ಹೊಟ್ಟೆ ಸುತ್ತ ರಬ್ಬರ್‌ನಂತೆ ಜೋತು ಬಿದ್ದಿರುವ ಕೊಬ್ಬು ಕರಗಿಸುವ ಪ್ರಮುಖ ಮಸಾಲೆಗಳು

Published : Oct 01, 2025, 08:53 AM IST

Kitchen spices for weight loss:  ನಮ್ಮ ಅಡುಗೆಮನೆಯಲ್ಲಿ ಲಭ್ಯವಿರುವ ಸಾಮಾನ್ಯ ಮಸಾಲೆಗಳು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಿ ತೂಕ ನಷ್ಟಕ್ಕೆ ಸಹಕರಿಸುತ್ತವೆ. ಈ ಪದಾರ್ಥಗಳು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸಿ, ಕ್ರಮೇಣವಾಗಿ ತೂಕ ಇಳಿಸಲು ಸಹಾಯ ಮಾಡುತ್ತವೆ.

PREV
15
ತೂಕ ನಷ್ಟ ಪ್ರಕ್ರಿಯೆ

ನಮ್ಮ ಅಡುಗೆಮನೆಯಲ್ಲಿರುವ ಅನೇಕ ಮಸಾಲೆಗಳು ಹೊಟ್ಟೆಯ ಸುತ್ತಲಿನ ಕೊಬ್ಬನ್ನು ಹೊರಹಾಕಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. ಈ ಪದಾರ್ಥಗಳು ನಿಮ್ಮಲ್ಲಿನ ಅತಿಯಾದ ತೂಕವನ್ನು ಹಂತ ಹಂತವಾಗಿ ಕರಗಿಸಲು ಸಹಾಯ ಮಾಡುತ್ತವೆ. ತೂಕ ನಷ್ಟವು ದೀರ್ಘಕಾಲೀನ ಪ್ರಕ್ರಿಯೆಯಾಗಿದ್ದು, ಕ್ರಮೇಣ ವಿಧಾನವನ್ನು ಅನುಸರಿಸುವುದು ನಿಮ್ಮ ಆರೋಗ್ಯಕ್ಕೆ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿ. ಅಡುಗೆ ಮನೆಯಲ್ಲಿರುವ ಮಸಾಲೆಗಳ ಪಟ್ಟಿ ಇಲ್ಲಿದೆ.

25
ಬೆಳ್ಳುಳ್ಳಿ ಮತ್ತು ದಾಲ್ಚಿನ್ನಿ

ಬೆಳ್ಳುಳ್ಳಿ

ಫೈಬರ್ ಅಂಶ ಭರಿತ ಬೆಳ್ಳುಳ್ಳಿ ಹಸಿವನ್ನು ಕಡಿಮೆ ಮಾಡಲು ಮತ್ತು ಅಧಿಕ ತೂಕವನ್ನು ಇಳಿಸಲು ಸಹಾಯ ಮಾಡುತ್ತದೆ. ತೂಕ ಇಳಿಕೆ ಮಾಡಲು ಬಯಸೋರು ಬೆಳ್ಳುಳ್ಳಿ ಮಿಶ್ರಿತ ಪಾನೀಯಗಳನ್ನು ಸೇವಿಸುತ್ತಿರುತ್ತಾರೆ.

ದಾಲ್ಚಿನ್ನಿ

ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ದಾಲ್ಚಿನ್ನಿಯನ್ನು ಅಡುಗೆಯಲ್ಲಿ ಸೇರಿಸುವುದರಿಂದ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

35
ಶುಂಠಿ ಮತ್ತು ಜೀರಿಗೆ

ಶುಂಠಿ

ಶುಂಠಿಯಲ್ಲಿರುವ ಅಂಶಗಳು ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಸೇವಿಸುವ ಆಹಾರದ ಜೀರ್ಣಕ್ರಿಯೆಗೆ ಶುಂಠಿ ಸಹಾಯ ಮಾಡುತ್ತದೆ. ಹಾಗಾಗಿ ಶುಂಠಿ ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಜೀರಿಗೆ

ಆ್ಯಂಟಿಆಕ್ಸಿಡೆಂಟ್‌ಗಳಿಂದ ಸಮೃದ್ಧವಾಗಿರುವ ಜೀರಿಗೆಯು ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಮತ್ತು ಅಧಿಕ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಕೆಲವರು ಖಾಲಿ ಸಮಯದಲ್ಲಿ ಜೀರಿಗೆಯನ್ನ ಅಗೆಯುವ ಅಭ್ಯಾಸ ರೂಢಿಸಿಕೊಂಡಿರುತ್ತಾರೆ

45
ಅರಿಶಿನ ಮತ್ತು ಕರಿಮೆಣಸು

ಅರಿಶಿನ

ಅರಿಶಿನದಲ್ಲಿರುವ ಕರ್ಕ್ಯುಮಿನ್ ಕೊಬ್ಬನ್ನು ಕರಗಿಸುವ ಸಾಮರ್ಥ್ಯವನ್ನು ಹೊಂದಿದೆ. ಆದ್ದರಿಂದ ಅರಿಶಿನವು ದೇಹದ ತೂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹಾಗಾಗಿ ಅಡುಗೆಯಲ್ಲಿ ಅರಿಶಿನ ಬಳಕೆ ಮಾಡಬೇಕಾಗುತ್ತದೆ.

ಕರಿಮೆಣಸು

ಫೈಬರ್ ಮತ್ತು ಪೆಪ್ಪರಿನ್ ಹೊಂದಿರುವ ಕರಿಮೆಣಸು ಹೊಟ್ಟೆಯ ಕೊಬ್ಬನ್ನು ತಡೆಯಲು, ಕ್ಯಾಲೊರಿಗಳನ್ನು ಬರ್ನ್ ಮಾಡಲು ಮತ್ತು ತೂಕವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ: ಒಂದು ಆಹಾರ ತ್ಯಜಿಸಿ 6 ತಿಂಗಳಲ್ಲಿ 30 ಕೆಜಿ ತೂಕ ಇಳಿಸಿದ ದಂತವೈದ್ಯೆ

55
ಮೆಂತ್ಯ ಮತ್ತು ಓಂಕಾಳು

ಮೆಂತ್ಯ

ನಾರಿನಂಶದಿಂದ ಸಮೃದ್ಧವಾಗಿರುವ ಮೆಂತ್ಯ ಕೂಡ ದೇಹದ ತೂಕವನ್ನು ಕಡಿಮೆ ಮಾಡಲು ತುಂಬಾ ಸಹಾಯಕವಾಗಿದೆ. ವಿವಿಧ ಅಡುಗೆಯಲ್ಲಿ ಮೆಂತ್ಯೆ ಬಳಕೆ ಮಾಡಬೇಕು.

ಓಂಕಾಳು (ಅಜ್ವೈನ್)

ಓಂ ಕಾಳು ಸೇವನೆ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ತೂಕ ಇಳಿಕೆ ಮಾರ್ಗದಲ್ಲಿರುವ ಜನರು ಮಜ್ಜಿಗೆಯಲ್ಲಿ ಓಂಕಾಳು ಪುಡಿಯನ್ನು ಸೇರಿಸಿಕೊಳ್ಳುತ್ತಾರೆ. ಓಂಕಾಳು ಅಸಿಡಿಟಿಯನ್ನು ಸಹ ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Healthy Lifestyle: ಸರಿಯಾದ ಸಮಯಕ್ಕೆ ಊಟ ಮಾಡದಿದ್ರೆ ಏನಾಗುತ್ತೆ?

Read more Photos on
click me!

Recommended Stories