ಮೀನು ಅತ್ಯುತ್ತಮ ಪೋಷಾಕಾಂಶಗಳನ್ನು ಹೊಂದಿದ ಆಹಾರ. ವಿಶೇಷ ಅಂದರೆ ಮೀನಿನ ಮುಳ್ಳು ಕೂಡ ಅಷ್ಟೇ ಉತ್ತಮ. ಮೀನಿನ ಮುಳ್ಳಿನಿಂದ ಆರೋಗ್ಯಕ್ಕೆ ಆಗುವ ಹಾಗೂ ಇತರ ಲಾಭವೇನು? ಇಲ್ಲಿದೆ ಕಂಪೀಟ್ ಡೀಟೇಲ್ಸ್
ಮೀನು ಆಹಾರ ಆರೋಗ್ಯಕ್ಕೆ ಉತ್ತಮ. ಪ್ರೊಟಿನ್, ವಿಟಮಿನ್ ಡಿ, ಬಿ12, ಒಮೆಗಾ 3 ಸೇರಿದಂತೆ ಹಲವು ಪೋಷಕಾಂಶಗಳನ್ನು ಹೊಂದಿದೆ.ಹೃದಯ, ಕಣ್ಣು, ಮೆದಳು, ರಕ್ತದೊತ್ತಡ ಸೇರಿದಂತೆ ಹಲವು ಸಮಸ್ಯೆಗಳಿಗೂ ಮೀನಿನ ಸಮತೋಲಿತ ಆಹಾರ ಉತ್ತಮ. ಮೀನಿನ ಜೊತೆ ಮೀನಿನ ಮುಳ್ಳು ಕೂಡ ಉತ್ತಮ ಪೋಷಕಾಂಶಗಳನ್ನು ಹೊಂದಿದೆ. ಹೀಗಾಗಿ ಮೀನು ತಿನ್ನುವಾಗ ಮುಳ್ಳಿನ ಕಡೆಯೂ ಗಮನ ಇರಲಿ.
25
ಹಲ್ಲು, ಮೂಳೆಯನ್ನು ಗಟ್ಟಿಗೊಳಿಸುತ್ತೆ
ಮೀನಿನ ಮುಳ್ಳಿನ ಭಯದಿಂದ ಹಲವರು ಮೀನು ತಿನ್ನಲು ಹಿಂದೇಟು ಹಾಕುತ್ತಾರೆ. ಆದರೆ ಮೀನಿನ ಮುಳ್ಳಿನಲ್ಲಿ ಹಲವು ಲಾಭಗಳಿವೆ. ಆರೋಗ್ಯದ ಜೊತೆಗೆ ಇತರ ಲಾಭವೂ ಹೆಚ್ಚಿದೆ. ಮೀನಿನ ಮುಳ್ಳಿನಲ್ಲಿ ನೈಸರ್ಗಿಕ ಕ್ಯಾಲ್ಸಿಯಂ ಹೆಚ್ಚಿರುತ್ತದೆ. ಮನುಷ್ಯನ ಮೂಳೆ, ಹಲ್ಲುಗಳನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ. ಜೊತೆಗೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನೆರವಾುತ್ತದೆ.
35
ಫಿಟ್ನೆಸ್ ಕಾಪಾಡಲು ಉತ್ತಮ ಆಹಾರ
ಮೀನಿನ ಮುಳ್ಳಿನಲ್ಲಿರುವ ಕಾಲಜನ್ ಪೋಷಕಾಂಶ, ಜಿಲೆಟಿನ್ ಅಂಶ ಕೀಲು ನೋವು, ಸಂಧಿವಾತವನ್ನು ನಿವಾರಿಸುತ್ತದೆ. ಹೀಗಾಗಿ ವಯಸ್ಸಾದಂತೆ ನಡೆದಾಡಲು ಸಮಸ್ಯೆ, ಸಂಧಿವಾತ ಸೇರಿದಂತೆ ಹಲವು ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇಷ್ಟೇ ಅಲ್ಲ ವಯಸ್ಸಾದರೂ ಫಿಟ್ ಆಗಿ ಇರಲು ನೆರವಾಗುತ್ತದೆ.
ಭೂತಾಯಿ (ಸ್ಯಾರಡೈನ್) , ನುಕ್ಲಿ ಸೇರಿದಂತೆ ಸಣ್ಣ ಮೀನುಗಳ ಮಳ್ಳುಗಳನ್ನು ಮೀನಿನ ಜೊತೆಗೆ ತಿನ್ನಲು ಸಾಧ್ಯವಾಗುತ್ತದೆ. ಮೀನು ಚೆನ್ನಾಗಿ ಫ್ರೈ ಮಾಡಿದಾಗ ಮೀನಿನ ಮುಳ್ಳು ಸುಲಭಾವಿ ಪುಡಿ ಪುಡಿಯಾಗಿ ತಿನ್ನಲು ರುಚಿಯಾಗಿರುತ್ತದೆ. ಮುಳ್ಳಿನ ಸಮೇತ ತಿನ್ನುವಾಗ ನೇರವಾಗಿ ಕ್ಯಾಲ್ಶಿಯಂ ಲಭ್ಯವಾಗಲಿದೆ. ಇನ್ನು ದೊಡ್ಡ ಮೀನುಗಳ ಮುಳ್ಳುಗಳಿಂದ ಸೂಪ್ ಮಾಡಿ ಕುಡಿಯಬಹುದು. ಮುಳ್ಳಿನಲ್ಲಿರುವ ಪೋಷಕಾಂಶ ಸೂಪ್ ಮೂಲಕ ದೇಹ ಸೇರಿಕೊಳ್ಳಲಿದೆ.
55
ಗಿಡಗಳಿಗೆ ಗೊಬ್ಬರ, ಸಾಕು ಪ್ರಾಣಿಗಳಿಗೆ ಆಹಾರ
ಮೀನಿನ ಮುಳ್ಳುಗಳು ಒಣಗಿಸಿ ಪುಡಿ ಮಾಡಿ ಗಿಡಗಳಿಗೆ ಹಾಕಬಹುದು. ಹಾಗೇ ಗಿಡಗಳ ಬುಡಕ್ಕೆ ಹಾಕಿ ಮೇಲೆ ಸ್ವಲ್ಪ ಮಣ್ಣು ಹಾಕಿದರೆ ಸಾಕು. ಗಿಡಗಳು ದಷ್ಠಪುಷ್ಠವಾಗಿ ಬೆಳೆಯರು ಸಹಕಾರಿಯಾಗುತ್ತದೆ. ಇನ್ನು ಮೀನಿನ ಮುಳ್ಳು ಕೋಳಿ ಸೇರಿದಂತೆ ಸಾಕು ಪ್ರಾಣಿಗಳಿಗೆ ಆಹಾರವಾಗಿಯೂ ಬಳಕೆ ಮಾಡಬಹುದು.
ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.