ಬಾಲ್ಕನಿಯ 4×4 ಅಡಿ ಜಾಗದಲ್ಲಿ ತರಕಾರಿ ಬೆಳೆಯಲು ಆರು ಸೂತ್ರಗಳು; ಆರೋಗ್ಯಕರ ಪುಟ್ಟ ತೋಟ

Published : Apr 04, 2026, 09:46 AM IST

ಈಗಿನ ಕಾಲದಲ್ಲಿ ತರಕಾರಿಗಳಲ್ಲಿ ಕಲಬೆರಕೆ, ಕೆಮಿಕಲ್ ಮತ್ತು ಕೀಟನಾಶಕಗಳ ಬಳಕೆ ಸಿಕ್ಕಾಪಟ್ಟೆ ಜಾಸ್ತಿಯಾಗಿದೆ. ಇದೇ ಕಾರಣಕ್ಕೆ, ಜನ ಮತ್ತೆ ಮನೆಯಲ್ಲೇ ಬೆಳೆದ ಆರ್ಗ್ಯಾನಿಕ್ ತರಕಾರಿಗಳತ್ತ ಹೆಚ್ಚು ಗಮನ ಕೊಡುತ್ತಿದ್ದಾರೆ. ಒಂದು ಪುಟ್ಟ ತರಕಾರಿ ತೋಟ ನಿಮಗೆ ತಾಜಾ ಮತ್ತು ಪೌಷ್ಟಿಕ ತರಕಾರಿಗಳನ್ನು ನೀಡುತ್ತದೆ.

PREV
17
4×4 ಅಡಿ ಜಾಗ, ಒಂದು ಬಾಲ್ಕನಿ, ಸಣ್ಣ ಟೆರೇಸ್

ನಿಮ್ಮ ಮನೆಯಲ್ಲಿ ಕೇವಲ 4×4 ಅಡಿ ಜಾಗ, ಒಂದು ಬಾಲ್ಕನಿ, ಸಣ್ಣ ಟೆರೇಸ್ ಅಥವಾ ಕೆಲವು ಗ್ರೋ ಬ್ಯಾಗ್‌ಗಳಿದ್ದರೂ ಸಾಕು, ನಿಮ್ಮ ದಿನನಿತ್ಯದ ಬಳಕೆಗೆ ಬೇಕಾದ ತರಕಾರಿಗಳನ್ನು ನೀವೇ ಆರಾಮವಾಗಿ ಬೆಳೆದುಕೊಳ್ಳಬಹುದು. ವಿಶೇಷ ಅಂದ್ರೆ, ಇದಕ್ಕಾಗಿ ನೀವು ಗಾರ್ಡನಿಂಗ್ ಎಕ್ಸ್‌ಪರ್ಟ್ ಆಗಬೇಕಿಲ್ಲ! ಸರಿಯಾದ ಕ್ರಮಗಳನ್ನು ಅನುಸರಿಸಿದರೆ ಸಾಕು. ಈ 6-ಹಂತದ ವಿವರವಾದ ಪ್ರಕ್ರಿಯೆ ನಿಮ್ಮ ಮೊದಲ ತರಕಾರಿ ತೋಟವನ್ನು 100% ಯಶಸ್ವಿಗೊಳಿಸುತ್ತದೆ.

27
ಮೊದಲಿಗೆ, ಸೂರ್ಯನ ಬಿಸಿಲು ಬೀಳುವ ಜಾಗ ಆರಿಸಿ

ತರಕಾರಿಗಳ ಬೆಳವಣಿಗೆಯಲ್ಲಿ 70% ಪಾಲು ಸೂರ್ಯನ ಬಿಸಿಲಿನದ್ದೇ. ಹಾಗಾಗಿ, ಪ್ರತಿದಿನ ಕನಿಷ್ಠ 6-7 ಗಂಟೆಗಳ ಕಾಲ ನೇರ ಬಿಸಿಲು ಬೀಳುವ ಜಾಗವನ್ನು ಆಯ್ಕೆ ಮಾಡಿ. ಬಾಲ್ಕನಿ, ಅಡುಗೆಮನೆಯ ಕಿಟಕಿ, ಟೆರೇಸ್ ಗಾರ್ಡನ್, ಮನೆಯ ಹಿತ್ತಲು ಅಥವಾ ಕಿಟಕಿಯ ಗ್ರಿಲ್ ಹ್ಯಾಂಗರ್‌ಗಳು ಇದಕ್ಕೆ ಬೆಸ್ಟ್. ಟೊಮೆಟೊ, ಬೆಂಡೆಕಾಯಿ, ಸೋರೆಕಾಯಿ, ಕುಂಬಳಕಾಯಿಯಂತಹ ತರಕಾರಿಗಳಿಗೆ ಹೆಚ್ಚು ಬಿಸಿಲು ಬೇಕು. ಆದರೆ ಪಾಲಕ್, ಪುದೀನಾ, ಕೊತ್ತಂಬರಿ, ಮೆಂತ್ಯ, ಕೋಸು ಕಡಿಮೆ ಬಿಸಿಲಿದ್ದರೂ ಚೆನ್ನಾಗಿ ಬೆಳೆಯುತ್ತವೆ.

37
ಪ್ರತಿ ತರಕಾರಿಗೂ ಬೇರೆ ಬೇರೆ ಗಾತ್ರದ ಪಾಟ್ ಬಳಸಿ

ನೀವು ಬಳಸುವ ಪಾಟ್‌ನ ಆಳವು ಗಿಡ ಎಷ್ಟು ದೊಡ್ಡದಾಗಿ ಬೆಳೆಯುತ್ತದೆ ಎಂಬುದನ್ನು ನಿರ್ಧರಿಸುತ್ತದೆ. ಪ್ಲಾಸ್ಟಿಕ್ ಪಾಟ್, ಗ್ರೋ ಬ್ಯಾಗ್, ಮಣ್ಣಿನ ಕುಂಡ, ಟಬ್, ಬಕೆಟ್, ಕ್ರೇಟ್ ಬಾಕ್ಸ್‌ಗಳು ಗಿಡ ಬೆಳೆಸಲು ಉತ್ತಮ ಆಯ್ಕೆಗಳು. ಯಾವ ಗಿಡಕ್ಕೆ ಯಾವ ಗಾತ್ರದ ಪಾಟ್ ಉತ್ತಮ ಎಂಬ ವಿವರ ಇಲ್ಲಿದೆ.

ಟೊಮೆಟೊ → 12–14 ಇಂಚು

ಬೆಂಡೆಕಾಯಿ → 12 ಇಂಚು

ಸೋರೆಕಾಯಿ/ಕುಂಬಳಕಾಯಿ/ಹೀರೆಕಾಯಿ → 15–18 ಇಂಚು (ಬಳ್ಳಿ ಹಬ್ಬಲು ಗ್ರಿಲ್/ಜಾಲರಿ ಬೇಕು)

ಪಾಲಕ್/ಮೆಂತ್ಯ/ಕೊತ್ತಂಬರಿ → 6–8 ಇಂಚು

ಮೆಣಸಿನಕಾಯಿ/ಬದನೆಕಾಯಿ → 12 ಇಂಚು

47
50% ಮಣ್ಣು, 30% ಗೊಬ್ಬರ, 20% ಮರಳಿನ ಮಿಶ್ರಣ ರೆಡಿ ಮಾಡಿ

ಒಳ್ಳೆಯ ಇಳುವರಿ ಕೊಡುವ ತೋಟದ ರಹಸ್ಯ ಅಡಗಿರುವುದು ಸಡಿಲವಾದ, ಪೋಷಕಾಂಶಯುಕ್ತ ಮತ್ತು ಗಾಳಿಯಾಡುವ ಮಣ್ಣಿನಲ್ಲಿ. ಉತ್ತಮ ಪಾಟಿಂಗ್ ಮಿಶ್ರಣಕ್ಕಾಗಿ, 50% ಗಾರ್ಡನ್ ಮಣ್ಣು, 30% ಹಳೆಯ ಸಗಣಿ ಗೊಬ್ಬರ/ಎರೆಹುಳು ಗೊಬ್ಬರ, 20% ಮರಳು/ತೆಂಗಿನ ನಾರು (ಕೋಕೋಪೀಟ್) ಮತ್ತು 1 ಹಿಡಿ ಬೇವಿನ ಹಿಂಡಿಯನ್ನು (ಫಂಗಸ್‌ನಿಂದ ರಕ್ಷಿಸಲು) ಸೇರಿಸಿ. ಈ ಮಣ್ಣನ್ನು 2-3 ದಿನ ಬಿಸಿಲಿನಲ್ಲಿ ಹರಡಿ ಇಟ್ಟರೆ, ಅದರಲ್ಲಿರುವ ರೋಗಾಣುಗಳು ನಾಶವಾಗುತ್ತವೆ

57
ಸರಿಯಾದ ಸೀಸನ್‌ನಲ್ಲಿ ಸರಿಯಾದ ಬೀಜ ಬಿತ್ತನೆ ಮಾಡಿ

ಸೀಸನ್‌ಗೆ ಸರಿಯಾಗಿ ಬೀಜಗಳನ್ನು ಬಿತ್ತಿದರೆ 90% ಗಿಡಗಳು ಹಾಳಾಗುತ್ತವೆ. ಯಾವಾಗಲೂ ಹವಾಮಾನಕ್ಕೆ ತಕ್ಕಂತೆ ಬೀಜಗಳನ್ನು ಆಯ್ಕೆ ಮಾಡಿ.

ಬೇಸಿಗೆ ತರಕಾರಿಗಳು (ಮಾರ್ಚ್–ಜುಲೈ): ಟೊಮೆಟೊ, ಬೆಂಡೆಕಾಯಿ, ಹಾಗಲಕಾಯಿ, ಸೋರೆಕಾಯಿ, ಕುಂಬಳಕಾಯಿ, ಮೆಣಸಿನಕಾಯಿ, ಬದನೆಕಾಯಿ.

ಚಳಿಗಾಲದ ತರಕಾರಿಗಳು (ಅಕ್ಟೋಬರ್–ಫೆಬ್ರವರಿ): ಪಾಲಕ್, ಮೆಂತ್ಯ, ಕೋಸು, ಮೂಲಂಗಿ, ಕ್ಯಾರೆಟ್, ಬಟಾಣಿ, ಬ್ರೊಕೋಲಿ.

ವರ್ಷಪೂರ್ತಿ ಬೆಳೆಯುವ ತರಕಾರಿಗಳು: ಕೊತ್ತಂಬರಿ, ಪುದೀನಾ, ಲೆಟ್ಯೂಸ್, ಹಸಿ ಮೆಣಸಿನಕಾಯಿ.

ಬೀಜ ಬಿತ್ತುವ ಮೊದಲು: ಬೀಜಗಳನ್ನು 30 ನಿಮಿಷಗಳ ಕಾಲ ಉಗುರುಬೆಚ್ಚಗಿನ ನೀರಿನಲ್ಲಿ ನೆನೆಸಿ. ಇದರಿಂದ ಬೀಜಗಳು ಬೇಗ ಮೊಳಕೆಯೊಡೆಯುತ್ತವೆ. ಬೀಜಗಳನ್ನು ಕೇವಲ 1 ಸೆಂ.ಮೀ ಆಳದಲ್ಲಿ ಬಿತ್ತಿ, ಅದಕ್ಕಿಂತ ಹೆಚ್ಚು ಆಳ ಬೇಡ.

67
ಸರಿಯಾದ ಸಮಯಕ್ಕೆ ನೀರು ಮತ್ತು ಗೊಬ್ಬರ ನೀಡುವುದೇ ಬೆಳವಣಿಗೆಯ ಗುಟ್ಟು

ತರಕಾರಿ ಗಿಡಗಳಿಗೆ ನೀರು ಯಾವಾಗ ಕೊಡಬೇಕು? ಬೆಳಗ್ಗೆ ಅಥವಾ ಸಂಜೆ ನೀರು ಹಾಕಿ. ಮಣ್ಣು ತೇವವಾಗಿರಲಿ, ಆದರೆ ನೀರು ನಿಲ್ಲಬಾರದು. ಬೇಸಿಗೆಯಲ್ಲಿ ಪ್ರತಿದಿನ, ಚಳಿಗಾಲದಲ್ಲಿ 2-3 ದಿನಗಳಿಗೊಮ್ಮೆ ನೀರು ಕೊಡಿ. ಇನ್ನು ಗೊಬ್ಬರದ ವಿಷಯಕ್ಕೆ ಬಂದರೆ, ಪ್ರತಿ 15 ದಿನಗಳಿಗೊಮ್ಮೆ 1 ಹಿಡಿ ಎರೆಹುಳು ಗೊಬ್ಬರ ಹಾಕಿ. ಪ್ರತಿ 20 ದಿನಗಳಿಗೊಮ್ಮೆ ಪೊಟ್ಯಾಷ್ (ಬಾಳೆಹಣ್ಣಿನ ಸಿಪ್ಪೆ ನೆನೆಸಿದ ನೀರು ಉತ್ತಮ) ನೀಡಿ. ವಾರಕ್ಕೊಮ್ಮೆ ಬೇವಿನ ಎಣ್ಣೆಯನ್ನು (5 ಮಿ.ಲೀ. ಎಣ್ಣೆಗೆ 1 ಲೀಟರ್ ನೀರು) ಸಿಂಪಡಿಸಿದರೆ ಕೀಟಗಳು ಬರುವುದಿಲ್ಲ.

ಇದನ್ನೂ ಓದಿ: ಐದೇ ದಿನದಲ್ಲಿ ಬ್ರೈನ್‌ ಟ್ಯೂಮರ್‌ ಮಾಯ ಮಾಡೋ ವಿಧಾನ ಪತ್ತೆ; ಮೂವರ ಮೇಲೆ ಯಶಸ್ವಿ ಪ್ರಯೋಗ

77
ಆರೋಗ್ಯಕರ ಗಿಡಗಳಿಗಾಗಿ ಸಪೋರ್ಟ್, ಟ್ರಿಮ್ಮಿಂಗ್ ಮತ್ತು ಆರೈಕೆ

ಬಳ್ಳಿ ಗಿಡಗಳು (ಸೋರೆ/ಕುಂಬಳ/ಹೀರೆ): ಇವುಗಳಿಗೆ ಜಾಲರಿ, ಹಗ್ಗ ಅಥವಾ ಬಿದಿರಿನ ಕೋಲಿನ ಆಸರೆ ನೀಡಿ.

ಟೊಮೆಟೊ/ಮೆಣಸು/ಬದನೆ: ಗಿಡದ ಕಾಂಡ ಮುರಿಯದಂತೆ ಕೋಲಿನ ಸಪೋರ್ಟ್ ಕೊಡಿ.

ಟ್ರಿಮ್ಮಿಂಗ್: ಒಣಗಿದ ಎಲೆಗಳನ್ನು ಆಗಾಗ ಕತ್ತರಿಸಿ ತೆಗೆಯಿರಿ. ಇದರಿಂದ ಹೊಸ ಚಿಗುರು ವೇಗವಾಗಿ ಬರುತ್ತದೆ.

ಕೀಟ ನಿಯಂತ್ರಣ (ನೈಸರ್ಗಿಕವಾಗಿ): ಬೇವಿನ ಎಣ್ಣೆ ಸ್ಪ್ರೇ, ಮಜ್ಜಿಗೆ ಸ್ಪ್ರೇ (1:3 ಅನುಪಾತ), ಬೆಳ್ಳುಳ್ಳಿ-ಶುಂಠಿ ನೀರು ಬಳಸಿ. ಬಿಳಿ ನೊಣ/ಏಫಿಡ್ಸ್ ಕಂಡರೆ, ನೀರಿನ ಜೆಟ್‌ನಿಂದ ಅವುಗಳನ್ನು ತೆಗೆದುಹಾಕಿ.

ಇದನ್ನೂ ಓದಿ: ಬೇಸಿಗೆ ಬಿಸಿಲಿಗೆ ಅತಿಹೆಚ್ಚು ಎಳನೀರು ಕುಡಿದರೆ ಆರೋಗ್ಯಕ್ಕೆ ಹಾನಿಕರ: ದಿನಕ್ಕೆ ಎಷ್ಟು ಎಳನೀರು ಕುಡಿಯಬೇಕು?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories