ಎಣ್ಣೆ ಚೆಲ್ಲಿದಾಗ ಬಟ್ಟೆ, ಟಿಶ್ಯೂ ಪೇಪರ್ ಹುಡುಕ್ಬೇಡಿ.. ಒಂದೇ ನಿಮಿಷದಲ್ಲಿ ಕ್ಲೀನ್ ಆಗಲು ಇಲ್ಲಿದೆ ಸ್ಮಾರ್ಟ್ ಟ್ರಿಕ್

Published : Sep 06, 2026, 05:22 PM IST

Remove grease from kitchen tiles: ಸಾಮಾನ್ಯವಾಗಿ ಎಣ್ಣೆ ಚೆಲ್ಲಿದಾಗ ನಾವು ಬಟ್ಟೆ ಅಥವಾ ಟಿಶ್ಯೂ ಹುಡುಕುತ್ತೇವೆ. ಆದರೆ ಇನ್ಮುಂದೆ ಹಾಗೆ ಮಾಡಬೇಡಿ. ಕೇವಲ ಒಂದೇ ನಿಮಿಷದಲ್ಲಿ ಎಣ್ಣೆ ಪೂರ್ತಿ ಮಾಯವಾಗಿ, ನೆಲ ಫಳ ಫಳ ಹೊಳೆಯಲು ಈ ಸ್ಮಾರ್ಟ್ ಟ್ರಿಕ್ ಬಳಸಿ..

PREV
15
ಹಿರಿಯರು ಬಳಸುತ್ತಿದ್ದ ಒಂದು ಅದ್ಭುತ ಟ್ರಿಕ್

ಹಿರಿಯರು ಬಳಸುತ್ತಿದ್ದ ಒಂದು ಅದ್ಭುತ ಟ್ರಿಕ್
ಅಡುಗೆ ಮನೆಯಲ್ಲಿ ಎಣ್ಣೆ ಚೆಲ್ಲುವುದು ಸಾಮಾನ್ಯ, ಆದರೆ ಅದನ್ನು ಕ್ಲೀನ್ ಮಾಡುವುದು ಅಷ್ಟೇ ಕಿರಿಕಿರಿ ಉಂಟುಮಾಡುವ ಕೆಲಸ. ಸಾಮಾನ್ಯವಾಗಿ ಕ್ಲೀನ್ ಮಾಡಲು ನಾವು ಬಟ್ಟೆ ಅಥವಾ ಟಿಶ್ಯೂ ಪೇಪರ್ ಬಳಸುತ್ತೇವೆ, ಆದರೆ ಅದರಿಂದ ಎಣ್ಣೆ ಮತ್ತಷ್ಟು ಹರಡುತ್ತದೆಯೇ ಹೊರತು ಪೂರ್ತಿ ಹೋಗುವುದಿಲ್ಲ. ಈ ಸಮಸ್ಯೆಗೆ ನಮ್ಮ ಹಿರಿಯರು ಬಳಸುತ್ತಿದ್ದ ಒಂದು ಅದ್ಭುತ ಟ್ರಿಕ್ ಇಲ್ಲಿದೆ.

25
ಬೇಕಿಂಗ್ ಸೋಡಾ

ಬೇಕಿಂಗ್ ಸೋಡಾ
ಅಡುಗೆ ಮಾಡುವಾಗ ಆಕಸ್ಮಿಕವಾಗಿ ನೆಲದ ಮೇಲೆ ಎಣ್ಣೆ ಚೆಲ್ಲಿದರೆ, ಅದನ್ನು ಸ್ವಚ್ಛಗೊಳಿಸುವುದು ದೊಡ್ಡ ಸರ್ಕಸ್. ಎಷ್ಟೇ ಒರೆಸಿದರೂ ಜಿಡ್ಡು ಹೋಗುವುದಿಲ್ಲ, ಅದರ ಮೇಲೆ ಕಾಲಿಟ್ಟರೆ ಜಾರಿ ಬೀಳುವ ಭಯ ಬೇರೆ. ಇಂತಹ ಸಂದರ್ಭದಲ್ಲಿ ಟಿಶ್ಯೂ ಪೇಪರ್ ಅಥವಾ ಬಟ್ಟೆ ಹುಡುಕುವ ಬದಲು, ನಿಮ್ಮ ಅಡುಗೆ ಮನೆಯಲ್ಲಿರುವ 'ಬೇಕಿಂಗ್ ಸೋಡಾ' ಬಳಸಿ ನೋಡಿ.

35
ಹೇಗೆ ಸ್ವಚ್ಛಗೊಳಿಸಬೇಕು?

ಹೇಗೆ ಸ್ವಚ್ಛಗೊಳಿಸಬೇಕು?
ಸೋಡಾ ಸಿಂಪಡಿಸಿ: ಎಣ್ಣೆ ಚೆಲ್ಲಿದ ಜಾಗಕ್ಕೆ ತಕ್ಷಣವೇ ಸ್ವಲ್ಪ ಬೇಕಿಂಗ್ ಸೋಡಾವನ್ನು (Baking Soda) ಪೂರ್ತಿಯಾಗಿ ಕವರ್ ಆಗುವಂತೆ ಸಿಂಪಡಿಸಿ.

ಹೀರಿಕೊಳ್ಳಲು ಬಿಡಿ: ಬೇಕಿಂಗ್ ಸೋಡಾವು ಎಣ್ಣೆಯನ್ನು ಹೀರಿಕೊಳ್ಳುವ ಗುಣವನ್ನು ಹೊಂದಿದೆ. ಇದನ್ನು ಕೈಯಿಂದ ಅಥವಾ ಒಂದು ಚಮಚದಿಂದ ಲಘುವಾಗಿ ಎಣ್ಣೆಯೊಂದಿಗೆ ಕಲಸಿ.

ಕ್ಲೀನ್ ಮಾಡಿ: ಕೇವಲ ಒಂದೆರಡು ನಿಮಿಷಗಳಲ್ಲಿ ಎಣ್ಣೆ ಪೂರ್ತಿಯಾಗಿ ಸೋಡಾದೊಂದಿಗೆ ಬೆರೆತು ಪುಡಿಯಂತಾಗುತ್ತದೆ. ಆ ನಂತರ ಒಂದು ಬಟ್ಟೆ ಅಥವಾ ಪೇಪರ್‌ನಿಂದ ಸುಲಭವಾಗಿ ಗುಡಿಸಿ ತೆಗೆಯಬಹುದು.

45
ಯಾಕೆ ಈ ವಿಧಾನ ಬೆಸ್ಟ್?

ಯಾಕೆ ಈ ವಿಧಾನ ಬೆಸ್ಟ್?
ಇದು ನೆಲದ ಮೇಲಿರುವ ಜಿಡ್ಡಿನಂಶವನ್ನು (Grease) ಸಂಪೂರ್ಣವಾಗಿ ತೆಗೆದುಹಾಕುತ್ತದೆ.
ಬಟ್ಟೆಯಿಂದ ಒರೆಸಿದರೆ ಎಣ್ಣೆ ಮತ್ತಷ್ಟು ಜಾಗಕ್ಕೆ ಹರಡುತ್ತದೆ, ಆದರೆ ಸೋಡಾ ಅದನ್ನು ಒಂದೇ ಕಡೆ ಕಟ್ಟಿ ಹಾಕುತ್ತದೆ.
ಇದು ಸಮಯವನ್ನು ಉಳಿಸುತ್ತದೆ ಮತ್ತು ನೆಲವನ್ನು ಮೊದಲಿನಂತೆ ಫಳಫಳ ಹೊಳೆಯುವಂತೆ ಮಾಡುತ್ತದೆ.
ಮುಂದಿನ ಬಾರಿ ಎಣ್ಣೆ ಚೆಲ್ಲಿದಾಗ ಗಾಬರಿಯಾಗಬೇಡಿ, ಈ ಸ್ಮಾರ್ಟ್ ಹ್ಯಾಕ್ ಒಮ್ಮೆ ಟ್ರೈ ಮಾಡಿ ನೋಡಿ!

55
ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು

ಗೋಧಿ ಹಿಟ್ಟು ಅಥವಾ ಮೈದಾ ಹಿಟ್ಟು
ಒಂದು ವೇಳೆ ಮನೆಯಲ್ಲಿ ಬೇಕಿಂಗ್ ಸೋಡಾ ಇಲ್ಲದಿದ್ದರೆ, ಅದರ ಬದಲು ಗೋಧಿ ಹಿಟ್ಟು (Wheat Flour) ಅಥವಾ ಮೈದಾ ಹಿಟ್ಟನ್ನು ಕೂಡ ಬಳಸಬಹುದು. ಇವು ಕೂಡ ಸೋಡಾದಂತೆಯೇ ಎಣ್ಣೆಯನ್ನು ಹೀರಿಕೊಳ್ಳುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories