Citric acid cleaning hacks: ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಕೆಮಿಕಲ್ ಕ್ಲೀನರ್‌ಗಳನ್ನು ಬಳಸಿ ಬೇಸತ್ತಿದ್ದೀರಾ? ಅವುಗಳಿಂದ ಕೈ ಚರ್ಮ ಹಾಳಾಗುವ ಮತ್ತು ಪರಿಸರಕ್ಕೆ ಹಾನಿಯಾಗುವ ಭಯವೇ? ಹಾಗಿದ್ದರೆ ನಿಮಗಾಗಿ ಇಲ್ಲಿದೆ ಒಂದು ಬೆಸ್ಟ್ ಹಾಗೂ ಪರಿಸರ ಸ್ನೇಹಿ ಆಯ್ಕೆ!
ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆ ಮನೆಯನ್ನು ಸ್ವಚ್ಛಗೊಳಿಸಲು ಮಾರುಕಟ್ಟೆಯಲ್ಲಿ ಹಲವಾರು ರೀತಿಯ ಕೆಮಿಕಲ್ ಕ್ಲೀನರ್‌ಗಳು ಲಭ್ಯವಿವೆ. ಆದರೆ ನೀವು ಯಾವುದೇ ನೈಸರ್ಗಿಕ ಅಥವಾ ಕಡಿಮೆ ವೆಚ್ಚದ ಪ್ರೊಡಕ್ಟ್ ಹುಡುಕುತ್ತಿದ್ದರೆ, ಸಿಟ್ರಿಕ್ ಆಸಿಡ್ ನಿಮಗೆ ತುಂಬಾ ಉಪಯುಕ್ತವಾಗಬಹುದು. ಇಲ್ಲಿ ಆಸಿಡ್ ಪದ ಕೇಳಿ ಮತ್ತೆ ಭಯಪಡಬೇಡಿ. ಯಾಕೆಂದರೆ ಸಿಟ್ರಿಕ್ ಆಸಿಡ್ ನೀವು ದಿನ ನಿತ್ಯ ಬಳಸುವ ನಿಂಬೆಹಣ್ಣು, ಕಿತ್ತಳೆ ಮತ್ತು ಇತರ ಹುಳಿ ಹಣ್ಣುಗಳಲ್ಲಿ ಕಂಡುಬರುವ ಒಂದು ನೈಸರ್ಗಿಕ ಅಂಶವಷ್ಟೇ. ಅಂದಹಾಗೆ ಇದನ್ನು ಸ್ವಚ್ಛತೆಗೆ ಒಂದು ಪರಿಣಾಮಕಾರಿ ಮತ್ತು ಪರಿಸರ ಸ್ನೇಹಿ ಆಯ್ಕೆ ಎಂದು ಪರಿಗಣಿಸಲಾಗುತ್ತದೆ.
27
ಇದರ ವಿಶೇಷತೆ ಏನು?
ಇದರ ವಿಶೇಷತೆ ಏನು? ಸಿಟ್ರಿಕ್ ಆಸಿಡ್‌ನ ವಿಶೇಷತೆಯೆಂದರೆ ಇದು ಹಠಮಾರಿ ಕಲೆಗಳು, ಸುಣ್ಣದ ಪದರ, ತುಕ್ಕು ಮತ್ತು ಬ್ಯಾಕ್ಟೀರಿಯಾಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ. ಜೊತೆಗೆ ಇದರ ಬಳಕೆಯಿಂದ ಮನೆಯಲ್ಲಿ ತಾಜಾತನದಿಂದ ಕೂಡಿದ ಸುಗಂಧವೂ ಉಳಿಯುತ್ತದೆ. ಇದೇ ಕಾರಣಕ್ಕಾಗಿ ಇತ್ತೀಚಿನ ದಿನಗಳಲ್ಲಿ ಅನೇಕ ಜನರು ಕೆಮಿಕಲ್ ಕ್ಲೀನರ್‌ಗಳ ಬದಲಿಗೆ ಇದನ್ನು ಬಳಸಲು ಇಷ್ಟಪಡುತ್ತಿದ್ದಾರೆ.
37
ಸಿಟ್ರಿಕ್ ಆಸಿಡ್ ಎಲ್ಲಿ ಸಿಗುತ್ತದೆ?
ಸಿಟ್ರಿಕ್ ಆಸಿಡ್ ಎಲ್ಲಿ ಸಿಗುತ್ತದೆ? ಇದು ಬಿಳಿ ಬಣ್ಣದ ಸಣ್ಣ ಸಕ್ಕರೆ ತರಹದ ಹರಳುಗಳ ರೂಪದಲ್ಲಿರುತ್ತದೆ. ಇದನ್ನು Lemon Salt ಎಂದು ಕರೆಯುತ್ತಾರೆ. ಇದು ಯಾವುದೇ ದಿನಸಿ ಅಂಗಡಿ (Grocery store), ಸೂಪರ್ ಮಾರ್ಕೆಟ್ ಅಥವಾ ಬೇಕರಿ ಐಟಂ ಸಿಗುವ ಅಂಗಡಿಗಳಲ್ಲಿ ತುಂಬಾ ಕಡಿಮೆ ಬೆಲೆಗೆ ಸಿಗುತ್ತದೆ.
ಬಾತ್‌ರೂಂ ಸ್ವಚ್ಛತೆಗೆ ರಾಮಬಾಣ ಹೌದು. ಬಾತ್‌ರೂಂ ಸ್ವಚ್ಛತೆಯಲ್ಲೂ ಇದು ಸಾಕಷ್ಟು ಉಪಯುಕ್ತ ಎಂದು ಪ್ರೂವ್ ಆಗಿದೆ. ಟಾಯ್ಲೆಟ್ ಬೌಲ್ ಒಳಗೆ ಎರಡರಿಂದ ಮೂರು ಚಮಚ ಸಿಟ್ರಿಕ್ ಆಸಿಡ್ ಹಾಕಿ ಒಂದು ಗಂಟೆ ಕಾಲ ಹಾಗೆಯೇ ಬಿಡಿ. ಕಲೆಗಳು ತುಂಬಾ ಹಳೆಯದಾಗಿದ್ದರೆ ಇದನ್ನು ರಾತ್ರಿ ಪೂರ್ತಿಯೂ ಬಿಡಬಹುದು. ಆ ಬಳಿಕ ಬ್ರಷ್‌ನಿಂದ ಉಜ್ಜಿ ಫ್ಲಶ್ ಮಾಡಿ. ಇದರಿಂದ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಸಹಾಯವಾಗುತ್ತದೆ.
57
ಕೆಟಲ್ (Kettle)ಕ್ಲೀನ್ ಮಾಡಲು
ಕೆಟಲ್ (Kettle)ಕ್ಲೀನ್ ಮಾಡಲು ನಿಮ್ಮ ಕೆಟಲ್‌ನ ಒಳಭಾಗದಲ್ಲಿ ಬಿಳಿ ಪದರ (Limescale) ಜಮೆಯಾಗಿದ್ದರೆ, ಸಿಟ್ರಿಕ್ ಆಸಿಡ್ ಅದನ್ನು ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಕೆಟಲ್‌ಗೆ ಅರ್ಧದಷ್ಟು ನೀರು ತುಂಬಿಸಿ. ಅದಕ್ಕೆ 2 ಚಮಚ ಸಿಟ್ರಿಕ್ ಆಸಿಡ್ ಪುಡಿಯನ್ನು ಹಾಕಿ. ಈಗ ಕೆಟಲ್ ಆನ್ ಮಾಡಿ ಆ ನೀರನ್ನು ಚೆನ್ನಾಗಿ ಕುದಿಸಿ (ಉಕ್ಕಿ ಬರದಂತೆ ನೋಡಿಕೊಳ್ಳಿ). ನೀರು ಕುದಿ ಬಂದ ತಕ್ಷಣ ಕೆಟಲ್ ಆಫ್ ಮಾಡಿ. ಆ ಬಿಸಿ ನೀರನ್ನು ಕೆಟಲ್‌ನಿಂದ ತಕ್ಷಣ ಚೆಲ್ಲಬೇಡಿ. ಹಾಗೇ 15 ರಿಂದ 20 ನಿಮಿಷ ಬಿಟ್ಟುಬಿಡಿ. ಆ ಬಿಸಿ ನೀರು ಮತ್ತು ಆಸಿಡ್ ಸೇರಿ ತಳದಲ್ಲಿ ಗಟ್ಟಿಯಾಗಿ ಕೂತಿರುವ ಬಿಳಿ ಉಪ್ಪಿನ ಕರೆಯನ್ನು ಸಂಪೂರ್ಣವಾಗಿ ಕರಗಿಸಿಬಿಡುತ್ತದೆ. 20 ನಿಮಿಷದ ನಂತರ ಆ ನೀರನ್ನು ಚೆಲ್ಲಿ, ಮಾಮೂಲಿ ತಣ್ಣೀರಿನಿಂದ ಕೆಟಲ್ ಅನ್ನು ಒಂದೆರಡು ಬಾರಿ ತೊಳೆದರೆ ಸಾಕು. ಒಳಗಡೆ ಉಜ್ಜುವ ಅಗತ್ಯವೇ ಇರಲ್ಲ, ಹೊಸದರಂತೆ ಮಿರಮಿರ ಮಿಂಚುತ್ತದೆ.
67
ಈ ವಸ್ತುಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದು
ಈ ವಸ್ತುಗಳನ್ನೂ ಸುಲಭವಾಗಿ ಸ್ವಚ್ಛಗೊಳಿಸಬಹುದು ವಾಷಿಂಗ್ ಮಷಿನ್, ಡಿಶ್‌ವಾಶರ್ ಮತ್ತು ಕಾಫಿ ಮಷಿನ್‌ಗಳಲ್ಲಿ ಸಮಯ ಕಳೆದಂತೆ ಗಡಸು ನೀರಿನ ಕಾರಣದಿಂದಾಗಿ ಪದರ ಜಮೆಯಾಗಲು ಪ್ರಾರಂಭವಾಗುತ್ತದೆ. ಅಂತಹ ಸಂದರ್ಭದಲ್ಲಿ ಸಿಟ್ರಿಕ್ ಆಸಿಡ್ ಒಂದು ನೈಸರ್ಗಿಕ ಡಿಸ್ಕೇಲರ್ (Descaler) ನಂತೆ ಕೆಲಸ ಮಾಡುತ್ತದೆ. ಮಷಿನ್‌ನ ಡಿಟರ್ಜೆಂಟ್ ಕಂಪಾರ್ಟ್‌ಮೆಂಟ್‌ಗೆ ನಾಲ್ಕರಿಂದ ಐದು ಚಮಚ ಸಿಟ್ರಿಕ್ ಆಸಿಡ್ ಹಾಕಿ. ಖಾಲಿ 'ಹಾಟ್ ಸೈಕಲ್' (Hot Cycle) ಅನ್ನು ಮೂವ್ ಮಾಡಬಹುದು. ಇದರಿಂದ ಮಷಿನ್‌ನ ಒಳಗಿರುವ ಕೊಳಕು ಮತ್ತು ಜಮೆಯಾಗಿರುವ ಪದರ ಸ್ವಚ್ಛಗೊಳ್ಳಲು ಸಹಾಯವಾಗುತ್ತದೆ.
77
ತುಕ್ಕು ಹಿಡಿದ ವಸ್ತುಗಳನ್ನೂ ಸ್ವಚ್ಛಗೊಳಿಸಬಹುದು
ತುಕ್ಕು ಹಿಡಿದ ವಸ್ತುಗಳನ್ನೂ ಸ್ವಚ್ಛಗೊಳಿಸಬಹುದು ಮನೆಯಲ್ಲಿ ಕಬ್ಬಿಣದ ಉಪಕರಣಗಳು, ಸಿಂಕ್ ಅಥವಾ ಯಾವುದೇ ಲೋಹದ ವಸ್ತುಗಳು ತುಕ್ಕು ಹಿಡಿದಿದ್ದರೆ, ಸಿಟ್ರಿಕ್ ಆಸಿಡ್ ಇಲ್ಲೂ ಕೆಲಸಕ್ಕೆ ಬರುತ್ತದೆ. ಬಿಸಿ ನೀರಿನಲ್ಲಿ ಎರಡರಿಂದ ಮೂರು ಚಮಚ ಸಿಟ್ರಿಕ್ ಆಸಿಡ್ ಬೆರೆಸಿ ತುಕ್ಕು ಹಿಡಿದ ವಸ್ತುವನ್ನು ಕೆಲವು ಗಂಟೆಗಳ ಕಾಲ ನೆನೆಸಿಡಿ. ಆ ಬಳಿಕ ಬ್ರಷ್‌ನಿಂದ ಸ್ವಚ್ಛಗೊಳಿಸಿ ನೀರಿನಿಂದ ತೊಳೆಯಿರಿ.
ಇದಲ್ಲದೆ ನಲ್ಲಿ (Tap) ಮತ್ತು ಶವರ್‌ಹೆಡ್‌ಗಳ ಮೇಲೆ ಜಮೆಯಾಗಿರುವ ಮಿನರಲ್ಸ್ ಪದರವನ್ನು ತೆಗೆದುಹಾಕಲು ಸಹ ಸಿಟ್ರಿಕ್ ಆಸಿಡ್ ಅನ್ನು ಬಳಸಬಹುದು. ಬಿಸಿ ನೀರಿನಲ್ಲಿ ಇದನ್ನು ಮಿಶ್ರಣ ಮಾಡಿ ಬಟ್ಟೆಯನ್ನು ನೆನೆಸಿ, ಆ ಬಟ್ಟೆಯನ್ನು ನಲ್ಲಿ ಅಥವಾ ಶವರ್‌ಹೆಡ್‌ನ ಸುತ್ತಲೂ ಸುತ್ತಿಡಿ. ಸುಮಾರು ಒಂದು ಗಂಟೆಯ ನಂತರ ಸ್ವಚ್ಛಗೊಳಿಸಿದಾಗ ಅವುಗಳ ಹೊಳಪು ಮರಳಿ ಬರಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.