ಆಲೂಗಡ್ಡೆ ಸಿಪ್ಪೆ ತೆಗೆಯಲು ಇಲ್ಲಿದೆ ನೋಡಿ ಸಿಂಪಲ್ ಟ್ರಿಕ್; ಸಲಹೆ ಕೇಳಿ ಗೃಹಿಣಿಯರು ಖುಷಿ

Published : Mar 03, 2026, 07:36 AM IST

ಬೇಯಿಸಿದ ಆಲೂಗಡ್ಡೆ ಸಿಪ್ಪೆ ತೆಗೆಯುವುದು ಹಲವರಿಗೆ ಕಷ್ಟದ ಕೆಲಸ. ಆದರೆ, ಖ್ಯಾತ ಶೆಫ್ ಪಂಕಜ್ ಬದೌರಿಯಾ ಹಂಚಿಕೊಂಡಿರುವ ಒಂದು ಸರಳ ಕಿಚನ್ ಹ್ಯಾಕ್ ಬಳಸಿ ಈ ಕೆಲಸವನ್ನು ಸುಲಭವಾಗಿಸಬಹುದು.

PREV
15
ತರಕಾರಿ ಕತ್ತರಿಸುವ ವಿಧಾನ

ಅಡುಗೆ ಮನೆಯಲ್ಲಿ ತರಕಾರಿ, ಹಣ್ಣುಗಳ ಸಿಪ್ಪೆ ತೆಗೆದು, ಕತ್ತರಿಸಿ ಇಟ್ಟುಕೊಳ್ಳೋದು ಅಂದ್ರೆ ಎಷ್ಟೋ ಜನರಿಗೆ ಬೋರ್ ಆಗುತ್ತೆ. ಇದೇ ಕಾರಣಕ್ಕೆ ಕೆಲವರು ಸಮಯ ಸಿಕ್ಕಾಗ ಮೊದಲೇ ಎಲ್ಲವನ್ನೂ ರೆಡಿ ಮಾಡಿ ಇಟ್ಟಿಕೊಳ್ಳುತ್ತಾರೆ. ರಜಾದಿನಗಳಲ್ಲಿ ಇಡೀ ವಾರಕ್ಕೆ ಬೇಕಾಗುವಷ್ಟು ತರಕಾರಿ ಕತ್ತರಿಸಿಕೊಂಡು ಫ್ರಿಡ್ಜ್‌ನಲ್ಲಿ ಸ್ಟೋರ್ ಮಾಡಿಕೊಳ್ಳುತ್ತಾರೆ.

25
ಆಲೂಗಡ್ಡೆ ಸಿಪ್ಪೆ

ಕೆಲವೊಮ್ಮೆ ದಿಢೀರ್ ಅಂತ ಅಡುಗೆ ಮಾಡಬೇಕಾಗಿ ಬಂದ್ರೆ ಈ ಕೆಲಸಗಳು ನಿಜಕ್ಕೂ ಕಿರಿಕಿರಿ ಎನಿಸುತ್ತವೆ. ನಾವು ಹೆಚ್ಚಾಗಿ ಬಳಸುವ ತರಕಾರಿಗಳಲ್ಲಿ ಆಲೂಗಡ್ಡೆ ಕೂಡ ಒಂದಾಗಿದೆ. ಆದರೆ ಆಲೂಗಡ್ಡೆ ಸಿಪ್ಪೆ ತೆಗೆಯೋದು ಕೂಡ ಹಲವರಿಗೆ ಇಷ್ಟವಾಗದ ಕೆಲಸ (Vegetable Peeling).

35
ಸಲಹೆ ಕೇಳಿ ಗೃಹಿಣಿಯರು ಖುಷಿ

ಆಲೂಗಡ್ಡೆ ಸಿಪ್ಪೆಯನ್ನು ಸುಲಭವಾಗಿ ತೆಗೆಯಲು ಒಂದು ಸೂಪರ್ ಟ್ರಿಕ್ ಅನ್ನು ಖ್ಯಾತ ಶೆಫ್ ಪಂಕಜ್ ಬದೌರಿಯಾ ಹೇಳಿಕೊಟ್ಟಿದ್ದಾರೆ. ತಮ್ಮ ಇನ್‌ಸ್ಟಾಗ್ರಾಮ್ ವಿಡಿಯೋ ಮೂಲಕ ಅವರು ಈ ಕಿಚನ್ ಹ್ಯಾಕ್ (Kitchen Hacks) ಅನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋ ನೋಡಿ ಗೃಹಿಣಿಯರು ಖುಷಿಯಾಗಿದ್ದಾರೆ.

45
ಸಿಪ್ಪೆ ಬಿಡಿಸುವ ಸರಳ ವಿಧಾನ

ಆಲೂಗಡ್ಡೆಯನ್ನು ಬೇಯಿಸಲು ಇಡುವ ಮುನ್ನ, ಅದರ ಮಧ್ಯಭಾಗದಲ್ಲಿ ಚಾಕುವಿನಿಂದ ಒಂದು ಸುತ್ತು ಗೀರು ಹಾಕಬೇಕು. ನಂತರ ಅದನ್ನು ಬೇಯಲು ಇಡಿ. ಬೆಂದ ನಂತರ, ನಾವು ಗೀರು ಹಾಕಿದ ಜಾಗದಲ್ಲಿ ಸಿಪ್ಪೆ ತಾನಾಗಿಯೇ ಬಿಟ್ಟುಕೊಂಡಿರುತ್ತದೆ. ಸ್ವಲ್ಪ ಬಿಸಿ ಆರಿದ ಮೇಲೆ, ಆ ಜಾಗದಿಂದ ಸಿಪ್ಪೆಯನ್ನು ಸಿಂಪಲ್ ಆಗಿ ಎಳೆದು ತೆಗೆಯಬಹುದು.

ಅಲೂಗಡ್ಡೆ ಸಿಪ್ಪೆ ಸುಲಿಯುವ ವಿಧಾನದ ವಿಡಿಯೋ ಇಲ್ಲಿದೆ - ಲಿಂಕ್

ಇದನ್ನೂ ಓದಿ: ಮದುವೆಗೂ ಮುನ್ನ ಹೆಚ್ಚು ವ್ಯಾಯಾಮ ಇಲ್ಲದೇ ಫಟ್ ಅಂತ ಕೆಜಿಗಟ್ಟಲೇ ತೂಕ ಇಳಿಸಬೇಕಾ? ಇಲ್ಲಿವೆ ಟಿಪ್ಸ್

55
ಆಲೂಗಡ್ಡೆ ಖಾದ್ಯಗಳು

ಈ ರೀತಿ ಮಾಡೋದರಿಂದ ಅಡುಗೆಕೆಲಸ ಬೇಗ ಮುಗಿಸಿಕೊಳ್ಳಬಹುದು. ಆಲೂಗಡ್ಡೆ ಎಲ್ಲದಕ್ಕೂ ಅಡ್ಜಸ್ಟ್ ಆಗುವ ತರಕಾರಿ ಅಂತ ಕರೆಸಿಕೊಳ್ಳುತ್ತದೆ. ಆಲೂಗಡ್ಡೆ ಪಲ್ಯ, ಆಲೂ ಕುರ್ಮಾ, ಆಲೂ ಮಸಾಲೆ ಸೇರಿದಂತೆ ವಿವಿಧ ಖಾದ್ಯಗಳನ್ನು ಮಾಡಬಹುದು. ಇತ್ತೀಚೆಗೆ ಆಲೂಗಡ್ಡೆ ತಿಂಡಿಗಳು ಎಷ್ಟು ವೈರಲ್ ಆಗುತ್ತಿರುತ್ತವೆ.

ಇದನ್ನೂ ಓದಿ: ಅಡುಗೆಮನೆ ಗುಟ್ಟು; ಮೂರ್ನಾಲ್ಕು ವಿಷಲ್ ಕೂಗಿಸಿದ್ರೂ ತೊಗರಿಬೇಳೆ ಬೇಯುತ್ತಿಲ್ಲವೇ? ಈ ಟ್ರಿಕ್ಸ್ ಬಳಸಿ

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories