ನಿಮ್ಮ ಇಮ್ಯೂನಿಟಿ ಕಡಿಮೆ ಆಗೋಕೆ ಹಳೆಯ ದಿಂಬೇ ಕಾರಣವಿರಬಹುದು! ಎಚ್ಚರಿಕೆ ಕೊಟ್ರು ಡಾಕ್ಟರ್

Published : Jul 01, 2026, 11:21 PM IST

Immunity boosting tips: ದಿಂಬಿನಿಂದ ಆರೋಗ್ಯದ ಮೇಲೆ ಉಂಟಾಗುವ ದುಷ್ಪರಿಣಾಮಗಳು ಮತ್ತು ಅದನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಬಗ್ಗೆ ತಜ್ಞ ವೈದ್ಯರು ನೀಡಿದ ಎಚ್ಚರಿಕೆ ಇಲ್ಲಿದೆ. 

PREV
14
ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತೆ

ರೋಗನಿರೋಧಕ ಶಕ್ತಿಯನ್ನು ಕುಗ್ಗಿಸುತ್ತೆ
ದಿನವಿಡೀ ಕೆಲಸ ಮಾಡಿ ದಣಿದು ಬಂದಾಗ ಮೃದುವಾದ ದಿಂಬಿನ ಮೇಲೆ ತಲೆಯಿಟ್ಟು ಮಲಗಿದರೆ ಸಿಗುವ ಸುಖವೇ ಬೇರೆ. ಆದರೆ, ನಮಗೆ ನೆಮ್ಮದಿಯ ನಿದ್ದೆ ನೀಡುವ ಇದೇ ದಿಂಬು ಶತ್ರುವಾಗಬಹುದು ಎಂದರೆ ನೀವು ನಂಬುತ್ತೀರಾ? ಹೌದು, ದಿಂಬಿನ ಸ್ವಚ್ಛತೆಯ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಅದು ನಮ್ಮ ರೋಗನಿರೋಧಕ ಶಕ್ತಿಯನ್ನು (Immune System) ಹೇಗೆ ಕುಗ್ಗಿಸುತ್ತದೆ ಮತ್ತು ಯಾವೆಲ್ಲಾ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂಬ ಬಗ್ಗೆ ವೈದ್ಯರು ಮಹತ್ವದ ಮಾಹಿತಿ ನೀಡಿದ್ದಾರೆ.

24
ಏನೆಲ್ಲಾ ಆಗುತ್ತೆ?

ಏನೆಲ್ಲಾ ಆಗುತ್ತೆ?
ಡಾ. ತರಂಗ್ ಕೃಷ್ಣ ಅವರ ಪ್ರಕಾರ, ನಾವು ಪ್ರತಿದಿನ ಬಳಸುವ ದಿಂಬು ಕ್ರಮೇಣ ನಮ್ಮ ಇಮ್ಯೂನಿಟಿ ಮೇಲೆ ಪರಿಣಾಮ ಬೀರುತ್ತದೆ

ಬ್ಯಾಕ್ಟೀರಿಯಾಗಳ ತಾಣ: ದಿಂಬಿನ ಕವರ್ ಪ್ರತಿದಿನ ಧೂಳನ್ನು ಹೀರಿಕೊಳ್ಳುತ್ತದೆ. ಇದರಿಂದ ಅದರೊಳಗೆ ಬ್ಯಾಕ್ಟೀರಿಯಾಗಳು ವೇಗವಾಗಿ ಬೆಳೆಯುತ್ತವೆ.

ಶ್ವಾಸಕೋಶಕ್ಕೆ ಧೂಳು: ನಾವು 6 ರಿಂದ 8 ಗಂಟೆಗಳ ಕಾಲ ದಿಂಬಿನ ಮೇಲೆ ತಲೆಯಿಟ್ಟು ಮಲಗಿದಾಗ, ಶ್ವಾಸದ ಮೂಲಕ ಆ ಧೂಳು ಮತ್ತು ಸೂಕ್ಷ್ಮ ಬ್ಯಾಕ್ಟೀರಿಯಾಗಳನ್ನು ಒಳಗೆ ಎಳೆದುಕೊಳ್ಳುತ್ತೇವೆ.

ಇನ್ಫೆಕ್ಷನ್ ಅಪಾಯ: ಆರಂಭದಲ್ಲಿ ನಮ್ಮ ದೇಹವು ಇದರ ವಿರುದ್ಧ ಹೋರಾಡುತ್ತದೆ. ಆದರೆ ವರ್ಷಗಟ್ಟಲೆ ಒಂದೇ ದಿಂಬನ್ನು ಬಳಸುವುದರಿಂದ ದೇಹದಲ್ಲಿ ಇನ್ಫೆಕ್ಷನ್ ಹೆಚ್ಚಾಗಿ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುತ್ತದೆ. ಇದರಿಂದ ಪದೇ ಪದೇ ಶೀತ, ಕೆಮ್ಮು ಮತ್ತು ಅಲರ್ಜಿ ಕಾಣಿಸಿಕೊಳ್ಳುತ್ತದೆ.

34
ಅನೇಕ ಆರೋಗ್ಯ ಸಮಸ್ಯೆಗಳು

ಅನೇಕ ಆರೋಗ್ಯ ಸಮಸ್ಯೆಗಳು
ದಿಂಬಿನ ಸ್ವಚ್ಛತೆ ಕಾಪಾಡದಿದ್ದರೆ ಈ ಕೆಳಗಿನ ಆರೋಗ್ಯ ಸಮಸ್ಯೆಗಳು ಎದುರಾಗಬಹುದು
ಮುಖದ ಮೇಲೆ ಮೊಡವೆಗಳು (Acne).
ಪದೇ ಪದೇ ಕಾಣಿಸಿಕೊಳ್ಳುವ ಶೀತ ಮತ್ತು ಕೆಮ್ಮು.
ರೋಗನಿರೋಧಕ ಶಕ್ತಿ ಕುಂದುವುದು.
ಉಸಿರಾಟದ ತೊಂದರೆ ಮತ್ತು ದೀರ್ಘಕಾಲದ ಅಲರ್ಜಿ.

44
ದಿಂಬನ್ನು ಯಾವಾಗ ಬದಲಿಸಬೇಕು?

ದಿಂಬನ್ನು ಯಾವಾಗ ಬದಲಿಸಬೇಕು?
6 ತಿಂಗಳಿಗೊಮ್ಮೆ ಬದಲಿಸಿ: ದಿಂಬನ್ನು ವರ್ಷಗಟ್ಟಲೆ ಬಳಸುವ ಬದಲು ಪ್ರತಿ 6 ತಿಂಗಳಿಗೊಮ್ಮೆ ಹೊಸ ದಿಂಬನ್ನು ಖರೀದಿಸುವುದು ಉತ್ತಮ.

ವ್ಯಾಕ್ಯೂಮ್ ಕ್ಲೀನಿಂಗ್: ಸಾಧ್ಯವಾದರೆ ಪ್ರತಿದಿನ ದಿಂಬನ್ನು ವ್ಯಾಕ್ಯೂಮ್ ಮಾಡಿ ಧೂಳು ತೆಗೆಯಿರಿ.

ಕವರ್ ಬದಲಿಸಿ: ಕನಿಷ್ಠ ವಾರಕ್ಕೆ ಎರಡು ಬಾರಿಯಾದರೂ ದಿಂಬಿನ ಕವರ್ ಬದಲಾಯಿಸಿ. ಬೆಡ್‌ಶೀಟ್ ಬದಲಿಸುವಾಗ ದಿಂಬಿನ ಕವರ್ ಬದಲಿಸುವುದನ್ನು ಮರೆಯಬೇಡಿ.

ಬಿಸಿಲಿಗೆ ಹಾಕಿ: ಪ್ರತಿ ಭಾನುವಾರ ದಿಂಬನ್ನು ಕನಿಷ್ಠ ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಒಣಗಿಸಿ. ಸೂರ್ಯನ ಶಾಖದಿಂದ ದಿಂಬಿನಲ್ಲಿರುವ ಬ್ಯಾಕ್ಟೀರಿಯಾಗಳು ಸಾಯುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories