ನಟ ಆಮೀರ್ ಖಾನ್ ಮೂರನೇ ಬಾರಿಗೆ ಹಿಂದೂ ಮಹಿಳೆಯನ್ನು ಮದುವೆಯಾಗಿರುವುದು 'ಲವ್ ಜಿಹಾದ್' ಆರೋಪ ಮತ್ತು ಫತ್ವಾ ಹೊರಡಿಸಲು ಕಾರಣವಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಆಮೀರ್, ತಾನು ಯಾರನ್ನೂ ಮತಾಂತರ ಮಾಡಿಲ್ಲ ಮತ್ತು ತನ್ನ ಕುಟುಂಬದಲ್ಲಿಯೂ ಅಂತರಧರ್ಮೀಯ ವಿವಾಹಗಳು ನಡೆದಿವೆ ಎಂದು ಸ್ಪಷ್ಟಪಡಿಸಿದ್ದಾರೆ.
3ನೇ ಬಾರಿ ಹಿಂದೂ ಮಹಿಳೆಯನ್ನು ಮದುವೆಯಾಗುವ ಮೂಲಕ ಇಡೀ ದೇಶದ ಕೇಂದ್ರಬಿಂದುವಾಗಿದ್ದಾರೆ ನಟ ಆಮೀರ್ ಖಾನ್. ಈ ಹಿಂದೆ ಎರಡು ಬಾರಿ ಹಿಂದೂ ಮಹಿಳೆಯರನ್ನೇ ಮದುವೆಯಾಗಿದ್ದರೂ, ಸೋಷಿಯಲ್ ಮೀಡಿಯಾ ಇಷ್ಟು ಸ್ಟ್ರಾಂಗ್ ಇಲ್ಲದೇ ಇದ್ದ ಹಿನ್ನೆಲೆಯಲ್ಲಿ ಪತ್ರಿಕೆಗಳಲ್ಲಿ ಸುದ್ದಿಯಾಗಿತ್ತು ಬಿಟ್ಟರೆ, ಅದು ಇಷ್ಟೊಂದು ಟ್ರೋಲ್ ಆಗಿರಲಿಲ್ಲ. ಆದರೆ ಇದೀಗ ಮೂರನೆಯ ಬಾರಿಯೂ ಹಿಂದೂವನ್ನೇ ಆಯ್ಕೆ ಮಾಡಿಕೊಂಡಿರುವುದು ಹಾಗೂ ತಮ್ಮ ಹಿಂದಿನ ಎಲ್ಲಾ ಮಕ್ಕಳಿಗೂ ಖಾನ್ ಸರ್ನೇಮ್ ಕೊಟ್ಟು, ಮುಸ್ಲಿಂ ಸಮುದಾಯಕ್ಕೆ ಸೇರಿಸಿಕೊಂಡಿರುವ ಬಗ್ಗೆ ಇದೀಗ ಎಲ್ಲೆಡೆಯಿಂದ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.
26
ಫತ್ವಾಗೆ ನಟ ಪ್ರತಿಕ್ರಿಯೆ
ಇದು ಈ ಪರಿ ಚರ್ಚೆಯಾಗುತ್ತಲೇ ಆಮೀರ್ ಖಾನ್ ವಿರುದ್ಧ ಮುಸ್ಲಿಂ ವೈಯಕ್ತಿಕ ದಾರುಲ್ ಇಫ್ತಾದ ರಾಜಮನೆತನದ ಮುಫ್ತಿ ಮೌಲಾನಾ ಇಬ್ರಾಹಿಂ ಹುಸೇನ್ ಫತ್ವಾ ಕೂಡ ಹೊರಡಿಸಿದ್ದಾರೆ. ಮುಸ್ಲಿಮೇತರ ಮಹಿಳೆಯನ್ನು ಮದುವೆಯಾಗುವುದು ಶೆರಿಯಾ ಕಾನೂನಿನ ವಿರುದ್ಧ, ಮುಸ್ಲಿಂ ಪುರುಷರು ನಂಬಿಕೆಯುಳ್ಳ ಮುಸ್ಲಿಂ ಮಹಿಳೆಯರನ್ನು ಮದುವೆಯಾಗಲು ಅನುಮತಿ ಇದೆ ಎಂದು ಅಲ್ಲಾಹನು ಕುರಾನ್‌ನಲ್ಲಿ ಆದೇಶಿಸಿದ್ದಾರೆ. ಯಾರಾದರೂ ಮದುವೆಯಾಗಿ ತಮ್ಮ ಪ್ರತಿಜ್ಞೆಗಳನ್ನು ಪೂರೈಸಲು ವಿಫಲವಾದರೆ, ಅವನು ಪಾಪಿ ಎಂದು ಅಲ್ಲಾಹನು ಹೇಳಿದ್ದಾರೆ. ಈ ವಿವಾಹ ಹರಾಮ್ ಎಂದಿದ್ದಾರೆ.
36
ಲವ್ ಜಿಹಾದ್ ಮಾಡಿಲ್ಲ
ಇದಕ್ಕೆ ಈಗ ನಟ ಆಮೀರ್ ಖಾನ್ ತಿರುಗೇಟು ನೀಡಿದ್ದಾರೆ. ನಾನು ಯಾರನ್ನೂ ಲವ್ ಜಿಹಾದ್ ಮಾಡಿಲ್ಲ. ಮತಾಂತರವನ್ನೂ ಮಾಡಲಿಲ್ಲ ಎಂದಿದ್ದಾರೆ. ತಮ್ಮ ಮಗಳು ಮತ್ತು ಸಹೋದರಿಯರು ಹಿಂದೂಗಳನ್ನು ಮದುವೆಯಾಗಿದ್ದಾರೆ. ಎಲ್ಲಿಯೂ ಮತಾಂತರ ನಡೆದಿಲ್ಲ ಎಂದಿದ್ದಾರೆ.
ನಮ್ಮ ಕುಟುಂಬವು ತುಂಬಾ ಸ್ನೇಹಪರ ಮತ್ತು ಎಲ್ಲರನ್ನೂ ಒಳಗೊಳ್ಳುವ ಕುಟುಂಬವಾಗಿದೆ. ನನ್ನ ಇಬ್ಬರೂ ಸಹೋದರಿಯರು ಹಿಂದೂಗಳನ್ನು ಮದುವೆಯಾಗಿದ್ದಾರೆ ಮತ್ತು ನನ್ನ ಮಗಳು ಕೂಡ ಹಿಂದೂವನ್ನು ಮದುವೆಯಾಗಿದ್ದಾಳೆ. ನನ್ನ ಸೋದರಸಂಬಂಧಿ ಮನ್ಸೂರ್ ಕ್ರಿಶ್ಚಿಯನ್ ಮಹಿಳೆಯನ್ನು ಮದುವೆಯಾಗಿದ್ದಾರೆ. ಗೌರಿ, ರೀನಾ ಮತ್ತು ಕಿರಣ್ ನನ್ನನ್ನು ಮದುವೆಯಾದಾಗ ಮತಾಂತರಗೊಂಡಿಲ್ಲ, ಏಕೆಂದರೆ ನಮ್ಮ ಮದುವೆ ನಾಗರಿಕ ವಿವಾಹವಾಗಿತ್ತು. ಗೌರಿ ಹಿಂದೂ ಅಲ್ಲ, ಅವಳು ಕ್ರಿಶ್ಚಿಯನ್ ಎಂದಿದ್ದಾರೆ ಆಮೀರ್ ಖಾನ್.
56
ಹಿಂದೂ ಸಮುದಾಯ ಗುರಿ
ಬಿಹಾರದ ಫೋರ್ಬ್ಸ್‌ಗಂಜ್‌ನಲ್ಲಿ ಬಜರಂಗದಳ ಕಾರ್ಯಕರ್ತರು ಆಮೀರ್ ಖಾನ್ ಅವರನ್ನು ಲವ್ ಜಿಹಾದ್ ಆರೋಪ ಮಾಡಿ ಅವರ ಪ್ರತಿಕೃತಿಯನ್ನು ಸುಟ್ಟುಹಾಕಿದರು. ಆಮೀರ್ ಉದ್ದೇಶಪೂರ್ವಕವಾಗಿ ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಬಜರಂಗದಳ ಆರೋಪಿಸಿದೆ.
66
ಐಷಾರಾಮಿ ಬಂಗ್ಲೆ
ಮುಂಬೈನ ಐಷಾರಾಮಿ ಪಾಲಿ ಹಿಲ್ ಪ್ರದೇಶವಾದ ಬಾಂದ್ರಾ ಪಶ್ಚಿಮದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ ಬಹು-ಪೀಳಿಗೆಯ 'ಸ್ಕೈವಿಲ್ಲಾ'ವನ್ನು ನಿರ್ಮಿಸುತ್ತಿರುವುದಾಗಿ ವರದಿಗಳಿಗೆ ಅಮೀರ್ ಖಾನ್ ಸ್ಪಷ್ಟಪಡಿಸಿದ್ದಾರೆ. "ಮುಂಬೈನ ಉಳಿದ ಭಾಗಗಳಂತೆ, ನಮ್ಮ ಅಪಾರ್ಟ್ಮೆಂಟ್ ಸಂಕೀರ್ಣವನ್ನು ಸಹ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ನಾನು ಸೇರಿದಂತೆ 24 ಸದಸ್ಯರನ್ನು ಹೊಂದಿರುವ ನಮ್ಮ ವಸತಿ ಸಮಾಜವು ಈ ನಿರ್ಧಾರವನ್ನು ತೆಗೆದುಕೊಂಡಿದೆ ಎಂದಿದ್ದಾರೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.