Bear Attack Survival: ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿದರೆ ನಿಜವಾಗಿಯೂ ಕರಡಿ ದಾಳಿ ನಿಲ್ಲಿಸುತ್ತದೆಯೇ?

Published : Jul 19, 2026, 11:02 AM IST

ಕರಡಿ ದಾಳಿ ಮಾಡಿದಾಗ ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿ ಅಪಾಯದಿಂದ ತಪ್ಪಿಸಿಕೊಂಡ ಬಾಲಕನ ಕತೆಯನ್ನ ಮಕ್ಕಳಾಗಿದ್ದಾಗಿನಿಂದಲೂ ಕೇಳಿಯೇ ಇರುತ್ತೀರಿ.  ನಿಜವಾಗಿಯೂ ಹೀಗೆ ಉಸಿರು ಬಿಗಿ ಹಿಡಿದು ಮಲಗಿಕೊಂಡರೆ ಕರಡಿಯಿಂದ ತಪ್ಪಿಸಿಕೊಳ್ಳಬಹುದೇ?

PREV
15
ಉಸಿರು ಬಿಗಿ ಹಿಡಿದು ಮಲಗಿದರೆ ಕರಡಿ ದಾಳಿ ನಿಲ್ಲಿಸುತ್ತದೆಯೇ?

ಕರಡಿ ದಾಳಿ ಮಾಡಿದಾಗ ಉಸಿರು ಬಿಗಿ ಹಿಡಿದು ಸತ್ತಂತೆ ಮಲಗಿ ಅಪಾಯದಿಂದ ತಪ್ಪಿಸಿಕೊಂಡ ಬಾಲಕನ ಕತೆಯನ್ನ ಮಕ್ಕಳಾಗಿದ್ದಾಗಿನಿಂದಲೂ ಕೇಳಿಯೇ ಇರುತ್ತೀರಿ. ಮಕ್ಕಳ ಕತೆ ಪುಸ್ತಕಗಳಲ್ಲಿಯೂ ಕರಡಿ ದಾಳಿಯಿಂದ ತಪ್ಪಿಸಿಕೊಳ್ಳಲು ಉಸಿರುಬಿಗಿ ಹಿಡಿದು ಮಲಗಿದ ಬಗ್ಗೆ ಸಾಕಷ್ಟು ಹೇಳಲಾಗಿದೆ. ಅದರಲ್ಲೂ ಬಹಳಷ್ಟು ಸಿನಿಮಾಗಳಲ್ಲೂ ಈ ದೃಶ್ಯ ಬಂದಿದೆ. ಆದರೆ ನಿಜವಾಗಿಯೂ ಹೀಗೆ ಉಸಿರು ಬಿಗಿ ಹಿಡಿದು ಮಲಗಿಕೊಂಡರೆ ಕರಡಿಯಿಂದ ತಪ್ಪಿಸಿಕೊಳ್ಳಬಹುದೇ? ಈ ನಂಬಿಕೆಯ ಹಿಂದಿನ ಸತ್ಯ ಏನೆಂದು ನೋಡೋಣ.

25
ಕರಡಿ ಸೂಕ್ಷ್ಮ ಗ್ರಹಿಕೆ: ಒಂದು ಸಣ್ಣ ಸೂಚನೆ ಸಿಕ್ಕರೂ ಕಷ್ಟ

ಮೊದಲನೆಯದಾಗಿ ಕರಡಿಗಳು ಅತ್ಯಂತ ಸೂಕ್ಷ್ಮ ಶ್ರವಣ ಶಕ್ತಿ, ವಾಸನೆಯನ್ನ ದೂರದಿಂದಲೇ ಗ್ರಹಿಸುವ ಸಾಮರ್ಥ್ಯ ಹೊಂದಿವೆ. ಇವು ಮನುಷ್ಯನ ವಾಸನೆ, ಸಣ್ಣ ಚಲನೆಗಳು, ಇತರೆ ಉಸಿರಾಟದ ಸಣ್ಣ ಏರಿಳಿತವೂ ಗ್ರಹಿಸಬಲ್ಲವು. ಇದರಲ್ಲಿ ಯಾವುದಾದರೊಂದು ಸೂಚನೆ ಸಿಕ್ಕರೂ ರಕ್ಷಿಸಿಕೊಳ್ಳುವುದು ಕಷ್ಟ.

35
ಕಪ್ಪು ಕರಡಿ ಅಪಾಯಕಾರಿ

ಕಪ್ಪು ಕರಡಿ ಕಂದು ಕರಡಿ ಮುಂದೆ ಎಂದಿಗೂ ಸತ್ತಂತೆ ನಟಿಸಬೇಡಿ. ಈ ಕರಡಿಗಳ ಮುಂದೆ ಮಲಗುವುದನ್ನು ವನ್ಯಜೀವಿ ತಜ್ಞರು ಬಲವಾಗಿ ವಿರೋಧಿಸುತ್ತಾರೆ, ಏಕೆಂದರೆ ಎರಡೂ ಜಾತಿಗಳು ದಾಳಿ ಮಾಡುವುದನ್ನು ಮುಂದುವರಿಸಬಹುದು. ಗಿಜಿ ಕರಡಿಗಳು ಬೆದರಿಕೆ ಅನುಭವಿಸದಿದ್ದಾಗ ದಾಳಿ ಮಾಡುವುದನ್ನು ನಿಲ್ಲಿಸುತ್ತವೆ, ಆದರೆ ಇದು ನಿಮ್ಮ ನಡೆವಳಿಕೆಯನ್ನ ಅವಲಂಭಿಸಿದೆ.

45
ಕರಡಿ ಮನುಷ್ಯನಿಗಿಂತ ವೇಗವಾಗಿ ಓಡಬಲ್ಲವು!

ಬಹಳಷ್ಟು ಜನರು ಕರಡಿಗಳು ಕಡಿಮೆ ವೇಗದಲ್ಲಿ ಓಡುತ್ತವೆಂದು ನಂಬುತ್ತಾರೆ. ಆದರೆ ಇದು ತಪ್ಪು ಕಲ್ಪನೆ. ಕರಡಿಗಳು ಮನುಷ್ಯರಿಗಿಂತ ಹೆಚ್ಚು ವೇಗವಾಗಿ ಓಡಬಲ್ಲವು ಅಷ್ಟೇ ಅಲ್ಲ ಮರ ಹತ್ತುವಲ್ಲಿ ನಿಪುಣವಾಗಿವೆ, ಆದ್ದರಿಂದ ಹೆಚ್ಚಿನ ಸಂದರ್ಭಗಳಲ್ಲಿ ಓಡುವುದು ಅಥವಾ ಮರಗಳನ್ನು ಹತ್ತುವುದು ತಪ್ಪಿಸಿಕೊಳ್ಳಲು ಸುರಕ್ಷಿತ ಮಾರ್ಗವಲ್ಲ.

55
ಕತೆ ಸಿನಿಮಾ ನಂಬಬೇಡಿ

ಕರಡಿಯ ಜಾತಿಯನ್ನು ಅವಲಂಬಿಸಿ ಬದುಕುಳಿಯುವ ವಿಧಾನಗಳು ಬದಲಾಗುತ್ತವೆ. ಆದ್ದರಿಂದ, ಜನಪ್ರಿಯ ನಂಬಿಕೆಯನ್ನು ಅವಲಂಬಿಸುವುದಕ್ಕಿಂತ ತಜ್ಞರಿಂದ ಸುರಕ್ಷತಾ ಮಾರ್ಗಸೂಚಿಗಳನ್ನು ತಿಳಿದುಕೊಳ್ಳುವುದು ಹೆಚ್ಚು ಪರಿಣಾಮಕಾರಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories