ರೂಮ್ ಫ್ರೆಶ್ನರ್ ಬೇಡವೇ ಬೇಡ, ಈ 5 ಹೂಗಳನ್ನ ನೆಟ್ಟರೆ ಸಾಕು, ವರ್ಷವಿಡೀ ನಿಮ್ಮ ಮನೆ ಘಮಘಮಿಸುತ್ತೆ!

Published : Jul 22, 2026, 11:25 PM IST

ನಿಮ್ಮ ಮನೆಯನ್ನು ಒಂದು ಸುಗಂಧದ ಲೋಕವನ್ನಾಗಿ ಮಾಡಲು ಮನೆ ಮುಂದಿನ ಅಂಗಳದಲ್ಲಿ ಈ ಐದು ಸುವಾಸನಭರಿತ ಹೂವುಗಳನ್ನು ನೆಟ್ಟರೆ ಸಾಕು. ಇವು ನಿಮ್ಮ ಮನೆಯನ್ನು ವರ್ಷವಿಡೀ ಫ್ರೆಶ್ ಆಗಿಡುತ್ತವೆ. ಹೂವಿನ ಪರಿಮಳ ತುಂಬಿದ ಗಾಳಿ ಮನೆಯಲ್ಲೂ ಹರಡುತ್ತದೆ.

PREV
16
ಪರಿಮಳ ತುಂಬಿದ ಹೂಗಳು

ಪ್ರತಿ ಬಾರಿ ಹೂವಿನ ತಾಜಾ ಪರಿಮಳ ಬೇಕೆನಿಸಿದಾಗ ಪಾರ್ಕ್‌ಗೋ, ಗಾರ್ಡನ್‌ಗೋ ಹೋಗಬೇಕಿಲ್ಲ. ಮನೆಯಲ್ಲೇ ಅನುಭವಿಸಬಹುದು. ಈ ಐದು ಹೂವುಗಳನ್ನು ನೆಟ್ಟರೆ ಸಾಕು, ನಿಮ್ಮ ಮನೆ ಅಥವಾ ಬಾಲ್ಕನಿ ಗಾರ್ಡನ್ ಸದಾಕಾಲ ಫ್ರೆಶ್, ಪಾಸಿಟಿವಿಟಿಯಿಂದ ತುಂಬಿರುತ್ತದೆ. ಯಾರಾದರೂ ಅತಿಥಿಗಳು ಮನೆಗೆ ಬಂದರೆ ಆ ಫ್ರೆಶ್ ಗಾಳಿಯಿಂದಾಗಿ ಮತ್ತೆ ಮತ್ತೆ ಬರಬೇಕೆನಿಸುವಂತೆ ಮಾಡುತ್ತೆ.

26
ಮಲ್ಲಿಗೆ

ಮಲ್ಲಿಗೆ ಹೂವು ಘಮ ಯಾರಿಗೆ ತಾನೆ ಇಷ್ಟವಿಲ್ಲ. ಪರಿಮಳಕ್ಕೆ ಮಲ್ಲಿಗೆ ಹೂ ಹೆಸರುವಾಸಿ.. ದುಬಾರಿ ಪರ್ಫ್ಯೂಮ್‌ಗಳಲ್ಲಿ ಇದನ್ನು ಪ್ರಮುಖವಾಗಿ ಬಳಸುತ್ತಾರೆ. ನಿಮ್ಮ ಬಾಲ್ಕನಿಯಲ್ಲಿ ಇದನ್ನು ನೆಟ್ಟರೆ ಸಾಕು. ದುಬಾರಿ ಹಣ ತೆತ್ತು ರೂಮ್‌ ಫ್ರೆಶರ್ ತರೋದು ಬೇಡವೇ ಬೇಡ

36
ರಜನಿಗಂಧ ಹೂವು

ಹನುಮಂತನಿಗೆ ಹೂ ಯಾವುದು ಎಂದರೆ ಅದು ರಜನಿಗಂಧ ಹೂವು ಗಾಢ ಸುವಾಸನೆಗೆ ಮೈಮನಗಳಿಗೆ ಹಿತ. ರಿಲ್ಯಾಕ್ಸ್ ಮೂಡ್‌. ಮನೆ ಮುಂದೆ ಈ ಹೂಗಳನ್ನ ನೆಟ್ಟರೆ ಆಹಾ.. ಇಡೀ ಮನೆಯೇ ಸುಗಂಧಲೋಕ   ಈ ಹೂವು ನಿಮ್ಮ ಮನೆಗೆ ಪಾಸಿಟಿವ್ ಶಕ್ತಿ ನೀಡುವುದಲ್ಲದೆ ಇದು. ಸ್ತ್ರೀತ್ವದ ಭಾವದಿಂದ ತುಂಬುತ್ತದೆ.

46
ಗಾರ್ಡೇನಿಯಾ

'ಸುವಾಸನೆಗಳ ರಾಜ' ಎಂದೇ ಕರೆಯಲ್ಪಡುವ ಗಾರ್ಡೇನಿಯಾ ನಿಮಗೆ ಬೇಕಾದ ಹೂವು. ಇದರ ಕೆನೆ ಬಿಳಿ ಬಣ್ಣದ ಹೂವುಗಳು, ಹೊಳೆಯುವ ಹಸಿರು ಎಲೆಗಳು ನಿಮ್ಮ ದಿನವನ್ನು ಹೂವಿನಂತೆ ಫ್ರೆಶ್ ಆಗಿಸುತ್ತದೆ.

56
ಸಂಪಿಗೆ

ಸಂಪಿಗೆ ಹೂವು ಸಿಟ್ರಸ್, ಸಿಹಿ ಮಲ್ಲಿಗೆ ಮತ್ತು ಬೆಚ್ಚಗಿನ ವೆನಿಲ್ಲಾದ ಸುವಾಸನೆಗಳ ಮಿಶ್ರಣವನ್ನು ಹೊಂದಿದೆ. ಇದು ಮನೆ ಮುಂದೆ ನೆಟ್ಟರೆ ಒಳ್ಳೆಯ ಫೀಲ್ ಕೊಡುತ್ತದೆ.

66
ಲ್ಯಾವೆಂಡರ್
ಲ್ಯಾವೆಂಡರ್ ಸ್ವಚ್ಛ, ತಾಜಾ ಮತ್ತು ಮೂಲಿಕೆಯಂತಹ ಸುವಾಸನೆಯನ್ನು ಹೊಂದಿದೆ. ಇದರ ಪರಿಮಳಯುಕ್ತ ನೋಟ್ಸ್‌ಗಳು ಯಾರ ಮನಸ್ಥಿತಿಯನ್ನಾದರೂ ಸಹಜವಾಗಿ ಸುಧಾರಿಸುತ್ತವೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories