Fastest way to peel garlic: ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಅಂದ್ರೆ ಕೆಲವರಿಗೆ ಪಿತ್ತ ನೆತ್ತಿಗೇರುತ್ತೆ. ನಿಮಗೂ ಸಿಪ್ಪೆ ತೆಗೆಯುವುದು ಒಂದು ಸಮಸ್ಯೆ ಅನಿಸಿದರೆ ಕೆಲವೇ ನಿಮಿಷದಲ್ಲಿ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯಲು ಕೆಲವು ತ್ವರಿತ ಮತ್ತು ಸುಲಭ ವಿಧಾನಗಳನ್ನು ಹೇಳುತ್ತಿದ್ದೇವೆ.
ಬೆಳ್ಳುಳ್ಳಿ ಸ್ವಲ್ಪ ಘಾಟು ಅನಿಸಿದ್ರೂ ಒಗ್ಗರಣೆಗೆ ಹಾಕಿದ್ರೆ ಅದರ ಗಮ್ಮತ್ತೇ ಬೇರೆ. ವಿಶೇಷವಾಗಿ ನಾನ್‌ವೆಜ್, ತಿಳಿಸಾರಿಗೆ ಬೆಳ್ಳುಳ್ಳಿ ಇಲ್ಲ ಅಂದ್ರೆ ಅಡುಗೆನೇ ರೆಡಿಯಾಗಲ್ಲ. ಆದರೆ ಎಲ್ಲಾ ಸರಿ. ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ನಮಗೆ ಹಿಂಸೆ ಅಂತೀರಾ, ಸಿಪ್ಪೆ ತೆಗೆಯುವುದು ಅಂದ್ರೆ ಕೆಲವರಿಗೆ ಪಿತ್ತ ನೆತ್ತಿಗೇರುತ್ತೆ. ಸಿಪ್ಪೆ ತೆಗೆಯುವುದು ಒಂದು ಕಡೆಯಾದ್ರೆ ಅದನ್ನ ತೆಗೆಯುವಾಗ ನಮ್ಮ ಕೈ ವಾಸನೆ ಬರುತ್ತೆ. ಜೊತೆಗೆ ಉಗುರುಗಳಿಗೂ ಹಾನಿಯಾಗಬಹುದು. ಅದಕ್ಕಾಗಿಯೇ ಅನೇಕ ಜನರು ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದನ್ನು ತುಂಬಾ ಕಷ್ಟಕರ ಕೆಲಸ ಅಂದುಕೊಳ್ತಾರೆ.
ವಿಶೇಷವಾಗಿ ಸಣ್ಣ ಎಸಳುಗಳನ್ನು ಹೊಂದಿರುವ ಬೆಳ್ಳುಳ್ಳಿಯ ಸಿಪ್ಪೆ ತೆಗೆಯುವುದು ಸಮಯ ತೆಗೆದುಕೊಳ್ಳುತ್ತದೆ. ನಿಮಗೂ ಬೆಳ್ಳುಳ್ಳಿ ಸಿಪ್ಪೆ ತೆಗೆಯುವುದು ಒಂದು ಸಮಸ್ಯೆ ಅನಿಸಿದರೆ ಕೆಲವೇ ನಿಮಿಷದಲ್ಲಿ ಬೆಳ್ಳುಳ್ಳಿಯನ್ನು ಸಿಪ್ಪೆ ತೆಗೆಯಲು ಕೆಲವು ತ್ವರಿತ ಮತ್ತು ಸುಲಭ ವಿಧಾನಗಳನ್ನು ಹೇಳುತ್ತಿದ್ದೇವೆ.
26
1. ಉಗುರು ಬೆಚ್ಚಗಿನ ನೀರಿನಲ್ಲಿ ನೆನೆಸಿ
ಬೆಳ್ಳುಳ್ಳಿ ಎಸಳುಗಳನ್ನು ಉಗುರು ಬೆಚ್ಚಗಿನ ನೀರಿನಲ್ಲಿ 10–15 ನಿಮಿಷಗಳ ಕಾಲ ನೆನೆಸಿಡಿ. ಇದು ತೆಳುವಾದ ಪೊರೆಯನ್ನು ಮೃದುಗೊಳಿಸುತ್ತದೆ. ನಂತರ ನಿಧಾನವಾಗಿ ಹಿಂಡಿದರೆ ಸುಲಭವಾಗಿ ಸಿಪ್ಪೆ ತೆಗೆಯಲು ಅನುವು ಮಾಡಿಕೊಡುತ್ತದೆ.
36
2. ಎರಡು ಪಾತ್ರೆಯೊಂದಿಗೆ ಅಲ್ಲಾಡಿಸಿ
ಬೆಳ್ಳುಳ್ಳಿ ಎಸಳುಗಳನ್ನು ಸ್ಟೀಲ್ ಅಥವಾ ಗಾಜಿನ ಪಾತ್ರೆಗೆ ಹಾಕಿ. ನಂತರ ಇನ್ನೊಂದು ಪಾತ್ರೆಯಿಂದ ಮುಚ್ಚಿ. ಎರಡೂ ಕೈಗಳಿಂದ ಪಾತ್ರೆಯನ್ನು ಚೆನ್ನಾಗಿ ಅಲ್ಲಾಡಿಸಿ. ಕೆಲವೇ ಸೆಕೆಂಡುಗಳಲ್ಲಿ ಸಿಪ್ಪೆ ಸುಲಿಯುತ್ತದೆ.
ಬೆಳ್ಳುಳ್ಳಿ ಎಸಳನ್ನು ಚಾಕುವಿನ ಅಗಲವಾದ ಬದಿಯಿಂದ ಲಘುವಾಗಿ ಒತ್ತಿರಿ. ಒತ್ತಡದಲ್ಲಿ ಸಿಪ್ಪೆ ಸಡಿಲಗೊಂಡು ಸುಲಿದು ಹೋಗುತ್ತದೆ. ಈ ವಿಧಾನದಲ್ಲಿ ಬೇಗ ಸಿಪ್ಪೆ ಬಿಡುತ್ತೆ ಮತ್ತು ಹೆಚ್ಚು ಗಲೀಜಾಗುವುದಿಲ್ಲ.
56
4. ಮೈಕ್ರೋವೇವ್ ಟ್ರಿಕ್
ನಿಮ್ಮ ಬಳಿ ಮೈಕ್ರೋವೇವ್ ಇದ್ದರೆ ಬೆಳ್ಳುಳ್ಳಿ ಎಸಳುಗಳನ್ನು 10–15 ಸೆಕೆಂಡುಗಳ ಕಾಲ ಬಿಸಿ ಮಾಡಿ. ಮೈಲ್ಡ್ ಆಗಿ ಬಿಸಿ ಮಾಡಿದ ನಂತರ ಸಿಪ್ಪೆ ಸುಲಭವಾಗಿ ಬಿಡುತ್ತದೆ.
66
5. ಸಿಲಿಕೋನ್ ಗಾರ್ಲಿಕ್ ಪೀಲರ್
ಸಿಲಿಕೋನ್ ಗಾರ್ಲಿಕ್ ಪೀಲರ್ ಮಾರುಕಟ್ಟೆಯಲ್ಲಿ ಲಭ್ಯವಿದೆ. ಬೆಳ್ಳುಳ್ಳಿ ಎಸಳುಗಳನ್ನು ಪೀಲರ್ ಪ್ರೆಸ್‌ನಲ್ಲಿ ಇರಿಸಿ. ಅವುಗಳನ್ನು ನಿಧಾನವಾಗಿ ಸುತ್ತಿದರೆ ಸಿಪ್ಪೆ ತಕ್ಷಣವೇ ಹೊರಬರುತ್ತದೆ.
ಇನ್ಮೇಲೆ ನೀವು ಬೆಳ್ಳುಳ್ಳಿ ಸಿಪ್ಪೆ ಸುಲಿಯುವುದಕ್ಕೆ ಹೆಚ್ಚು ಸಮಯ ವ್ಯರ್ಥ ಮಾಡುವ ಅಗತ್ಯವಿಲ್ಲ. ಈ ತ್ವರಿತ ಮತ್ತು ಸುಲಭವಾದ ಸಲಹೆಯೊಂದಿಗೆ ಸೆಕೆಂಡುಗಳ ಲೆಕ್ಕದಲ್ಲಿ ಬೆಳ್ಳುಳ್ಳಿಯ ಸಿಪ್ಪೆ ಸುಲಿದು ನಿಮ್ಮ ಆಹಾರದ ರುಚಿಯನ್ನು ಹೆಚ್ಚಿಸಬಹುದು. ಮುಂದಿನ ಬಾರಿ ನೀವು ಅಡುಗೆಮನೆಯಲ್ಲಿ ಬೆಳ್ಳುಳ್ಳಿ ಸಿಪ್ಪೆ ಸುಲಿಯುವಾಗ ಈ ತಂತ್ರಗಳನ್ನು ಪ್ರಯತ್ನಿಸಲು ಮರೆಯದಿರಿ.