ಬಾಲ್ಯದ ಕಹಿ ನೆನಪುಗಳು ನಿಮ್ಮನ್ನ ಹೇಗೆ ಕಾಡುತ್ತವೆ? ಮೈಗ್ರೇನ್‌ನಿಂದ ಗಂಭೀರ ಕಾಯಿಲೆವರೆಗೆ ಕನೆಕ್ಷನ್!

Published : Jul 03, 2026, 03:04 PM IST

ಬಾಲ್ಯದ ನೆನಪುಗಳು ಕೆಲವರಿಗೆ ಕಹಿ, ಇನ್ನ ಕೆಲವರಿಗೆ ಸುಮಧುರ. ಕೆಲವು ಮಕ್ಕಳಿಗೆ ಬಾಲ್ಯ ಎನ್ನುವುದು ಭಯ, ಹಿಂಸೆ ಅಥವಾ ನಿರ್ಲಕ್ಷ್ಯದ ಕರಾಳ ಅಧ್ಯಾಯ. ಈ ಕಹಿ ಘಟನೆಗಳು ಕೇವಲ ನೆನಪುಗಳಾಗಿ ಉಳಿಯಲ್ಲ. ಬದಲಾಗಿ ಅವರು ದೊಡ್ಡವರಾದ ಮೇಲೆ ಮೈಗ್ರೇನ್, ಬೆನ್ನು ನೋವು , ಹೃದಯ ಸಂಬಂಧಿ ಕಾಯಿಲೆಗಳಿಗೆ ಕಾರಣವಾಗುತ್ತದೆ

PREV
16
ಬಾಲ್ಯದ ನೋವು ಮತ್ತು ಇಂದಿನ ಕಾಯಿಲೆಗಳು

ಕೆಲವು ವರ್ಷಗಳಿಂದ ಮೈಗ್ರೇನ್, ಹೊಟ್ಟೆಯ ಸಮಸ್ಯೆ, ನಿದ್ರಾಹೀನತೆ ಅಥವಾ ನಿರಂತರ ಆಯಾಸದಿಂದ ಬಳಲುತ್ತಿರುವವರು ಅನೇಕ ವೈದ್ಯರನ್ನು ಕಂಡರೂ ಗುಣಮುಖರಾಗದೆ ಇರಬಹುದು. ಇದಕ್ಕೆ ಕಾರಣ ಅವರ ಬಾಲ್ಯದ ಅನುಭವ ಎನ್ನುತ್ತವೆ ಕೆಲವು ಅಧ್ಯಯನಗಳು. ಬಾಲ್ಯದಲ್ಲಿ ಅನುಭವಿಸಿದ ಮಾನಸಿಕ ಆಘಾತ (Childhood Trauma) ಕೇವಲ ಭಾವನಾತ್ಮಕ ಸಮಸ್ಯೆಯಲ್ಲ, ಅದು ನರವ್ಯೂಹ, ಹಾರ್ಮೋನುಗಳು ಮತ್ತು ರೋಗನಿರೋಧಕ ಶಕ್ತಿಯ ಮೇಲೂ ನೇರ ಪರಿಣಾಮ ಬೀರುತ್ತದೆ.

26
ಅಯ್ಯೋ ಇಷ್ಟೊಂದು ಸಮಸ್ಯೆನಾ?

ಯಾವಾಗ ಒಂದು ಮಗು ನಿರಂತರವಾಗಿ ಭಯ ಅಥವಾ ಅಸುರಕ್ಷಿತ ವಾತಾವರಣದಲ್ಲಿ ಬೆಳೆಯುತ್ತದೆಯೋ, ಆಗ ಆ ಮಗುವಿನ ದೇಹವು ಯಾವಾಗಲೂ ಫೈಟ್ ಅಥವಾ ಫ್ಲೈಟ್ ಸ್ಥಿತಿಯಲ್ಲಿರುತ್ತದೆ. ಅಂದರೆ, ಅಪಾಯವನ್ನು ಎದುರಿಸಲು ಅಥವಾ ಅಲ್ಲಿಂದ ಓಡಿಹೋಗಲು ಸಿದ್ಧವಾಗಿರುವ ಸ್ಥಿತಿ. ಈ ಕಾರಣದಿಂದಾಗಿ ದೇಹದಲ್ಲಿ ಸ್ಟ್ರೆಸ್ ಹಾರ್ಮೋನುಗಳು ದೀರ್ಘಕಾಲದವರೆಗೆ ಹೆಚ್ಚಿರುತ್ತವೆ. ಇದರಿಂದ ಏನೆಲ್ಲ ಸಮಸ್ಯೆ ಆಗಲಿದೆ ಅನ್ನೋದ್ರ ವಿವರ ಇಲ್ಲಿದೆ.

36
ಏನೆಲ್ಲ ಕಾಯಿಲೆಗಳು ಬರುತ್ತವೆ?
  • ಅಧಿಕ ರಕ್ತದೊತ್ತಡ (High BP) 
  • ಆಟೋಇಮ್ಯೂನ್ ಕಾಯಿಲೆಗಳು 
  • ಖಿನ್ನತೆ (Depression) 
  • ಬೊಜ್ಜು ಮತ್ತು ನಿದ್ರೆಯ ಸಮಸ್ಯೆ
46
ತಜ್ಞರು ಏನು ಹೇಳುತ್ತಾರೆ?

ತಜ್ಞ ವೈದ್ಯರಾದ ಡಾ.ಪ್ರಿತಿಕಾ ಸಿಂಗ್ ಪ್ರಕಾರ, ಅನೇಕ ರೋಗಿಗಳ ವೈದ್ಯಕೀಯ ವರದಿಗಳು ನಾರ್ಮಲ್ ಆಗಿರುತ್ತವೆ. ಆದರೆ ಅವರು ತೀವ್ರವಾದ ದೈಹಿಕ ನೋವಿನಿಂದ ಬಳಲುತ್ತಿರುತ್ತಾರೆ. ಉದಾಹರಣೆಗೆ 40 ವರ್ಷದ ಮಹಿಳೆಯೊಬ್ಬರು ಸತತ ಬೆನ್ನು ನೋವು ಮತ್ತು ಎಂಗ್ಸೈಟಿಯಿಂದ ಬಳಲುತ್ತಿದ್ದರು. ನಂತರದ ತನಿಖೆಯಲ್ಲಿ ಆಕೆಯ ಬಾಲ್ಯದಲ್ಲಿ ನಡೆದ ಕೌಟುಂಬಿಕ ಹಿಂಸೆ ಮತ್ತು ನಿರ್ಲಕ್ಷ್ಯವೇ ಈ ದೈಹಿಕ ನೋವಿಗೆ ಮೂಲ ಕಾರಣ ಎಂದು ತಿಳಿದುಬಂದಿದೆ.

56
ಸಂಶೋಧನೆ ಏನು ಹೇಳುತ್ತದೆ?

ಅಮೆರಿಕಾದ ಸೆಂಟರ್ ಫಾರ್ ಡಿಸೀಸ್ ಕಂಟ್ರೋಲ್ ಅಂಡ್ ಪ್ರಿವೆನ್ಷನ್ (CDC) ನಡೆಸಿದ ಎಸಿಇ (ACE-Adverse Childhood Experiences) ಅಧ್ಯಯನವು ಈ ವಿಷಯದಲ್ಲಿ ದೊಡ್ಡ ಕ್ರಾಂತಿ ಮಾಡಿದೆ. 17000ಕ್ಕೂ ಹೆಚ್ಚು ಜನರ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ ಬಾಲ್ಯದಲ್ಲಿ ಹಿಂಸೆ ಅಥವಾ ಒತ್ತಡ ಅನುಭವಿಸಿದವರಲ್ಲಿ ದೊಡ್ಡವರಾದ ಮೇಲೆ ಗಂಭೀರ ಕಾಯಿಲೆಗಳ ಅಪಾಯ ಹೆಚ್ಚಾಗಿರುವುದು ಕಂಡುಬಂದಿದೆ. ಜೆಎಎಂಎ ಪೀಡಿಯಾಟ್ರಿಕ್ಸ್ ನಲ್ಲಿ ಪ್ರಕಟವಾದ ವರದಿಯೂ ಸಹ ಬಾಲ್ಯದ ಟ್ರೋಮಾ ಮತ್ತು ಆಟೋಇಮ್ಯೂನ್ ಕಾಯಿಲೆಗಳ ನಡುವಿನ ಸಂಬಂಧವನ್ನು ದೃಢಪಡಿಸಿದೆ.

66
ವೈದ್ಯರ ಸಲಹೆ ಮುಖ್ಯ

ಬಾಲ್ಯದ ಕಹಿ ಘಟನೆಗಳನ್ನು ಮರೆಯುವುದು ಅಷ್ಟು ಸುಲಭವಲ್ಲ. ನಿಮ್ಮ ಇಂದಿನ ಅನಾರೋಗ್ಯಕ್ಕೆ ಸರಿಯಾದ ಕಾರಣ ಸಿಗುತ್ತಿಲ್ಲವೆಂದಾದರೆ ಒಮ್ಮೆ ನಿಮ್ಮ ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಿ. ಸರಿಯಾದ ಆಪ್ತ ಸಮಾಲೋಚನೆ (Counseling) ಮತ್ತು ಥೆರಪಿ ಮೂಲಕ ಹಳೆಯ ನೋವುಗಳಿಂದ ಹೊರಬರುವುದು ನಿಮ್ಮ ದೈಹಿಕ ಆರೋಗ್ಯವನ್ನೂ ಸುಧಾರಿಸಬಲ್ಲದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories