ಸಿಪ್ಪೆ ಜತೆಗೆ ಮೊಟ್ಟೆಯೂ ಕಿತ್ತು ಬರುತ್ತಿದೆಯೇ? ಇದೊಂದು ಚಮಚ ಸಾಕು... ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟೇ ಸುಲಭವಾಗುತ್ತೆ

Published : Nov 27, 2026, 01:52 PM IST

Egg peeling hacks: ಬೇಯಿಸಿದ ಮೊಟ್ಟೆ ಸಿಪ್ಪೆ ತೆಗೆಯೋಕೆ ಕಷ್ಟಪಡ್ತಿದ್ದೀರಾ? ಸಿಪ್ಪೆ ಜತೆಗೆ ಮೊಟ್ಟೆಯೂ ಕಿತ್ತು ಬರುತ್ತಿದೆಯೇ? ಹಾಗಾದ್ರೆ ಇನ್ನು ಮುಂದೆ ಆ ಟೆನ್ಶನ್ ಬೇಡ! ಬಾಳೆಹಣ್ಣಿನ ಸಿಪ್ಪೆ ಸುಲಿದಷ್ಟೇ ಸುಲಭವಾಗಿ ಮೊಟ್ಟೆ ಸಿಪ್ಪೆ ತೆಗೆಯೋದು ಹೇಗೆ ಅನ್ನೋ ಕಿಚನ್ ಟಿಪ್ಸ್ ಇಲ್ಲಿದೆ ನೋಡಿ.

PREV
15
ಕೆಲವೇ ಕ್ಷಣಗಳಲ್ಲಿ ಮೊಟ್ಟೆ ಸಿಪ್ಪೆ ತೆಗೆಯಬಹುದು

ಆರೋಗ್ಯಕರ ಆಹಾರಗಳು ಎಂದಾಕ್ಷಣ ಅನೇಕರಿಗೆ ಮೊದಲು ನೆನಪಾಗುವುದೇ ಮೊಟ್ಟೆ. ಏಕೆಂದರೆ ಇದರಲ್ಲಿ ನಮ್ಮ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳು ಹೇರಳವಾಗಿರುತ್ತವೆ. ಕಡಿಮೆ ಬೆಲೆಯಲ್ಲಿ ಹೆಚ್ಚು ಪೋಷಕಾಂಶಗಳನ್ನು ನೀಡುವ ಏಕೈಕ ಆಹಾರವೂ ಇದಾಗಿದೆ. ಆದರೆ ಇದನ್ನು ಬೇಯಿಸಿ ತಿನ್ನುವುದರಿಂದಲೇ ಹೆಚ್ಚು ಪ್ರಯೋಜನಗಳಿರುತ್ತವೆ. ಆದರೆ ಬಹಳಷ್ಟು ಮಂದಿ ಬೇಯಿಸಿದ ಮೊಟ್ಟೆಯ ಸಿಪ್ಪೆ ತೆಗೆಯಲು ತುಂಬಾ ಕಷ್ಟಪಡುತ್ತಾರೆ. ಆದರೆ ಕೆಲವು ಸಿಂಪಲ್ ಟಿಪ್ಸ್ ತಿಳಿದಿದ್ದರೆ, ಶ್ರಮವಿಲ್ಲದೆ ಕೆಲವೇ ಕ್ಷಣಗಳಲ್ಲಿ ಮೊಟ್ಟೆ ಸಿಪ್ಪೆಯನ್ನು ತೆಗೆಯಬಹುದು. ಅದು ಹೇಗೆಂದು ನೋಡೋಣ.

25
ಸಿಪ್ಪೆಗಳು ಬಹಳ ಬೇಗನೆ ಕಳಚಿ ಬರಲು

ಮೊಟ್ಟೆಯ ಸಿಪ್ಪೆ ಒಡೆಯದೆ ಚೆನ್ನಾಗಿ ಬರಬೇಕೆಂದರೆ, ಮೊಟ್ಟೆ ಬೇಯಿಸುವ ಕುದಿಯುವ ನೀರಿನಲ್ಲಿ ಚಿಟಿಕೆ ಉಪ್ಪು ಹಾಗೂ ಒಂದು ಟೀಸ್ಪೂನ್ ವಿನೆಗರ್ (Vinegar) ಸೇರಿಸಿ. ಹೀಗೆ ಮಾಡುವುದರಿಂದ ಮೊಟ್ಟೆಯ ಸಿಪ್ಪೆ ಸುಲಭವಾಗಿ ಬೇರ್ಪಟ್ಟು, ಸುಲಿಯಲು ಈಜಿಯಾಗುತ್ತದೆ. ಮತ್ತೊಂದು ಟಿಪ್ಸ್ ಎಂದರೆ ಮೊಟ್ಟೆಗಳು ಬೆಂದ ನಂತರ ಅವುಗಳನ್ನು 10 ನಿಮಿಷಗಳ ಕಾಲ ತಣ್ಣೀರಿನಲ್ಲಿ ಇಡಿ. ಹೀಗೆ ಮಾಡಿದರೂ ಸಿಪ್ಪೆ ಬೇಗನೆ ಬರುತ್ತದೆ.

ಮೊಟ್ಟೆ ಬೆಂದ ನಂತರ, ಅದರ ಸಿಪ್ಪೆಯ ಮೇಲೆ ಸಣ್ಣ ಬಿರುಕುಗಳು ಮೂಡುವಂತೆ ಒಂದು ತಟ್ಟೆ ಅಥವಾ ಕೌಂಟರ್ ಮೇಲೆ ನಿಧಾನವಾಗಿ ತಟ್ಟಿ. ನಂತರ ಆ ಬಿರುಕುಗಳ ಮೂಲಕ ನಿಧಾನವಾಗಿ ಸಿಪ್ಪೆ ತೆಗೆಯಿರಿ. ಅಷ್ಟೇ, ಮೊಟ್ಟೆ ಸಿಪ್ಪೆ ಸುಲಭವಾಗಿ ಹೊರಬರುತ್ತದೆ. ಮತ್ತೊಂದು ಉಪಾಯವೆಂದರೆ ನಲ್ಲಿ (ಟ್ಯಾಪ್) ನೀರಿನ ಕೆಳಗೆ ಇಟ್ಟು ಮೊಟ್ಟೆ ಸುಲಿದರೂ ಸಿಪ್ಪೆಗಳು ಬಹಳ ಬೇಗನೆ ಕಳಚಿ ಬರುತ್ತವೆ.

35
ಹಳೆಯ ಮೊಟ್ಟೆಗಳಾಗಿದ್ದರೆ ಸಿಪ್ಪೆ ತೆಗೆಯುವುದು ಸುಲಭ

ನೀವು ಮೊಟ್ಟೆಗಳನ್ನು ಆಮ್ಲೆಟ್ ಅಥವಾ ಸಾರಿಗೆ ಬಳಸದೆ ಬೇಯಿಸಬೇಕು ಅಂದುಕೊಂಡರೆ ಯಾವಾಗಲೂ ಸ್ವಲ್ಪ ಹಳೆಯ ಮೊಟ್ಟೆಗಳನ್ನೇ ಬಳಸಿ. ಏಕೆಂದರೆ ತೀರಾ ತಾಜಾ ಆಗಿರುವ ಮೊಟ್ಟೆಗಳ ಸಿಪ್ಪೆ ತೆಗೆಯುವುದು ಕಷ್ಟವಾಗುತ್ತದೆ. ಅದೇ ಒಂದು ವಾರ ಅಥವಾ 10 ದಿನಗಳ ಹಳೆಯ ಮೊಟ್ಟೆಗಳಾಗಿದ್ದರೆ ಅವುಗಳ ಸಿಪ್ಪೆ ತೆಗೆಯುವುದು ಸುಲಭ.

45
ಕಡಿಮೆ-ಮಧ್ಯಮ ಉರಿಯಲ್ಲಿ 10 ನಿಮಿಷಗಳ ಕಾಲ ಬೇಯಿಸಿ

ಮೊಟ್ಟೆಗಳ ಸಿಪ್ಪೆ ಸರಿಯಾಗಿ ಬರಬೇಕೆಂದರೆ ಅವುಗಳನ್ನು ಸರಿಯಾಗಿ ಬೇಯಿಸುವುದು ಬಹಳ ಮುಖ್ಯ. ಅವುಗಳನ್ನು ಕಡಿಮೆ-ಮಧ್ಯಮ ಉರಿಯಲ್ಲಿ (Low-medium flame) ಸುಮಾರು 10 ನಿಮಿಷಗಳ ಕಾಲ ಬೇಯಿಸಿದರೆ ಮಾತ್ರ ಸಿಪ್ಪೆ ತೆಗೆಯಲು ಅನುಕೂಲವಾಗುತ್ತದೆ. ಇಲ್ಲದಿದ್ದರೆ ಸಿಪ್ಪೆ ತೆಗೆಯುವಾಗ ಮೊಟ್ಟೆ ಒಡೆದುಹೋಗಬಹುದು ಅಥವಾ ಸಿಪ್ಪೆಗೆ ಅಂಟಿಕೊಳ್ಳಬಹುದು.

55
ಈ ಟಿಪ್ಸ್‌ಗಳನ್ನು ಟ್ರೈ ಮಾಡಿ

ಇಷ್ಟೆಲ್ಲಾ ಟಿಪ್ಸ್ ಪ್ರಯತ್ನಿಸಿದರೂ ನಿಮಗೆ ಮೊಟ್ಟೆ ಸಿಪ್ಪೆಯನ್ನು ಸರಿಯಾಗಿ, ಬೇಗನೆ ತೆಗೆಯಲು ಸಾಧ್ಯವಾಗದಿದ್ದರೆ.. ಮಾರುಕಟ್ಟೆಯಲ್ಲಿ ಮೊಟ್ಟೆಯ ಸಿಪ್ಪೆ ಸುಲಿಯುವ ಸಾಧನಗಳು ಸಿಗುತ್ತವೆ. ಅವುಗಳನ್ನು ಖರೀದಿಸಬಹುದು. ಹೀಗಾಗಿ ಈ ಬಾರಿ ಮೊಟ್ಟೆಗಳನ್ನು ಬೇಯಿಸಿದಾಗ ಮೇಲೆ ಹೇಳಿದ ಟಿಪ್ಸ್‌ಗಳನ್ನು ಪಾಲಿಸಿ ಟ್ರೈ ಮಾಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories