ಪ್ರತಿನಿತ್ಯ ವಾಕ್​- ಜಾಗ್​ ಮಾಡಿದ್ರೂ, ಓಡಿದ್ರೂ ಹೊಟ್ಟೆ ಕರಗಲ್ಲ ಯಾಕೆ? ಕಾರಣ ತೆರೆದಿಟ್ಟ ವೈದ್ಯರು

Published : Jun 19, 2026, 11:18 PM IST

ದಿನವಿಡೀ ನಡೆಯುವ ತರಕಾರಿ ಮಾರುವವರಿಗೂ ಬೊಜ್ಜು ಹೊಟ್ಟೆ ಇರುವುದನ್ನು ನೀವು ಗಮನಿಸಿರಬಹುದು. ವಾಕಿಂಗ್ ಮತ್ತು ರನ್ನಿಂಗ್‌ನಿಂದ ಒಟ್ಟಾರೆ ತೂಕ ಇಳಿಯಬಹುದಾದರೂ, ಹೊಟ್ಟೆಯ ಬೊಜ್ಜು ಕರಗಿಸಲು ಹೊಟ್ಟೆಗೆ ಸಂಬಂಧಿಸಿದ ನಿರ್ದಿಷ್ಟ ಕಸರತ್ತುಗಳೇ ಮುಖ್ಯವೆಂದು ವೈದ್ಯರು ಹೇಳುತ್ತಾರೆ.

PREV
16
ಮಾರಾಟಗಾರರ ಬೊಜ್ಜು ಹೊಟ್ಟೆ

ಒಂದು ಉದಾಹರಣೆಯಿಂದ ಈ ಬೊಜ್ಜಿನ ವಿಷ್ಯಕ್ಕೆ ಬರೋಣ. ನಿಮ್ಮ ಮನೆಯ ಬಳಿ ಬರುವ ತರಕಾರಿ ಮಾರುವವ, ಹಣ್ಣು ಮಾರುವವ ಅಥವಾ ಹೂವು ಮಾರುವವನ್ನು ನೋಡಿದ್ರೆ ಅಯ್ಯೋ ಪಾಪ ಎಷ್ಟು ಕಿಲೋಮೀಟರ್​ ನಡೆಯುತ್ತಾರೆ ಎಂದು ಎನ್ನಿಸುವುದು ಉಂಟು. ಮಳೆ, ಚಳಿ, ಗಾಳಿ, ಬಿಸಿಲು ಏನೇ ಇದ್ದರೂ ದುಡಿಯಲು ಅವರು ಬೀದಿ ಬೀದಿ ಸುತ್ತಲೇ ಬೇಕು. ದಿನನಿತ್ಯ ಹತ್ತಾರು ಕಿಲೋಮೀಟರ್​ ನಡೆಯಲೇಬೇಕು. ಹಾಗಿದ್ದರೂ ಅವರಲ್ಲಿ ಎಷ್ಟೋ ಮಂದಿಗೆ ಹೊಟ್ಟೆಯ ಬೊಜ್ಜು ಇರುವುದನ್ನು ನೀವು ಗಮನಿಸಿದ್ದೀರಾ? ದೊಡ್ಡ ಹೊಟ್ಟೆ ಕರಗೋದೇ ಇಲ್ಲ ಎಂದು ನೀವು ಯೋಚನೆ ಮಾಡಿದ್ದೂ ಇರಬಹುದು ಅಲ್ಲವೆ?

26
ಹೊಟ್ಟೆ ಕರಗಲ್ಲ ಏಕೆ

ಅದು ಯಾಕೆ? ಹಾಗಿದ್ದರೆ ತೂಕ ಕಡಿಮೆ ಮಾಡಿಕೊಳ್ಳಲು ದಿನವೂ ವಾಕಿಂಗ್​ ಮಾಡಿ, ರನ್ನಿಂಗ್ ಮಾಡಿದ್ರೆ ಸಾಕಾಗಲ್ವೆ ಎಂದು ಅಂದುಕೊಂಡರೆ ಅದು ಹೌದು. ಹೊಟ್ಟೆ ಕರಗಲು ಇವು ಸಾಕಾಗಲ್ಲ ಎನ್ನುತ್ತಾರೆ ವೈದ್ಯರು. ತೂಕ ಕಡಿಮೆ ಮಾಡಿಕೊಳ್ಳಲು ದಿನವೂ ವಾಕಿಂಗ್​ ಮಾಡಿ, ರನ್ನಿಂಗ್ ಮಾಡಿ ಎಂದೆಲ್ಲಾ ಎಲ್ಲರೂ ಹೇಳುವುದು ಮಾಮೂಲು. ಆದರೆ ಇದನ್ನು ಸರಿಯಾಗಿ ಅನುಸರಿಸಿದರೆ, ತೂಕ ಕಡಿಮೆ ಆಗುವುದು ನಿಜವಾದರೂ ಹೊಟ್ಟೆಯ ಬೊಜ್ಜು ಮಾತ್ರ ಕರಗಲ್ಲ ಎನ್ನುವುದನ್ನು ನೀವು ಗಮನಿಸಿರಬಹುದು. ಬರಿಯ ವಾಕಿಂಗ್​, ರನ್ನಿಂಗ್​, ಜಾಗಿಂಗ್​ ಮಾಡಿದರೆ ಹೊಟ್ಟೆಯ ಬೊಜ್ಜು ಕರಗುವುದು ಇಲ್ಲ ಎನ್ನುತ್ತಾರೆ ಹಲವು ವೈದ್ಯರು.

36
ಸಿಕ್ಕಾಪಟ್ಟೆ ಲಾಭ

ಇವೆಲ್ಲಾ ಮಾಡುವುದರಿಂದ ಆರೋಗ್ಯಕ್ಕೆ ಸಿಕ್ಕಾಪಟ್ಟೆ ಲಾಭಗಳಿವೆ ಅನ್ನುವುದು ದಿಟವೇ. ಅಧಿಕ ತೂಕ, ಮಧುಮೇಹ, ರಕ್ತದೊತ್ತಡ, ಹೃದಯದ ಕಾಯಿಲೆ ಹೊಂದಿರುವವರು ಪ್ರತಿದಿನ ವಾಕ್ ಮಾಡಲೇ ಬೇಕು ಎಂದು ವೈದ್ಯರು ಕೂಡ ಸಲಹೆ ನೀಡುತ್ತಾರೆ. ಆರೋಗ್ಯವಂತರಾಗಿ ಇದ್ದವರು ಕೂಡ ಇಂಥ ಸಮಸ್ಯೆ ಬರಬಾರದು ಎಂದರೆ ನಿಯಮಿತವಾಗಿ ವಾಕಿಂಗ್​ ಮಾಡುವುದು ಒಳ್ಳೆಯದೇ.

46
ಕಸರತ್ತು ಮುಖ್ಯ

ಆದರೆ ಹೊಟ್ಟೆಯ ಬೊಜ್ಜಿನ ವಿಷಯಕ್ಕೆ ಬಂದರೆ, ಇವಿಷ್ಟೇ ಸಾಕಾಗುವುದಿಲ್ಲ. ಏಕೆಂದ್ರೆ ವಾಕಿಂಗ್​, ರನ್ನಿಂಗ್​ ಜಾಗಿಂಗ್​ ಏನೇ ಮಾಡಿದರೂ ಅದು ಕಾಲಿನಿಂದ ಮಾಡುವಂಥದ್ದು, ಆದ್ದರಿಂದ ಕಾಲಿಗೆ ಬಲ ಬರುವ ಜೊತೆಗೆ ದೇಹದಲ್ಲಿ ಒಂದಿಷ್ಟು ಬದಲಾವಣೆ ಆಗುತ್ತದೆ. ಆದರೆ ಹೊಟ್ಟೆಯ ಬೊಜ್ಜು ಕರಗಲು ಹೊಟ್ಟೆಯ ಜೊತೆಯೇ ಕಸರತ್ತು ಮಾಡಬೇಕು ಎನ್ನುವುದು ವೈದ್ಯರ ಮಾತು.

56
30 ನಿಮಿಷ ನಡಿಗೆ

ಇನ್ನು ತೂಕ ಇಳಿಸಿಕೊಳ್ಳುವ ವಿಚಾರಕ್ಕೆ ಬಂದರೆ ಪ್ರತಿದಿನ 30 ನಿಮಿಷವಾದರೂ ನಡೆಯಬೇಕು. ವಯಸ್ಸು ಹೆಚ್ಚಾಗಿದ್ದಲ್ಲಿ ವೇಗವನ್ನು ಸಾಮಾನ್ಯ ಸ್ಥಿತಿಯಲ್ಲಿಟ್ಟುಕೊಂಡು ನಡೆಯಬಹುದು. ಊಟ ಮಾಡಿದ ನಂತರ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಯಾವಾಗಲೂ ವಾಕಿಂಗ್ ಮಾಡಿದರೆ ಉತ್ತಮ.

66
ಬೆಳಗಿನ ವಾಕಿಂಗ್​

ಬೆಳಿಗ್ಗೆ ಎದ್ದಾಕ್ಷಣ ನಡೆದರೆ ದೇಹದಲ್ಲಿನ ಜಡತ್ವ ಹೋಗಿ ದೇಹಕ್ಕೆ ಚೈತನ್ಯ ತುಂಬುತ್ತದೆ. ಇದಲ್ಲದೆ, ನೀವು ಊಟ ಮಾಡಿದ ನಂತರ ವಾಕಿಂಗ್ ಮಾಡಿದರೆ ನಿಮ್ಮ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಊಟದ ಬಳಿಕ ಅಥವಾ ಬೆಳಿಗ್ಗೆ ಎದ್ದ ತಕ್ಷಣ ಯಾವಾಗಲೂ ವಾಕಿಂಗ್ ಮಾಡಿದರೆ ಬೆಳಿಗ್ಗೆ ಎದ್ದ ತಕ್ಷಣ ನಡೆಯುವುದರಿಂದ ನಿಮ್ಮ ಜಡ ದೇಹಕ್ಕೆ ಚೈತನ್ಯ ತುಂಬುತ್ತದೆ. ಇದಲ್ಲದೆ, ನೀವು ಊಟ ಮಾಡಿದ ನಂತರ ವಾಕಿಂಗ್ ಮಾಡಿದರೆ ನಿಮ್ಮ ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಇದು ತೂಕ ಕಡಿಮೆಗೆ ಸಹಕಾರಿಯಾಗಬಹುದೇ ವಿನಾ ಹೊಟ್ಟೆಯ ಬೊಜ್ಜು ಕಡಿಮೆಗೆ ಅಲ್ಲ ಎನ್ನುತ್ತಾರೆ ವೈದ್ಯರು/

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories