ಹಳೆಯ ಪ್ಲಾಸ್ಟಿಕ್, ಸ್ಟೀಲ್ ಅಥವಾ ಸೆರಾಮಿಕ್ ಜಗ್‌ಗಳನ್ನು ಬಳಸಿ ಸುಲಭವಾಗಿ ಪ್ಲಾಂಟರ್‌ಗಳನ್ನು ತಯಾರಿಸಬಹುದು. ಜಗ್‌ಗೆ ಬಣ್ಣ ಹಚ್ಚಿ, ಮಣ್ಣು ತುಂಬಿ ಗಿಡ ನೆಡುವುದರಿಂದ ಒಳಾಂಗಣ, ಬಾಲ್ಕನಿ ಮತ್ತು ಉದ್ಯಾನವನ್ನು ಸುಂದರವಾಗಿ ಅಲಂಕರಿಸಬಹುದು.
ಜಗ್ ಪ್ಲಾಂಟರ್ ಮಾಡಲು ನಿಮಗೆ ಹಳೆಯ ಪ್ಲಾಸ್ಟಿಕ್, ಸ್ಟೀಲ್ ಅಥವಾ ಸೆರಾಮಿಕ್ ಜಗ್ ಬೇಕಾಗುತ್ತದೆ. ಈ ಜಗ್ ಮಾಡಲು ಹೆಚ್ಚುವರಿಯಾಗಿ ಅಕ್ರಿಲಿಕ್ ಪೇಂಟ್, ಪೇಂಟ್ ಬ್ರಷ್, ಡ್ರಿಲ್ ಅಥವಾ ಕಟ್ಟರ್ ಬೇಕಾಗುತ್ತದೆ. ಮೊದಲಿಗೆ ಜಗ್‌ಗೆ ಕೆಳಭಾಗದಲ್ಲಿ ಸಣ್ಣ ರಂಧ್ರ ಮಾಡಿಕೊಳ್ಳಿ. ನಂತರ ನಿಮ್ಮಿಷ್ಟದ ಬಣ್ಣದಿಂದ ಅಲಂಕಾರ ಮಾಡಿ. ಜಗ್‌ನೊಳಗೆ ಸಣ್ಣ ಕಲ್ಲು ಮತ್ತು ಮಣ್ಣು ಸೇರಿಸಿದ್ರೆ ಸುಂದರವಾದ DIY ಜಗ್ ಪ್ಲಾಂಟರ್ ಸಿದ್ಧವಾಗುತ್ತದೆ.
25
ಜಗ್ ಪ್ಲಾಂಟರ್ ಐಡಿಯಾ
ನಿಮ್ಮ ಮನೆಯಲ್ಲಿ ಸ್ಟೀಲ್ / ಸೆರಾಮಿಕ್ ಜಗ್ ಇದ್ದರೆ, ಮನೆಯ ಹಾಲ್‌ನೊಳಗೆ ಸುಂದರವಾದ ಪ್ಲಾಂಟರ್ ಮಾಡಿಕೊಳ್ಳಬಹುದಾಗಿದೆ. ಮನೆಯಲ್ಲಿಡುವ ಪ್ಲಾಂಟರ್ ಮಾಡಲು ಬಿಳಿ, ಕೆಂಪು ಅಥವಾ ನೀಲಿ ಬಣ್ಣಗಳನ್ನು ಬಳಸಿದ್ರೆ ಉತ್ತಮವಾಗಿರುತ್ತದೆ. ಈ ಪಾಟ್‌ಗಳನ್ನು ಟೇಬಲ್ ಮೇಲೆ, ಕಿಟಕಿ ಅಥವಾ ಮನೆಯ ಮೂಲೆ ಭಾಗದಲ್ಲಿಡಬಹುದು.
35
ನೇತಾಡುವ ಜಗ್ ಪ್ಲಾಂಟರ್
ನಿಮ್ಮ ಬಾಲ್ಕನಿ ಅಥವಾ ಉದ್ಯಾನದಲ್ಲಿ ಸಸ್ಯಗಳನ್ನು ನೇತುಹಾಕಲು ಈ ಜಗ್ ಬಳಕೆ ಮಾಡಬಹುದು. ಜಗ್ ಹಿಡಿಕೆಯನ್ನು ಕೊಕ್ಕೆಯಿಂದ ನೇತುಹಾಕಿ ಸ್ವಲ್ಪ ಓರೆಯಾಗಿರಿಸಿದರೆ ಮನೆಗೆ ಅಟ್ರ್ಯಾಕ್ಟಿವ್ ಲುಕ್ ಸಿಗುತ್ತದೆ. ಈ ಜಗ್‌ಗಳಿಗೆ ಬಳ್ಳಿಗಳ ಸಸ್ಯಗಳನ್ನು ನೆಡಿ. ಈ ಶೈಲಿಯ ಪಾಟ್‌ಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ.
ನಿಮ್ಮ ಬಳಿ ದೊಡ್ಡ ಸೆರಾಮಿಕ್ ಜಗ್‌ಗಳಿದ್ದರೆ, ಅವುಗಳಿಗೆ ಮೊದಲು ಬೇಸ್ ಕಲರ್ ಅಪ್ಲೈ ಮಾಡಿ. ನಂತರ ನಿಮ್ಮಿಷ್ಟದ ಹೂವು ಅಥವಾ ಸುಂದರವಾದ ಬಳ್ಳಿಯ ಚಿತ್ರಗಳನ್ನು ಬಿಡಿಸಿಕೊಳ್ಳಿ. ನಂತರ ಜಗ್‌ನೊಳಗೆ ಮಣ್ಣು ತುಂಬಿಸಿ ಗಿಡ ನೆಡಿ. ಈ ಪ್ಲಾಂಟರ್‌ಗಳನ್ನು ಮನೆ ಬಾಗಿಲು, ಕಿಟಕಿಯಲ್ಲಿಡಬಹುದು. ಮನೆ ಮುಂಭಾಗ ಗಾರ್ಡನ್ ಇದ್ರೆ ಸಾಲಾಗಿ ಜಗ್ ಪ್ಲಾಂಟರ್ ಇಡಬಹುದಾಗಿದೆ.
55
ಒಳಾಂಗಣ ಜಗ್ ಪ್ಲಾಂಟರ್
ಒಳಾಂಗಣ ಅಲಂಕಾರಕ್ಕೆ ಜಗ್ ಪ್ಲಾಂಟರ್‌ಗಳು ಸೂಕ್ತ ಆಯ್ಕೆಯಾಗಿದೆ. ಮರದ ಟೇಬಲ್, ಡೈನಿಂಗ್ ಟೇಬಲ್ ಅಥವಾ ಶೆಲ್ಫ್‌ನಲ್ಲಿ 2-3 ಜಗ್ ಪ್ಲಾಂಟರ್‌ಗಳನ್ನು ಜೋಡಿಸೋದರಿಂದ ಮನೆ ಸುಂದರವಾಗಿ ಕಾಣಿಸುತ್ತದೆ. ಮನಿ ಪ್ಲಾಂಟ್, ಪೊಥೋಸ್ ನಂತಹ ಗಿಡಗಳು ಸ್ಟೈಲಿಶ್ ಲುಕ್ ನೀಡುತ್ತವೆ.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.