ಅಕ್ಕಿಯಲ್ಲಿ ಹುಳುಗಳಿವೆಯೇ? ಒಂದೇ ನಿಮಿಷದಲ್ಲಿ ತೆಗೆದುಹಾಕಲು ಇಷ್ಟು ಮಾಡಿ ಸಾಕು!

Published : Jul 22, 2026, 11:01 PM IST

ಗೃಹಿಣಿಯರಿಗೆ ಅಕ್ಕಿಯಲ್ಲಿನ ಹುಳುಗಳನ್ನ ತೆಗೆಯುದೇ ದೊಡ್ಡ ಸಮಸ್ಯೆ. ಹುಳು ಬೀಳದಂತೆ ಎಷ್ಟೇ ಪ್ರಯತ್ನಿಸಿದ್ರೂ ಅದೇ ಸಮಸ್ಯೆ. ಇನ್ನು ಆ ತೊಂದರೆ ಇರೊಲ್ಲ, ಅಕ್ಕಿಯಲ್ಲಿ ಹುಳು ಇದ್ದರೆ ಕೆಲವೇ ನಿಮಿಷಗಳಲ್ಲಿ ತೆಗೆದುಹಾಕಿ ಇಲ್ಲಿದೆ ಸಿಂಪಲ್ ಟಿಪ್ಸ್

PREV
15
ಅಕ್ಕಿಯಲ್ಲಿ ಹುಳುಗಳು ತೆಗೆಯಲು ಸಿಂಪಲ್ ಟಿಪ್ಸ್

ಪ್ರತಿ ದಿನ ಅಡುಗೆ ತಯಾರಿಸುವಾಗ ಅಕ್ಕಿ ಹಸನು ಮಾಡುವುದೇ ತಲೆನೋವಿನ ಕೆಲಸ. ಎಷ್ಟೇ ಸ್ವಚ್ಛವಾಗಿಟ್ಟರು ಅದರಲ್ಲಿ ಹುಳ್ಳುಗಳು ನುಸುಳಿರುತ್ತವೆ. ಸರಿಯಾಗಿ ಗಮನಿಸಿದಿದ್ರೆ ಸಣ್ಣ ಸಣ್ಣ ಹುಳುಗಳು ಕಾಣುವುದೇ ಇಲ್ಲ. ಅಕ್ಕಿಯನ್ನ ಪಾತ್ರೆಯಲ್ಲಿ ಅಥವಾ ಅಕ್ಕಿ ಕೇರುವ ಪಾತ್ರೆಗೆ ಹಾಕಿದಾಗ ಒಂದು ಬೊಗಸೆ ಅಕ್ಕಿಯಲ್ಲಿ ರಾಶಿ ರಾಶಿ ಹುಳುಗಳಿರುವುದು ಕಾಣಿಸುತ್ತವೆ. ಕೈಗೆ ಸಿಗದ ಚಿಕ್ಕ ಚಿಕ್ಕ ಹುಳುಗಳನ್ನ ತೆಗೆಯುವುದೇ ಗೃಹಿಣಿಯರಿಗೆ ನಿತ್ಯದ ಸವಾಲು. ಹುಳು ಹಿಡಿದಾಗ ಕೈಗೆ ಅಕ್ಕಿಕಾಳು ಸಿಗುತ್ತೆ ಹೊರತು ಹುಳು ಸಿಗೊಲ್ಲ. ಇದು ತುಂಬಾ ಕಿರಿಕಿರಿ ಉಂಟು ಮಾಡುತ್ತೆ. ಹಾಗೆ ಅನ್ನ ಬೇಯಿಸುವಂತಿಲ್ಲ. ಹುಳುಗಳನ್ನು ಅಕ್ಕಿಯಿಂದ ಬೇರ್ಪಡಿಸುವುದು ತಲೆನೋವಿನ ಕೆಲಸ. ಇದು ಒಬ್ಬರದು ಅಲ್ಲ, ಮನೆ ಮನೆ ಸಮಸ್ಯೆ.

25
ಅಕ್ಕಿಯಿಂದ ಹುಳು ತೆಗೆಯುವ ಸುಲಭ ವಿಧಾನ

ಅಕ್ಕಿಯಿಂದ ಚಿಕ್ಕ ಹುಳುಗಳನ್ನ ಅಥವಾ ಜೀರುಂಡೆಗಳನ್ನ ಸುಲಭವಾಗಿ, ಕೆಲವೇ ನಿಮಿಷಗಳಲ್ಲಿ ತೆಗೆಯುವುದು ಹೇಗೆಂದು ನಾವು ಇಲ್ಲಿ ಕೆಲವು ಸಿಂಪಲ್ ಸಲಹೆಗಳನ್ನ ಹೇಳ್ತೀವಿ. ಯಾವುದೇ ರಾಸಾಯನಿಕ ಬಳಸದೆ ಸರಿಯಾದ ಸುಲಭ ವಿಧಾನಗಳಲ್ಲಿ ಹುಳುಗಳನ್ನು ತೆಗೆಯಬಹುದು.

35
ಅಕ್ಕಿಯಲ್ಲಿ ಹುಳುಗಳು ಹೇಗೆ ಹುಟ್ಟಿಕೊಳ್ಳುತ್ತವೆ?

ಜೀರುಂಡೆಗಳು ಸಣ್ಣ ಕಂದು ಕೀಟಗಳಾಗಿದ್ದು ಅವು ಅಕ್ಕಿ ಕಾಳುಗಳ ಒಳಗೆ ಮೊಟ್ಟೆಗಳನ್ನು ಇಡುತ್ತವೆ. ಅವುಗಳ ಲಾರ್ವಾಗಳು ಧಾನ್ಯಗಳನ್ನು ಒಳಗಿನಿಂದ ತಿಂದು ನಂತರ ಹೊರಬರುತ್ತವೆ. ಅದಕ್ಕಾಗಿಯೇ ಜೀರುಂಡೆಗಳು ಕೆಲವೊಮ್ಮೆ ಖರೀದಿಸಿದ ಕೆಲವು ವಾರಗಳಲ್ಲಿ ಪ್ಯಾಕ್ ಮಾಡಿದ ಅಕ್ಕಿಯಲ್ಲೂ ಕಾಣಿಸಿಕೊಳ್ಳಬಹುದು. ಪ್ಯಾಕ್ ಮಾಡಿದ್ರೂ ಈ ಹಾಳಾದ ಹುಳುಗಳು ಹೇಗೆ ಬಂದ್ವು ಅಂತಾ ಗೃಹಿಣಿಯರು ಬೈದುಕೊಳ್ಳೋ ಸಾಮಾನ್ಯ.

 ವಾಸ್ತವವಾಗಿ, ಈಗ ನೀವು ಖರೀದಿಸಿದ ಅಕ್ಕಿಯಲ್ಲಿ ಯಾವುದು ಹುಳುಗಳು ಕಂಡು ಬರದಿದ್ರೂ ಮೊಟ್ಟೆಗಳು ಈಗಾಗಲೇ ಅಕ್ಕಿ ಕಾಳಿನ ಒಳಗೆ ಇರಬಹುದು. ಬೆಚ್ಚಗಿನ ವಾತಾವರಣದಲ್ಲಿ ಹುಳುಗಳು ಹೊರಬರುತ್ತವೆ. ಅಕ್ಕಿಯಲ್ಲಿ ಸಣ್ಣ ಸಣ್ಣ ರಂಧ್ರಗಳು ಅಕ್ಕಿ ಹಸನು ಮಾಡುವಾಗ ಅಕ್ಕಿ ಪುಡಿ ಕೆಳಗೆ ಬಿಳುವುದು, ಅಕ್ಕಿಯ ಒಂದು ರೀತಿಯಸ ವಾಸನೆ ಗಮನಿಸಿರುತ್ತೀರಿ. ಇವು ಅಕ್ಕಿಯಲ್ಲಿ ಜೀರುಂಡೆ ಇರುವ ಲಕ್ಷಣಗಳು. ತಕ್ಷಣ ತೆಗೆದುಹಾಕದಿದ್ರೆ ಅಕ್ಕಿ ಕಾಳಿಗಿಂತ ಹುಳುಗಳ ಸಂಖ್ಯೆಯೇ ಹೆಚ್ಚಾಗಬಹುದು!

45
ಹುಳುಗಳಿಂದ ಅಕ್ಕಿಯನ್ನ ಸ್ವಚ್ಛಗೊಳಿಸುವುದು ಹೇಗೆ?

ನಿಮ್ಮ ಮನೆಯಲ್ಲಿನ ಅಕ್ಕಿಯಲ್ಲಿ ಹುಳುಗಳ ಸಮಸ್ಯೆ ಹೆಚ್ಚಿದ್ದರೆ ಮೊದಲು ಅಕ್ಕಿಯನ್ನು ದೊಡ್ಡ ತಟ್ಟೆ, ಅಥವಾ ಮನೆಯಂಗಳದ ಬಂಡೆಯ ಮೇಲೆ ಹಾಕಿ ಹರಡಿ. ಬಳಿಕ 15 ರಿಂದ 20 ನಿಮಿಷಗಳ ಕಾಲ ಸೂರ್ಯನ ಬೆಳಕಿಗೆ ಒಡ್ಡಿರಿ. ಮಧ್ಯಾಹ್ನದ ಬಿಸಿಲಿಗೆ ಉತ್ತಮ. ಸೂರ್ಯನ ಶಾಖಕ್ಕೆ ಅಕ್ಕಿಯಿಂದ ಹೊರಬರುವ ಹುಳುಗಳು ಬೇರ್ಪಟ್ಟು ಓಡಿಹೋಗುತ್ತವೆ. 

ನಂತರ ಉತ್ತಮ ಜರಡಿ ಮೂಲಕ ಕೀಟಗಳು, ಸೂಕ್ಷ್ಮ ಕೊಳೆಯನ್ನ ತೆಗೆದುಹಾಕಿ. ಅಕ್ಕಿಯಲ್ಲಿ ತುಂಡು ರಂಧ್ರಗಳಿದ್ದಲ್ಲಿ ಅಂತ ಅಕ್ಕಿಯನ್ನ ಬಳಸದಿರುವುದೇ ಉತ್ತಮ. ಅಡುಗೆ ಮಾಡುವ ಮೊದಲು ಅಕ್ಕಿಯನ್ನು ಎರಡರಿಂದ ಮೂರು ಬಾರಿ ಚೆನ್ನಾಗಿ ತೊಳೆಯಿರಿ. ಜೀರುಂಡೆಗಳು ಮತ್ತೆ ಕಾಣಿಸಿಕೊಳ್ಳದಿದ್ದರೆ, ಸ್ವಚ್ಛಗೊಳಿಸಿದ ಅಕ್ಕಿಯನ್ನು 48 ಗಂಟೆಗಳ ಕಾಲ ಫ್ರೀಜ್ ಮಾಡಿ. ಇದು ಧಾನ್ಯಗಳೊಳಗಿನ ಮೊಟ್ಟೆಗಳು ಮತ್ತು ಲಾರ್ವಾಗಳನ್ನು ಸಹ ಕೊಲ್ಲುತ್ತದೆ. ಈ ವಿಧಾನವನ್ನು ಅತ್ಯಂತ ಪರಿಣಾಮಕಾರಿ.

55
ಇನ್ನೊಂದು ಸುಲಭ ವಿಧಾನ

ಕರಿಬೇವಿನ ಎಲೆಗಳು, ಬೇವಿನ ಎಲೆಗಳು, ಒಣಗಿದ ಕೆಂಪು ಮೆಣಸಿನಕಾಯಿಗಳು ಮತ್ತು ಅರಿಶಿನವನ್ನು ಅಕ್ಕಿಯಲ್ಲಿನ ಹುಳುಗಳನ್ನ ಓಡಿಸಲು ಮನೆಮದ್ದುಗಳಾಗಿಯೂ ಬಳಸಲಾಗುತ್ತದೆ. ಆದರೆ ಇವು ಹುಳುಗಳನ್ನ ಸಂಪೂರ್ಣವಾಗಿ ನಿವಾರಿಸುವುದಿಲ್ಲವಾದರೂ ಹೊಸ ಕೀಟಗಳು ಬರದಂತೆ ತಡೆಯುತ್ತವೆ. ಹೀಗಾಗಿ ಮನೆಯ ಅಕ್ಕಿ ಮೂಟೆ ಅಥವಾ ಡಬ್ಬಿಯೊಳಗೆ ಬೇವಿನ ಎಲೆಗಳನ್ನ ಹಾಕಿಡಬಹುದು.

ಮಳೆಗಾಲದಲ್ಲಿ ಅಕ್ಕಿಯಲ್ಲಿ ಹುಳುಗಳ ಸಮಸ್ಯೆ ಹೆಚ್ಚು. ಏಕೆಂದರೆ ತೇವಾಂಶ, ಶಾಖವು ಅವುಗಳ ಸಂತಾನೋತ್ಪತ್ತಿಗೆ ಅನುಕೂಲಕರ ವಾತಾವರಣವನ್ನು ಸೃಷ್ಟಿಸುತ್ತದೆ. ಆದ್ದರಿಂದ, ಯಾವಾಗಲೂ ಅಕ್ಕಿಯನ್ನು ಗಾಳಿಯಾಡದ ಡಬ್ಬಿಯಲ್ಲಿ ಹಾಕಿಡಿ. ತೆರೆದ ಚೀಲಗಳಲ್ಲಿ, ಸಡಿಲವಾದ ಪ್ಲಾಸ್ಟಿಕ್ ಚೀಲಗಳಲ್ಲಿ ಹಾಕುವುದನ್ನ ತಪ್ಪಿಸಿ. ಪ್ರತಿ ಬಾರಿಯೂ ಅಡುಗೆಗೆ ಬೇಕಾದಷ್ಟು ಅಕ್ಕಿಯನ್ನ ಮಾತ್ರ ತೆಗೆದುಕೊಳ್ಳಿ. ಮತ್ತೆ ಗಾಳಿ ತೇವಾಂಶ ಆಗದಂತೆ ಡಬ್ಬಿಯನ್ನ ಬಿಗಿಯಾಗಿ ಮುಚ್ಚುವುದರಿಂದ ಅಕ್ಕಿಯಲ್ಲಿ ಹುಳುಗಳು ಕಾಣಿಸಿದರೆ ಕೇಳಿ.

ನೀವು ಅಕ್ಕಿಯಲ್ಲಿನ ಹುಳುಗಳನ್ನ ನಿವಾರಿಸಲು ಏನು ಮಾಡುತ್ತೀರಿ?

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories