ಮದ್ಯಪ್ರಿಯರಿಗೆ ಗುಡ್ ನ್ಯೂಸ್, ಕೇಂದ್ರದ ಟ್ರೇಡ್ ಡೀಲ್‌ನಿಂದ ಯುಕೆ ವಿಸ್ಕಿ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಲಭ್ಯ

Published : Jul 15, 2026, 12:43 PM IST

ಭಾರತ ಯುಕೆ ಟ್ರೇಡ್ ಒಪ್ಪಂದ ಜಾರಿಗೆ ಬಂದಿದೆ. ಇದರ ಪರಿಣಾಮ ವಿದೇಶಿ ಮದ್ಯ ಇದೀಗ ಕಡಿಮೆ ಬೆಲೆಯಲ್ಲಿ ಭಾರತದಲ್ಲಿ ಲಭ್ಯವಾಗಿದೆ. ಮದ್ಯಪ್ರಿಯರಿಗೆ ಇದೀಗ ಯುಕೆಯ ಪ್ರೀಮಿಯಂ ವಿಸ್ಕಿ, ಜಿನ್ ಬೆಲೆ ಅತೀ ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ.

PREV
16
FTA ನೀತಿ ಜಾರಿ, ಮದ್ಯಪ್ರಿಯರಿಗೆ ಸಿಹಿ ಸುದ್ದಿ

ಭಾರತ ಹಾಗೂ ಯುಕೆ ನಡುವೆ ಪ್ರಧಾನಿ ನರೇಂದ್ರ ಮೋದಿ ಕಳೆದ ಬಾರಿ ಮುಕ್ತ ವ್ಯಾಪರ ಒಪ್ಪಂದಕ್ಕೆ (Free Trade Agreement - FTA)ಸಹಿ ಮಾಡಿದ್ದರು. ಇದೀಗ ಈ ಎಫ್‌ಟಿಎ ಜಾರಿಗೆ ಬಂದಿದೆ. ಈ ಒಪ್ಪಂದದಿಂದ ಬ್ರಿಟನ್‌ನಿಂದ ಭಾರತಕ್ಕೆ ಆಮದು ಮಾಡಿಕೊಳ್ಳುತ್ತಿದ್ದ ವಸ್ತುಗಳ ಮೇಲಿನ ತೆರಿಗೆ ಗಣನೀಯವಾಗಿ ಇಳಿಕೆಯಾಗಲಿದೆ. ಪರಿಣಾಮ ಮದ್ಯಪ್ರಿಯರಿಗೆ ಸಿಹಿ ಸುದ್ದಿ ಸಿಕ್ಕಿದೆ. ಕಾರಣ ಯುಕೆಯ ಪ್ರೀಮಿಯಂ ವಿಸ್ಕಿ, ಜಿನ್ ಸೇರಿದಂತೆ ಪ್ರತಿಷ್ಠಿತ ಬ್ರ್ಯಾಂಡ್ ಇದೀಗ ಭಾರತದಲ್ಲಿ ಕಡಿಮೆ ಬೆಲೆಯಲ್ಲಿ ಲಭ್ಯವಾಗುತಿದೆ.

26
ಬ್ರಿಟನ್‌ನಿಂದ ಭಾರತಕ್ಕೆ ಬರುತ್ತಿರುವ ಮದ್ಯ ಬ್ರ್ಯಾಂಡ್ ಯಾವುದು?

ಬ್ರಿಟನ್‌ನಿಂದ ಹಲವು ಪ್ರಸಿದ್ಧ ಬ್ರ್ಯಾಂಡ್ ಭಾರತದಲ್ಲಿ ಇನ್ನು ಕಡಿಮೆ ಬೆಲೆಯಲ್ಲಿ ಲಭ್ಯವಾಗುತ್ತಿದೆ. ಪ್ರೀಮಿಯಂ ಸ್ಕಾಚ್ ವಿಸ್ಕಿ, ಲಂಡನ್ ಡ್ರೈಜಿನ್, ಪ್ರೀಮಿಯಂ ಬ್ರ್ಯಾಂಡಿ, ವೋಡ್ಕಾ ಭಾರತದಲ್ಲಿ ಅತೀ ಹೆಚ್ಚು ಜನಪ್ರಿಯತೆ ಹೊಂದಿದೆ. ಟ್ರೇಡ್ ಡೀಲ್ ಒಪ್ಪಂದಕ್ಕೂ ಮೊದಲು ಈ ಬ್ರ್ಯಾಂಡ್ ಲಭ್ಯವಿತ್ತು. ಇದೀಗ ಸುಂಕ ಇಳಿಕೆಯಿಂದ ಕಡಿಮೆ ಬೆಲೆಯಲ್ಲಿ ಲಭ್ಯವಿದೆ.

36
ಶೇಕಡಾ 50ರಷ್ಟು ಆಮದು ಸುಂಕ ಇಳಿಕೆ.

ಟ್ರೇಡ್ ಡೀಲ್ ಒಪ್ಪಂದ ಪ್ರಕಾರ ಬ್ರಿಟನ್ ಸರಕುಗಳ ಆಮದು ಮಾಡುವಾಗ ಆಮದು ಸುಂಕ ಶೇಕಡಾ 150ರಷ್ಟು ಪಾವತಿಸಬೇಕಿತ್ತು. ಇದೀಗ ಶೇಕಡಾ 75ಕ್ಕೆ ಇಳಿಕೆ ಮಾಡಲಾಗಿದೆ. ಅರ್ಧಕ್ಕರ್ಧ ಆಮದು ಸುಂಕ ಇಳಿಕೆಯಾಗಿದೆ. ಇಷ್ಟೇ ಅಲ್ಲ ಮುಂದಿನ 10 ವರ್ಷಗಳಲ್ಲಿ ಈ ಸಂಕ ಹಂತ ಹಂತವಾಗಿ ಶೇಕಡಾ 40ಕ್ಕೆ ಇಳಿಕೆಯಾಗಲಿದೆ. ಹೀಗಾಗಿ ಇನ್ನು ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಬೆಲೆ ಇಳಿಕೆಯಾಗುತ್ತಲೇ ಹೋಗಲಿದೆ.

46
ಮದ್ಯದ ಮೇಲಿನ ಸುಂಕದ ವಿವರ

ಬ್ರಿಟನ್‌ನಿಂದ ಆಮದು ಮಾಡಿಕೊಳ್ಳುವ ಸರಕಗುಲ ಮೇಲೆ ಶೇಕಡಾ 50ರಷ್ಟು ಸುಂಕ ಇಳಿಕೆ ಮಾಡಲಾಗಿದೆ. ಆದರೆ ಪ್ರೀಮಿಯಂ ವಿದೇಶಿ ಮದ್ಯದ ಬೆಲೆಯಲ್ಲಿ ಶೇಕಡಾ 50ರಷ್ಟು ಇಳಿಕೆಯಾಗಲ್ಲ. ಮದ್ಯ ಬೆಲೆ ಶೇಕಡಾ 5 ರಿಂದ ಶೇಕಡಾ 10ರಷ್ಟು ಇಳಿಕೆಯಾಗುವ ಸಾಧ್ಯತೆ ಇದೆ. ಸದ್ಯ ದುಬಾರಿ ಬೆಲೆಯಲ್ಲಿದ್ದ ಮದ್ಯಗಳು ಬೆಲೆ ಕೈಗೆಟುಕುವ ದರದಲ್ಲಿ ಲಭ್ಯವಾಗಲಿದೆ.

56
ಭಾರತದಲ್ಲಿರುವ ಬ್ರಿಟನ್ ಜನಪ್ರಿಯ ಮದ್ಯ ಬ್ರ್ಯಾಂಡ್

ಸ್ಕಾಚ್ ವಿಸ್ಕಿಯಲ್ಲಿ ಜಾನಿ ವಾಕರ್ (ರೆಡ್, ಬ್ಲಾಕ್ ಲೇಬಲ್), ವ್ಯಾಟ್ 69, ದಿ ಮೆಕಲನ್, ಚಿವಾಸ್ ರೀಗಲ್, ಗ್ಲೆನ್‌ಫಿಡಿಚ್, ಬ್ಯಾಲೆಂಟೈನ್ಸ್ ಭಾರತದಲ್ಲಿ ಹೆಚ್ಚು ಜನಪ್ರಿಯ ಬ್ರ್ಯಾಂಡ್ ಆಗಿದೆ. ಇನ್ನು ಜಿನ್ ವಿಭಾಗದಲ್ಲಿ ಗಾರ್ಡನ್ಸ್, ಬಾಂಬೆ ಸೈಫರ್, ಟ್ಯಾಂಕ್ವೆರೆ ಸೇರಿದಂತೆ ಇತರ ಕೆಲ ಜಿನ್ ಜನಪ್ರಿಯವಾಗಿದೆ.

66
ಮುಕ್ತ ವ್ಯಾಪಾರ ವಹಿವಾಟು ರಿಲೀಫ್

ಭಾರತ ಹಾಗೂ ಯುಕೆ ನಡುವಿನ ಮುಕ್ತ ವ್ಯಾಪಾರ ವಹಿವಾಟು ಒಪ್ಪಂದದಿಂದ ಪ್ರೀಮಿಯಂ ಮದ್ಯ ಬಯಸುವ ಮಂದಿಗೆ ಸಣ್ಣ ರಿಲೀಫ್ ಸಿಗಲಿದೆ. ಬೆಲೆಯಲ್ಲಿ ಶೇಕಡಾ 10ರಷ್ಟು ಇಳಿಕೆಯಾಗಲಿದೆ. ಮುಂದಿನ ದಿನಗಳಲ್ಲಿ ಈ ಬೆಲೆ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳಿವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories