ಇತ್ತೀಚಿನ ದಿನಗಳಲ್ಲಿ ಜೆನರೇಷನ್ ಜೆಡ್ (ಜೆನ್ ಜಿ) ವರ್ಗದ ಯುವಜನರು ಜೀಬ್ರಾ ಡ್ರಿಂಕಿಂಗ್ ಹ್ಯಾಬಿಟ್ಸ್ ಆರಂಭಿಸಿದ್ದಾರೆ. ಜೆನ್ ಜಿಗಳು ತಮಗೆ ಎಣ್ಣೆಯ ಕಿಕ್ ಬೇಕು ಆದರೆ, ಬೆಳಗ್ಗೆ ಎಣ್ಣೆಯಿಂದಾಗುವ ಹ್ಯಾಂಗೋವರ್ ಬೇಡ ಎನ್ನುವ ತೀರ್ಮಾನ ಮಾಡಿದ್ದಾರೆ. ಅದಕ್ಕಾಗಿ ಈಜೀಬ್ರಾ ಡ್ರಿಂಕಿಂಗ್ ಮೊರೆ ಹೋಗಿದ್ದಾರೆ.
ವೀಕೆಂಡ್ ಪಾರ್ಟಿ (Weekend Party) ಬಂದರೆ ಸಾಕು ಎಗ್ಗಿಲ್ಲದೆ ಮದ್ಯಪಾನ ಮಾಡುವುದು, ಸ್ಟ್ರಾಂಗ್ ಬಿಯರ್ (Strong Beer) ಹೊಡೆಯುವುದು ಹಾಗೂ ರಾತ್ರಿಯಿಡೀ ಕುಡಿದು ತೇಲುವುದು ಯುವಜನತೆಯ ಟ್ರೆಂಡ್ ಆಗಿತ್ತು. ಆದರೆ ಈಗ ಕಾಲ ಬದಲಾಗಿದೆ, ಅದರ ಜೊತೆಗೆ ಜೆನ್ ಜಿ (Gen Z) ಮತ್ತು ಮಿಲೇನಿಯಲ್ಸ್ (Millennials) ಮೈಂಡ್ ಸೆಟ್ ಕೂಡ ಬದಲಾಗಿದೆ. ಇಂದಿನ ಯುವಕರಿಗೆ ಪಾರ್ಟಿಗಳಲ್ಲಿ ಕೇವಲ ಮತ್ತಿಗಾಗಿ (Intoxication) ಕುಡಿಯುವುದು ಬೇಕಿಲ್ಲ. ಬದಲಾಗಿ ಆರೋಗ್ಯ (Health), ಮಿತವಾದ ಸೇವನೆ ಮತ್ತು ಜವಾಬ್ದಾರಿಯುತ ವರ್ತನೆಯ ಕಡೆಗೆ ಅವರು ವಾಲ್ತಿದ್ದಾರೆ. ಇದೇ ಕಾರಣಕ್ಕೆ ಈಗ ಪಾರ್ಟಿಗಳಲ್ಲಿ 'ಜೀಬ್ರಾ ಡ್ರಿಂಕಿಂಗ್' (Zebra Drinking) ಎಂಬ ಹೊಸ ಸಂಸ್ಕೃತಿ ಹುಟ್ಟಿಕೊಂಡಿದೆ.
25
ಏನಿದು 'ಝೀಬ್ರಾ ಡ್ರಿಂಕಿಂಗ್'? (What is Zebra Drinking?)
ಕಪ್ಪು-ಬಿಳುಪು ಪಟ್ಟೆಗಳನ್ನು ಹೊಂದಿರುವ ಜೀಬ್ರಾದಂತೆ, ಪಾನೀಯಗಳಲ್ಲೂ ಮಿಕ್ಸಿಂಗ್ ಮಾಡುವುದೇ ಜೀಬ್ರಾ ಡ್ರಿಂಕಿಂಗ್! ಅಂದರೆ, ಪಬ್ ಅಥವಾ ಸಮಾರಂಭಗಳಲ್ಲಿ ಕೇವಲ ಆಲ್ಕೋಹಾಲ್ (Alcohol) ಕುಡಿಯುವ ಬದಲು, ಒಂದು ಪೆಗ್ ಆಲ್ಕೋಹಾಲ್ ಡ್ರಿಂಕ್ ಕುಡಿದರೆ, ಅದರ ಬೆನ್ನಲ್ಲೇ ಆಲ್ಕೋಹಾಲ್ ಇಲ್ಲದ ಪಾನೀಯ (Non-Alcoholic Beverage) ಅಥವಾ ಮಾಕ್‌ಟೇಲ್ (Mocktail), ನೀರು, ಜ್ಯೂಸ್ ಅನ್ನು ಒಂದಾದ ನಂತರ ಒಂದರಂತೆ ಕುಡಿಯುವ ಅಭ್ಯಾಸ. ಇದರಿಂದ ಸ್ನೇಹಿತರ ಜೊತೆಗಿನ ಪಾರ್ಟಿಯ ಮಜಾವೂ ಸಿಗುತ್ತದೆ, ಜೊತೆಗೆ ದೇಹಕ್ಕೆ ಆಲ್ಕೋಹಾಲ್ ಪ್ರಮಾಣವು ಮಿತವಾಗಿ (Moderate Drinking) ಹೋಗುತ್ತದೆ. ಭಾರತ, ಯುರೋಪ್, ಅಮೆರಿಕದಲ್ಲಿ ಈ ಟ್ರೆಂಡ್ ಭಾರೀ ವೈರಲ್ (Viral Trend) ಆಗುತ್ತಿದೆ.
35
ಹ್ಯಾಂಗೋವರ್ ಬೇಡ, ಹೆಲ್ತ್ ಬೇಕು! (Health over Hangover):
ಹೊಸ ತಲೆಮಾರಿನ ಯುವಕರಿಗೆ ಪಾರ್ಟಿ ಮಾಡಿದ ಮರುದಿನ ಬೆಳಗ್ಗೆ ವಿಪರೀತ ತಲೆನೋವು ಅಥವಾ ಹ್ಯಾಂಗೋವರ್ (Hangover) ಇರುವುದು ಸುತಾರಾಂ ಇಷ್ಟವಿಲ್ಲ. ತಮ್ಮ ಫಿಟ್‌ನೆಸ್ (Fitness), ಮಾನಸಿಕ ಹಾಗೂ ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಅವರು ಹೆಚ್ಚು ಒತ್ತು ನೀಡುತ್ತಿದ್ದಾರೆ. ಹಾಗಾಗಿ ರುಚಿಯ ಜೊತೆಗೆ ಪೌಷ್ಟಿಕಾಂಶವಿರುವ ಕಡಿಮೆ ಆಲ್ಕೋಹಾಲ್ ಇರುವ ಲಾಗರ್‌ಗಳು (Low-alcohol Lagers), ಆಲ್ಕೋಹಾಲ್ ಮುಕ್ತ ಕ್ರಾಫ್ಟ್ ಬಿಯರ್ (Zero Alcohol Craft Beer) ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುವ ಪ್ರೊಬಯಾಟಿಕ್ ಡ್ರಿಂಕ್ಸ್ (Probiotic Drinks) ಕಡೆಗೆ ಮುಖ ಮಾಡುತ್ತಿದ್ದಾರೆ.
ಬಾರ್ ಮತ್ತು ಪಬ್‌ಗಳಲ್ಲೂ ಬದಲಾವಣೆಯ ಗಾಳಿ (Changes in Bar Culture):
ಗ್ರಾಹಕರ ಈ 'ಸ್ಮಾರ್ಟ್ ಡ್ರಿಂಕಿಂಗ್' (Smart Drinking) ನೋಡಿ ಬಾರ್ ಹಾಗೂ ರೆಸ್ಟೋರೆಂಟ್ (Bar and Restaurants) ಮಾಲೀಕರೂ ಅಚ್ಚರಿಗೊಂಡಿದ್ದಾರೆ, ಜೊತೆಗೆ ತಮ್ಮ ಮೆನು (Menu) ಬದಲಾಯಿಸುತ್ತಿದ್ದಾರೆ. ಶೇ. 30ರಿಂದ 35ರಷ್ಟು ಯುವಕರು ಈಗ ಮಾಕ್‌ಟೇಲ್‌ಗಳನ್ನೇ ಹೆಚ್ಚಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಅಂಗಡಿಗೆ ಹೋದಾಗಲೂ ಬಾಟಲಿಗಳ ಮೇಲಿನ ಲೇಬಲ್ (Labels) ಓದಿ, ಅದರಲ್ಲಿರುವ ರಾಸಾಯನಿಕಗಳ (Chemicals) ಬಗ್ಗೆ ತಿಳಿದುಕೊಂಡೇ ಖರೀದಿಸುತ್ತಿದ್ದಾರೆ.
55
ಬುದ್ಧಿವಂತಿಕೆಯ ಮದ್ಯ ಸೇವನೆ
ಒಟ್ಟಿನಲ್ಲಿ ಹಿಂದಿನ ತಲೆಮಾರಿನವರು 'ಹೆಚ್ಚು ಕುಡಿಯುವುದರಲ್ಲಿ' (Heavy Drinking) ಕಿಕ್ ಕಂಡುಕೊಂಡರೆ, ಹೊಸ ತಲೆಮಾರಿನವರು 'ಬುದ್ಧಿವಂತಿಕೆಯಿಂದ ಕುಡಿಯುವ' (Mindful Drinking) ನೀತಿಯನ್ನು ಅಳವಡಿಸಿಕೊಂಡಿದ್ದಾರೆ. ಇದು ಮದ್ಯದ ಮಾರುಕಟ್ಟೆಯಲ್ಲಿ (Liquor Market) ಮುಂದಿನ ದಿನಗಳಲ್ಲಿ ಅತಿದೊಡ್ಡ ಕ್ರಾಂತಿಯನ್ನೇ ಸೃಷ್ಟಿಸಲಿದೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.