Asthma in Winter: ಅಸ್ತಮಾ ರೋಗಿಗಳು ಚಳಿಗಾಲದಲ್ಲಿ ಈ ತಪ್ಪು ಮಾಡಬೇಡಿ! ಉಸಿರಾಟದ ಸಮಸ್ಯೆ ತಡೆಯಲು ಹೀಗೆ ಮಾಡಿ

Published : Oct 20, 2026, 09:08 PM IST

ಅಸ್ತಮಾ ರೋಗಿಗಳಿಗೆ ಚಳಿಗಾಲ ಬಂತೆಂದರೆ ಸಾಕು, ಆತಂಕ ಶುರುವಾಗುತ್ತದೆ. ತಣ್ಣನೆಯ ಗಾಳಿ, ಹವಾಮಾನದಲ್ಲಿನ ಬದಲಾವಣೆ ಹಾಗೂ ಉಸಿರಾಟದ ಸೋಂಕುಗಳು ಅಸ್ತಮಾ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತವೆ.

PREV
16
ಅಸ್ತಮಾದ ಲಕ್ಷಣ ಹಾಗೂ ಮುನ್ನೆಚ್ಚರಿಕೆ ಕ್ರಮ

ಬಿಡದೆ ಕಾಡುವ ಕೆಮ್ಮು, ಉಸಿರಾಡುವಾಗ ಸಿಳ್ಳೆ ಹೊಡೆದಂತಹ ಶಬ್ದ (ವೀಸಿಂಗ್), ಎದೆ ಬಿಗಿತ ಮತ್ತು ಉಸಿರಾಟದ ತೊಂದರೆಯಂತಹ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಬಹಳ ಮುಖ್ಯ. ಚಳಿಗಾಲದಲ್ಲಿ ಅಸ್ತಮಾ ರೋಗಿಗಳು ಯಾವೆಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ತಿಳಿದುಕೊಳ್ಳುವುದು ಒಳ್ಳೆಯದು.

ನೇರವಾಗಿ ತಣ್ಣನೆಯ ಗಾಳಿಯನ್ನು ಉಸಿರಾಡುವುದರಿಂದ ಶ್ವಾಸಕೋಶದ ನಾಳಗಳಲ್ಲಿ ಊತ ಉಂಟಾಗಿ, ಅವು ಕಿರಿದಾಗುತ್ತವೆ. ಇದರಿಂದ ಎದೆ ಬಿಗಿತ, ಕೆಮ್ಮು ಮತ್ತು ಉಸಿರಾಟದ ತೊಂದರೆ ಕಾಣಿಸಿಕೊಳ್ಳುತ್ತದೆ. ಹೀಗಾಗಿ, ಮೊದಲೇ ಉಸಿರಾಟದ ಸಮಸ್ಯೆ ಇರುವವರು ಚಳಿಗಾಲದಲ್ಲಿ ಹೆಚ್ಚು ಜಾಗರೂಕರಾಗಿರಬೇಕು.

26
ವೈದ್ಯರ ಸಲಹೆ ತೆಗೆದುಕೊಳ್ಳಿ

ಅಸ್ತಮಾವನ್ನು ಸಂಪೂರ್ಣವಾಗಿ ವಾಸಿ ಮಾಡಲು ಸಾಧ್ಯವಿಲ್ಲ. ಆದರೆ, ಸರಿಯಾದ ಚಿಕಿತ್ಸೆಯಿಂದ ಇದನ್ನು ಖಂಡಿತ ನಿಯಂತ್ರಣದಲ್ಲಿ ಇಡಬಹುದು. ಹವಾಮಾನ ಬದಲಾದಾಗ ಲಕ್ಷಣಗಳು ಸ್ವಲ್ಪ ಕಡಿಮೆಯಾದರೂ, ವೈದ್ಯರ ಸಲಹೆ ಇಲ್ಲದೆ ಇನ್ಹೇಲರ್ ಅಥವಾ ಮಾತ್ರೆಗಳನ್ನು ನೀವಾಗಿಯೇ ನಿಲ್ಲಿಸಬಾರದು ಎಂದು ಆರೋಗ್ಯ ತಜ್ಞರು ಎಚ್ಚರಿಸುತ್ತಾರೆ.

36
ಹೊರಗೆ ಹೋಗುವಾಗ ಮಾಸ್ಕ್ ಕಡ್ಡಾಯವಾಗಿ ಧರಿಸಿ

ಬೆಳಗ್ಗೆ ಮತ್ತು ಸಂಜೆ ಚಳಿ ಹೆಚ್ಚಿರುವಾಗ, ಅದರಲ್ಲೂ ಗುಡ್ಡಗಾಡು ಪ್ರದೇಶಗಳಲ್ಲಿ ತಣ್ಣನೆಯ ಗಾಳಿಗೆ ನೇರವಾಗಿ ಒಡ್ಡಿಕೊಳ್ಳಬೇಡಿ. ಹೊರಗೆ ಹೋಗುವಾಗ ಕಡ್ಡಾಯವಾಗಿ ಸ್ಕಾರ್ಫ್ ಅಥವಾ ಮಾಸ್ಕ್ ಬಳಸಿ ಮೂಗು ಮತ್ತು ಬಾಯಿಯನ್ನು ಮುಚ್ಚಿಕೊಳ್ಳಿ. ಜೊತೆಗೆ, ಉಸಿರಾಟದ ಸಮಸ್ಯೆಯನ್ನು ಹೆಚ್ಚಿಸುವ ಧೂಳು, ಹೊಗೆ ಮತ್ತು ಇತರ ಮಾಲಿನ್ಯಕಾರಕಗಳಿಂದ ದೂರವಿರಿ.

46
ಚಿಕ್ಕ ವಯಸ್ಸಿನಲ್ಲೇ ಅಸ್ತಮಾ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ

14 ರಿಂದ 15 ವರ್ಷದ ಮಕ್ಕಳಲ್ಲೂ ಅಸ್ತಮಾದ ಆರಂಭಿಕ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಪದೇ ಪದೇ ಕೆಮ್ಮು, ಓಡುವಾಗ ಉಸಿರುಕಟ್ಟುವುದು ಅಥವಾ ರಾತ್ರಿ ವೇಳೆ ಉಸಿರಾಡಲು ಕಷ್ಟವಾದರೆ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

ಹವಾಮಾನ ಬದಲಾದಾಗ ಅಸ್ತಮಾ ನಿಯಂತ್ರಿಸಲು ಬೆಚ್ಚಗಿನ ಬಟ್ಟೆಗಳನ್ನು ಧರಿಸುವುದು ಮತ್ತು ವೈದ್ಯರ ಸಲಹೆಗಳನ್ನು ಚಾಚೂತಪ್ಪದೆ ಪಾಲಿಸುವುದು ಅತ್ಯಗತ್ಯ.

56
ಗಮನಿಸಬೇಕಾದ ಇತರ ಅಂಶಗಳು ಹಾಗೂ ತಡೆಗಟ್ಟುವ ಕ್ರಮಗಳು:

1. ಕೈಗಳನ್ನು ಯಾವಾಗಲೂ ಸ್ವಚ್ಛವಾಗಿಟ್ಟುಕೊಳ್ಳಿ.

2. ಅಸ್ತಮಾ ಹೆಚ್ಚಿಸುವ ವಸ್ತುಗಳಿಂದ ದೂರವಿರಿ.

3. ಅಸ್ತಮಾ ರೋಗಿಗಳು ಮಲಗುವ ಕೋಣೆಯನ್ನು ಸದಾ ಶುಚಿಯಾಗಿಟ್ಟುಕೊಳ್ಳಬೇಕು.

66
ಅಸ್ತಮಾ ತಡೆಗಟ್ಟುವ ಕ್ರಮಗಳು

4. ಹಾಸಿಗೆ ಮತ್ತು ದಿಂಬುಗಳನ್ನು ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿ ಬಳಸಿ.

5. ವಾರಕ್ಕೊಮ್ಮೆಯಾದರೂ ಫ್ಯಾನ್ ಮೇಲಿರುವ ಧೂಳನ್ನು ಒರೆಸಿ ಸ್ವಚ್ಛಗೊಳಿಸಿ.

6. ಧೂಮಪಾನ ಮಾಡುವವರಿಂದ ಅಂತರ ಕಾಯ್ದುಕೊಳ್ಳಿ.

7. ಅತಿಯಾದ ತಂಪು ಪದಾರ್ಥಗಳನ್ನು ತಿನ್ನಬೇಡಿ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories