Kosambari Recipe Viral: ಒಂದು ಸಾಮಾನ್ಯ ಕೋಸಂಬರಿ ರೆಸಿಪಿಗೆ 50 ಲಕ್ಷ ವೀವ್ಸ್ ಬಂದಿದ್ದು ಹೇಗೆ ಎಂಬುದನ್ನು ಫಿಟ್ನೆಸ್ ಇನ್ಫ್ಲುಯೆನ್ಸರ್ ವಿಶಾಲ್ ಚೌಹಾಣ್ ಉದಾಹರಣೆ ಸಹಿತ ವಿವರಿಸಿದ್ದಾರೆ. ಅವರು ನೀಡಿದ ಜೀವನ ಪಾಠದ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ.
ಒಂದೇ ಒಂದು ಅಡುಗೆಯ ರೀಲ್ಸ್ ಸೋಶಿಯಲ್ ಮೀಡಿಯಾದಲ್ಲಿ ಒಂದು ರೀಲ್ಸ್ ವೈರಲ್ ಆಗುವುದು ಹೇಗೆ? ಅಥವಾ ಜನರು ನಮ್ಮನ್ನು ಹೇಗೆ ಗುರುತಿಸುತ್ತಾರೆ? ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ ಫಿಟ್ನೆಸ್ ಇನ್ಫ್ಲುಯೆನ್ಸರ್ ವಿಶಾಲ್ ಚೌಹಾಣ್ (Vishal Chowhan). ಅವರು ಹಂಚಿಕೊಂಡಿರುವ ವಿಡಿಯೋವೊಂದು ಈಗ ಭಾರಿ ಸದ್ದು ಮಾಡುತ್ತಿದೆ. ಕೇವಲ ಒಂದು ಅಡುಗೆಯ ರೀಲ್ಸ್ ಮೂಲಕ ಅವರು ಜೀವನದ ಅತಿ ದೊಡ್ಡ ಪಾಠವೊಂದನ್ನು ಜನರಿಗೆ ತಿಳಿಸಿಕೊಟ್ಟಿದ್ದಾರೆ.
25
5 ಮಿಲಿಯನ್ ವೀವ್ಸ್ ತಂದುಕೊಟ್ಟ ಆ ಒಂದು 'ಕೋಸಂಬರಿ' ವಿಡಿಯೋ!
5 ಮಿಲಿಯನ್ ವೀವ್ಸ್ ತಂದುಕೊಟ್ಟ ಆ ಒಂದು 'ಕೋಸಂಬರಿ' ವಿಡಿಯೋ! ತಮ್ಮ ಇತ್ತೀಚಿನ ಪೋಸ್ಟ್‌ನಲ್ಲಿ ವಿಶಾಲ್ ಅವರು, ತಾವು ಹಾಕಿದ್ದ ಒಂದು ರೆಸಿಪಿ ವಿಡಿಯೋಗೆ ಬರೊಬ್ಬರಿ 5 ಮಿಲಿಯನ್ (50 ಲಕ್ಷ) ವೀಕ್ಷಣೆಗಳು ಬಂದಿರುವ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ವಿಶೇಷವೆಂದರೆ, ಅದು ಕೇವಲ ಒಂದು 'ಕೋಸಂಬರಿ' ಮಾಡುವ ವಿಡಿಯೋ ಆಗಿತ್ತು. ಆದರೆ ಅದಕ್ಕೆ ಅಷ್ಟೊಂದು ವೀವ್ಸ್ ಬರಲು ಕಾರಣ ಮಾತ್ರ ಆ ವಿಡಿಯೋದಲ್ಲಿದ್ದ 'ಪ್ಯಾಕೇಜಿಂಗ್ ಮತ್ತು ಪ್ರೆಸೆಂಟೇಶನ್' (Packaging and Presentation).
35
ಜನ ಜಡ್ಜ್ ಮಾಡ್ತಾರೆ, ಹಾಗಾಗಿ 'ಪ್ರೆಸೆಂಟೇಶನ್' ಮುಖ್ಯ!
ಜನ ಜಡ್ಜ್ ಮಾಡ್ತಾರೆ, ಹಾಗಾಗಿ 'ಪ್ರೆಸೆಂಟೇಶನ್' ಮುಖ್ಯ! "ನಮ್ಮ ಕಡೆ ಸಾಧಾರಣ ಬೌಲ್‌ನಲ್ಲಿ ಕೋಸಂಬರಿ ಮಾಡಿ ತೋರಿಸಿದರೆ ಜನ 'ಏ ಸೈಡ್‌ಗೆ ನಡಿ' ಅಂತಾರೆ. ಆದರೆ ಅದನ್ನೇ ಫ್ಯಾನ್ಸಿಯಾಗಿ, ಆಕರ್ಷಕವಾಗಿ ಪ್ರೆಸೆಂಟ್ ಮಾಡಿದರೆ ಜನ ಹೇಗೆ ಮುಗಿಬೀಳುತ್ತಾರೆ ನೋಡಿ" ಎಂದು ವಿಶಾಲ್ ವಿವರಿಸಿದ್ದಾರೆ. ಇದನ್ನೇ ಅವರು ಜೀವನಕ್ಕೂ ಅನ್ವಯಿಸಿಕೊಳ್ಳುವಂತೆ ಸಲಹೆ ನೀಡಿದ್ದಾರೆ.
ಇಂಟರ್ವ್ಯೂ ಅಥವಾ ಈವೆಂಟ್‌ಗಳಿಗೆ ಹೋಗುವಾಗ ನೀವು ಯಾವುದಾದರೂ ಮುಖ್ಯ ಸಂದರ್ಶನಕ್ಕೆ ಅಥವಾ ಕಾರ್ಯಕ್ರಮಕ್ಕೆ ಹೋಗುವಾಗ 'ಪ್ರೆಸೆಂಟಬಲ್' ಆಗಿರುವುದು ತುಂಬಾ ಮುಖ್ಯ. ಏಕೆಂದರೆ ಮೊದಲ ನೋಟದಲ್ಲೇ ಜನ ನಿಮ್ಮನ್ನು ಜಡ್ಜ್ ಮಾಡುತ್ತಾರೆ.
ಗ್ರೂಮಿಂಗ್ ಮತ್ತು ಹೈಜಿನ್: ನೀವು ಧರಿಸುವ ಬಟ್ಟೆ, ನೀವು ಕಾಪಾಡಿಕೊಳ್ಳುವ ಶುಚಿತ್ವ (Hygiene) ಪ್ರತಿಯೊಂದೂ ಮ್ಯಾಟರ್ ಆಗುತ್ತದೆ.
ದುಬಾರಿ ಬಟ್ಟೆಯೇ ಬೇಕಿಲ್ಲ: ಚೆನ್ನಾಗಿ ಕಾಣಲು ಬಟ್ಟೆ ದುಬಾರಿಯಾಗಿರಬೇಕಿಲ್ಲ. ಅಗ್ಗದ ದರದಲ್ಲೂ (Affordable) ಬೇಜಾನ್ ಆಯ್ಕೆಗಳು ಇರುತ್ತವೆ. ಆದರೆ ನಮಗೆ ಡ್ರೆಸ್ಸಿಂಗ್ ಸೆನ್ಸ್ ಇರಬೇಕು ಮತ್ತು ನಮ್ಮ ಗ್ರೂಮಿಂಗ್ ಮೇಲೆ ನಾವು ಕೆಲಸ ಮಾಡಬೇಕು.
55
ನೆಟ್ಟಿಗರ ಬೆಂಬಲ
ನೆಟ್ಟಿಗರ ಬೆಂಬಲ ವಿಶಾಲ್ ಚೌಹಾಣ್ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. "ನಿಜ, ಪ್ರಪಂಚವು ಮೊದಲು ಹೊರನೋಟವನ್ನು ನೋಡಿ ಆಮೇಲೆ ಗುಣವನ್ನು ಹುಡುಕುತ್ತದೆ" ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ, "ಎವರಿಥಿಂಗ್ ಮ್ಯಾಟರ್ಸ್" (ಪ್ರತಿಯೊಂದೂ ಮುಖ್ಯ) ಎನ್ನುವ ಇವರ ಮಾತು ಈಗ ಎಲ್ಲರ ಗಮನ ಸೆಳೆಯುತ್ತಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.