನ್ನು' ಫ್ರಿಡ್ಜ್‌ ಒಳಗಿಟ್ಟಿದ್ದೀರಾ? ಕೇಳಲು ವಿಚಿತ್ರ ಎನಿಸಿದರೂ, ಹಿರಿಯರು ಪಾಲಿಸುತ್ತಿದ್ದ ಈ ಒಂದು ಪುಟ್ಟ ಟ್ರಿಕ್ಸ್ ಅಚ್ಚರಿಯ ಫಲಿತಾಂಶ ನೀಡುತ್ತದೆ! 

PREV
16
ಒಂದು ಸಿಂಪಲ್ 'ಹ್ಯಾಕ್'

ನಮ್ಮ ದೈನಂದಿನ ಜೀವನದಲ್ಲಿ ಫ್ರಿಡ್ಜ್ ಬಳಕೆ ತುಂಬಾ ಸಾಮಾನ್ಯ. ಅದರಲ್ಲೂ ಬೇಸಿಗೆಯಲ್ಲಿ ಹಾಲು, ತರಕಾರಿ ಮತ್ತು ಉಳಿದ ಆಹಾರ ಪದಾರ್ಥಗಳು ಹಾಳಾಗದಂತೆ ಕಾಪಾಡಲು ಇದು ಅತಿ ಮುಖ್ಯ. ಈ ಕೆಳಗಿನ ಒಂದು ಸಿಂಪಲ್ 'ಹ್ಯಾಕ್' ನಿಮ್ಮ ಫ್ರಿಡ್ಜ್ ಅನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.

26
1. ತರಕಾರಿಗಳು ದೀರ್ಘಕಾಲ ತಾಜಾವಾಗಿರುತ್ತವೆ

ನಮಗೆಲ್ಲರಿಗೂ ಫ್ರಿಡ್ಜ್‌ನಲ್ಲಿಟ್ಟ ತರಕಾರಿಗಳು (ಸೌತೆಕಾಯಿ, ಸೋರೆಕಾಯಿ, ಬದನೆಕಾಯಿ ಇತ್ಯಾದಿ) ಹೆಚ್ಚು ದಿನಗಳ ಕಾಲ ಹಾಳಾಗಬಾರದೆಂಬ ಆಸೆ ಇರುತ್ತದೆ. ಆದರೆ ಫ್ರಿಡ್ಜ್‌ನಲ್ಲಿ ತೇವಾಂಶ (Moisture) ಹೆಚ್ಚಾದಾಗ ತರಕಾರಿಗಳು ಬೇಗನೆ ಕೊಳೆಯಲು ಆರಂಭಿಸುತ್ತವೆ. ಒಂದು ಬಟ್ಟಲಿನಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ತರಕಾರಿಗಳ ಪಕ್ಕದಲ್ಲಿಟ್ಟರೆ, ಅದು ಹೆಚ್ಚುವರಿ ತೇವಾಂಶವನ್ನು ಹೀರಿಕೊಳ್ಳುತ್ತದೆ. ಇದರಿಂದ ತರಕಾರಿಗಳು ಹೆಚ್ಚು ದಿನಗಳ ಕಾಲ ಫ್ರೆಶ್ ಆಗಿರ್ತವೆ.

36
2. ದುರ್ವಾಸನೆ ದೂರವಾಗುತ್ತದೆ

ಫ್ರಿಡ್ಜ್‌ನಲ್ಲಿ ತರಕಾರಿ, ಹಾಲು, ಹಿಟ್ಟು ಮತ್ತು ಬ್ರೆಡ್‌ಗಳನ್ನು ಒಂದೇ ಕಡೆ ಇಡುವುದರಿಂದ ಕೆಲವೊಮ್ಮೆ ಒಂದು ರೀತಿಯ ವಿಚಿತ್ರ ವಾಸನೆ ಬರಲು ಪ್ರಾರಂಭವಾಗುತ್ತದೆ. ಉಪ್ಪು ತುಂಬಿದ ಬಟ್ಟಲನ್ನು ಫ್ರಿಡ್ಜ್‌ನ ಒಂದು ಮೂಲೆಯಲ್ಲಿ ಇಟ್ಟರೆ, ಅದು ಫ್ರಿಡ್ಜ್‌ನಲ್ಲಿರುವ ಕೆಟ್ಟ ವಾಸನೆಯನ್ನು ಹೀರಿಕೊಂಡು ಒಳಗಿನ ಗಾಳಿಯನ್ನು ತಾಜಾವಾಗಿರಿಸುತ್ತದೆ.

46
3. ಆಹಾರ ಪದಾರ್ಥಗಳು ಬೇಗನೆ ಹಾಳಾಗುವುದಿಲ್ಲ

ಫ್ರಿಡ್ಜ್‌ ಅನ್ನು ಪದೇ ಪದೇ ತೆರೆಯುವುದರಿಂದ ಹೊರಗಿನ ಗಾಳಿ ಒಳಹೋಗಿ ತೇವಾಂಶ ಹೆಚ್ಚಾಗುತ್ತದೆ. ಇದರಿಂದ ಆಹಾರ ಪದಾರ್ಥಗಳು ಬೇಗನೆ ಕೆಡಬಹುದು. ಉಪ್ಪು ಈ ಹೆಚ್ಚುವರಿ ಮಾಯಿಶ್ಚರ್ ಅನ್ನು ಹೀರಿಕೊಳ್ಳುವುದರಿಂದ ಆಹಾರ ಹೆಚ್ಚು ಕಾಲ ಸುರಕ್ಷಿತವಾಗಿರುತ್ತದೆ ಮತ್ತು ಫ್ರಿಡ್ಜ್‌ ಕೂಡ ಸರಿಯಾಗಿ ಕೆಲಸ ಮಾಡುತ್ತದೆ.

56
4. ಫ್ರೀಜರ್‌ನಲ್ಲಿ ಅತಿಯಾದ ಮಂಜುಗಡ್ಡೆ (Ice) ಇರುವುದಿಲ್ಲ

ಹಳೆಯ ಅಥವಾ ಸಿಂಗಲ್ ಡೋರ್ ಫ್ರಿಡ್ಜ್‌ ಗಳಲ್ಲಿ ಫ್ರೀಜರ್‌ನಲ್ಲಿ ಅತಿಯಾಗಿ ಐಸ್ ಜಮೆಯಾಗುವ ಸಮಸ್ಯೆ ಇರುತ್ತದೆ. ಇದರಿಂದ ಫ್ರಿಡ್ಜ್‌ನಲ್ಲಿ ಜಾಗ ಕಡಿಮೆಯಾಗುವುದಲ್ಲದೆ ಕೂಲಿಂಗ್ ಕೂಡ ಸರಿಯಾಗಿ ಆಗುವುದಿಲ್ಲ. ಫ್ರೀಜರ್ ಅನ್ನು ಸ್ವಚ್ಛಗೊಳಿಸಿದ ನಂತರ ಅಲ್ಲಿ ಸ್ವಲ್ಪ ಉಪ್ಪನ್ನು ಉದುರಿಸಿದರೆ, ಪದೇ ಪದೇ ಅತಿಯಾದ ಐಸ್ ಗಟ್ಟಿಯಾಗುವ ಸಮಸ್ಯೆಯನ್ನು ತಡೆಯಬಹುದು.

66
ಗಮನಿಸಬೇಕಾದ ಮುಖ್ಯ ಅಂಶ

ಬಟ್ಟಲಿನಲ್ಲಿಟ್ಟ ಉಪ್ಪು ತೇವಾಂಶವನ್ನು ಹೀರಿಕೊಂಡು ಒದ್ದೆಯಾಗುತ್ತದೆ. ಆದ್ದರಿಂದ ಪ್ರತಿ 15-20 ದಿನಗಳಿಗೊಮ್ಮೆ ಆ ಉಪ್ಪನ್ನು ಬದಲಾಯಿಸುವುದನ್ನು ಮರೆಯಬೇಡಿ. ಈ ಸಣ್ಣ ಟ್ರಿಕ್ ಬಳಸುವುದರಿಂದ ನಿಮ್ಮ ಆಹಾರ ಪದಾರ್ಥಗಳು ಹಾಳಾಗುವುದು ತಪ್ಪುತ್ತದೆ ಮತ್ತು ನಿಮ್ಮ ಸಾವಿರಾರು ರೂಪಾಯಿ ಉಳಿತಾಯವಾಗುತ್ತದೆ!

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories