Fridge: ಫ್ರಿಜ್‌ನಲ್ಲಿ ಮೊಟ್ಟೆ, ಚಿಕನ್, ಮಟನ್ ಸ್ಟೋರ್ ಮಾಡೋದು ಹೇಗೆ? ಎಷ್ಟು ದಿನಗಳವರೆಗೆ ಇಡಬಹುದು?

Published : Nov 26, 2026, 09:33 PM IST

ಹಾಲು, ಮೊಟ್ಟೆ, ಚಿಕನ್, ಮಟನ್ ಸೇರಿದಂತೆ ಬಹುತೇಕ ಆಹಾರ ಪದಾರ್ಥಗಳನ್ನು ನಾವು ಫ್ರಿಜ್‌ನಲ್ಲಿಯೇ ಸಂಗ್ರಹಿಸುತ್ತೇವೆ. ಫ್ರಿಜ್‌ನಲ್ಲಿ ಇಟ್ಟರೆ ಆಹಾರ ಹಲವು ದಿನಗಳವರೆಗೆ ತಾಜಾ ಇರುತ್ತದೆ ಎಂದುಕೊಳ್ಳುತ್ತೇವೆ. ಆದರೆ ಆಹಾರವನ್ನು ಸರಿಯಾದ ರೀತಿಯಲ್ಲಿ ಸಂಗ್ರಹಿಸದಿದ್ದರೆ, ಅಪಾಯ ತಪ್ಪಿದ್ದಲ್ಲ.

PREV
16
ಫ್ರಿಜ್‌ನಲ್ಲಿ ಮಾಂಸ ಇಡ್ತಿದ್ದೀರಾ?

ಹಾಗಾದರೆ ಫ್ರಿಜ್‌ನಲ್ಲಿ ಚಿಕನ್, ಮಟನ್ ಮತ್ತು ಮೊಟ್ಟೆಗಳನ್ನು ಎಷ್ಟು ದಿನ ಇಡಬಹುದು? ಅವುಗಳನ್ನು ಹೇಗೆ ಸ್ಟೋರ್ ಮಾಡಬೇಕು? ಫ್ರಿಜ್‌ ಬಳಸುವಾಗ ಯಾವ ನಿಯಮಗಳನ್ನು ಪಾಲಿಸಬೇಕು? ಇಲ್ಲಿದೆ ಸಂಪೂರ್ಣ ಮಾಹಿತಿ.

26
ಚಿಕನ್ ಹೇಗೆ ಸ್ಟೋರ್ ಮಾಡಬೇಕು? ಎಷ್ಟು ದಿನ ಇಡಬಹುದು?

ಮಾರುಕಟ್ಟೆಯಿಂದ ತಂದ ಹಸಿ ಚಿಕನ್ ಅನ್ನು ಕವರ್ ಸಮೇತ ನೇರವಾಗಿ ಫ್ರಿಜ್‌ ಶೆಲ್ಫ್‌ಗಳಲ್ಲಿ ಇಡಬಾರದು. ಚಿಕನ್‌ನಿಂದ ಸೋರುವ ನೀರು ಹಣ್ಣು, ತರಕಾರಿ ಅಥವಾ ಬೇಯಿಸಿದ ಆಹಾರದ ಮೇಲೆ ಬಿದ್ರೆ ಬ್ಯಾಕ್ಟೀರಿಯಾ ಬೇಗ ಹರಡುತ್ತೆ. ಅದಕ್ಕೆ ಚಿಕನ್ ಅನ್ನು ಸ್ವಚ್ಛವಾಗಿ ತೊಳೆದು, ಏರ್ ಟೈಟ್ ಕಂಟೇನರ್‌ನಲ್ಲಿ ಇಟ್ಟು ಫ್ರಿಜ್‌ನ ಅತ್ಯಂತ ಕೆಳಗಿನ ಶೆಲ್ಫ್‌ನಲ್ಲಿ ಇಡಬೇಕು. ಸಾಧಾರಣ ಫ್ರಿಜ್‌ನಲ್ಲಿ (5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಉಷ್ಣಾಂಶ) ಹಸಿ ಚಿಕನ್ ಅನ್ನು 1 ರಿಂದ 2 ದಿನ ಮಾತ್ರ ಇಡಬೇಕು. ಅದೇ ಡೀಪ್ ಫ್ರೀಜರ್‌ನಲ್ಲಿ ಆದ್ರೆ 3 ರಿಂದ 4 ತಿಂಗಳವರೆಗೆ ಇಡಬಹುದು. ಬೇಯಿಸಿದ ಚಿಕನ್ ಸಾಂಬಾರ್ ಆದ್ರೆ ಫ್ರಿಜ್‌ನಲ್ಲಿ 3 ದಿನದೊಳಗೆ ಬಳಸಬೇಕು.

36
ಮಟನ್ ಸ್ಟೋರ್ ಮಾಡೋಕೆ ಸರಿಯಾದ ವಿಧಾನ:

ಮಟನ್ ಅಷ್ಟೇ, ಬೇರೆ ಆಹಾರ ಪದಾರ್ಥಗಳಿಗೆ ತಾಗದಂತೆ ಪ್ರತ್ಯೇಕವಾಗಿ, ಮುಚ್ಚಳ ಗಟ್ಟಿಯಾಗಿರೋ ಕಂಟೇನರ್‌ನಲ್ಲಿ ಸ್ಟೋರ್ ಮಾಡಬೇಕು. ಮಟನ್ ಪೀಸ್‌ಗಳನ್ನು ಚಿಕ್ಕ ಭಾಗಗಳಾಗಿ ಬೇರೆ ಬೇರೆ ಬಾಕ್ಸ್‌ಗಳಲ್ಲಿ ಇಟ್ಟರೆ, ಬೇಕಾದಷ್ಟು ಮಾತ್ರ ಹೊರಗೆ ತೆಗೆದು ಬಳಸಬಹುದು. ಹಸಿ ಮಟನ್ ಅನ್ನು ಸಾಧಾರಣ ಫ್ರಿಜ್‌ನಲ್ಲಿ 3 ರಿಂದ 5 ದಿನಗಳವರೆಗೆ ಇಡಬಹುದು. ಒಂದು ವೇಳೆ ಡೀಪ್ ಫ್ರೀಜರ್‌ನಲ್ಲಿ ಇಟ್ಟರೆ 4 ರಿಂದ 6 ತಿಂಗಳವರೆಗೆ ತಾಜಾ ಆಗಿರುತ್ತೆ. ಬೇಯಿಸಿದ ಮಟನ್ ಸಾಂಬಾರ್ ಅನ್ನು ಫ್ರಿಡ್ಜ್‌ನಲ್ಲಿ ಇಟ್ಟರೆ 3 ರಿಂದ 4 ದಿನಗಳಲ್ಲಿ ತಿಂದು ಮುಗಿಸೋದು ಒಳ್ಳೇದು.

46
ಮೊಟ್ಟೆಗಳನ್ನು ಫ್ರಿಜ್‌ ಡೋರ್‌ನಲ್ಲಿ ಇಡ್ತಿದ್ದೀರಾ?

ತುಂಬಾ ಜನ ಮೊಟ್ಟೆಗಳನ್ನು ಫ್ರಿಜ್ ಡೋರ್‌ಗೆ ಇರೋ ಟ್ರೇನಲ್ಲಿ ಇಡ್ತಾರೆ. ಆದ್ರೆ ಫ್ರಿಜ್ ಡೋರ್ ಪದೇ ಪದೇ ತೆಗೆದು ಮುಚ್ಚೋದ್ರಿಂದ ಅಲ್ಲಿ ಉಷ್ಣಾಂಶ ಬದಲಾಗ್ತಾ ಇರುತ್ತೆ. ಮೊಟ್ಟೆಗಳು ಉಷ್ಣಾಂಶದ ಬದಲಾವಣೆಗಳಿಗೆ ಬೇಗ ಹಾಳಾಗೋದ್ರಿಂದ, ಅವುಗಳನ್ನು ಡೋರ್‌ನಲ್ಲಿ ಇಡದೆ ಫ್ರಿಜ್ ಒಳಗಿನ ಮಧ್ಯದ ಶೆಲ್ಫ್‌ಗಳಲ್ಲಿ ಇಡೋದು ಉತ್ತಮ. ಮೊಟ್ಟೆಗಳನ್ನು ಯಾವತ್ತೂ ತೊಳೆದು ಫ್ರಿಜ್‌ನಲ್ಲಿ ಇಡಬಾರದು. ಹಾಗೆ ಮಾಡಿದ್ರೆ ಮೊಟ್ಟೆ ಮೇಲಿರೋ ನೈಸರ್ಗಿಕ ರಕ್ಷಣಾ ಕವಚ ಹೋಗಿ ಬ್ಯಾಕ್ಟೀರಿಯಾ ಒಳಗೆ ಹೋಗುತ್ತೆ. ಫ್ರಿಜ್‌ನಲ್ಲಿ ಇಟ್ಟ ಹಸಿ ಮೊಟ್ಟೆಗಳನ್ನು 3 ರಿಂದ 5 ವಾರಗಳವರೆಗೆ ಇಡಬಹುದು. ಆದ್ರೆ ಬೇಯಿಸಿದ ಮೊಟ್ಟೆಗಳನ್ನು ಮಾತ್ರ ಫ್ರಿಜ್‌ನಲ್ಲಿ 5 ರಿಂದ 7 ದಿನದೊಳಗೆ ತಿನ್ನಬೇಕು.

56
ಫ್ರಿಜ್ ಬಳಸುವಾಗ ಪಾಲಿಸಬೇಕಾದ ಮುಖ್ಯ ನಿಯಮಗಳು..

ಬ್ಯಾಕ್ಟೀರಿಯಾ ವೇಗವಾಗಿ ಬೆಳೆಯದಂತೆ ತಡೆಯಲು ಫ್ರಿಡ್ಜ್ ಉಷ್ಣಾಂಶ ಯಾವತ್ತೂ 5 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇರೋ ಹಾಗೆ ನೋಡಿಕೊಳ್ಳಬೇಕು ಅಂತ FSSAI ಸ್ಪಷ್ಟಪಡಿಸಿದೆ. ಹಾಗೆ ಡೀಪ್ ಫ್ರೀಜರ್‌ನಲ್ಲಿ ಇಟ್ಟ ಚಿಕನ್ ಅಥವಾ ಮಟನ್ ಅನ್ನು ಬೇಯಿಸೋಕೆ ಮುಂಚೆ ಹೊರಗೆ ರೂಮ್ ಟೆಂಪರೇಚರ್‌ನಲ್ಲಿ ಗಂಟೆಗಟ್ಟಲೆ ಬಿಡದೆ, ಹಿಂದಿನ ದಿನ ರಾತ್ರಿಯೇ ಕೆಳಗಿನ ಫ್ರಿಜ್ ಶೆಲ್ಫ್‌ಗೆ ಬದಲಾಯಿಸಿಕೊಳ್ಳೋದು ಆರೋಗ್ಯಕ್ಕೆ ತುಂಬಾ ಸುರಕ್ಷಿತ.

66
ಫ್ರಿಜ್ ಟಿಪ್ಸ್

ಫ್ರಿಜ್ ಆಹಾರವನ್ನು ದೀರ್ಘಕಾಲ ಸುರಕ್ಷಿತವಾಗಿ ಇಡಲು ಸಹಾಯ ಮಾಡುತ್ತದೆ. ಆದರೆ ಅದು ಆಹಾರವನ್ನು ಎಂದಿಗೂ ಹಾಳಾಗದಂತೆ ಮಾಡುವುದಿಲ್ಲ. ಸರಿಯಾದ ಉಷ್ಣಾಂಶ, ಸ್ವಚ್ಛತೆ, ಪ್ರತ್ಯೇಕ ಸಂಗ್ರಹಣೆ ಮತ್ತು ಸಮಯಕ್ಕೆ ಸರಿಯಾಗಿ ಆಹಾರ ಬಳಸುವುದು ಆಹಾರ ಸುರಕ್ಷತೆಗೆ ಅತ್ಯಂತ ಮುಖ್ಯ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories