Heart Health Secret: ನಿಮ್ಮ ಹೃದಯಕ್ಕೆ ಕಂಟಕವಾಗುವ ಈ ಡೇಂಜರಸ್ ಅಭ್ಯಾಸಗಳನ್ನು ತ್ಯಜಿಸಿ, ನಿಶ್ಚಿಂತೆಯಾಗಿರಿ!

Published : Oct 20, 2026, 07:42 PM IST

ನಮ್ಮ ದೇಹದ ಇಂಜಿನ್ ಅಂದ್ರೆ ಅದು ಹೃದಯ. ಈ ಹೃದಯವನ್ನು ಸೇಫ್ ಆಗಿ ಕಾಪಾಡಿಕೊಳ್ಳುವುದು ತುಂಬಾನೇ ಮುಖ್ಯ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ಸಾಯುತ್ತಿರುವುದಕ್ಕೆ ಇದೇ ಹೃದಯ ಸಂಬಂಧಿ ಕಾಯಿಲೆಗಳು ಮುಖ್ಯ ಕಾರಣವಾಗಿವೆ. ಇಂಥ ಹೃದಯವನ್ನು ಹೇಗೆ ಜೋಪಾನ ಮಾಡಬೇಕು?

PREV
17
ರಾತ್ರಿ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡಿದರೆ ಹಾರ್ಟ್ ಅಟ್ಯಾಕ್ ರಿಸ್ಕ್ ಹೆಚ್ಚು.

ನಿದ್ದೆ ಕಡಿಮೆಯಾದರೆ ಅದು ನೇರವಾಗಿ ಹೃದಯದ ಮೇಲೆ ಪರಿಣಾಮ ಬೀರುತ್ತದೆ. ರಾತ್ರಿ 7 ಗಂಟೆಗಿಂತ ಕಡಿಮೆ ನಿದ್ದೆ ಮಾಡುವವರಲ್ಲಿ ಹೈ ಬಿಪಿ, ತೂಕ ಹೆಚ್ಚಳ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ರಿಸ್ಕ್ ಹೆಚ್ಚು ಎಂದು ಅಧ್ಯಯನಗಳು ಹೇಳುತ್ತವೆ. ಹಾಗೆಯೇ, ಅತಿಯಾದ ಟೆನ್ಷನ್‌ನಿಂದ ದೇಹದಲ್ಲಿ ಕಾರ್ಟಿಸೋಲ್ ಮತ್ತು ಅಡ್ರಿನಾಲಿನ್ ಹಾರ್ಮೋನ್ ಹೆಚ್ಚಾಗಿ, ಅತಿಯಾಗಿ ತಿನ್ನುವ ಮತ್ತು ವ್ಯಾಯಾಮ ಬಿಡುವ ಅಭ್ಯಾಸಕ್ಕೆ ದಾರಿ ಮಾಡಿಕೊಡುತ್ತದೆ.

27
ಊಟ ಬಿಡುವುದರಿಂದ ಮುಂದೆ ಅತಿಯಾಗಿ ತಿನ್ನುವ ಅಭ್ಯಾಸ ಶುರುವಾಗುತ್ತದೆ.

ಊಟ ಬಿಡುವುದರಿಂದ ತೂಕ ಕಡಿಮೆಯಾಗುವುದಿಲ್ಲ, ಬದಲಾಗಿ ಇದು ಅಪಾಯಕಾರಿ. ಆಗಾಗ ಊಟ ಬಿಡುವುದರಿಂದ, ಆಮೇಲೆ ಒಮ್ಮೆಗೆ ಅತಿಯಾಗಿ ತಿನ್ನುವ (overeating) ಅಭ್ಯಾಸ ಶುರುವಾಗುತ್ತದೆ. ಇದರಿಂದ ದೇಹದ ಬ್ಯಾಲೆನ್ಸ್ ತಪ್ಪಿ, ಬಿಪಿ, ಕೊಲೆಸ್ಟ್ರಾಲ್ ಮತ್ತು ಶುಗರ್ ಲೆವೆಲ್ ಹೆಚ್ಚಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. ಮೆಟಬಾಲಿಸಂ ಸರಿಯಾಗಿರಲು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಕಡ್ಡಾಯ.

37
ರೆಸ್ಟ್ ಇಲ್ಲದೆ ಅತಿಯಾಗಿ ವ್ಯಾಯಾಮ ಮಾಡುವುದು ಹೃದಯಕ್ಕೆ ಕುತ್ತು.

ಹೃದಯದ ಆರೋಗ್ಯಕ್ಕೆ ವ್ಯಾಯಾಮ ಬೆಸ್ಟ್. ಆದರೆ, ದೇಹಕ್ಕೆ ರೆಸ್ಟ್ ಕೊಡದೆ ಕಠಿಣ ವ್ಯಾಯಾಮ ಮಾಡಿದರೆ ಅದು ಹೃದಯದ ಮೇಲೆ ಅತಿಯಾದ ಒತ್ತಡ ಹಾಕುತ್ತದೆ. ಇದರಿಂದ ಸ್ಟ್ರೆಸ್ ಹಾರ್ಮೋನ್ ಹೆಚ್ಚಾಗಿ, ಹೃದಯ ಬಡಿತದ ಏರುಪೇರಿಗೆ (cardiac arrhythmia) ಕಾರಣವಾಗುತ್ತದೆ. ವಾರಕ್ಕೆ 150 ನಿಮಿಷಗಳ ಕಾಲ ಸಾಧಾರಣ ವ್ಯಾಯಾಮ ಮಾಡಿ. ಎದೆನೋವು, ಉಸಿರಾಟದ ತೊಂದರೆ ಅಥವಾ ತಲೆತಿರುಗುವಿಕೆ ಬಂದರೆ ನಿರ್ಲಕ್ಷ್ಯ ಮಾಡಬೇಡಿ.

47
'ಶುಗರ್ ಫ್ರೀ' ಸ್ನ್ಯಾಕ್ಸ್ ಕೂಡ ಹೃದಯಕ್ಕೆ ಹಾನಿ ಮಾಡಬಹುದು.

ಪ್ಯಾಕೆಟ್ ಮೇಲಿನ ಲೇಬಲ್‌ಗಳು ನಮ್ಮನ್ನು ದಾರಿ ತಪ್ಪಿಸುತ್ತವೆ. ಫ್ಯಾಟ್-ಫ್ರೀ ಆಹಾರಗಳ ರುಚಿ ಹೆಚ್ಚಿಸಲು ಕಂಪನಿಗಳು ಸಕ್ಕರೆ, ಸೋಡಿಯಂ ಅಥವಾ ರಿಫೈನ್ಡ್ ಸ್ಟಾರ್ಚ್ ಸೇರಿಸುತ್ತವೆ. 'ಶುಗರ್ ಫ್ರೀ' ಎಂದು ಬರೆದಿರುವ ಸ್ನ್ಯಾಕ್ಸ್ ಕೂಡ ಅತಿ ಹೆಚ್ಚು ಪ್ರೊಸೆಸ್ ಆಗಿರುತ್ತವೆ. ಇವುಗಳನ್ನು ತಿಂದಷ್ಟೂ ಮತ್ತೆ ಮತ್ತೆ ತಿನ್ನಬೇಕೆಂಬ ಆಸೆ ಹೆಚ್ಚಾಗುತ್ತದೆ.

57
ಹಣ್ಣಿನ ಜ್ಯೂಸ್ ಮತ್ತು ಸ್ಮೂಥಿಗಳು ಹೃದಯಕ್ಕೆ ಡೇಂಜರ್.

ಹಣ್ಣುಗಳು ಆರೋಗ್ಯಕ್ಕೆ ಒಳ್ಳೆಯದು, ಆದರೆ ಹಣ್ಣಿನ ಜ್ಯೂಸ್ ಅಲ್ಲ. ಜ್ಯೂಸ್ ಮಾಡುವಾಗ ಹಣ್ಣಿನಲ್ಲಿರುವ ಫೈಬರ್ ಅಂಶ ನಾಶವಾಗುತ್ತದೆ ಮತ್ತು ಸಕ್ಕರೆ ಪ್ರಮಾಣ ಹೆಚ್ಚಾಗುತ್ತದೆ. ಇದು ರಕ್ತದಲ್ಲಿ ಗ್ಲೂಕೋಸ್ ಮಟ್ಟವನ್ನು ದಿಢೀರ್ ಏರಿಸುತ್ತದೆ. ಇದರಿಂದ ತೂಕ ಹೆಚ್ಚಳ, ಊತ ಮತ್ತು ಟ್ರೈಗ್ಲಿಸರೈಡ್ ಮಟ್ಟ ಹೆಚ್ಚಾಗುವ ಅಪಾಯವಿದೆ. ಅಂಗಡಿಗಳಲ್ಲಿ ಸಿಗುವ ಸ್ಮೂಥಿಗಳಲ್ಲಿ ತಂಪು ಪಾನೀಯಗಳಷ್ಟೇ ಸಕ್ಕರೆ ಇರುತ್ತದೆ.

67
ಅನಾರೋಗ್ಯಕರ ಜೀವನಶೈಲಿಯೇ ಹೃದಯದ ಆರೋಗ್ಯ ಹಾಳಾಗಲು ಮುಖ್ಯ ಕಾರಣ.

ಅನಾರೋಗ್ಯಕರ ಜೀವನಶೈಲಿಯೇ ನಮ್ಮ ಹೃದಯದ ಆರೋಗ್ಯವನ್ನು ಹಾಳುಮಾಡುತ್ತದೆ. ನೋಯ್ಡಾದ ಕೈಲಾಶ್ ಆಸ್ಪತ್ರೆಯ ಹಿರಿಯ ಇಂಟರ್ವೆನ್ಷನಲ್ ಕಾರ್ಡಿಯಾಲಜಿಸ್ಟ್ ಡಾ. ಸುನಿಲ್ ಕುಮಾರ್ ಮಂಡಲ್ ಅವರು ನಮ್ಮ ಹೃದಯಕ್ಕೆ ಹಾನಿ ಮಾಡುವ 5 ಅಭ್ಯಾಸಗಳ ಬಗ್ಗೆ ಇಲ್ಲಿ ವಿವರಿಸಿದ್ದಾರೆ.

77
ಹೃದಯಕ್ಕೆ ಕಂಟಕವಾಗುವ 5 ಡೇಂಜರಸ್ ಅಭ್ಯಾಸಗಳು

ನಮ್ಮ ದೇಹದ ಮೂಲೆ ಮೂಲೆಗೂ ಆಕ್ಸಿಜನ್ ಇರುವ ರಕ್ತವನ್ನು ಪಂಪ್ ಮಾಡುವ ಸೂಕ್ಷ್ಮ ಅಂಗವೇ ಹೃದಯ. ಇಂದು ಪ್ರಪಂಚದಾದ್ಯಂತ ಅತಿ ಹೆಚ್ಚು ಜನ ಸಾಯುತ್ತಿರುವುದಕ್ಕೆ ಇದೇ ಹೃದಯ ಸಂಬಂಧಿ ಕಾಯಿಲೆಗಳು ಮುಖ್ಯ ಕಾರಣವಾಗಿವೆ. ಆದ್ದರಿಂದ ಹೃದಯವನ್ನು ಜೋಪಾನವಾಗಿ ಕಾಪಾಡಿಕೊಳ್ಳಬೇಕು.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories