Home Remedy For Ants: ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇರುವೆಗಳನ್ನು ಹಿಮ್ಮೆಟ್ಟಿಸಲು ಮಾರುಕಟ್ಟೆಯಲ್ಲಿ ಅನೇಕ ರಾಸಾಯನಿಕ ಸ್ಪ್ರೇಗಳು ಲಭ್ಯವಿದೆ. ಆದರೆ ಇವು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಅಗ್ಗದ ಮತ್ತು ಪರಿಣಾಮಕಾರಿ ಮನೆಮದ್ದು ಟ್ರೈ ಮಾಡೋದು ಬೆಸ್ಟ್.
ಸಿಹಿ ಇರುವಲ್ಲಿ ಇರುವೆ ಮುತ್ತಿಕೊಳ್ಳುವುದು ಸಾಮಾನ್ಯ. ಕೆಲಮೊಮ್ಮೆ ನಾವು ತುಂಬಾ ಇಷ್ಟಪಡುವ ಸ್ವೀಟ್ ಅನ್ನು ಸಮಯ ಸಿಕ್ಕಾಗ ತಿನ್ನೋಣವೆಂದು ಎತ್ತಿಟ್ಟಾಗ ಆ ಡಬ್ಬಿಗೂ ಲಗ್ಗೆ ಹಾಕುವ ಇರುವೆಗಳನ್ನು ನೋಡಿದರೆ ಯಾರಿಗೆ ತಾನೇ ಕೋಪ ಬರುವುದಿಲ್ಲ ಹೇಳಿ. ಅವು ತಿನ್ನಬಾರದೆಂದು ನಾವೆಷ್ಟೇ ಕಷ್ಟಪಟ್ಟು ಎತ್ತಿಟ್ಟರೂ ಎಲ್ಲ ಕಡೆ ಬಂದು ಬಂದು ತಿನ್ನತೊಡಗುತ್ತವೆ. ಅರೆ, ಇದಕ್ಕೇನು ಪರಿಹಾರವೇ ಇಲ್ಲವೇ ಎಂದು ನೀವಂದುಕೊಳ್ಳಬಹುದು. ಆದರೆ ಖಂಡಿತ ಇದೆ.
27
ಇವು ಆರೋಗ್ಯಕ್ಕೆ ಹಾನಿಕಾರಕ
ಸಾಮಾನ್ಯವಾಗಿ ಬೇಸಿಗೆ ಮತ್ತು ಮಳೆಗಾಲದಲ್ಲಿ ಇರುವೆ ಸಮಸ್ಯೆ ಹೆಚ್ಚು ಉಲ್ಬಣಗೊಳ್ಳುತ್ತದೆ. ಈ ಸಣ್ಣ ಕೀಟಗಳು ಅಡುಗೆಮನೆಯನ್ನು ಅಶುದ್ಧಗೊಳಿಸುವುದಲ್ಲದೆ, ಆಹಾರ ಮತ್ತು ಪಾನೀಯದೊಳಗೆ ಬಿದ್ದು ಹಾಳುಮಾಡುತ್ತವೆ. ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಇರುವೆಗಳನ್ನು ಹಿಮ್ಮೆಟ್ಟಿಸಲು ಮಾರುಕಟ್ಟೆಯಲ್ಲಿ ಅನೇಕ ರಾಸಾಯನಿಕ ಸ್ಪ್ರೇಗಳು ಲಭ್ಯವಿದೆ. ಆದರೆ ಇವು ಆರೋಗ್ಯಕ್ಕೆ ಹಾನಿಕಾರಕ. ಆದ್ದರಿಂದ ಅಗ್ಗದ ಮತ್ತು ಪರಿಣಾಮಕಾರಿ ಮನೆಮದ್ದು ಟ್ರೈ ಮಾಡೋದು ಬೆಸ್ಟ್.
37
ಪಲಾವ್ ಎಲೆ ಮತ್ತು ಉಪ್ಪಿನ ಮಿಶ್ರಣ
ಮನೆಮದ್ದಿನ ಪೈಕಿ ಪರಿಣಾಮಕಾರಿ ಪರಿಹಾರವೆಂದರೆ ಪಲಾವ್ ಎಲೆ ಮತ್ತು ಉಪ್ಪಿನ ಮಿಶ್ರಣ. ನೀವೀಗ ಮೊದಲು ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಿ. ಇದಕ್ಕೆ ನಾಲ್ಕರಿಂದ ಐದು ಪಲಾವ್ ಎಲೆ ಅಥವಾ ಬೇ ಲೀಫ್ ಮತ್ತು ಒಂದರಿಂದ ಎರಡು ಚಮಚ ಉಪ್ಪನ್ನು ಸೇರಿಸಿ. ಈ ಮಿಶ್ರಣವನ್ನು ಐದರಿಂದ ಹತ್ತು ನಿಮಿಷಗಳ ಕಾಲ ಚೆನ್ನಾಗಿ ಕುದಿಸಿ. ಕೊನೆಗೆ ನೀರು ತಣ್ಣಗಾಗಲು ಬಿಡಿ. ತಣ್ಣಗಾದ ನಂತರ ಅದನ್ನು ಸ್ಪ್ರೇ ಬಾಟಲಿಗೆ ತುಂಬಿಸಿ.
ಸ್ಪ್ರೇ ಬಾಟಲಿಯಲ್ಲಿನ ದ್ರಾವಣವನ್ನು ಇರುವೆಗಳು ಹೆಚ್ಚಾಗಿ ಬರುವ ಪ್ರದೇಶಗಳಲ್ಲಿ ಸಿಂಪಡಿಸಿ. ಉದಾಹರಣೆಗೆ ಅಡುಗೆಮನೆಯ ಸಿಂಕ್ ಮೇಲೆ, ಕಪಾಟುಗಳ ಮೂಲೆಗಳಲ್ಲಿ, ಕಿಟಕಿಗಳ ಬಳಿ ಸಿಂಪಡಿಸಿ. ಒಟ್ಟಾರೆ ಇರುವೆಗಳು ಹೆಚ್ಚಾಗಿ ಬರುವಲ್ಲೆಲ್ಲಾ ಬಳಸಿ. ಪಲಾವ್ ಎಲೆ ಕಟುವಾದ ವಾಸನೆಯು ಇರುವೆಗಳನ್ನು ದೂರವಿಡುತ್ತದೆ. ಉಪ್ಪಿನ ಉಪಸ್ಥಿತಿಯು ಅವುಗಳನ್ನು ತಡೆಯುತ್ತದೆ. ಈ ದ್ರಾವಣವನ್ನು ನಿಯಮಿತವಾಗಿ ಬಳಸುವುದರಿಂದ ಇರುವೆಗಳು ಮನೆಯಿಂದ ಓಡಿಹೋಗಲು ಸಹಾಯ ಮಾಡುತ್ತದೆ.
57
ನೈಸರ್ಗಿಕ ಕೀಟನಾಶಕ
ಪಲಾವ್ ಎಲೆಯಲ್ಲಿ ಬ್ಯಾಕ್ಟೀರಿಯಾ ವಿರೋಧಿ ಗುಣಗಳು ಸಮೃದ್ಧವಾಗಿದೆ. ಅವುಗಳ ವಾಸನೆ ಕೀಟಗಳಿಗೆ ಇಷ್ಟವಾಗಲ್ಲ. ಇನ್ನು ಉಪ್ಪು ನೈಸರ್ಗಿಕ ಕೀಟನಾಶಕವಾಗಿ ಕಾರ್ಯನಿರ್ವಹಿಸುತ್ತದೆ. ಇದು ಇರುವೆಗಳ ದೇಹದಿಂದ ತೇವಾಂಶವನ್ನು ಹೀರಿಕೊಳ್ಳುತ್ತದೆ, ಅವುಗಳನ್ನು ಮನೆಯಿಂದ ತೊಲಗಿಸುತ್ತದೆ.
67
ಯಾವಾಗಲೂ ಸ್ವಚ್ಛವಾಗಿಡಿ
ಇದೆಲ್ಲದರ ಜೊತೆಗೆ ಶುಚಿತ್ವವನ್ನು ಕಾಪಾಡಿಕೊಳ್ಳುವುದು ಸಹ ಬಹಳ ಮುಖ್ಯ. ಆಹಾರವನ್ನು ಮನೆಯ ಸುತ್ತಲೂ ಹರಡಿದರೆ ಇರುವೆಗಳು ಮತ್ತೆ ಮತ್ತೆ ಬರುತ್ತವೆ. ಆದ್ದರಿಂದ ನಿಮ್ಮ ಅಡುಗೆಮನೆ ಮತ್ತು ಕಪಾಟುಗಳನ್ನು ಯಾವಾಗಲೂ ಸ್ವಚ್ಛವಾಗಿಡಿ.
77
ಸುರಕ್ಷಿತ ಮಾತ್ರವಲ್ಲ, ಅಗ್ಗವೂ ಆಗಿದೆ
ಈ ದ್ರಾವಣವನ್ನು ವಾರಕ್ಕೆ ಎರಡರಿಂದ ಮೂರು ಬಾರಿ ಸಿಂಪಡಿಸಿ. ಬಯಸಿದಲ್ಲಿ ಇರುವೆಗಳು ಹೋಗುವ ದಾರಿಯಲ್ಲಿ ನೇರವಾಗಿ ಪಲಾವ್ ಎಲೆಯ ಪುಡಿಯನ್ನು ಸಿಂಪಡಿಸಿ. ಸ್ವಚ್ಛತೆಯನ್ನು ಕಾಪಾಡಿಕೊಳ್ಳಿ. ಇರುವೆಗಳು ಆಹಾರ ತಿನ್ನಲು ಬಿಡಬೇಡಿ. ಸಣ್ಣ ಕೀಟಗಳು ನೋಡಲು ನಿರುಪದ್ರವಿಯೆಂದು ತೋರುತ್ತದೆಯಾದರೂ ಅವು ಅಡುಗೆಮನೆ ಮತ್ತು ಆಹಾರವನ್ನು ಕಲುಷಿತಗೊಳಿಸಬಹುದು. ಇಂತಹ ಮನೆಮದ್ದುಗಳನ್ನು ಅಳವಡಿಸಿಕೊಳ್ಳುವುದು ಸುರಕ್ಷಿತ ಮಾತ್ರವಲ್ಲ, ಅಗ್ಗವೂ ಆಗಿದೆ.