ಒಣದ್ರಾಕ್ಷಿ ಅಂಟಂಟಾಗಿ ಹುಳಿಯಾಗುತ್ತಿದೆಯೇ? ಡಬ್ಬದ ಮುಚ್ಚಳಕ್ಕೆ ಈ ಒಂದು ವಸ್ತು ಅಂಟಿಸಿ ನೋಡಿ

Published : Sep 16, 2026, 03:45 PM ISTUpdated : Sep 16, 2026, 03:47 PM IST

How to store raisins in monsoon: ಮಳೆಗಾಲ ಬಂತೆಂದರೆ ಒಣಹಣ್ಣುಗಳಿಗೆ ತೇವಾಂಶ ತಗುಲಿ ಹಾಳಾಗುವುದು ಸಾಮಾನ್ಯ. ಆದ್ದರಿಂದ ನಾವಿಂದು ಒಣದ್ರಾಕ್ಷಿ ಅಂಟಾಗದೆ, ಹುಳಿಯಾಗದೆ ಎಂದಿನಂತೆ ಸಿಹಿಯಾಗಿ ಮತ್ತು ಫ್ರೆಶ್ ಆಗಿಡಲು ಒಂದು ಉಪಯುಕ್ತ ಮನೆಮದ್ದು ಶೇರ್ ಮಾಡಿದ್ದೇವೆ ನೋಡಿ..

PREV
15
ಹಾಳಾಗುವುದು ಸಾಮಾನ್ಯ

ಹಾಳಾಗುವುದು ಸಾಮಾನ್ಯ
ಮಳೆಗಾಲದ ದಿನಗಳಲ್ಲಿ ವಾತಾವರಣದಲ್ಲಿ ತೇವಾಂಶ ಹೆಚ್ಚಿರುತ್ತದೆ. ಇದರಿಂದ ಡಬ್ಬದಲ್ಲಿಟ್ಟ ಒಣದ್ರಾಕ್ಷಿ ಬೇಗನೆ ಅಂಟಂಟಾಗಿ, ಒಂದು ರೀತಿಯ ಹುಳಿ ವಾಸನೆ ಬರಲು ಶುರುವಾಗುತ್ತದೆ. ಇನ್ನು ಮುಂದೆ ಚಿಂತೆ ಬೇಡ, ಇದನ್ನು ತಡೆಯಲು ಒಂದು ಸಿಂಪಲ್ ಮನೆಮದ್ದು ಇಲ್ಲಿದೆ.

25
'ಸಿಲಿಕಾ ಜೆಲ್'

‘ಸಿಲಿಕಾ ಜೆಲ್’
ನಾವು ಹೊಸ ವಾಟರ್ ಬಾಟಲ್, ಬ್ಯಾಗ್ ಅಥವಾ ಎಲೆಕ್ಟ್ರಾನಿಕ್ ವಸ್ತುಗಳನ್ನು ಕೊಂಡಾಗ ಅವುಗಳ ಒಳಗೆ ಸಣ್ಣ 'ಸಿಲಿಕಾ ಜೆಲ್' (Silica Gel) ಪ್ಯಾಕೆಟ್‌ಗಳು ಉಚಿತವಾಗಿ ಸಿಗುತ್ತವೆ. ಇವುಗಳನ್ನು ಕಸಕ್ಕೆ ಎಸೆಯುವ ಬದಲು ಎತ್ತಿಟ್ಟುಕೊಳ್ಳಿ.

35
ಹೀಗೆ ಅಂಟಿಸಿ

ಹೀಗೆ ಅಂಟಿಸಿ
ಒಣದ್ರಾಕ್ಷಿ ತುಂಬಿರುವ ಗಾಳಿಯಾಡದ (Air-tight) ಗಾಜಿನ ಅಥವಾ ಪ್ಲಾಸ್ಟಿಕ್ ಡಬ್ಬವನ್ನು ತೆಗೆದುಕೊಳ್ಳಿ. ಆ ಡಬ್ಬದ ಮುಚ್ಚಳದ ಒಳಭಾಗಕ್ಕೆ 'ಡಬಲ್ ಸೈಡ್ ಟೇಪ್' ಹಾಕಿ, ಅದರ ಮೇಲೆ ಈ ಸಿಲಿಕಾ ಜೆಲ್ ಪ್ಯಾಕೆಟ್ ಅನ್ನು ಅಂಟಿಸಿ.

45
ಒಣದ್ರಾಕ್ಷಿ ಸದಾ ಫ್ರೆಶ್

ಒಣದ್ರಾಕ್ಷಿ ಸದಾ ಫ್ರೆಶ್
ಸಿಲಿಕಾ ಜೆಲ್ ಡಬ್ಬದೊಳಗಿನ ತೇವಾಂಶವನ್ನು ಸಂಪೂರ್ಣವಾಗಿ ಹೀರಿಕೊಳ್ಳುತ್ತದೆ. ಇದರಿಂದಾಗಿ ಒಣದ್ರಾಕ್ಷಿ ಅಂಟಾಗುವುದಿಲ್ಲ, ಹುಳಿಯಾಗುವುದಿಲ್ಲ ಮತ್ತು ತಿಂಗಳುಗಳ ಕಾಲ ಹೊಸದರಂತೆಯೇ ತಾಜಾವಾಗಿ ಉಳಿಯುತ್ತದೆ.

55
ಒಂದು ಸಣ್ಣ ಮುನ್ನೆಚ್ಚರಿಕೆ

ಒಂದು ಸಣ್ಣ ಮುನ್ನೆಚ್ಚರಿಕೆ
ಸಿಲಿಕಾ ಜೆಲ್ ಪ್ಯಾಕೆಟ್ ಅನ್ನು ಯಾವುದೇ ಕಾರಣಕ್ಕೂ ಹರಿಯಬೇಡಿ. ಅಲ್ಲದೆ ಅದು ನೇರವಾಗಿ ಒಣದ್ರಾಕ್ಷಿಯ ಮೇಲೆ ಬೀಳದಂತೆ, ಮುಚ್ಚಳಕ್ಕೆ ಗಟ್ಟಿಯಾಗಿ ಅಂಟಿಕೊಂಡಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories