Footwear Cleaning: ಚಪ್ಪಲಿ ಕಪ್ಪು ಬಣ್ಣಕ್ಕೆ ತಿರುಗಿದಾಗ ಹೊಸದರಂತೆ ಕಾಣಲು ಜಸ್ಟ್ ಈ ಟ್ರಿಕ್ ಬಳಸಿ

Published : Feb 10, 2026, 02:56 PM IST

Clean Sandals At Home: ಚಪ್ಪಲಿಗಳ ಮೇಲಿನ ಕಪ್ಪು ಕಲೆಯ ಗುರುತು ನೋಡಿ  ಬೇಸರವಾಗಿ  ಎಸೆಯಬೇಕೆಂದು ಕೊಂಡಿದ್ದೀರಾ?. ಇನ್ನು ಮುಂದೆ  ನಿಮ್ಮ ಮಸುಕಾದ ಚಪ್ಪಲಿಯನ್ನು ಎಸೆಯುವ ಅಗತ್ಯವಿಲ್ಲ. ಈ ಸುಲಭ ಮನೆಮದ್ದು ಬಳಸಿ . ಚಪ್ಪಲಿಯನ್ನು ಮತ್ತೆ ಹೊಸದರಂತೆ, ಮಿಂಚುವಂತೆ ಮಾಡಬಹುದು. 

PREV
17
ಕಪ್ಪು ಬಣ್ಣಕ್ಕೆ ತಿರುಗಿದಾಗ

ಹೊಸ ಚಪ್ಪಲಿ ಅಥವಾ ಸ್ಯಾಂಡಲ್ ತೆಗೆದುಕೊಂಡಾಗ ಎಷ್ಟು ಖುಷಿ ಇರುತ್ತೋ ತೆಗೆದುಕೊಂಡ ಕೆಲವೇ ದಿನಕ್ಕೆ ಅವು ಕಪ್ಪು ಬಣ್ಣಕ್ಕೆ ತಿರುಗಿದಾಗ ಅಷ್ಟೇ ಬೇಸರವಾಗುತ್ತದೆ. ವಿಶೇಷವಾಗಿ ಹಿಮ್ಮಡಿ ಮತ್ತು ಕಾಲ್ಬೆರಳಿನ ಗುರುತನ್ನು ತೋರಿಸುವ ಈ ಕಲೆಗಳು ಚಪ್ಪಲಿಯನ್ನ ಹಳತರಂತೆ ಕಾಣುವಂತೆ ಮಾಡುತ್ತವೆ. ಆಗ ಬಹುತೇಕರು ಹೊಸ ಚಪ್ಪಲಿ ಖರೀದಿಸಲು ಮುಂದಾಗುತ್ತಾರೆ. ಹಳೆಯದನ್ನು ಎಸೆಯುತ್ತಾರೆ.

27
ಕಲೆಗಳಿಗೆ ಕಾರಣವೇನು?

ಅಂದಹಾಗೆ ಚಪ್ಪಲಿ ಮೇಲೆ ಕಲೆ ಸುಮ್ಮನೆಯಾಗಲ್ಲ ನೆನಪಿರಲಿ. ಅದಕ್ಕೂ ಕಾರಣವಿದೆ. ಬೆವರು, ಧೂಳು, ಕೊಳಕು, ಬಿಸಿಲು ಮತ್ತು ಚರ್ಮದ ಎಣ್ಣೆಯಿಂದಲೇ ಚಪ್ಪಲಿ ಮೇಲೆ ಹೆಜ್ಜೆ ಗುರುತುಗಳು ಅಚ್ಚೊತ್ತುತ್ತವೆ. ಆಗ ಕೆಲವರು ಚಪ್ಪಲಿಯನ್ನ ಒದ್ದೆಯಾದ ಬಟ್ಟೆಯಿಂದ ಒರೆಸಲು ಟ್ರೈ ಮಾಡುತ್ತಾರೆ. ಅಷ್ಟೇ ಏಕೆ, ಸೋಪಿನಿಂದ ತೊಳೆಯುತ್ತಾರೆ. ಆ ಗುರುತು ಆಗಲೂ ಹೋಗಲ್ಲ.

37
ಮನೆಮದ್ದು ಟ್ರೈ ಮಾಡಿ

ಆಗ ಎಲ್ಲರಿಗೂ ಒಂದು ಪ್ರಶ್ನೆ ಉದ್ಭವಿಸುತ್ತದೆ. ಚಪ್ಪಲಿಗಳ ಮೇಲಿನ ಹೆಜ್ಜೆ ಗುರುತನ್ನು ಸುಲಭವಾಗಿ ತೆಗೆದುಹಾಕುವುದು ಹೇಗೆ?. ಇನ್ನು ಮುಂದೆ ಕಲೆಯಾಗಿರುವ ಚಪ್ಪಲಿ ಎಸೆಯುವ ಬದಲು ಮನೆಮದ್ದನ್ನು ಉಪಯೋಗಿಸಿ. ಈ ಮನೆಮದ್ದು ಚಪ್ಪಲಿ ಮತ್ತೆ ಹೊಸದರಂತೆ ಕಾಣುವಂತೆ ಮಾಡುತ್ತದೆ.

47
ಮೊದಲಿಗೆ ಡ್ರೈ ಬ್ರಷ್ ತೆಗೆದುಕೊಳ್ಳಿ

ಮೊದಲು ಚಪ್ಪಲಿಯನ್ನು ಹಳೆಯ ಟೂತ್‌ಬ್ರಷ್ ಅಥವಾ ಮೃದುವಾದ ಬ್ರಷ್‌ನಿಂದ ಚಪ್ಪಲಿ ಸಂಪೂರ್ಣ ಮೇಲ್ಮೈಯನ್ನು ನಿಧಾನವಾಗಿ ಸ್ವಚ್ಛಗೊಳಿಸಿ. ಇದು ಸಂಗ್ರಹವಾದ ಯಾವುದೇ ಧೂಳನ್ನು ತೆಗೆಯುತ್ತದೆ.

57
ಪೇಸ್ಟ್ ಮಾಡಿ

ಒಂದು ಬಟ್ಟಲಿಗೆ ಒಂದು ಚಮಚ ಅಡುಗೆಸೋಡಾ, ಸ್ವಲ್ಪ ಲಿಕ್ವಿಡ್ ಸೋಪ್ ಮತ್ತು ಸ್ವಲ್ಪ ಬೆಚ್ಚಗಿನ ನೀರನ್ನು ಸೇರಿಸಿ. ಈ ಪೇಸ್ಟ್ ದಪ್ಪ ಇರುವಂತೆ ನೋಡಿಕೊಳ್ಳಿ. ಬ್ರಷ್ ಬಳಸಿ ವೃತ್ತಾಕಾರದ ಚಲನೆಯಲ್ಲಿ ಕಲೆ ಇರುವ ಜಾಗದಲೆಲ್ಲಾ ಉಜ್ಜಿ.

67
ಒದ್ದೆಯಾದ ಬಟ್ಟೆಯಿಂದ ಒರೆಸಿ

ಹತ್ತು ನಿಮಿಷದ ನಂತರ ಒದ್ದೆಯಾದ ಬಟ್ಟೆಯಿಂದ ಪೇಸ್ಟ್ ಅನ್ನು ಒರೆಸಿ. ಈಗಲೂ ನಿಮಗೆ ಚಪ್ಪಲಿ ಮೇಲೆ ಗುರುತುಗಳು ಕಾಣಿಸಿದರೆ ನೀವು ಈ ಪ್ರಕ್ರಿಯೆಯನ್ನು ಪುನಃ ಮಾಡಬಹುದು.

77
ನೈಸರ್ಗಿವಾಗಿ ಒಣಗಿಸಿ

ಈಗ ಚಪ್ಪಲಿಯನ್ನು ನೆರಳಿನಲ್ಲಿ ನೈಸರ್ಗಿಕವಾಗಿ ಒಣಗಲು ಬಿಡಿ. ಸೂರ್ಯನ ಬೆಳಕು ಅಥವಾ ಹೀಟರ್ ಬಳಿ ಒಡ್ಡುವುದನ್ನು ತಪ್ಪಿಸಿ.

ಒಣಗಿದ ನಂತರ ಚಪ್ಪಲಿ ಮೇಲಿನ ಮಾರ್ಕ್ ಲೈಟಾಗಿ ಕಾಣಲು ಆರಂಭಿಸುತ್ತೆ. ಕೆಲವೊಮ್ಮೆ ಬಹುತೇಕ ಕಣ್ಮರೆಯಾಗುತ್ತೆ. ಅಷ್ಟೇ ಅಲ್ಲ, ಚಪ್ಪಲಿ ಹೊಸದರಂತೆ ಕಾಣಿಸುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories