ಈಗ ಅರ್ಥವಾಯಿತು ಅಲ್ಲವೇ? ರಾತ್ರಿಯಿಡೀ ಹೊಟ್ಟೆಗೆ ಏನೂ ಹಾಕದೇ ಬೆಳಿಗ್ಗೆ ಎದ್ದ ತಕ್ಷಣ, ಬೇರೆ ಏನನ್ನೂ ಹಾಕಬೇಡಿ, ನೀರನ್ನು ಬಿಟ್ಟು. ನೀರು ಮಾತ್ರವೇ ಖಾಲಿ ಹೊಟ್ಟೆಗೆ ಸೂಕ್ತ ಎನ್ನುತ್ತಾರೆ ಆರೋಗ್ಯಶಾಸ್ತ್ರವನ್ನು ಅರೆದು ಕುಡಿದಿರುವ ಯೋಗಿಗಳು. ಅದೂ ಇದೂ ಸಮೀಕ್ಷೆಗಳು, ಲೇಖನಗಳು ಅಥವಾ ಯೂಟ್ಯೂಬ್ ಪಂಡಿತರ ಮಾತುಗಳನ್ನು ಕೇಳಿ, ನಾವು ಟೀ ಅಥವಾ ಕಾಫಿಯನ್ನೇ ಕುಡಿಯುತ್ತೇವೆ, ಏನೀಗ ಎನ್ನುವವರಿಗೆ ಯಾವುದೇ ಉತ್ತರ ಸಿಗಲಾರದು. ಏಕೆಂದರೆ, ಫೈನಲೀ, ಅವರಿಷ್ಟ, ಅವರ ಹೊಟ್ಟೆ, ಅವರ ಆರೋಗ್ಯ ಎಂದಷ್ಟೇ ಹೇಳಬೇಕಾಗುತ್ತದೆ. ಆದರೆ, ಖಾಲಿ ಹೊಟ್ಟೆಗೆ ನೀರು ಮಾತ್ರ ಸಂಜೀವಿನಿ ಎನ್ನುತ್ತಾರೆ ಯೋಗಿಗಳು ಎನ್ನುವ ಮಾತಂತೂ ಸತ್ಯ.