Kannada

ಉಪ್ಪು ಒದ್ದೆಯಾಗಿದ್ಯಾ?

ಅಡುಗೆ ಮನೆಯಲ್ಲಿ ಉಪ್ಪಿನ ಡಬ್ಬಕ್ಕೆ ಅಪ್ಪಿತಪ್ಪಿ ನೀರು ಬಿದ್ದರೆ ಅಥವಾ ಗಾಳಿಗೆ ಉಪ್ಪು ನೀರಾದರೆ ಚಿಂತೆ ಬೇಡವೇ ಬೇಡ!

Kannada

ಸಾಮಾನ್ಯವಾಗಿ ನಾವೇನು ಮಾಡ್ತೀವಿ?

ಉಪ್ಪು ಒದ್ದೆಯಾದ ತಕ್ಷಣ ಅದನ್ನು ಬಿಸಿಲಿನಲ್ಲಿ ಒಣಗಿಸಲು ಹೋಗ್ತೀವಿ ಅಥವಾ ಬಿಸಾಕಿ ಹೊಸ ಉಪ್ಪು ತರ್ತೀವಿ. ಆದರೆ ಇನ್ಮುಂದೆ ಹಾಗೆ ಮಾಡಬೇಡಿ. 

Image credits: Getty
Kannada

ಇಲ್ಲಿದೆ 'ಅಕ್ಕಿ ಮ್ಯಾಜಿಕ್'!

ಒದ್ದೆಯಾದ ಉಪ್ಪನ್ನು ಮತ್ತೆ ಮೊದಲಿನಂತೆ ಡ್ರೈ ಮಾಡಲು ನಿಮ್ಮ ಅಡುಗೆ ಮನೆಯಲ್ಲಿರುವ 'ಒಂದು ಮುಷ್ಠಿ ಅಕ್ಕಿ' ಸಾಕು!

Image credits: Getty
Kannada

ಹೀಗೆ ಮಾಡಿ

ನೀರು ಬಿದ್ದಿರುವ ಉಪ್ಪಿನ ಜಾರ್ ಅಥವಾ ಡಬ್ಬದೊಳಗೆ ಒಂದು ಹಿಡಿಯಷ್ಟು ಒಣ ಅಕ್ಕಿ ಕಾಳುಗಳನ್ನು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಮುಚ್ಚಿಡಿ.

Image credits: Pixabay
Kannada

ಇದು ಹೇಗೆ ಕೆಲಸ ಮಾಡುತ್ತೆ?

ಅಕ್ಕಿಗೆ ತೇವಾಂಶವನ್ನು ವೇಗವಾಗಿ ಹೀರಿಕೊಳ್ಳುವ ನೈಸರ್ಗಿಕ ಗುಣವಿದೆ. ಉಪ್ಪಿನಲ್ಲಿರುವ ಎಲ್ಲಾ ಹೆಚ್ಚುವರಿ ನೀರನ್ನು ಅಕ್ಕಿ ಕೆಲವೇ ಗಂಟೆಗಳಲ್ಲಿ ಹೀರಿಕೊಳ್ಳುತ್ತದೆ.

Image credits: Getty
Kannada

ಉಪ್ಪು ಮತ್ತೆ ಮೊದಲಿನಂತೆ ಡ್ರೈ!

ಸ್ವಲ್ಪ ಸಮಯದ ನಂತರ ಉಪ್ಪು ಸಂಪೂರ್ಣವಾಗಿ ಒಣಗಿ ಮೊದಲಿನಂತೆ ಪುಡಿಯಾಗುತ್ತದೆ. ನೀವು ಅಕ್ಕಿಯನ್ನು ಜರಡಿ ಹಿಡಿದು ಬೇರ್ಪಡಿಸಬಹುದು ಅಥವಾ ಹಾಗೆಯೇ ಬಿಡಬಹುದು.

Image credits: stockPhoto
Kannada

ಸ್ಮಾರ್ಟ್ ಕಿಚನ್ ಹ್ಯಾಕ್!

ಉಪ್ಪು ಗಡ್ಡೆ ಕಟ್ಟುವುದನ್ನು ತಪ್ಪಿಸಲು ಯಾವಾಗಲೂ ಉಪ್ಪಿನ ಡಬ್ಬದಲ್ಲಿ 10-15 ಅಕ್ಕಿ ಕಾಳುಗಳನ್ನು ಹಾಕಿಡಿ.

Image credits: stockPhoto

ಕುಕ್ಕರ್‌ನಿಂದ ನೀರು ಹೊರಬರ್ತಿದೆಯಾ? ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ

ದೋಸೆ ಹಿಟ್ಟು ಹುಳಿಯಾಗಿದ್ರೆ ಏನೂ ಸೇರಿಸ್ಬೇಡಿ, ಈ ಹಳೆ ವಿಧಾನ ಫಾಲೋ ಮಾಡಿ

ಈ ಬಾಕ್ಸ್‌ನಲ್ಲಿಟ್ರೆ ಸಾಕು ಕೊತ್ತಂಬರಿ-ಪುದೀನಾ ಒಂದು ವಾರ ಫ್ರೆಶ್ ಆಗಿರುತ್ತೆ

ಅಡುಗೆಮನೆ ಸಿಂಕ್ ಪಳಪಳ ಹೊಳೆಯಲು, 5 ರೂ.ನಲ್ಲಿ ಸಿಗುವ ಈ ಸಿಂಪಲ್ ಟಿಪ್ಸ್ ಬಳಸಿ