SK ಗ್ರೂಪ್ ಚೇರ್ಮನ್ ವಿಚ್ಛೇದನಕ್ಕೆ 'Divorce of the Century' ಎಂಬ ಹೆಸರೇಕೆ? ಭಾರತದ ಅತ್ಯಂತ ದುಬಾರಿ ವಿಚ್ಛೇದನಗಳ ಕಥೆ ಇಲ್ಲಿದೆ!

Published : Nov 27, 2026, 12:47 PM IST

Most Expensive Divorces: ದಕ್ಷಿಣ ಕೊರಿಯಾದ SK ಗ್ರೂಪ್ ಅಧ್ಯಕ್ಷ ಚೆ ತೇ-ವೋನ್ ಅವರ ವಿಚ್ಛೇದನಕ್ಕೆ 'ಶತಮಾನದ ವಿಚ್ಛೇದನ' ಎಂಬ ಹೆಸರು ಬಂದಿದ್ದೇಕೆ? ಗೌತಮ್ ಸಿಂಘಾನಿಯಾ, ಹೃತಿಕ್ ರೋಷನ್ ಸೇರಿದಂತೆ ಭಾರತದಲ್ಲಿ ಸುದ್ದಿಯಾದ 8 ಸೆಲೆಬ್ರಿಟಿ ವಿಚ್ಛೇದನಗಳ ಕುತೂಹಲಕಾರಿ ವಿವರಗಳನ್ನು ತಿಳಿಯಿರಿ.

PREV
110
ಡಿವೋರ್ಸ್ ಆಫ್ ದಿ ಸೆಂಚುರಿ

ದಕ್ಷಿಣ ಕೊರಿಯಾದ ಖ್ಯಾತ ಉದ್ಯಮಿ ಚೆ ತೇ-ವೋನ್ ಮತ್ತು ಅವರ ಮಾಜಿ ಪತ್ನಿ ರೋಹ್ ಸೋ-ಯಂಗ್ ಅವರ ವಿಚ್ಛೇದನ ಪ್ರಕರಣ ವಿಶ್ವದಾದ್ಯಂತ ಭಾರೀ ಸುದ್ದಿಯಾಗಿದೆ. ಇದನ್ನು ಜನರು 'ಶತಮಾನದ ವಿಚ್ಛೇದನ' (Divorce of the Century) ಎಂದು ಕರೆಯುತ್ತಿದ್ದಾರೆ. ಇದಕ್ಕೆ ಕಾರಣ ಕೇವಲ ಎರಡೂ ಕುಟುಂಬಗಳ ಅಪಾರ ಸಂಪತ್ತು ಮಾತ್ರವಲ್ಲ, ಇದರಲ್ಲಿ ಶತಕೋಟಿ ಡಾಲರ್ ಮೌಲ್ಯದ ಆಸ್ತಿ ಹಾಗೂ ಕಂಪನಿಯ ಷೇರುಗಳ ಪಾಲುದಾರಿಕೆಯೂ ಸೇರಿದೆ.

210
ಚೆ ತೇ-ವೋನ್-ರೋಹ್ ಸೋ-ಯಂಗ್ ಡಿವೋರ್ಸ್

ಚೆ ತೇ-ವೋನ್ ದಕ್ಷಿಣ ಕೊರಿಯಾದ ಪ್ರಮುಖ ಉದ್ಯಮ ಸಮೂಹವಾದ SK ಗ್ರೂಪ್‌ನ ಅಧ್ಯಕ್ಷರಾಗಿದ್ದಾರೆ. ಮತ್ತೊಂದೆಡೆ, ರೋಹ್ ಸೋ-ಯಂಗ್ ಅವರು ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ತೇ-ವೂ ಅವರ ಪುತ್ರಿ. ಇವರಿಬ್ಬರೂ 1988ರಲ್ಲಿ ವಿವಾಹವಾಗಿದ್ದು, ಮೂವರು ಮಕ್ಕಳಿದ್ದಾರೆ. ಮೇ 2024ರಲ್ಲಿ ಸಿಯೋಲ್ ಹೈಕೋರ್ಟ್ ನೀಡಿದ್ದ ಆದೇಶದ ಪ್ರಕಾರ, ಚೆ ತೇ-ವೋನ್ ಅವರು ರೋಹ್ ಅವರಿಗೆ ಸುಮಾರು 1.38 ಟ್ರಿಲಿಯನ್ ಕೊರಿಯನ್ ವಾನ್ (ಅಂದಾಜು 940 ಮಿ. ಡಾಲರ್) ನೀಡಬೇಕಿತ್ತು. ಇದರ ಜೊತೆಗೆ 2 ಬಿಲಿಯನ್ ವಾನ್ ಜೀವನಾಂಶವನ್ನೂ ನಿಗದಿಪಡಿಸಲಾಗಿತ್ತು. ಆದರೆ, ನಂತರ ಈ ಪ್ರಕರಣದಲ್ಲಿ ಮಹತ್ವದ ತಿರುವು ಎದುರಾಯಿತು. ದಕ್ಷಿಣ ಕೊರಿಯಾದ ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಿದ ಬಳಿಕ ಜುಲೈ 2026ರಲ್ಲಿ ಆಸ್ತಿ ಹಂಚಿಕೆಯ ಮೊತ್ತವನ್ನು 944 ಬಿಲಿಯನ್ ವಾನ್ ಅಂದರೆ ಸುಮಾರು 644 ಮಿಲಿಯನ್ ಡಾಲರ್‌ಗೆ ಇಳಿಸಲಾಯಿತು. ಆದರೆ, ಜೀವನಾಂಶದ ಮೊತ್ತವನ್ನು 2 ಬಿಲಿಯನ್ ವಾನ್‌ನಲ್ಲೇ ಉಳಿಸಲಾಯಿತು.

310
ಭಾರತದಲ್ಲಿ ಹೆಚ್ಚು ಸುದ್ದಿಯಾದ 8 ಸೆಲೆಬ್ರಿಟಿ ವಿಚ್ಛೇದನಗಳು ಮತ್ತು ಜೀವನಾಂಶದ ವಿವರ

ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ

ರೇಮಂಡ್ ಗ್ರೂಪ್‌ನ ಅಧ್ಯಕ್ಷ ಗೌತಮ್ ಸಿಂಘಾನಿಯಾ ಮತ್ತು ನವಾಜ್ ಮೋದಿ ಅವರ ಡಿವೋರ್ಸ್ ಭಾರಿ ಸದ್ದು ಮಾಡಿತುತ್. ಮಾಧ್ಯಮ ವರದಿಗಳ ಪ್ರಕಾರ, ಗೌತಮ್ ಅವರ ಒಟ್ಟು ಆಸ್ತಿಯಲ್ಲಿ ಶೇ.75ರಷ್ಟು ಪಾಲನ್ನು ನವಾಜ್ ಕೇಳಿದ್ದರು. ಇದರ ಮೌಲ್ಯ ಸುಮಾರು 8,700 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿತ್ತು. ಆದರೆ, ಇವರಿಬ್ಬರ ನಡುವೆ ಅಂತಿಮವಾಗಿ ಎಷ್ಟು ಮೊತ್ತಕ್ಕೆ ಒಪ್ಪಂದವಾಯಿತು ಎಂಬುದು ಸಾರ್ವಜನಿಕವಾಗಿ ಬಹಿರಂಗವಾಗಿಲ್ಲ.

410
ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್

ಹೃತಿಕ್ ರೋಷನ್ ಮತ್ತು ಸುಸೇನ್ ಖಾನ್ ವಿಚ್ಛೇದನದ ನಂತರ ಸುಸೇನ್ ಅವರಿಗೆ ಜೀವನಾಂಶವಾಗಿ 380ರಿಂದ 400 ಕೋಟಿ ರೂಪಾಯಿ ಸಿಕ್ಕಿದೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ, ಜುಲೈ 2026ರಲ್ಲಿ ಸುಸೇನ್ ಅವರ ಸಹೋದರಿ ಫರಾ ಖಾನ್ ಅಲಿ ಈ ಸುದ್ದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದರು. ಸುಸೇನ್ ಯಾವುದೇ ಜೀವನಾಂಶವನ್ನು ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.

510
ಸಮಂತಾ ರುತ್ ಪ್ರಭು ಮತ್ತು ನಾಗ ಚೈತನ್ಯ

ದಕ್ಷಿಣ ಭಾರತದ ಚಿತ್ರರಂಗದ ಈ ಜನಪ್ರಿಯ ಜೋಡಿ 2021ರಲ್ಲಿ ವಿಚ್ಛೇದನ ಘೋಷಿಸಿದ್ದರು. ಡಿವೋರ್ಸ್ ಬಳಿಕ ಸಮಂತಾ ಅವರಿಗೆ ಜೀವನಾಂಶವಾಗಿ 200 ಕೋಟಿ ರೂಪಾಯಿ ನೀಡಲು ಮುಂದಾಗಿದ್ದರು ಎಂಬ ಸುದ್ದಿ ಹರಿದಾಡಿತ್ತು. ಆದರೆ, ಸಮಂತಾ ಸ್ವತಃ ಮುಂದೆ ಬಂದು ಈ ಎಲ್ಲಾ ಸುದ್ದಿಗಳು ಕೇವಲ ವದಂತಿಗಳು ಎಂದು ಸ್ಪಷ್ಟಪಡಿಸಿದ್ದರು.

610
ಆಮಿರ್ ಖಾನ್ ಮತ್ತು ರೀನಾ ದತ್ತಾ

ಆಮಿರ್ ಖಾನ್ ಮತ್ತು ರೀನಾ ದತ್ತಾ ಅವರ 16 ವರ್ಷಗಳ ದಾಂಪತ್ಯ ಜೀವನ 2002ರಲ್ಲಿ ಅಂತ್ಯಗೊಂಡಿತ್ತು. ಆಗಿನ ಮಾಧ್ಯಮ ವರದಿಗಳ ಪ್ರಕಾರ, ಇವರ ವಿಚ್ಛೇದನದ ಸಂದರ್ಭದಲ್ಲಿ ಸುಮಾರು 50 ಕೋಟಿ ರೂಪಾಯಿ ಮೊತ್ತದ ಸೆಟಲ್‌ಮೆಂಟ್ ನಡೆದಿದೆ ಎಂಬ ಚರ್ಚೆ ನಡೆದಿತ್ತು.

710
ಕರಿಷ್ಮಾ ಕಪೂರ್ ಮತ್ತು ಸಂಜಯ್ ಕಪೂರ್

ಬಾಲಿವುಡ್ ನಟಿ ಕರಿಷ್ಮಾ ಕಪೂರ್ ಮತ್ತು ಉದ್ಯಮಿ ಸಂಜಯ್ ಕಪೂರ್ ಅವರ ವಿಚ್ಛೇದನ 2016ರಲ್ಲಿ ಸಾಕಷ್ಟು ವಿವಾದಗಳ ಬಳಿಕ ಅಂತ್ಯಗೊಂಡಿತ್ತು. ಮಾಧ್ಯಮ ವರದಿಗಳ ಪ್ರಕಾರ, ಈ ಒಪ್ಪಂದದ ಭಾಗವಾಗಿ ಮಕ್ಕಳ ಭವಿಷ್ಯಕ್ಕಾಗಿ ಸಂಜಯ್ ಸುಮಾರು 14 ಕೋಟಿ ರೂಪಾಯಿ ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದರು. ಅಲ್ಲದೆ, ಕರಿಷ್ಮಾ ಅವರಿಗೆ ಮುಂಬೈನಲ್ಲಿ ಐಷಾರಾಮಿ ಮನೆಯೊಂದನ್ನೂ ನೀಡಲಾಗಿತ್ತು.

810
ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್

ಸುಮಾರು 19 ವರ್ಷಗಳ ಕಾಲ ದಾಂಪತ್ಯ ಜೀವನ ನಡೆಸಿದ ಮಲೈಕಾ ಅರೋರಾ ಮತ್ತು ಅರ್ಬಾಜ್ ಖಾನ್ 2017ರಲ್ಲಿ ವಿಚ್ಛೇದನ ಪಡೆದರು. ಇವರ ವಿಚ್ಛೇದನದ ಸಂದರ್ಭದಲ್ಲಿ 10ರಿಂದ 15 ಕೋಟಿ ರೂಪಾಯಿ ಮೊತ್ತದ ಸೆಟಲ್‌ಮೆಂಟ್ ನಡೆದಿದೆ ಎನ್ನಲಾಗಿತ್ತು. ಆದರೆ, ಮಲೈಕಾ ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದ ಈ ವರದಿಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದರು.

910
ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ

17 ವರ್ಷಗಳ ದಾಂಪತ್ಯ ಜೀವನದ ಬಳಿಕ ಫರ್ಹಾನ್ ಅಖ್ತರ್ ಮತ್ತು ಅಧುನಾ ಭಬಾನಿ 2017ರಲ್ಲಿ ಪರಸ್ಪರ ಒಪ್ಪಿಗೆಯೊಂದಿಗೆ ವಿಚ್ಛೇದನ ಪಡೆದರು. ಮಾಧ್ಯಮ ವರದಿಗಳ ಪ್ರಕಾರ, ಈ ವಿಚ್ಛೇದನದ ಸೆಟಲ್‌ಮೆಂಟ್ ಭಾಗವಾಗಿ ಮುಂಬೈನ ಬಾಂದ್ರಾದಲ್ಲಿರುವ ಇವರ ಐಷಾರಾಮಿ ಬಂಗಲೆಯನ್ನು ಅಧುನಾ ಅವರಿಗೆ ನೀಡಲಾಗಿತ್ತು.

1010
ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್

ಸೈಫ್ ಅಲಿ ಖಾನ್ ಮತ್ತು ಅಮೃತಾ ಸಿಂಗ್ 2004ರಲ್ಲಿ ವಿಚ್ಚೇಧನ ಪಡೆದಿದ್ದರು. ಮಾಧ್ಯಮ ವರದಿಗಳ ಪ್ರಕಾರ, ಇವರಿಬ್ಬರ ನಡುವೆ ಸುಮಾರು 5 ಕೋಟಿ ರೂಪಾಯಿ ಜೀವನಾಂಶವನ್ನು ನಿಗದಿಪಡಿಸಲಾಗಿತ್ತು. ಈ ಮೊತ್ತವನ್ನು ಕಂತುಗಳ ರೂಪದಲ್ಲಿ ಪಾವತಿಸಬೇಕಿತ್ತು. ಇದರ ಜೊತೆಗೆ ಮಕ್ಕಳ ಪಾಲನೆ ಮತ್ತು ಪೋಷಣೆಯ ವೆಚ್ಚವೂ ಒಪ್ಪಂದದ ಭಾಗವಾಗಿತ್ತು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories