Rare Moth species found in Dudhwa: ವರ್ಷಗಳಿಂದ ಕಾಣಸಿಗದ ಈ ಅಪರೂಪದ ಮೊತ್ (Moth) ಪ್ರಭೇದವೇ ಅಳಿವಿನ ಹಾದಿಯಲ್ಲಿ ಸಾವು ಕಂಡಿರಬಹುದು ಎಂದು ತಜ್ಞರು ಅಂದುಕೊಂಡಿದ್ದರು. ಆದರೆ ಎಲ್ಲರ ಊಹೆಯನ್ನು ಮೀರಿ ಈ ಸುಂದರ ಜೀವಿ ಈಗ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ!
ಆರೋಗ್ಯಕರ ಪರಿಸರಕ್ಕೆ ಸಾಕ್ಷಿ ಉತ್ತರ ಪ್ರದೇಶದ ಲಖಿಂಪುರ್ ಖೇರಿಯ ದೂಧ್ವಾ ಟೈಗರ್ ರಿಸರ್ವ್(Dudhwa Tiger Reserve)ನಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಅಳಿವಿನ ಹಾದಿಯಲ್ಲಿರುವ ಅಥವಾ ಅಳಿವಿನಿಂದಾಗಿ ಸಾವು (ಅಂತ್ಯ) ಕಂಡಿರಬಹುದು ಎಂದು ಭಾವಿಸಲಾದ ಅತ್ಯಂತ ಅಪರೂಪದ 'ಮೊತ್ ಫ್ಲೈ' (Moth Fly) ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿದೆ. ಇದು ಭಾರತದ ವನ್ಯಜೀವಿ ಸಂರಕ್ಷಣೆಯ ಇತಿಹಾಸದಲ್ಲಿ ಪ್ರಮುಖ ಮೈಲಿಗಲ್ಲಾಗಿದ್ದು, ಅಲ್ಲಿನ ಪರಿಸರವು ಅತ್ಯಂತ ಆರೋಗ್ಯಕರವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.
26
ಇದ್ದಕ್ಕಿದ್ದಂತೆ ಸಿಕ್ಕಿದ ದೊಡ್ಡ ಉಡುಗೊರೆ
ಇದ್ದಕ್ಕಿದ್ದಂತೆ ಸಿಕ್ಕಿದ ದೊಡ್ಡ ಉಡುಗೊರೆ ದೂಧ್ವಾ ರಾಷ್ಟ್ರೀಯ ಉದ್ಯಾನವನ ಮತ್ತು ಕಿಶನ್‌ಪುರ ವನ್ಯಜೀವಿ ಅಭಯಾರಣ್ಯದಲ್ಲಿ ಮೊದಲ ಬಾರಿಗೆ ಈ ಅಪರೂಪದ 'ಮೊತ್ ಫ್ಲೈ' ಪ್ರಬೇಧ ದಾಖಲಾಗಿದೆ. ವನ್ಯಜೀವಿ ತಜ್ಞರ ಪ್ರಕಾರ, ಇಂತಹ ಅಪರೂಪದ ಕೀಟಗಳು ಕಂಡುಬರುವುದು ಆ ಪ್ರದೇಶದ ಕಾಡು ಹಸಿರಾಗಿರುವ ಮತ್ತು ಸುರಕ್ಷಿತವಾಗಿರುವ ಸಂಕೇತವಾಗಿದೆ.
36
ಸರಕ್ಕನೆ ಹಾರುವ ನಿಶಾಚರಿಗಳು
ಸರಕ್ಕನೆ ಹಾರುವ ನಿಶಾಚರಿಗಳು ಈ ಮೊತ್‌ಗಳು ಸಾಮಾನ್ಯವಾಗಿ ರಾತ್ರಿ ವೇಳೆ ಸಕ್ರಿಯವಾಗಿರುತ್ತವೆ. ರೆಕ್ಕೆ ಬಡಿಯುತ್ತಾ ಗಾಳಿಯಲ್ಲಿ ಸರಕ್ಕನೆ ಹಾರುವ ಈ ಜೀವಿಗಳು ಸಾಮಾನ್ಯ ಚಿಟ್ಟೆಗಳಿಗಿಂತ ಭಿನ್ನವಾಗಿರುತ್ತವೆ. ಇವುಗಳ ಬಣ್ಣ ಸ್ವಲ್ಪ ಮಸುಕಾಗಿದ್ದರೂ, ಪರಿಸರ ಸಮತೋಲನ ಕಾಯ್ದುಕೊಳ್ಳುವಲ್ಲಿ ಇವುಗಳ ಪಾತ್ರ ಬಹಳ ದೊಡ್ಡದು.
ಆರೋಗ್ಯಕರ ಪರಿಸರದ ಸೂಚಕ ಚಿಟ್ಟೆಗಳು ಮತ್ತು ಮೊತ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ ಎಂದರೆ ಅಲ್ಲಿನ ಹವಾಮಾನ ಸ್ವಚ್ಛವಾಗಿದೆ ಮತ್ತು ಸಸ್ಯಸಂಕುಲ ಸಮೃದ್ಧವಾಗಿದೆ ಎಂದರ್ಥ. ದೂಧ್ವಾ ಈಗ ಕೇವಲ ಹುಲಿ, ಆನೆ, ಖಡ್ಗಮೃಗಗಳಿಗಷ್ಟೇ ಅಲ್ಲದೆ, ಇಂತಹ ಸೂಕ್ಷ್ಮ ಜೀವಿಗಳಿಗೂ ಸಾವಿನ ಭಯವಿಲ್ಲದ ಸುರಕ್ಷಿತ ತಾಣವಾಗಿ ಮಾರ್ಪಟ್ಟಿದೆ.
56
ಆಕರ್ಷಕ ಜೀವನ ಕ್ರಮ
ಆಕರ್ಷಕ ಜೀವನ ಕ್ರಮ ಕಪ್ಪು, ಕಂದು ಮತ್ತು ಬಿಳಿ ಬಣ್ಣದಲ್ಲಿರುವ ಈ ಮೊತ್‌ಗಳು ಹೂವುಗಳ ಮಕರಂದವನ್ನು ಹೀರಿ ಬದುಕುತ್ತವೆ. ಇವು ಪರಾಗಸ್ಪರ್ಶ ಕ್ರಿಯೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಕಪ್ಪೆಗಳು, ಹಲ್ಲಿಗಳು ಮತ್ತು ಬಾವಲಿಗಳಿಗೆ ಇವು ಉತ್ತಮ ಆಹಾರವೂ ಹೌದು. ಭಾರತದಲ್ಲಿ ಇಂತಹ ಸುಮಾರು 10 ಸಾವಿರ ಪ್ರಬೇಧಗಳಿದ್ದರೆ, ವಿಶ್ವದಾದ್ಯಂತ ಸುಮಾರು ಒಂದು ಲಕ್ಷಕ್ಕೂ ಹೆಚ್ಚು ತಳಿಗಳಿವೆ.
66
ಉತ್ತರ ಪ್ರದೇಶ ಸರ್ಕಾರದ ಪಾತ್ರ
ಉತ್ತರ ಪ್ರದೇಶ ಸರ್ಕಾರದ ಪಾತ್ರ ಈ ಹೊಸ ಅನ್ವೇಷಣೆಯೊಂದಿಗೆ ದೂಧ್ವಾ ಟೈಗರ್ ರಿಸರ್ವ್‌ನ ಜೈವಿಕ ವೈವಿಧ್ಯತೆಗೆ ಮತ್ತೊಂದು ಗರಿ ಬಂದಂತಾಗಿದೆ. ವನ್ಯಜೀವಿಗಳ ಸಂರಕ್ಷಣೆಗೆ ಉತ್ತರ ಪ್ರದೇಶ ಸರ್ಕಾರ ಮಾಡುತ್ತಿರುವ ಪ್ರಯತ್ನಗಳಿಗೆ ಇದು ದೊಡ್ಡ ಜಯವಾಗಿದೆ.
ಈ ಅಪರೂಪದ ಅತಿಥಿಯ ಆಗಮನವು ಪರಿಸರ ಪ್ರೇಮಿಗಳಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ. ಇಂತಹ ಜೀವಿಗಳ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.