ಪಾಚಿಯಿರುವ ಜಾಗದಲ್ಲಿ ಈ ಪೌಡರ್ ಉದುರಿಸಿ.. ಬೇರಿನಿಂದಲೇ ಕಿತ್ತುಬಂದು, ಫುಲ್ ಕ್ಲೀನ್ ಆಗುತ್ತೆ!

Published : Jul 02, 2026, 11:33 AM IST

Rainy season home safety: ಮಳೆಗಾಲದಲ್ಲಿ ಹಸಿರು ಪಾಚಿ ಕಟ್ಟಿ ನೆಲ ಜಾರುವಂತಿದ್ದರೆ ಎಲ್ಲರಿಗೂ ದೊಡ್ಡ ತಲೆನೋವು. ಈ ಪಾಚಿಯನ್ನು ಹೋಗಲಾಡಿಸಲು ಗಂಟೆಗಟ್ಟಲೆ ಬ್ರಷ್‌ನಿಂದ ಉಜ್ಜಿ ಸುಸ್ತಾಗುವ ಬದಲು, ಅತಿ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಕ್ಲೀನ್ ಮಾಡುವ ಉಪಾಯ ಇಲ್ಲಿದೆ.

PREV
15
ಕಡಿಮೆ ಖರ್ಚು, ಸುಲಭವಾಗಿ ಕ್ಲೀನ್ ಆಗುತ್ತೆ

ಕಡಿಮೆ ಖರ್ಚು, ಸುಲಭವಾಗಿ ಕ್ಲೀನ್ ಆಗುತ್ತೆ
ಮಳೆಗಾಲದ ಹನಿಗಳು ಎಷ್ಟು ಆಹ್ಲಾದಕರವೋ, ಅವು ತಮ್ಮೊಂದಿಗೆ ಕೆಲವು ಕಿರಿಕಿರಿಗಳನ್ನೂ ತರುತ್ತವೆ. ಅದರಲ್ಲಿ ಮುಖ್ಯವಾದುದು ಮನೆಯ ಅಂಗಳ, ಬಾಲ್ಕನಿ ಮತ್ತು ಛಾವಣಿಯ ಮೇಲೆ ಕಾಣಿಸಿಕೊಳ್ಳುವ ಹಸಿರು ಅಥವಾ ಕಪ್ಪು ಬಣ್ಣದ ಪಾಚಿ (Moss/Algae). ಈ ಪಾಚಿ ಮನೆ ಅಂದಗೆಡಿಸುವುದಲ್ಲದೆ, ನೆಲವನ್ನು ತುಂಬಾನೇ ಜಾರುವಂತೆ (Slippery) ಮಾಡುತ್ತದೆ. ಇದರ ಮೇಲೆ ಕಾಲಿಟ್ಟರೆ ಸಮತೋಲನ ತಪ್ಪಿ ಬಿದ್ದು ಗಂಭೀರ ಗಾಯವಾಗುವ ಅಪಾಯವಿರುತ್ತದೆ. ಅದರಲ್ಲೂ ಮನೆಯಲ್ಲಿ ಮಕ್ಕಳು ಮತ್ತು ಹಿರಿಯರಿದ್ದರೆ ಈ ಪಾಚಿ ದೊಡ್ಡ ಕಂಟಕವೇ ಸರಿ. ಈ ಪಾಚಿಯನ್ನು ಹೋಗಲಾಡಿಸಲು ಗಂಟೆಗಟ್ಟಲೆ ಉಜ್ಜಿ ಸುಸ್ತಾಗುವ ಬದಲು, ಅತ್ಯಂತ ಕಡಿಮೆ ಖರ್ಚಿನಲ್ಲಿ ಸುಲಭವಾಗಿ ಹೇಗೆ ಕ್ಲೀನ್ ಮಾಡಬಹುದು ಎಂಬುದನ್ನು ಈ ಲೇಖನದಲ್ಲಿ ತಿಳಿಯೋಣ.

25
ಪಾಚಿ ನಿವಾರಣೆಗೆ 'ಬ್ಲೀಚಿಂಗ್ ಪೌಡರ್'

ಪಾಚಿ ನಿವಾರಣೆಗೆ ‘ಬ್ಲೀಚಿಂಗ್ ಪೌಡರ್’
ಪಾಚಿಯನ್ನು ಹೋಗಲಾಡಿಸಲು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಲಿಕ್ವಿಡ್‌ಗಳ ಅವಶ್ಯಕತೆಯಿಲ್ಲ. ಕ್ಲೀನಿಂಗ್ ಎಕ್ಸ್‌ಪರ್ಟ್ ಪ್ರಕಾರ, ನಮ್ಮ ಮನೆಯ ಹತ್ತಿರದ ಅಂಗಡಿಗಳಲ್ಲಿ ಸಿಗುವ ಬ್ಲೀಚಿಂಗ್ ಪೌಡರ್ (Bleaching Powder) ಇದಕ್ಕೆ ರಾಮಬಾಣ. ಇದು ಪಾಚಿಯನ್ನು ಬೇರಿನಿಂದಲೇ ಕಿತ್ತೆಸೆಯುವುದಲ್ಲದೆ, ಅಲ್ಲಿ ಬ್ಯಾಕ್ಟೀರಿಯಾಗಳು ಬೆಳೆಯದಂತೆ ತಡೆದು ಮತ್ತೆ ಪಾಚಿ ಬರದಂತೆ ನೋಡಿಕೊಳ್ಳುತ್ತದೆ.

35
ಬಳಸುವ ವಿಧಾನ

ಬಳಸುವ ವಿಧಾನ
ಹಂತ 1: ಪಾಚಿ ಇರುವ ಜಾಗದಲ್ಲಿ ನೀರು ನಿಂತಿರಬಾರದು. ತುಂಬಾ ನೀರಿದ್ದರೆ ಪೌಡರ್ ಅದರೊಂದಿಗೆ ಕೊಚ್ಚಿ ಹೋಗಿ ಅದರ ಪ್ರಭಾವ ಕಡಿಮೆಯಾಗುತ್ತದೆ.
ಹಂತ 2: ಒಣಗಿದ ಅಥವಾ ಸ್ವಲ್ಪ ತೇವವಿರುವ ಪಾಚಿಯ ಮೇಲೆ ಬ್ಲೀಚಿಂಗ್ ಪೌಡರ್ ಅನ್ನು ಸಮವಾಗಿ ಸಿಂಪಡಿಸಿ.
ಹಂತ 3: ಪೌಡರ್ ಹಾಕಿದ ಮೇಲೆ ಸುಮಾರು ಒಂದು ಗಂಟೆ ಕಾಲ ಹಾಗೆಯೇ ಬಿಡಿ. ಈ ಸಮಯದಲ್ಲಿ ಬ್ಲೀಚಿಂಗ್ ಪೌಡರ್ ಪಾಚಿಯ ಬೇರನ್ನು ಸಂಪೂರ್ಣವಾಗಿ ಸುಟ್ಟು ಹಾಕುತ್ತದೆ.
ಹಂತ 4: ಒಂದು ಗಂಟೆಯ ನಂತರ ಅದರ ಮೇಲೆ ನೀರು ಹಾಕಿ. ಆಗ ಪಾಚಿ ತನ್ನಷ್ಟಕ್ಕೆ ತಾನೇ ನೆಲವನ್ನು ಬಿಟ್ಟಿರುತ್ತದೆ. ಈಗ ಸಾಧಾರಣ ಪೊರಕೆ ಅಥವಾ ಬ್ರಷ್‌ನಿಂದ ಹಗುರವಾಗಿ ಉಜ್ಜಿ ನೀರು ಹಾಕಿದರೆ ನೆಲ ಫಳಫಳ ಹೊಳೆಯುತ್ತದೆ.

45
ಎಲ್ಲಿ ಬಳಸಬಹುದು ಮತ್ತು ಎಲ್ಲಿ ಬಳಸಬಾರದು?

ಎಲ್ಲಿ ಬಳಸಬಹುದು ಮತ್ತು ಎಲ್ಲಿ ಬಳಸಬಾರದು?
ಬ್ಲೀಚಿಂಗ್ ಪೌಡರ್ ಅನ್ನು ಸಿಮೆಂಟ್, ಟೈಲ್ಸ್ ಅಥವಾ ಕಾಂಕ್ರೀಟ್ ನೆಲದ ಮೇಲೆ ಮಾತ್ರ ಬಳಸಿ. ನೀರಿನ ಟ್ಯಾಂಕ್‌ನ ಹೊರಭಾಗ ಅಥವಾ ಅಂಗಳಕ್ಕೆ ಇದು ಬೆಸ್ಟ್. ಆದರೆ, ಮರದ ಬಾಲ್ಕನಿ ಅಥವಾ ಬಣ್ಣ ಹಚ್ಚಿದ ಗೋಡೆಗಳ ಮೇಲೆ ಇದನ್ನು ಬಳಸಬೇಡಿ, ಏಕೆಂದರೆ ಇದು ಅವುಗಳ ಬಣ್ಣ ಮತ್ತು ಫಿನಿಶಿಂಗ್ ಹಾಳುಮಾಡಬಹುದು.

55
ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ವಹಿಸಿ

ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ವಹಿಸಿ
*ಬ್ಲೀಚಿಂಗ್ ಪೌಡರ್ ಒಂದು ಕೆಮಿಕಲ್. ಆದ್ದರಿಂದ ಬಳಸುವಾಗ ಎಚ್ಚರಿಕೆ ಅಗತ್ಯ.
*ಪೌಡರ್ ಹಾಕುವಾಗ ಕೈಗಳಿಗೆ ಗವಸು (Gloves) ಮತ್ತು ಮುಖಕ್ಕೆ ಮಾಸ್ಕ್ ಧರಿಸಿ. ಇದರ ವಾಸನೆ ನೇರವಾಗಿ ಶ್ವಾಸಕೋಶಕ್ಕೆ ಹೋಗದಂತೆ ನೋಡಿಕೊಳ್ಳಿ.
*ನೆಲವನ್ನು ಪೂರ್ತಿಯಾಗಿ ತೊಳೆದು ಮುಗಿಸುವವರೆಗೆ ಮಕ್ಕಳು ಮತ್ತು ಸಾಕುಪ್ರಾಣಿಗಳನ್ನು ಆ ಜಾಗದಿಂದ ದೂರವಿಡಿ.
*ಮಳೆಗಾಲದ ಉದ್ದಕ್ಕೂ 15 ರಿಂದ 20 ದಿನಕ್ಕೊಮ್ಮೆ ಈ ಕೆಲಸ ಮಾಡಿದರೆ ನೆಲ ಜಾರುವುದನ್ನು ತಪ್ಪಿಸಬಹುದು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories