ಕುಕ್ಕರ್ ರಬ್ಬರ್ ಸಡಿಲವಾಗಿ ನೀರು ಸೋರುತ್ತಿದ್ರೆ ಈ ರೀತಿ ಹತ್ತೇ ನಿಮಿಷದಲ್ಲಿ ಟೈಟ್ ಮಾಡ್ಬೋದು

Published : Jan 01, 2026, 01:00 PM IST

Pressure cooker leaking: ಈ ಸುಲಭವಾದ ಮನೆಮದ್ದಿನೊಂದಿಗೆ ನೀವು ನಿಮ್ಮ ಹಳೆಯ ರಬ್ಬರ್ ಅನ್ನು 10 ನಿಮಿಷಗಳಲ್ಲಿ ಮೊದಲಿನಂತೆಯೇ ಬಿಗಿಗೊಳಿಸಬಹುದು ಅಥವಾ ಟೈಟ್ ಮಾಡ್ಬೋದು. ಹಾಗಾಗಿ ಇಂದು ಕುಕ್ಕರ್‌ನ ರಬ್ಬರ್ ಬಿಗಿಗೊಳಿಸುವುದು ಹೇಗೆ ಎಂದು ನೋಡೋಣ...

PREV
16
ಹೀಗಾಗುವುದು ಕಾಮನ್

ನಮ್ಮ ಅಡುಗೆಮನೆಯಲ್ಲಿ ತರಕಾರಿ, ಅನ್ನ ಬೇಯಿಸಲು ನಾವು ಪ್ರೆಶರ್ ಕುಕ್ಕರ್‌ ಬಳಸುವಾಗ ಒಂದು ವಿಚಾರಕ್ಕೆ ನಿರಾಶೆಯಾಗುತ್ತದೆ. ಅದೇನಪ್ಪಾ ಅಂದ್ರೆ ಇದ್ದಕ್ಕಿದ್ದಂತೆ ನಮ್ಮ ಪ್ರೆಶರ್ ಕುಕ್ಕರ್‌ ಶಿಳ್ಳೆ ಹೊಡೆಯುವ ಬದಲು ನೀರು ಸೋರಿಸುತ್ತದೆ. ಕುಕ್ಕರ್‌ನ ರಬ್ಬರ್ ಸಡಿಲವಾದಾಗ ಹೀಗಾಗುವುದು ಕಾಮನ್. ಕೆಲವೊಮ್ಮೆ ರಬ್ಬರ್ ಬಿರುಕು ಬಿಟ್ಟಾಗ ಅಥವಾ ಹಿಗ್ಗಿದಾಗಲೂ ಈ ಸಮಸ್ಯೆ ಉಂಟಾಗುತ್ತದೆ.

26
ರಬ್ಬರ್ ಬಿಗಿಗೊಳಿಸುವುದು ಹೇಗೆ?

ರಬ್ಬರ್ ಲೂಸ್ ಅಥವಾ ಸಡಿಲವಾದಾಗ ಒತ್ತಡ ಉಂಟಾಗುವುದಿಲ್ಲ. ಇದರಿಂದಾಗಿ ಆಹಾರವನ್ನು ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಮತ್ತು ಬಹಳಷ್ಟು ಗ್ಯಾಸ್ ವ್ಯರ್ಥವಾಗುತ್ತದೆ . ಆಗ ಹೆಚ್ಚಿನ ಜನರು ಹೊಸ ಪ್ರೆಶರ್ ಕುಕ್ಕರ್ ಅನ್ನು ಖರೀದಿಸುತ್ತಾರೆ. ಆದರೆ ಈ ಸುಲಭವಾದ ಮನೆಮದ್ದಿನೊಂದಿಗೆ ನೀವು ನಿಮ್ಮ ಹಳೆಯ ರಬ್ಬರ್ ಅನ್ನು 10 ನಿಮಿಷಗಳಲ್ಲಿ ಮೊದಲಿನಂತೆಯೇ ಬಿಗಿಗೊಳಿಸಬಹುದು ಅಥವಾ ಟೈಟ್ ಮಾಡ್ಬೋದು. ಹಾಗಾಗಿ ಇಂದು ಕುಕ್ಕರ್‌ನ ರಬ್ಬರ್ ಬಿಗಿಗೊಳಿಸುವುದು ಹೇಗೆ ಎಂದು ನೋಡೋಣ…

36
ರಬ್ಬರ್ ಏಕೆ ಸಡಿಲವಾಗುತ್ತದೆ?

ರಬ್ಬರ್ ಶಾಖಕ್ಕೆ ಒಡ್ಡಿಕೊಂಡಾಗ ಅದು ತನ್ನ ಎಲಾಸ್ಟಿಕ್ ಕಳೆದುಕೊಳ್ಳುತ್ತದೆ ಮತ್ತು ಹಿಗ್ಗುತ್ತದೆ. ರಬ್ಬರ್ ಮೇಲಿನ ಗ್ರೀಸ್ ಮುಚ್ಚಳಕ್ಕೆ ಆರಾಮಾಗಿ ಹೊಂದಿಕೊಳ್ಳುವುದನ್ನು ತಡೆಯುತ್ತದೆ. ರಬ್ಬರ್ ಕುಕ್ಕರ್‌ನ ಸುತ್ತಲಿನ ಜಾಗಕ್ಕೆ ಸರಿಯಾಗಿ ಅಂಟಿಕೊಳ್ಳುವುದನ್ನು ತಡೆಯುತ್ತದೆ.

46
ಸಡಿಲವಾದ ರಬ್ಬರ್ ಟೈಟ್ ಮಾಡೋದು ಹೇಗೆ ?

ಮೊದಲಿಗೆ ಕುಕ್ಕರ್‌ನ ಮುಚ್ಚಳದಿಂದ ರಬ್ಬರ್ ತೆಗೆದುಹಾಕಿ. ಸಂಪೂರ್ಣವಾಗಿ ಸ್ವಚ್ಛಗೊಳಿಸಿ. ಈಗ ಪಾತ್ರೆಯಲ್ಲಿ ಸಾಕಷ್ಟು ಐಸ್ ಅಥವಾ ತಣ್ಣನೆಯ ನೀರಿನಿಂದ ತುಂಬಿಸಿ. ರಬ್ಬರ್ ಅನ್ನು ಈ ಐಸ್ ನೀರಿನಲ್ಲಿ ಅದ್ದಿ ಅಥವಾ ಅದನ್ನು 10 ನಿಮಿಷಗಳ ಕಾಲ ಅದರೊಳಗಿಡಿ. ಈ ಟೆಕ್ನಿಕ್ ಇಷ್ಟವಾಗದಿದ್ರೆ ರಬ್ಬರ್ ಅನ್ನು ನೇರವಾಗಿ ಫ್ರೀಜರ್‌ನಲ್ಲಿ 10 ರಿಂದ 15 ನಿಮಿಷಗಳ ಕಾಲ ಇರಿಸಬಹುದು. ಶೀತವು ರಬ್ಬರ್ ಅಣುಗಳನ್ನು ಸಂಕುಚಿತಗೊಳಿಸಲು ಕಾರಣವಾಗುತ್ತದೆ. ಇದರಿಂದಾಗಿ ಹಿಗ್ಗಿದ ರಬ್ಬರ್ ಅದರ ಮೂಲ ಆಕಾರಕ್ಕೆ ಮರಳುತ್ತದೆ ಮತ್ತು ಬಿಗಿಯಾಗುತ್ತದೆ .

56
ನೀರು ಹೊರಹೋಗುವುದು ತಡೆಯುತ್ತೆ

ರಬ್ಬರ್ ತುಂಬಾ ಹಳೆಯದಾಗಿದ್ದರೆ ಮತ್ತು ಸ್ವಲ್ಪ ಸಡಿಲವಾಗಿದ್ದರೆ ನೀವು ಸ್ವಲ್ಪ ಪ್ರಮಾಣದಲ್ಲಿ ಬೆರೆಸಿದ ಹಿಟ್ಟನ್ನು ಮುಚ್ಚಳದ ಅಂಚಿಗೆ ಹಚ್ಚಬಹುದು. ಇದು ತಾತ್ಕಾಲಿಕ ಟೇಪ್ ಆಗಿ ಕಾರ್ಯನಿರ್ವಹಿಸುತ್ತದೆ ಮತ್ತು ನೀರು ಹೊರಹೋಗುವುದನ್ನು ತಡೆಯುತ್ತದೆ.

66
ರಬ್ಬರ್ ಕಟ್ ಆಗಿದ್ರೆ

ರಬ್ಬರ್ ನೇರ ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳದಂತೆ ಎಚ್ಚರವಹಿಸಿ. ಅಡುಗೆ ಮಾಡಿದ ನಂತರ ಯಾವಾಗಲೂ ರಬ್ಬರ್ ತೆಗೆದು ಸ್ವಚ್ಛಗೊಳಿಸಿ. ಅಲ್ಲದೆ, ಅದರ ನಮ್ಯತೆಯನ್ನು ಕಾಪಾಡಿಕೊಳ್ಳಲು ರಬ್ಬರ್‌ಗೆ ಸ್ವಲ್ಪ ಅಡುಗೆ ಎಣ್ಣೆಯನ್ನು ಹಚ್ಚಿ. ರಬ್ಬರ್ ಕಟ್ ಆಗಿದ್ರೆ ಅದನ್ನು ತಕ್ಷಣ ಬದಲಾಯಿಸಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories